An unconventional News Portal.

Posts created by ಶರತ್‌ ಶರ್ಮ ಕಲಗಾರು
  ...

  ತೋಡಿದಷ್ಟೂ ಆಳಕ್ಕೆ ಇಳಿಯುತ್ತಿರುವ ‘ಗೀತಾಂಜಲಿ ಜೆಮ್ಸ್ ಖೆಡ್ಡಾ’ ಮತ್ತು ಕರ್ನಾಟಕ ಲಿಂಕ್!

  ಇತ್ತೀಚಿನ ದಿನಗಳಲ್ಲಿ ಉದ್ಯಮಿ ವಿಜಯ್‌ ಮಲ್ಯಾ ಬ್ಯಾಂಕುಗಳಲ್ಲಿ ಸಾಲ ಪಡೆದು ದೇಶ ತೊರೆದು ಹೋದ ನಂತರ, ಸದ್ದು ಮಾಡಿದ ಅಂಥದ್ದೇ ಪ್ರಕರಣ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀರವ್‌ ಮೋದಿ ಮತ್ತು ಮೆಹುಲ್‌ ಚಿ. ಚೋಕ್ಸಿ ಮಾಡಿದ ವಂಚನೆ ಪ್ರಕರಣ. ಗೀತಾಂಜಲಿ ಜೆಮ್ಸ್‌ ಸಂಸ್ಥೆಯಿಂದ ಮೋಸಹೋಗಿದ್ದು ಕೇವಲ ಪಿಎನ್‌ಬಿ ಮಾತ್ರವೇ ಎಂದು ಹುಡುಕ ಹೊರಟರೆ ಕನ್ನಡಿಗರೂ ಸೇರಿದಂತೆ ಹತ್ತಾರು ವ್ಯಕ್ತಿಗಳು ಕಣ್ಣಿಗೆ ಬೀಳುತ್ತಾರೆ. ಗೀತಾಂಜಲಿ ಸಂಸ್ಥೆಯ ವಂಚನೆಯ ಬಗ್ಗೆ 2015ರಿಂದಲೂ ದೂರಿನ ಮೇಲೆ ದೂರು ನೀಡಿದರೂ, ಕೇಂದ್ರ ಸರಕಾರ […]

  February 23, 2018
  ...

  ‘ಬೆಂಗಳೂರಿನ ಕೋಟ್ಯಾಧಿಪತಿಗಳು’: ಇದು ಸಾಮಾನ್ಯರಿಗೆ ಎಟುಕದ ಸಿಲಿಕಾನ್‌ ಸಿಟಿಯ ಕತೆ!

  ದೇಶ, ಸಂವಿಧಾನ, ಜನತಂತ್ರ, ಕಾನೂನು- ಕಟ್ಟುಪಾಡುಗಳು, ಸರಕಾರ, ಒಟ್ಟಾರೆ ವ್ಯವಸ್ಥೆ; ಇವೆಲ್ಲವನ್ನೂ ಮೀರಿದ ಸಮುದಾಯವೊಂದಿದೆ. ಅದರೊಳಗೆ ಇರುವವರಿಗೆ ಯಾರ, ಯಾವ ಹಂಗೂ ಇಲ್ಲ. ಮಧ್ಯಮ ವರ್ಗದ ಜನರ ಇಡೀ ಒಂದು ತಿಂಗಳ ಸಂಬಳ ರೂಪದ ದುಡಿಮೆಯನ್ನು ಇವರು ಒಂದು ರಾತ್ರಿಯಲ್ಲಿ ಖಾಲಿ ಮಾಡುತ್ತಾರೆ. ಹುಟ್ಟಿನಿಂದ ಹಿಡಿದು, ಸಾಯುವವರೆಗೆ ಸಾಮಾನ್ಯ ಜನ ಅನುಭವಿಸುವ ಆರ್ಥಿಕ ಸಂಕಷ್ಟಗಳಿಗೆ ಇರುವ ಈಡಾಗುವುದೇ ಇಲ್ಲ. ಹಿನ್ನೆಲೆಯನ್ನು ಹುಡುಕಿಕೊಂಡು ಹೋದರೆ, ಇವರ ತಂದೆ ಅಥವಾ ತಾತ ಕೋಟ್ಯಾಧಿಪತಿಗಳು ಎಂದು ಕರೆಯುವ ಅಗರ್ಭ ಶ್ರೀಮಂತರಾಗಿರುತ್ತಾರೆ. ಇದಿಷ್ಟು ಅಂತ […]

  February 23, 2018
  ...

