An unconventional News Portal.

Posts created by samachara
    ...
    ಬ್ರೂಸೆಲ್ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ...
    ವಿದೇಶ

    ಬ್ರೂಸೆಲ್ ಮೇಲೆ ಐಸಿಸ್ ದಾಳಿ ಮಾಡಿದ್ದೇಕೆ?

    ‘ಬ್ರೂಸೆಲ್ ದಾಳಿ’ಯ ತನಿಖೆಯನ್ನು ಮುಂದುವರಿಸಿರುವ ಬೆಲ್ಜಿಯಂ ಫೆಡರಲ್ ಪೊಲೀಸರು 6 ಮಂದಿ ಶಂಕಿತರನ್ನು ವಶಕ್ಕೆ ಪಡೆದ್ದಾರೆ. ಬ್ರೂಸೆಲ್ ನಗರದ ಸುತ್ತಮುತ್ತ ನಡೆದಿರುವ ಕಾರ್ಯಚರಣೆಯಲ್ಲಿ ಸಂಶಯಾತ್ಮಕ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆತಂದಿರುವುದಾಗಿ ಇಲ್ಲಿನ ಫೆಡರಲ್ ಪ್ರಾಸಿಕ್ಯೂಟರ್ಸ್ ಕಚೇರಿ ತಿಳಿಸಿದೆ. ವಿಚಾರಣೆಗೆ ಒಳಪಡಿಸಿದವರ ಗುರುತುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಅವರ ಮೇಲಿನ ಆರೋಪಗಳನ್ನು ಪ್ರಾಥಮಿಕ ವಿಚಾರಣೆಗೆ ನಡೆಸಿದ ಬಳಿಕ ಇಲ್ಲಿನ ನ್ಯಾಯಾಲಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೇ, ಇಲ್ಲವೆ ಎಂದು ನಿರ್ಧರಿಸಲಿದೆ. ಕಳೆದ ಮಂಗಳವಾರ ಬ್ರೂಸೆಲ್ ನಗರದ ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು..

    March 25, 2016
    ...
    ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (ಚಿತ್ರ: ಐಇ)
    ದೇಶ

    ಮಾಲಿನ್ಯ ತಡೆಗೆ ಜಾಗತಿಕ ಮನ್ನಣೆ: ಕೇಜ್ರಿವಾಲ್ ಅಟ್ 42

    ವಾಯು ಮಾಲಿನ್ಯ ತಡೆಯಲು ದಿಲ್ಲಿಯಲ್ಲಿ ನಡೆಸಿದ ಕಸರತ್ತಿಗೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಗತ್ತಿನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ‘ಸರಿ ಬೆಸ’ ಪ್ರಯೋಗ ಸಹಾಯ ಮಾಡಿದೆ. ಪ್ರತಿಷ್ಠಿತ ‘ಫಾರ್ಚುನರ್’ ಮ್ಯಾಗ್ಸಿನ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕೇಜ್ರಿವಾಲ್ 42ನೇ ಸ್ಥಾನದಲ್ಲಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಇದರ ಜತೆಗಿದೆ. ಉದ್ಯಮ, ರಾಜಕೀಯ, ಕಲೆ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರನ್ನು ಪ್ರಭಾವಿಗಳು ಎಂದು ಪಟ್ಟಿ ಮಾಡಲಾಗಿದೆ…

