An unconventional News Portal.

Posts created by samachara
    ...
    nitish-bihar-alcohal-ban
    ದೇಶ

    ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

    ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬಿಹಾರ ಸರಕಾರ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ. ಏ. 1ರಂದು ಬಿಹಾರದ ಗ್ರಾಮೀಣ ಭಾಗದಲ್ಲಿ ‘ದೇಶಿ ಉತ್ಪಾದಿತ ವಿದೇಶಿ ಮದ್ಯ’ (ಐಎಂಎಫ್ಎಲ್)ವನ್ನು ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಇಂದು (ಮಂಗಳವಾರ) ಮಾಧ್ಯಮಗಳ ಜತೆ ಮಾನಾಡಿದ ಅವರು, “ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಮದ್ಯ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಸೆ ತೋರಿಸಿದ್ದಾರೆ. ಹೀಗಾಗಿ, ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ಮದ್ಯ..

    April 5, 2016
    ...
    4b
    ಸಮಾಚಾರ +

    ನಗ್ನ ಸೌಂದರ್ಯದ ಮಾದಕತೆ ಆಚೆಗೂ ಈಕೆ ಗಟ್ಟಿಗಿತ್ತಿ!

    ಮಹಿಳೆಯರ ದೇಹ ಸದ್ಯದ ಮಾರುಕಟ್ಟೆಯಲ್ಲಿ ಬಿಕರಿಗಿರುವ ಸರಕು. ಜಾಹಿರಾತುಗಳಿಂದ ಹಿಡಿದು ಅಶ್ಲೀಲ ಸಿನೆಮಾ ತಯಾರಿಕೆವರೆಗೂ ಮಹಿಳೆಯ ಮಾಂಸಖಂಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇವತ್ತಿನ ಜೀವನ ಶೈಲಿಯ ಇಂತಹ ಆಲೋಚನೆಯನ್ನು ಕೆಲವರು ವಿರೋಧಿಸುತ್ತಾರೆ. ಮಹಿಳೆ ದೈಹಿಕವಾಗಿ ಸೌಂದರ್ಯವತಿ. ಜತೆಗೆ, ಆಕೆ ಪುರುಷರ ಹಾಗೆಯೇ ಗಟ್ಟಿಗಿತ್ತಿ ಎಂಬುದು ಅವರ ಪ್ರತಿಪಾದನೆ. ಇದನ್ನು ಆಧಾರವಾಗಿಟ್ಟುಕೊಂಡು ಆಂಟನ್ ಬೆಲೆವೋಷಂಕೋ ಎಂಬ ಛಾಯಾಚಿತ್ರ ನಿಪುಣ ಕಪ್ಪು ಬಿಳುಪಿನ ಫೊಟೋಗಳ ಮೂಲಕ ಭಿನ್ನ ನೆಲೆಯಲ್ಲಿ ಮಹಿಳೆಯನ್ನು ತೋರಿಸುವ ಪ್ರಯತ್ನ ಮಾಡಿದ್ದಾನೆ. ಇಲ್ಲಿರುವ ಚಿತ್ರಗಳು ಆತ ತೆಗೆದವು. ಇಲ್ಲಿ..

    April 4, 2016
    ...
    pu-cm-meet-bangalore
    ರಾಜ್ಯ

    ಪಿಯುಸಿ ಮೌಲ್ಯಮಾಪನ ಡೋಲಾಯಮಾನ: ಸರಕಾರದ ಬಳಿ ಇರುವ ಕೊನೆಯ ಅಸ್ತ್ರ ‘ಎಸ್ಮಾ’?