  ‘ದಿ ರೈಸ್‌ ಆಫ್‌ ನಲಪಾಡ್‌ ಡೈನಸ್ಟಿ’: ಮಜ್ಜಿಗೆ ವ್ಯಾಪಾರದಿಂದ ಕೃಷ್ಣಾ ಮೇಲ್ದಂಡೆವರೆಗೆ, ಹೋಟೆಲ್‌ನಿಂದ ರಾಜಕೀಯದೆಡೆಗೆ!

  ಇವತ್ತಿಗೆ ಕರ್ನಾಟಕದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ನಲಪಾಡ್‌ ಹ್ಯಾರಿಸ್‌ ಕುಟುಂಬ 1960ರ ಆರಂಭದಲ್ಲಿ ಹೀಗಿರಲಿಲ್ಲ. ಕಡುಬಡತನದಲ್ಲಿದ್ದ ಹ್ಯಾರಿಸ್‌ ಪೂರ್ವಜರು ಆರ್ಥಿಕವಾಗಿ ಸದೃಢರಾಗಿದ್ದು ಹೇಗೆ ?ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟ ‘ಸಮಾಚಾರ’ಕ್ಕೆ ಸಿಹಿ ಮಜ್ಜಿಗೆ ವ್ಯಾಪಾರ, ಸ್ಕ್ರ್ಯಾಪ್‌ ವ್ಯವಹಾರ, ಕೃಷ್ಣಾ ಮೇಲ್ದಂಡೆ ಯೋಜನೆಯ ಟೆಂಡರ್‌, ಬೆಂಗಳೂರು ಇಂಟರ್‌ನ್ಯಾಷನಲ್‌ ಹೋಟೆಲ್‌, ಕೊನೆಗೆ ಎನ್‌.ಎ. ಹ್ಯಾರಿಸ್‌ಗೆ ದೊರೆತ ರಾಜಕೀಯ ಅಧಿಕಾರ ಹೀಗೆ ನಾನಾ ಮಜಲುಗಳ ಪರಿಚಯವಾಯಿತು. ಹೈಟೆಕ್ ವೇಶ್ಯಾವಾಟಿಕೆಯೂ ಆರ್ಥಿಕತೆಯ ಉನ್ನತೀಕರಣಕ್ಕೆ ಕಾರಣ ಎಂಬ ಮಾತುಗಳು ಹ್ಯಾರಿಸ್‌ ಕುಟುಂಬದ ಏಳುಬೀಳುಗಳನ್ನು […]

  February 21, 2018
  ...

