An unconventional News Portal.

Posts created by ವಿಶ್ವನಾಥ್ ಬಿ. ಎಂ
  ...

  ಮತ್ತೊಂದು ಬಹುಕೋಟಿ ಹಗರಣ: ರೋಟೊಮ್ಯಾಕ್ ಪೆನ್‌ ಕಂಪನಿಯ ಮೇಲೆ 800 ಕೋಟಿ ರೂ. ವಂಚನೆಯ ಆರೋಪ

  ಗುಜರಾತ್ ಮೂಲದ ವಜ್ರಾಭರಣ ಉದ್ಯಮಿ ನೀರವ್ ಮೋದಿ ಪಂಜಾಬ್‌ ನ್ಯಾಶನಲ್ ಬ್ಯಾಂಕ್‌ಗೆ 11,300 ರೂ.ಗಳನ್ನು ವಂಚಿಸಿ, ದೇಶದಿಂದಲೇ ಪರಾರಾರಿಯಾದ ಬೆನ್ನಲ್ಲೆ ಬ್ಯಾಂಕಿಂಗ್ ವಲಯ ಆತಂಕ್ಕೀಡಾಗುವ ಮತ್ತೊಂದು ವಂಚನೆಯ ಪ್ರಕರಣದ ಆರೋಪ ಕೇಳಿಬಂದಿದೆ. ರೋಟೋಮ್ಯಾಕ್ ಎಂಬ ಪೆನ್ ಕಂಪನಿಯ ಮಾಲೀಕ ವಿಕ್ರಮ ಕೊಠಾರಿ 800 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಆರೋಪಿಸಿವೆ.  ಬ್ಯಾಂಕ್ ಆಫ್ ಬರೋಡ ದಾಖಲಿಸಿದ ದೂರಿನ ಅನ್ವಯ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಈ ಕುರಿತು ಎಫ್‌ಐಆರ್‌ ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲದೇ, ಇಂದು ಬೆಳಿಗ್ಗೆ ವಿಕ್ರಮ್ […]

  February 19, 2018
  ...

  ಕರ್ನಾಟಕ ಬಜೆಟ್- 2018 ‘ಕರ್ಟನ್ ರೈಸರ್’: ಹೆಗಡೆ ಹಿಂದಿಕ್ಕಲಿರುವ ಸಿದ್ದರಾಮಯ್ಯ ಮತ್ತು ಸರಿದೂಗುವ ಸಬ್ಸಿಡಿ- ಸಾಲ!

  ನಾಳೆ ಸಿಎಂ ಸಿದ್ದರಾಮಯ್ಯ ತಮ್ಮ ಸರಕಾರದ ಆಡಳಿತದ ಅವಧಿಯ ಕೊನೆಯ ಹಾಗೂ ಐದನೇ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರು ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು(13ನೇ) ಬಜೆಟ್ ಮಂಡಿಸಿದ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಲಿದ್ದಾರೆ. ಬಜೆಟ್ ಎಂಬುದು ರಾಜ್ಯದ ಮುಂದಿನ ಒಂದು ವರ್ಷದ ಆಯವ್ಯಯ ಪತ್ರ. 365 ದಿನಗಳಲ್ಲಿ ಜನರ ನಿರ್ದಿಷ್ಟ ಆಶೋತ್ತರಗಳನ್ನು ಈಡೇರಿಸಲು ಜನರೇ ಆಯ್ಕೆ ಮಾಡಿದ ಸರಕಾರ ಮಂಡಿಸುವ ಲೆಕ್ಕಪತ್ರ.  ಹೇಗಿದ್ದರೂ, ಮುಂದಿನ ಸುಮಾರು 85 ದಿನಗಳ ಒಳಗಾಗಿ ರಾಜ್ಯದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬರಲಿದೆ. […]

  February 15, 2018
  ...