    March 25, 2016
  • ವಿಚಾರ

    ಕುಪ್ಪಳ್ಳಿ ಆರಾಧನಾ ತಾಣವಾಗದಿರಲಿ; ಕುವೆಂಪು ಜಾತಿ ಸಂಘಟನೆಗಳ ಸೊತ್ತಾಗದಿರಲಿ…

    ಸರ್ಜಾ ಶಂಕರ್ ಹರಳೀಮಠ ಇತ್ತೀಚೆಗೆ ಸಿಕ್ಕ ಮೇಸ್ಟ್ರೊಬ್ಬರು ತೇಜಸ್ವಿ ಅವರ ಜೊತೆಗಿನ ಒಂದು ಕುತೂಹಲಕಾರಿ ಘಟನೆಯನ್ನು ಹೇಳಿದರು. ಆ ಮೇಸ್ಟರು ಮತ್ತು ಅವರ ಗೆಳೆಯರೊಬ್ಬರು ತೇಜಸ್ವಿ ಅವರನ್ನು ಭೇಟಿ ಮಾಡಬೇಕು ಎಂದು ಮೂಡಿಗೆರೆಯ ಅವರ ಮನೆಗೆ ಹೋದರಂತೆ. ತೇಜಸ್ವಿ ಅವರು ಮನೆಯೊಳಗಿದ್ದರು. ಆದರೂ ತುಂಬಾ ಹೊತ್ತಾದರೂ ಅವರು ಮನೆಯಿಂದ ಹೊರಗೆ ಬರಲೇ ಇಲ್ಲ. ಏನಾದರಾಗಲೀ ಇಂದು ಅವರನ್ನು ಭೇಟಿ ಮಾಡಿ ಹೋಗುವುದೇ ಸೈ ಎಂದು ನಿಶ್ಚಯಿಸಿದ್ದ ಇವರು ಪಟ್ಟಾಗಿ ಹೊರಗೆ ಕುಳಿತೇಬಿಟ್ಟರು. ಸ್ವಲ್ಪ ಹೊತ್ತಾದ ಮೇಲೆ ಅಂತೂ..

    March 23, 2016
    ...
    Khap panchayath_maharastra_gopal_pregnent
    ಸುದ್ದಿ ಸಾರ

    14 ವರ್ಷದ ಯುವತಿಗೆ ತಂದೆಯಿಂದ ಗರ್ಭದಾನ: 10 ಛಡಿಯೇಟಿಗೆ ಪಂಚಾಯ್ತಿ ತೀರ್ಮಾನ!

    ಮಹಾರಾಷ್ಟ್ರ:’ಖಾಪ್ ಪಂಚಾಯತ್’ ಮಾದರಿ ವ್ಯವಸ್ಥೆ ಮಹಾರಾಷ್ಟ್ರದಲ್ಲಿ ತನ್ನ ಭೀಕರ ಶಿಕ್ಷೆಯ ಮೂಲಕ ಸುದ್ದಿಯಾಗಿದೆ. ಇಲ್ಲಿನ ಸತಾರ ಜಿಲ್ಲೆಯ ಗೋಪಾಲ್ ಹಳ್ಳಿಯಲ್ಲಿ 14 ವರ್ಷದ ಯುವತಿಯ ಮೇಲೆ ಪಂಚಾಯ್ತಿ ತನ್ನ ಅಧಿಕಾರವನ್ನು ಶುಕ್ರವಾರ ಚಲಾಯಿಸಿದೆ. ಆಕೆ ತನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾಗಿ ಗರ್ಭ ಧರಿಸಿದ್ದಳು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ತಂದೆ ಹಾಗೂ ಮಗಳಿಗೆ ತಲಾ 10 ಛಡಿಯೇಟು ನೀಡುವಂತೆ ಪಂಚಾಯ್ತಿ ಫರ್ಮಾನು ಹೊರಡಿಸಿತ್ತು. ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ಛಡಿಯೇಟು ನೀಡುವ ಭೀಕರ ಘಟನೆ ನಡೆಯಿತು. ಸ್ಥಳೀಯ ಮಾಹಿತಿ ಹಕ್ಕು..

    March 4, 2016
    ...
    1
    ಸಮಾಚಾರ +

    ‘ಕನ್ಯೆ’ಯಾಗಿದ್ದರೆ ಮಾತ್ರ ಸೇನೆಯಲ್ಲಿ ಅವಕಾಶ!