  ಹಾಸನದಲ್ಲಿ ಮುಸ್ಲಿಂ ವ್ಯಕ್ತಿಯ ಕೊಲೆ; ಡೈಯಿಂಗ್‌ ಡಿಕ್ಲೆರೇಷನ್‌ ಮತ್ತು ಬೂದಿ ಮುಚ್ಚಿದ ಕೆಂಡ

  ಒಂದೆಡೆ ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ಮಹಾ ಮಸ್ತಕಾಭಿಷೇಕ ನಡೆಯುತ್ತಿದ್ದರೆ, ಅದೇ ವೇಳೆ ಹಾಸನ ನಗರದಿಂದ 11 ಕಿಲೋಮೀಟರ್‌ ದೂರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ನಡೆದಿದೆ. ಇದೇ ಸೋಮವಾರ ಹಾಸನ ಜಿಲ್ಲೆಯ, ಗುದ್ದಾ ಗ್ರಾಮದ ಬಳಿ ಅಬ್ದುಲ್‌ ಖಾದರ್‌ ಎಂಬ ಕಲ್ಲಂಗಡಿ ಹಣ್ಣಿನ ವ್ಯಾಪಾರಿಯೊಬ್ಬರಿಗೆ ಮೂವರು ಅಪರಿಚಿತರು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಶುಕ್ರವಾರ ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಬ್ದುಲ್‌ ಖಾದರ್‌ ಮೃತಪಟ್ಟಿದ್ದಾರೆ. ಖಾದರ್‌ ಸಾವಿಗೆ ಬಲಪಂಥೀಯ ಸಂಘಟನೆಯ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. […]

  February 17, 2018
  ...

  ಕಾವೇರಿ ನದಿ ನೀರು ಹಂಚಿಕೆ: ಸುಪ್ರೀಂ ಕೋರ್ಟ್ ನೀಡಿದ 465 ಪುಟಗಳ ತೀರ್ಪಿನ ಸಾರಾಂಶ ಇಷ್ಟು!

  ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತುದಿಗಾಲಲ್ಲಿ ಕೂತು ಕಾಯುತ್ತಿದ್ದ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಶುಕ್ರವಾರ ಹೊರಬಿದ್ದಿದೆ. ತೀರ್ಪಿನ ಬಗ್ಗೆ ಕರ್ನಾಟಕ ಪರ ವಕೀಲರು ಇದೊಂದು ಐತಿಹಾಸಿಕ ಜಯ ಎಂಬುದಾಗಿ ವ್ಯಾಖ್ಯಾನಿಸಿದರೆ, ತಮಿಳುನಾಡು ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ. ತೀರ್ಪಿನಿಂದ ಕರ್ನಾಟಕ ರಾಜ್ಯಕ್ಕೆ ಒಟ್ಟಾರೆಯಾಗಿ ಸಮಾಧಾನ ನೀಡುವಂತಹ ತೀರ್ಪು ಬಂದಿದೆ. ಆದರೆ ರಾಜ್ಯದ ರಾಜಧಾನಿ ಮಾತ್ರ ತೀರ್ಪಿನಿಂದ ಸುಸ್ತಾಗಿರುವುದು ಸ್ಪಷ್ಟ. ಸುಸ್ತಾಗಿ ಕುಳಿತಿರುವ ರಾಜಧಾನಿಯ ಬಾಯಾರಿಕೆಯನ್ನು ಸರಕಾರ ಹೇಗೆ ನೀಗಿಸಲಿದೆ ಎಂಬುದನ್ನು ಕಾದು ನೋಡಬೇಕು. ಅದರ ಜತೆಯಲ್ಲಿ 465 […]

  February 16, 2018
  ...

  ಸಿದ್ದು ಸರಕಾರಕ್ಕೆ ‘ದೇವಿಶೆಟ್ಟಿ ಆಪರೇಶನ್’: ಜನರ ಹಣ; ಆಸ್ಪತ್ರೆ ಖಾಸಗೀಕರಣ?

  ಅಕ್ಕಿ, ತರಕಾರಿ ಸೇರಿದಂತೆ ಅಡುಗೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಬಿತ್ತಿ, ಬೆಳೆದು, ಕೊಂಡು, ಕೊನೆಗೆ ಅಡುಗೆಯನ್ನೂ ಮಾಡಿ ಪಕ್ಕದ ಮನೆಯವರಿಗೆ ಉಣಬಡಿಸಿ, ನೀವು ಖಾಲಿ ಹೊಟ್ಟೆಯಲ್ಲಿ ಮಲಗಿದರೆ ಹೇಗಿರುತ್ತದೆ? ಇದೇ ರೀತಿಯ ಕಾರ್ಯಕ್ಕೆ ಕರ್ನಾಟಕ ರಾಜ್ಯ ಸರಕಾರ ಇದೀಗ ಮುಂದಾಗಿದೆ. ಜನರ ತೆರಿಗೆ ಹಣ ಬಳಸಿ, 40 ಕೋಟಿ ರೂಪಾಯಿಯ ವೆಚ್ಚದಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿ, ಅದನ್ನು ಈಗ ನಾರಾಯಣ ಹೃದಯಾಲಯಕ್ಕೆ ಅಪಾತ್ರ ದಾನ ಮಾಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವಾರದ ಕ್ಯಾಬಿನೆಟ್‌ ಸಭೆಯಲ್ಲಿ ಕೋಟ್ಯಾಂತರ […]