  ಅಮೆರಿಕಾದ ಶಾಲೆಯೊಂದರಲ್ಲಿ ಮತ್ತೆ ಗುಂಡಿನ ಮೊರೆತ: ಮಾಜಿ ವಿದ್ಯಾರ್ಥಿಯೇ ಕೊಲೆಗಡುಕ

  ಅಮೆರಿಕದ ಫ್ಲೋರಿಡಾದಲ್ಲಿನ ಶಾಲೆಯೊಂದಕ್ಕೆ ಮಾಜಿ ವಿದ್ಯಾರ್ಥಿಯೊಬ್ಬ ನುಗ್ಗಿ ಎಆರ್-15 ಎಂಬ ಸೆಮಿ-ಆಟೋಮ್ಯಾಟಿಕ್ ರೈಫಲ್‌ನಿಂದ ಮನಬಂದಂತೆ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ವಿದ್ಯಾರ್ಥಿಗಳೂ ಸೇರಿದಂತೆ ಕನಿಷ್ಠ 17 ಮಂದಿ ಮೃತಪಟ್ಟು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ . ಗನ್ ಸಂಸ್ಕೃತಿ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಅಮೆರಿಕಾದ ೧೮ನೇ ಶಾಲೆ, ಮತ್ತೊಂದು ದಾರುಣ ಘಟನೆಗೆ ಸಾಕ್ಷಿಯಾಗಿದೆ.  ಘಟನೆ ನಡೆದ ಒಂದು ಗಂಟೆಯ ಒಳಗಡೆ ಪಕ್ಕದ ನಗರ ಕೋರಲ್ ಸ್ಪ್ರಿಂಗ್ಸ್ ಟೌನ್ ಬಳಿ ಬಂದೂಕುದಾರಿ ಹಂತಕನನ್ನು ಬಂಧಿಸಲಾಗಿದೆ. ಈತನನ್ನು ನಿಕೋಲೌಸ್ ಕ್ರೂಜ್ […]

  February 15, 2018
  ...

  ‘ವ್ಯಾಲಂಟೈನ್ಸ್ ಡೇ ಸ್ಪೆಷಲ್’: ಪ್ರೀತಿ, ಪ್ರೇಮ ಇವರ ಪಾಲಿಗೆ ಕೇವಲ ಪುಸ್ತಕ ಬದನೆಕಾಯಿ ಅಲ್ಲ!

  ಪ್ರೇಮಿಗಳ ದಿನ ಎಂದರೆ ಯುವಜನತೆಗೆ ಖುಷಿ. ಆದರೆ ಇದಕ್ಕೆ ಧಕ್ಕೆ ತರುವವರು ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕರು. ಇವರು ಪ್ರೇಮಿಗಳ ದಿನದಂದು ನೈತಿಕ ಪೊಲೀಸ್‌ಗಿರಿ ಎಂಬ ಹೆಸರಿನಲ್ಲಿ ಪ್ರೇಮಿಗಳಿಗೆ ತೊಂದರೆ ನೀಡಲು ತಯಾರಿರುತ್ತಾರೆ. ಪ್ರೇಮಿಗಳು ತಮಗೆ ಬೇಕಾದ ಹಾಗೆ ಈ ವಿಶೇಷ ದಿನವನ್ನು ಆಚರಿಸಲು ಸ್ವಾತಂತ್ರ್ಯ ನೀಡುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲಿ ತೋಟಗಾರಿಕೆ ಇಲಾಖೆಯು ‘ಪ್ರೇಮಿಗಳ ದಿನ’ದಂದು ಲಾಲ್‌ಬಾಗ್ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ಸಿಸಿ ಕ್ಯಾಮೆರಾ ಮತ್ತು ಪೊಲೀಸ್ ಕಾವಲನ್ನು ಹೆಚ್ಚಿಸಲು ಮುಂದಾಗಿದ್ದರು. ವಿಷಯ ಅದಲ್ಲ… ಛತ್ತೀಸ್‌ಗಡದ […]

  February 14, 2018
  ...