    ಸೇನೆ ಸೇರಲು ಇರಬೇಕಾದ ಅರ್ಹತೆಗಳೇನು? ಆರೋಗ್ಯವಂತ ದೇಹ ಮತ್ತು ಮನಸ್ಸು. ಇಷ್ಟಿದ್ದರೆ ಸಾಕೆ? ಇಲ್ಲ ಎನ್ನುತ್ತಾರೆ ಇಂಡೋನೇಷಿಯಾ ಮಿಲಿಟರಿಯ ಹಿರಿಯ ಅಧಿಕಾರಿಗಳು! ಇಲ್ಲಿನ ಸೇನೆಗೆ ಸೇರಲು ಬಯಸುವ ಯುವತಿಯರು ‘ಕನ್ಯತ್ವ’ವನ್ನೂ ಹೊಂದಿರಬೇಕು ಎಂಬ ಷರತ್ತನ್ನು ಅವರು ವಿಧಿಸಿದ್ದಾರೆ. ಈ ವಿಚಾರ ಅಂತರಾಷ್ಟ್ರೀಯ ಸಮುದಾಯದ ಟೀಕೆಗೆ ಗುರಿಯಾಗುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದೆ. ಇಂಡೊನೇಷಿಯಾ ದಕ್ಷಿಣ ಏಷಿಯಾದಲ್ಲಿ ಬರುವ ಪುಟ್ಟ ದೇಶ. ಇತ್ತೀಚೆಗೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜೋಕೊ ವಿಡೋಡೊ ಎಂಬ ಜನಸಾಮಾನ್ಯನೊಬ್ಬ ಅಧ್ಯಕ್ಷನಾಗಿ..

    March 3, 2016
    ...
    tania_3
    ಮೀಡಿಯಾ 2.0

    ಬಾಲ್ಯದ ನೆನಪುಗಳು ಹಾಗೂ ಪತ್ರಕರ್ತೆ ಬಿಚ್ಚಿಟ್ಟ ಭಯಾನಕ ಕತೆ!

    ಪತ್ರಕರ್ತರಿಗೆ ಸಂವೇದನೆ ಇರಬೇಕು. ಇದ್ದರೆ, ಹೇಗೆಲ್ಲಾ ಸುದ್ದಿಗಳನ್ನು ಅರಸಬಹುದು ಎಂಬುದಕ್ಕೆ ತಾನಿಯಾ ರಶೀದ್ ಮಾದರಿ. ಬಾಂಗ್ಲದೇಶದಲ್ಲಿ ಬಾಲ್ಯಗಳನ್ನು ಕಳೆದ ತಾನಿಯಾ ಹುಟ್ಟಿದ್ದು ಸೌದಿ ಅರೇಬಿಯಾದ ಸಂಪ್ರದಾಯಬದ್ಧ ಮುಸ್ಲಿಂ ಕುಟುಂಬದಲ್ಲಿ. ಬಾಂಗ್ಲದಲ್ಲಿ ಬಾಲ್ಯದ ನೆನಪುಗಳನ್ನು ಕಟ್ಟಿಕೊಳ್ಳುತ್ತಿದ್ದಾಗಲೇ ಆಕೆ ಕುಟುಂಬ ಅಮೆರಿಕಾಗೆ ವಲಸೆ ಹೋಯಿತು. ಅಲ್ಲಿ ಇತಿಹಾಸದ ಪದವಿ ಮುಗಿಸಿದ ತಕ್ಷಣ ‘ಆಲ್ ಗೋರ್ ಮಾಧ್ಯಮ ಸಮೂಹ’ದಲ್ಲಿ ಮೂರು ವರ್ಷ ಕಾರ್ಯ ನಿರ್ವಹಿಸಿದಳು. ನಂತರ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಅಭ್ಯಾಸ ಮುಗಿಸಿ, ಸದ್ಯ ಸ್ವತಂತ್ರವಾಗಿ ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಿದ್ದಾಳೆ. ಅಲ್ ಜಝೀರಾ,..

    February 19, 2016
    ...
    playboy_samachara_journalism_kannada-1
    ಪತ್ರಿಕೆ

    ‘ಪ್ಲೇ ಬಾಯ್’ ಪತ್ರಕರ್ತನ ರೊಮ್ಯಾಂಟಿಕ್ ಬಂಗಲೆ ಮತ್ತು ಅದರೊಳಗಿನ ಕತೆಗಳು!