  February 14, 2018
  ...

  ಒಎನ್‌ಜಿಸಿ ಹಡಗು ಅಂಗಳದಲ್ಲಿ ಬೆತ್ತಲಾಯಿತು ಸರಕಾರಿ ತೈಲ ಸಂಸ್ಥೆಯ ಸ್ಥಿತಿ- ಗತಿ!

  ಒಂದೆಡೆ ಖಾಸಗಿ ತೈಲೋತ್ಪನ್ನ ಸಂಸ್ಥೆಗಳು ಸರಕಾರೀ ಸ್ವಾಮ್ಯದ ತೈಲ ಸಂಸ್ಥೆಗಳನ್ನೂ ಮೀರಿ ಬೆಳೆದು ನಿಂತಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಮತ್ತಿತರ ಇಂಧನಗಳ ಬೆಲೆಯನ್ನು ಸರಕಾರದ ಬದಲಾಗಿ ಖಾಸಗಿ ಸಂಸ್ಥೆಗಳೇ ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ, ಮಂಗಳವಾರ ಮಧ್ಯಾಹ್ನ ಕೇರಳದ ಕೊಚ್ಚಿಯಲ್ಲಿರುವ ‘ತೈಲ ಮತ್ತು ನೈಸರ್ಗಿಕ ಅನಿಲ ನಿಗಮ’ (ಒಎನ್‌ಜಿಸಿ)ಗೆ ಸೇರಿದ ಸರಕಾರಿ ಶಿಪ್‌ ಯಾರ್ಡ್‌ನಲ್ಲಿ ನೀರು ತುಂಬಿದ್ದ ಟ್ಯಾಂಕರ್‌ ಸ್ಫೋಟವಾಗಿದೆ. ದುರ್ಘಟನೆಯಲ್ಲಿ ಐವರು ಅಸುನೀಗಿದ್ದರೆ, 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸರಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ನಡೆದಿರುವ ಘಟನೆ […]

  February 13, 2018
  ...

  ಪ್ರೇಮ, ಮದುವೆ, ಮನಸ್ತಾಪ; ಶಿರಸಿ ಹುಡುಗಿ, ಕಾರವಾರದ ಹುಡುಗ: ದಶಕದ ಪ್ರೀತಿ ಕೊಲೆಯಲ್ಲಿ ಅಂತ್ಯ

  ಅದು ಸುಮಾರು ಒಂದೂವರೆ ದಶಕದ ಪ್ರೀತಿ. ಮದುವೆಯಾಗಿ ಬರೋಬ್ಬರಿ 10 ವರ್ಷಗಳೇ ಕಳೆದಿತ್ತು. ಆತ, ಆಕೆ ಮತ್ತು ಪುಟ್ಟ ಮಗು ಇದ್ದ ಚಿಕ್ಕ ಸಂಸಾರ. ಕಾಲೇಜು ಓದುವಾಗ ಆಕೆಯ ಹಿಂದೆ ಹತ್ತಾರು ಹುಡುಗರು ಬಿದ್ದಿದ್ದರು. ಎಲ್ಲರನ್ನೂ ಮೀರಿಸಿ ಆಕೆಯನ್ನು ಪ್ರೀತಿಯನ್ನು ಗೆದ್ದಿದ್ದ ವ್ಯಕ್ತಿ ಮದುವೆಯಾದ. ಒಂದು ದಶಕದ ನಂತರ ಆತನೇ ಅಕೆಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ನೂರೆಂಟು ರೀತಿ ಪ್ರಯತ್ನಿಸುತ್ತಾನಾದರೂ, ಕೊನೆಗೆ ಬಂಧನಕ್ಕೆ ಒಳಗಾಗಿದ್ದಾನೆ. ಈ ಪ್ರಕರಣದಲ್ಲಿ ಪ್ರೀತಿಯಿದೆ, ಸರಸವಿದೆ, ವಿರಸವಿದೆ, […]