  ‘ಬೆಳೆ ಹಾನಿ ಆಗ್ತಾ ಇದೆಯಾ; ಮಂತ್ರ ಪಠಿಸಿ’: ಬಿಜೆಪಿ ನಾಯಕನಿಂದ ರೈತರಿಗೆ ಪುಕ್ಕಟೆ ಸಲಹೆ

  “ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳನ್ನು ರಕ್ಷಿಸಲು ದಿನನಿತ್ಯ ಒಂದು ಗಂಟೆ ಹನುಮಾನ್‌ ಚಾಲೀಸಾ ಪಠಿಸಿ,” ಎಂದು ಮಧ್ಯ ಪ್ರದೇಶ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ರಮೇಶ್‌ ಸಕ್ಸೇನಾ ರೈತರಿಗೆ ಉಚಿತ ಸಲಹೆ ನೀಡಿದ್ದಾರೆ. ಈ ರೀತಿಯ ಸಲಹೆ ನೀಡುವ ಮೂಲಕ ಅವರು ಸಹಜವಾಗಿಯೇ ವಿವಾದಕ್ಕೀಡಾಗಿದ್ದಾರೆ. ಜತೆಗೆ, ಅವರ ಹೇಳಿಕೆಯನ್ನಾಧರಿಸಿ ಪರ/ವಿರೋಧದ ಚರ್ಚೆಗಳು ಶುರುವಾಗಿವೆ. ಇದು ಅದರ ಮುಂದುವರಿದ ಭಾಗ…  ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಸೆಹೋರ್‌ನಲ್ಲಿ ಅಕಾಲಿಕ ಮಳೆ ಬೀಳುತ್ತಿದ್ದು, ಭಾರಿ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ತಮ್ಮ ಬೆಳೆಗಳನ್ನು […]

  February 13, 2018
  ...

  ಎಡಿಆರ್‌ ವರದಿಯಲ್ಲಿ ಸಿಎಂಗಳ ಆಸ್ತಿಪಾಸ್ತಿ: ಸಿದ್ದರಾಮಯ್ಯ ಬಳಿ ಆಸ್ತಿ ಎಷ್ಟಿದೆ?

  ‘ದೇಶದ 29 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಎಲ್ಲ ಮುಖ್ಯಮಂತ್ರಿಗಳ ಪೈಕಿ 25 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ,’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್  ವಿಶ್ಲೇಷಣೆ ಮಾಡಿದ ವರದಿಯೊಂದು ಹೇಳಿದೆ. ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಗಳು ‘ಚುನಾವಣಾ ಆಯೋಗ’ಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಮಾಹಿತಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳು ಹೊಂದಿರುವ ಆಸ್ತಿ, ವಿದ್ಯಾರ್ಹತೆ ಮತ್ತು ಅವರ ವಿರುದ್ಧ ಇರುವ ಎಲ್ಲ ಪ್ರಕರಣಗಳು ಇದರಲ್ಲಿವೆ. ನ್ಯಾಶನಲ್ ಎಲೆಕ್ಷನ್ ವಾಚ್‌ನಲ್ಲಿಯೂ ಈ ಕುರಿತು ಮಾಹಿತಿ […]

  February 13, 2018
  ...

  ‘ಮಿರ್ಯಾಕಲ್ ಬೇಬಿ’: ಉಗ್ರರ ಗುಂಡು ತಗುಲಿದರೂ ಮಗುವಿಗೆ ಜನ್ಮ ನೀಡಿದ ಸೈನಿಕನ ಪತ್ನಿ

  ಕಣಿವೆನಾಡು ಎಂದೇ ಕರೆಸಿಕೊಳ್ಳುವ ಜಮ್ಮು-ಕಾಶ್ಮೀರದ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಹೆಣ್ಣು ಮಗುವೊಂದು ಜನಿಸಿದೆ. ಉಗ್ರರ ದಾಳಿಗೆ ತುತ್ತಾಗಿದ್ದರೂ, 35ವಾರಗಳ ಗರ್ಭಿಣಿಯು ಮಗುವಿಗೆ ಜನನ ನೀಡಿದ್ದನ್ನು ‘ಮಿರಾಕಲ್’ ಎಂದೇ ಹಲವರು ಕರೆದಿದ್ದಾರೆ.   Maj Avijit Singh is recovering well and so are Shazada, wife of Nk. Nazir Ahmad Khan and their little baby girl. Their pictures brought tears of relief to my eyes. Jai Hind […]

  February 12, 2018
  ...