    ಅಮೆರಿಕಾದ ಲಾಸ್ ಆಂಜಲೀಸ್ನಲ್ಲಿರುವ ಹೋಂಬಿ ಹಿಲ್ಸ್ ಬಳಿ ಮನೆಯೊಂದು ಮಾರಾಟಕ್ಕಿದೆ. ಬೆಲೆ 20 ಕೋಟಿ ರೂಪಾಯಿಗಳು. 20 ಸಾವಿರ ಚದರ ಅಡಿಗಳಿಗೆ ಹರಡಿಕೊಂಡಿರುವ ಈ ಬೃಹತ್ ಬಂಗಲೆಯಲ್ಲಿ 29 ಕೊಠಡಿಗಳಿವೆ. ಅತಿಥಿಗಳಿಗಾಗಿ ನಾಲ್ಕು ಪ್ರತ್ಯೇಕ ರೂಮುಗಳಿವೆ. ಖಾಸಗಿ ಪ್ರಾಣಿ ಸಂಗ್ರಹಾಲಯಕ್ಕೆ ವಿಶೇಷ ಅನುಮತಿಯೂ ಇದೆ. ಇವತ್ತು ಅಮೆರಿಕಾದ ರಿಯಲ್ ಎಸ್ಟೇಟ್ ವಲಯದಲ್ಲಿ ಮಾರಾಟಕ್ಕಿರುವ ದುಬಾರಿ ಮನೆಯಿದು. ನಿಮಗೆ, ಹೀಗೆ ಹೇಳುವುದಕ್ಕಿಂತ ಈ ಮನೆಯನ್ನು ‘ಪ್ಲೇ ಬಾಯ್ ಮ್ಯಾನ್ಶನ್’ ಎಂದು ಕರೆಯುತ್ತಾರೆ ಎಂದು ಹೇಳುವುದೇ ಸೂಕ್ತ. ನಿಜ, ಇದು..

    February 19, 2016
    ...
    Indian policewoman K Prithika Yashini, 25, speaks on the phone as she leaves after a judgement cleared legal hurdles allowing her to become India's first transgender Sub Inspector of Police at the Madras High Court on November 6, 2015. Lawmakers also ruled the Tamil Nadu Uniformed Recruitment Board include a third transgender category to allow other applicants to apply for positions, the Press Trust of India reported. AFP PHOTO / STR
    ಪಾಸಿಟಿವ್

    ದೇಶದ ಮೊದಲ ಸಲಿಂಗಿ ಎಸ್ಐ: ಮೀಟ್ ಮಿಸ್ ಪ್ರೀತಿಕಾ  

    ಆಕೆ ದೊಡ್ಡದೊಂದು ಕಾನೂನು ಹೋರಾಟದ ನಂತರ ಇದೀಗ ಅಧಿಕಾರ ಕೇಂದ್ರಕ್ಕೆ ಬಂದು ನಿಂತಿದ್ದಾಳೆ. ಅದಕ್ಕಾಗಿ ಆಕೆ ಪಟ್ಟ ಕಷ್ಟಗಳು ಇವತ್ತು ಆಕೆಯ ಕಣ್ಣಲ್ಲಿ ಕನಸುಗಳ ರೂಪದಲ್ಲಿ ಜಿನುಗುತ್ತಿವೆ. ಯಾವ ಸಮಾಜ ತನ್ನನ್ನು ಹೊರಗಿಟ್ಟಿತ್ತೋ, ಅದೇ ಸಮಾಜದ ನಡುವೆ ಆಕೆ ಖಾಕಿಯ ಅಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾಳೆ. ಆಕೆಯ ಸಮುದಾಯದಲ್ಲಿ ಹೀಗೊಂದು ಅವಕಾಶ ಗಿಟ್ಟಿಸಿಕೊಂಡವರ ಪೈಕಿ ಇಡೀ ದೇಶಕ್ಕೆ ಈಕೆಯೇ ಮೊದಲಿಗಳು. ಅಂದಹಾಗೆ, ಮೀಟ್ ಮಿಸ್ ಕೆ. ಪ್ರೀತಿಕಾ ಯಾಶೀನ್ ಫ್ರಮ್ ತಮಿಳುನಾಡು! ಪ್ರೀತಿಕಾಳ ಮೊದಲ ಹೆಸರು ಪ್ರದೀಪ್ ಕುಮಾರ್. ತಮಿಳುನಾಡಿನ..