  February 12, 2018
  ...

  ‘ಭಿಲ್‌ ಗ್ಯಾಂಗ್‌ ಅಪರಾಧಗಳ ಅಕ್ಷಯಪಾತ್ರೆ’: ಪೊಲೀಸರ ತನಿಖೆಯಲ್ಲಿ ಅಗೆದಷ್ಟೂ ಸಿಗುತ್ತಿದೆ ‘ಚಿನ್ನ’!

  ಬೆಂಗಳೂರು ಪೊಲೀಸರು ಭಿಲ್‌ ಗ್ಯಾಂಗ್‌ನ ಐವರನ್ನು ಬಂಧಿಸಿದ ಬಗ್ಗೆ ಪೊಲೀಸ್‌ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅಷ್ಟಕ್ಕೇ ಪ್ರಕರಣದ ತನಿಖೆ ಮುಗಿದಿಲ್ಲ. ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಬೆಂಗಳೂರು ಪೊಲೀಸರಿಗೆ ಭಿಲ್‌ ಗ್ಯಾಂಗ್‌ನ ಅಪರಾಧದ ಅಕ್ಷಯಪಾತ್ರೆ ಸಿಕ್ಕಿದೆ. ಕೈ ಹಾಕಿದಷ್ಟು ಮನೆಗಳ್ಳತನ ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಪಾತ್ರ ಸಿಗುತ್ತಿದೆ. ಉನ್ನತ ಪೊಲೀಸ್‌ ಮೂಲಗಳ ಮಾಹಿತಿಯ ಪ್ರಕಾರ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಿಲ್‌ ಗ್ಯಾಂಗ್‌ನ ಸದಸ್ಯರ ಕೈವಾಡ ಇಲ್ಲಿಯವರೆಗಿನ ತನಿಖೆಯಲ್ಲಿ ಪತ್ತೆಯಾಗಿದೆ.  ರಾಜ್ಯದಲ್ಲಿ ನಡೆದ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ […]

  February 10, 2018
  ...

  ‘ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್’: ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗಳಲ್ಲಿ ಪ್ರೇಮಿಗಳಿಗೆ ಪೊಲೀಸ್‌ ಕಂಪನಿ!

  ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಂದು ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ ಬಾಗ್‌ಗೆ ಭೇಟಿ ನೀಡುವ ಪ್ರೇಮಿಗಳಿಗೆ ರಾಜ್ಯ ಸರಕಾರ ‘ಹಾಫ್‌ ನಿಷೇಧ’ ಹೇರಲು ನಿರ್ಧರಿಸಿದೆ. ಈ ಸಂಬಂಧ ಶುಕ್ರವಾರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಡಾ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಭೆ ನಡೆಸಿದ್ದಾರೆ. ಈ ಮೂಲಕ ಪ್ರೇಮಿಗಳ ‘ಏಕಾಂತ’ವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆ ‘ಹೈ ಡೆಫಿನಿಷನ್‌’ ಸಿಸಿಟಿವಿಯಲ್ಲಿ ನೋಡಲಿದ್ದಾರೆ. ಪ್ರೇಮಿಗಳಿಗೆ ಉದ್ಯಾನವನಗಳಲ್ಲಿ ಪೊಲೀಸರ ಕಂಪೆನಿಯೂ ಇರಲಿದೆ. ತೋಟಗಾರಿಕಾ […]

  February 9, 2018

Top