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೌಲ್ಯಮಾಪನ ಬಹಿಷ್ಕರಿಸಿರುವ ಪ್ರತಿಭಟನಾನಿರತ ಪಿಯು ಉಪನ್ಯಾಸಕರ ಮೇಲೆ ಎಸ್ಮಾ(ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ) ಮಂಗಳವಾರ ಜಾರಿಯಾಗುವ ಸಾಧ್ಯತೆ ಇದೆ. ವೇತನ ತಾರತಮ್ಯ ನಿವಾರಣೆ ಹಿನ್ನೆಲೆಯಲ್ಲಿ ‘ಕುಮಾರ್ ನಾಯಕ್ ವರದಿ’ ಜಾರಿಗೆ ಆಗ್ರಹಿಸಿ ಪಿಯು ಉಪನ್ಯಾಸಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕ, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ 2011ರಲ್ಲಿ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಕುಮಾರ್ ನಾಯಕ್ ಸರಕಾರಕ್ಕೆ ವರದಿ ನೀಡಿದ್ದರು. ವರದಿ ಜಾರಿಯಾದರೆ ಸರಕಾರಕ್ಕೆ ಹೆಚ್ಚುವರಿ..

    April 4, 2016
    ...
    panamapapers-1
    ವಿಚಾರ

    ‘ಪನಾಮ ಪೇಪರ್ಸ್’: ಕರ್ನಾಟಕದಲ್ಲಿರುವ ನಮಗ್ಯಾಕೆ ಮುಖ್ಯವಾಗಬೇಕು?

    ‘ಪನಾಮ ಪೇಪರ್ಸ್’! ಸೋಮವಾರ ಮುಂಜಾನೆ ಹೀಗೊಂದು ಶಬ್ಧ ಕಿವಿಗೆ ಬೀಳುತ್ತಲೇ ಒಂದಷ್ಟು ಜನರಾದರೂ, ‘ಇದೇನಿದು ಹೊಸ ಪದ?’ ಎಂದು ಅಚ್ಚರಿಗೊಂಡಿರಬಹುದು. ಆ ಸಾಲಿನಲ್ಲಿ ‘ಸಮಾಚಾರ’ ಕೂಡ ಇತ್ತು. ಇಲ್ಲೀವರೆಗೂ ನಾವು ಪನಾಮ ಕಾಲುವೆ ಬಗ್ಗೆ ಕೇಳಿದ್ದೆವು. ಅದನ್ನು ಈಜಿ ದಡ ಸೇರಿದವರ ಬಗ್ಗೆ ಓದಿದ್ದೆವು. ಜಗತ್ತಿನ ನಿಗೂಢಗಳು ಕುತೂಹಲ ಮೂಡಿಸುವಂತೆ ಈ ‘ಪನಾಮ ಕಾಲುವೆ’ ಕೂಡ ಯಾವತ್ತಿಗೂ ಕುತೂಹಲ ಮೂಡಿಸುವ ಅಂಶವಾಗಿತ್ತು. ಈಗ ‘ಪನಾಮ ಪೇಪರ್ಸ್’; ಹೀಗಂತ ಹೇಳಿಕೊಂಡು ಎಲ್ಲೋ ದೂರದ ಪತ್ರಕರ್ತರ ತಂಡವೊಂದು ಜಗತ್ತಿಗೆ ಹಂಚಿರುವ 11 ಮಿಲಿಯನ್ ದಾಖಲೆಗಳು,..

    April 4, 2016
    ...
    cbi spl court-1
    ಸುದ್ದಿ ಸಾರ

    ‘ಎನ್ಕೌಂಟರ್ ನಕಲಿ’: 47 ಪೊಲೀಸರಿಗೆ ಜೀವಾವಧಿ ಶಿಕ್ಷೆ

    25 ವರ್ಷಗಳ ಹಿಂದಿನ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸೋಮವಾರ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ 47 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜುಲೈ, 12, 1991ರಲ್ಲಿ ಉತ್ತರ ಪ್ರದೇಶದ ಪಿಲಿಭಿಟ್ ಎಂಬಲ್ಲಿ ಸಿಖ್ ಯಾತ್ರಾರ್ಥಿಗಳನ್ನು ದಾರಿ ನಡುವೆ ತಡೆದ ಪೊಲೀಸರು ಬಸ್ಸಿನಿಂದ ಇಳಿಸಿಕೊಂಡು ಹೋಗಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯ ಪ್ರಕಾರ, ಯಾತ್ರಾರ್ಥಿಗಳನ್ನು ಗುಂಪುಗಳಲ್ಲಿ ವಿಭಾಗಿಸಿ, ಕಾಡಿನಲ್ಲಿ ಗುಂಡಿಕ್ಕಿ ಕೊಂದು ಹಾಕಿದ್ದರು.ನಂತರ ಮಾಧ್ಯಮಗಳ ಮುಂದೆ, ಪ್ರಯಾಣಿಸುತ್ತಿದ್ದ ಕೆಲವು ಸಿಖ್ ಯಾತ್ರಾರ್ಥಿಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಕೆಲವರ ಬಳಿ..