    February 17, 2016
    ...
    ಪಟಿಯಾಲ ನ್ಯಾಯಾಲಯದ ಆವರಣದಲ್ಲಿರೊಚ್ಚಿಗೆದ್ದ ವಕೀಲರ ಗುಂಪು.
    ಸುದ್ದಿ ಸಾರ

    ‘ದಂಡ’ ಕೆಳಗಿಳಿಸದ ಪಟಿಯಾಲ ವಕೀಲರು: ನ್ಯಾಯಾಲಯದ ಆವರಣದಲ್ಲೇ ಕನ್ನಯ್ಯ ಮೇಲೆ ಹಲ್ಲೆ

    ದಿಲ್ಲಿಯ ಪಟಿಯಾಲ ಕೋರ್ಟ್ ಆವರಣ ಬುಧವಾರವೂ ವಕೀಲರ ಗೂಂಡಾಗಿರಿಗೆ ಸಾಕ್ಷಿಯಾಯಿತು. ಜವಹರ್ ಲಾಲ್ ನೆಹರೂ ಯೂನಿವರ್ಸಿಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿತು. ‘ದೇಶದ್ರೂಹ’ದ ಆರೋಪದ ಮೇಲೆ ವಿದ್ಯಾರ್ಥಿ ನಾಯಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಇಂದು ಅದರ ವಿಚಾರಣೆಗಾಗಿ ಪಟಿಯಾಲ ಕೋರ್ಟ್ ಆವರಣಕ್ಕೆ ಕರೆ ತರುತ್ತಲೇ, ವಕೀಲರ ಗುಂಪೊಂದು ಆರೋಪಿಯ ಮೇಲೆ ಹಲ್ಲೆ ನಡೆಸಿತು. ಜತೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿ ನಡೆಸಲಾಯಿತು. ನ್ಯಾಯಾಲಯದ ಆವರಣದೊಳಗಿಂದ ಮಾಧ್ಯಮಗಳ ವಾಹನಗಳ ಮೇಲೆ..

    February 17, 2016
    ...
    Khandwa_jail_simi_escape-2
    ಸುದ್ದಿ ಸಾರ

    ಮೂರು ವರ್ಷದ ನಂತರ ಸೆರೆ ಸಿಕ್ಕ ಸಿಮಿ ಕಾರ್ಯಕರ್ತರು

    ಮೂರು ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಡ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರನ್ನು ಬುಧವಾರ ಒರಿಸ್ಸಾದಲ್ಲಿ ಬಂಧಿಸಲಾಗಿದೆ. ಮಹಮದ್ ಖಾಲಿದ್, ಅಮ್ಜದ್ ಖಾನ್, ಝಾಕೀರ್ ಹುಸೇನ್ ಹಾಗೂ ಎಸ್. ಮಹಮದ್ ಸೆರೆ ಸಿಕ್ಕವರು. ನಾಲ್ವರು 2013ರ ಸುಮಾರಿಗೆಮಧ್ಯಪ್ರದೇಶದ ಖಂಡ್ವಾ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡರು. ‘ಬುಧವಾರ ಮುಂಜಾನೆ ರೋರ್ಖೇಲ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಂತರ ಆರೋಪಿಗಳನ್ನು ಒರಿಸ್ಸಾ ಹಾಗೂ ತೆಲಂಗಾಣ ಜಂಟಿ ಪೊಲೀಸ್ ಪಡೆ ವಶಕ್ಕೆ ಪಡೆಯಿತು,’ ಎಂದು ಎನ್ ಡಿ ಟಿವಿ..

    February 17, 2016

Top