  ಆಧಾರ್ ಕಾರ್ಡ್ ಕಡ್ಡಾಯ ನೆಪ: ಸರಕಾರಿ ಆಸ್ಪತ್ರೆಯ ಹೊರಾಂಗಣದಲ್ಲಿಯೇ ಮಗು ಜನನ

  ಆಧಾರ್ ಕಾರ್ಡ್‌ನಿಂದಾದ ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈ ಹಿಂದೆ ಯೋಧನೊಬ್ಬನ ಪತ್ನಿಯನ್ನು ಆಧಾರ್ ಕಾರ್ಡ್ ಇಲ್ಲದೇ ಆಸ್ಪತ್ರೆಯವರು ದಾಖಲಿಸಿಕೊಳ್ಳುವುದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ  ಅವರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಅದನ್ನು ಜನರು ಮರೆಯುವ ಮುನ್ನವೇ, ಹರ್ಯಾಣ ರಾಜ್ಯದ ಗುರುಗಾಂ (ಗುರುಗ್ರಾಮ)ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತೊಂದು ಅವಾಂತರ ನಡೆದು ಹೋಗಿದೆ. ಆಧಾರ್ ಕಾರ್ಡ್ ಇಲ್ಲದ ಕಾರಣದಿಂದ ಆಸ್ಪತ್ರೆಯ ಸಿಬ್ಬಂಧಿ ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಆಕೆ ಆಸ್ಪತ್ರೆಯ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ್ದಾಳೆ. ನಡೆದಿದ್ದಾದರೂ ಏನು?: ಈ ರೀತಿ […]

  February 10, 2018
  ...

  ‘ಸಂವಾದ’ ಸಂಸ್ಥೆಯ ಬೆಳ್ಳಿಹಬ್ಬ ‘ಪರಿಸೆ’: ವಿಚಾರ ಸಂಕಿರಣ; ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ

  ಸಂವಾದ ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದಲ್ಲಿ ಉನ್ನತ ಶಿಕ್ಷಣ ಅವಕಾಶ ವಂಚಿತ ಯುವಜನ ಸಮುದಾಯಗಳಿಂದ ದೂರವಾಗುತ್ತಿರುವ ರಾಜಕಾರಣದ ಕುರಿತು ‘ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ’ ಎಂಬ ಶೀರ್ಷಿಕೆಯಡಿಯಲ್ಲಿ ಬೆಂಗಳೂರಿನ ಗಾಂಧಿ ಭವನ, ಕುಮಾರ ಪಾರ್ಕ್‌ನಲ್ಲಿ ಫೆಬ್ರುವರಿ 9ರ ಶುಕ್ರವಾರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ… ಈ ವಿಚಾರ ಸಂಕಿರಣದಲ್ಲಿ  ಚಿಂತಕ ಮತ್ತು ಲೇಖಕ ಆನಂದ್ ತೇಲ್ತುಂಬ್ಡೆ, ಸಮಾಜ ವಿಜ್ಞಾನಿ  ಡಾ. ಸಿ.ಜಿ. ಲಕ್ಷ್ಮಿಪತಿ, ರಾಜಕೀಯ ಚಿಂತಕ ಹಾಗೂ ಸಮಾಜ […]

  February 8, 2018
  ...

  ಎನ್‌ಡಿಟಿವಿ ಸಿಎಂ ಸಂದರ್ಶನ: ‘ನಾನು ದೇವರನ್ನು ನಂಬುತ್ತೇನೆ…’ ಎಂದವರು ಸಿದ್ದರಾಮಯ್ಯ!

  ಇದು ಚುನಾವಣೆಗೂ ಮುನ್ನ ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಸಂದರ್ಶನದ ಸಂಪೂರ್ಣ ಮಾಹಿತಿ. ಮುಂಬರುವ ಕರ್ನಾಟಕ ವಿಧಾನಸಸಭಾ ಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಹಾಗೂ ಅಗತ್ಯ ಕೂಡ. ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನೇ ಮುಂದಿಡಲು ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರೂ, ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆಯ ಮುಂಚೂಣಿ ನಾಯಕರಾಗಲಿದ್ದಾರೆ. ಅಂತಹದೊಂದು ಬೆಳವಣಿಗೆಯನ್ನು […]

  February 7, 2018

Top