    April 4, 2016
    ...
    congress-bangalore
    ಸುದ್ದಿ ಸಾರ

    ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಬೋನಸ್: ಅಂತಿಮ ಹಂತದಲ್ಲಿ ಪಟ್ಟಿ

    ಖಾಲಿ ಇರುವ 8 ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಹಾಗೂ ಸುಮಾರು 800 ನಿರ್ದೇಶಕ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪಟ್ಟಿ ಸಿದ್ಧತೆ ಭರದಿಂದ ಸಾಗಿದ್ದು, ಸಿಎಂ ಸಿದ್ದರಾಮಯ್ಯ ಇದಕ್ಕಾಗಿ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮವನ್ನು ರದ್ಧುಗೊಳಿಸಿದ್ದಾರೆ ಎಂದು ಅವು ಹೇಳಿವೆ. ಸಿದ್ದರಾಮಯ್ಯ ‘ಸೌಖ್ಯ ಪ್ರಕೃತಿ ಚಿಕಿತ್ಸಾ ಕೇಂದ್ರ’ಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದರು. ಆದರೆ, ನಿಗಮ-ಮಂಡಳಿ ನೇಮಕಾತಿ ಪೂರ್ಣಗೊಳಿಸಬೇಕಾದ ನಿರ್ಧಾರವನ್ನು ಪಕ್ಷ ಕೈಗೊಂಡ ಹಿನ್ನಲೆಯಲ್ಲಿ ಇಂದು ನಿಗಮ – ನೇಮಕಾತಿ ಪಟ್ಟಿ..

    April 4, 2016
    ...
    Vidhana-Soudha-bangalore-View
    ಸುದ್ದಿ ಸಾರ

    ಸಿಎಂ, ಸಚಿವರ ಈವರೆಗಿನ ಪ್ರಯಾಣ ಭತ್ಯೆ ಎಷ್ಟು ಗೊತ್ತಾ?

    32 ತಿಂಗಳು; ಅಂದರೆ ಹೆಚ್ಚು ಕಡಿಮೆ 960 ದಿನ, 12 ಜನರ ಓಡಾಟ; ಒಟ್ಟು ಖರ್ಚು 11 ಕೋಟಿ ರೂಪಾಯಿ. ಅಂದಹಾಗೆ, ಹೀಗೆ ಪ್ರತಿ ದಿನ ಸರಾಸರಿ 10 ಸಾವಿರ ರೂಪಾಯಿ ಬರೀ ಪ್ರಯಾಣಕ್ಕಾಗಿ ಖರ್ಷು ಮಾಡಿದವರು ನಮ್ಮ ರಾಜ್ಯ ಸಚಿವರುಗಳು. ಉತ್ತರ ಕರ್ನಾಟಕ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಪಡೆದ ಆರ್ಟಿಐ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಸಚಿವರುಗಳಾದ ವಿನಯಕುಮಾರ್ ಸೊರಕೆ – 75.89 ಲಕ್ಷ, ಯು.ಟಿ.ಖಾದರ್ – 70.23 ಲಕ್ಷ, ರಮಾನಾಥ ರೈ..

    April 4, 2016
    ...
    panamapapers-2
    ವಿದೇಶ

    ‘ಪನಾಮ ಪೇಪರ್’ ತನಿಖಾ ವರದಿ: ದೊಡ್ಡ ಕುಳಗಳ ‘ಕಪ್ಪು ಹಣ’ದ ಕಾರ್ಯಾಚರಣೆ ಬಹಿರಂಗ

    ಸೋಮವಾರ ಜಗತ್ತನ್ನು ಬೆಚ್ಚಿ ಬೀಳಿಸಿರುವ ‘ಪನಾಮ ಪೇಪರ್’ ತನಿಖಾ ವರದಿಗೆ ಕೇಂದ್ರ ಸರಕಾರ ನಿಧಾನವಾಗಿಯಾದರೂ, ಪ್ರತಿಕ್ರಿಯಿಸಿದೆ. ತೆರಿಗೆ ವಂಚಿಸುವ ಸಲುವಾಗಿ ವಿದೇಶದಲ್ಲಿ ಹೂಡಿಕೆ ಮಾಡಿದ ಭಾರತದ ಪ್ರಭಾವಿಗಳ ಬಗ್ಗೆ ತನಿಖೆ ನಡೆಸಲು ನಾನಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಹಸಿರು ನಿಶಾನೆ ತೋರಿಸಿದ್ದಾರೆ. ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವ ಭರವಸೆ ನೀಡಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಗಳಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದೀಗ, ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ ದೇಶದ ಗಡಿ..

    April 4, 2016
    ...
    cid_bangalore_office_1
    ರಾಜ್ಯ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಚಿವರ ಆಪ್ತ ಸೇರಿ ಮೂವರ ಬಂಧನ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರರಕಣದಲ್ಲಿ ಸಚಿವರ ಆಪ್ತ ಸಹಾಯಕ ಸೇರಿದಂತೆ ಸೋಮವಾರ ಮೂವರ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಈ ಸಂಬಂಧ ಮಧ್ಯಾಹ್ನದ ವೇಳೆಗೆ ಮಾಹಿತಿ ಹೊರಗೆಡವಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಜತೆ ವಿಶೇಷಾಧಿಕಾರಿಯಾಗಿದ್ದ ಓಬಳರಾಜು ಎಂಬಾತನನ್ನು ಬಂಧಿಸಲಾಗಿದೆ.  ವಿಜಯ ನಗರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕ ಮಂಜುನಾಥ್ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿ ನಿರ್ವಾಹಕ ರುದ್ರಪ್ಪ ಉಳಿದ ಬಂಧಿತರು. ಶಿಕ್ಷನ ಮಂಜುನಾಥ್ ಮತ್ತೊಬ್ಬ ಆರೋಪಿಯಿಂದ ಪ್ರಶ್ನೆ ಪತ್ರಿಕೆ..

    April 4, 2016
    ...
    west-indies-t20-world-cup-2016
    ಸುದ್ದಿ ಸಾಗರ

    ಟಿ-20 ವಿಶ್ವಕಪ್: ಕ್ರಿಕೆಟ್ ಸೋತಾಗ ಗೆದ್ದಿದ್ದು ವೆಸ್ಟ್ ಇಂಡೀಸ್!

    “ನಾನು ದೇವರಿಗೆ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ, ಯಾಕೆಂದರೆ ಅವನಿಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ. ನಮ್ಮ ತಂಡ ಜತೆ ಪಾಸ್ಟರ್ ಒಬ್ಬರು ಇದ್ದಾರೆ; ಅವರು ನಮಗಾಗಿ ಪ್ರಾರ್ಥನೆ ಸಲ್ಲಿಸುತ್ತಲೇ ಬಂದರು. ಇವತ್ತಿನ ಪ್ರದರ್ಶನ ನೋಡುತ್ತಿದ್ದರೆ, ಟಿ-20 ವಿಚಾರದಲ್ಲಿ ಕೆರೆಬಿಯನ್ ದೇಶದ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಏಕ ದಿನ ಹಾಗೂ ಟೆಸ್ಟ್ ಆಟದಲ್ಲೂ ಸುಧಾರಣೆ ಕಾಣಲಿದ್ದೇವೆ. ನಾವು ಈ ಪಂದ್ಯಾವಳಿಯನ್ನು ಆಡುವುದರ ಬಗ್ಗೆಯೇ ಅನುಮಾನಗಳಿದ್ದವು. ಅದಕ್ಕೂ ನಮ್ಮ ಕ್ರಿಕೆಟ್ ಮಂಡಳಿಯಿಂದ ಅವಮರ್ಯಾದೆ ಅನುಭವಿಸಿದೆವು. ಬುದ್ದಿ ಇಲ್ಲದ ತಂಡ ಎಂದು..

    April 3, 2016

Top