An unconventional News Portal.

Posts created by samachara
  ...

  ಎರಡನೇ ದಿನವೂ ನಡೆಯದ ಅಧಿವೇಶನ; ಉತ್ತರಖಾಂಡ್ ವಿಚಾರ ಚರ್ಚೆಗೆ ಆಗ್ರಹ

  ಉತ್ತರಾಖಾಂಡ್ ರಾಜಕೀಯ ಬಿಕ್ಕಟ್ಟಿನ ಮೇಲೆ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಸಂಸತ್ತಿನ ಉಭಯ ಸದನದ ಕಲಾಪ ಬುಧವಾರಕ್ಕೆ ಮುಂದೂಡಲಾಯಿತು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ಎರಡನೇ ದಿನವೂ ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೆ ಉಭಯ ಸದನಗಳನ್ನು ಮುಂದುಡುವುದು ಅನಿವಾರ್ಯವಾಯಿತು. ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದೆ ಮತ್ತು ಪ್ರಜಾತಾಂತ್ರಿಕ ಹಕ್ಕುಗಳನ್ನು ಧಮನ […]

  April 26, 2016
  ...

  ‘ಅಹಿಂದ ನಾಯಕ’ನನ್ನೂ ಬಿಡದ ಡಿ-ನೋಟಿಫಿಕೇಶನ್ ಮಾಯೆ!: ಸಿಎಂ ವಿರುದ್ಧ ಮತ್ತೊಂದು ದೂರು

  ಅತ್ತ ಬರ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇರುವಾಗಲೇ, ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ)ದಲ್ಲಿ ದೂರೊಂದು ಮಂಗಳವಾರ ದಾಖಲಾಗಿದೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ, ಬಿಡಿಎ ಸ್ವಾಧೀನದಲ್ಲಿದ್ದ 1. 31 ಎಕರೆ ಭೂಮಿಯನ್ನು ಡಿ- ನೋಟಿಫೈ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಮ್ ಭಟ್, ಮತ್ತಿತರ ಅಧಿಕಾರಿಗಳ ವಿರುದ್ಧ ವಕೀಲ ನಟರಾಜ್ ಶರ್ಮಾ ಎಂಬುವವರು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಅವರ ಸೂಚನೆಯಂತೆ, ಸದರಿ ಡಿ- ನೋಟಿಫಿಕೇಶನ್ […]

  April 26, 2016
  ...

  ‘ಮೋಸ್ಟ್ ವಾಂಟೆಡ್’ ದಾವೂದ್ ಕಾಲಿಗೆ ಗ್ಯಾಂಗ್ರಿನ್: ಕರಾಚಿಯಲ್ಲಿ ಶಸ್ತ್ರ ಚಿಕಿತ್ಸೆ?

  ಭಾರತದ ‘ಮೋಸ್ಟ್ ವಾಂಟೆಡ್’ ಕ್ರಿಮಿನಲ್, ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಆರೋಗ್ಯದ ಸುತ್ತ ಇದೀಗ ಗುಲ್ಲೆದ್ದಿದೆ. “ಕರಾಚಿಯಲ್ಲಿರುವ ದಾವೂದ್ ಸ್ವಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ಕಾಲಿನ ಗಾಯ, ಗ್ಯಾಂಗ್ರಿನ್ ಆಗಿ ಪರಿವರ್ತನೆಗೊಂಡಿದೆ. ಲಿಯಾಖತ್ ರಾಷ್ಟ್ರೀಯ ಆಸ್ಪತ್ರೆ ಹಾಗೂ ಮಿಲಿಟರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ,” ಎಂದು ಸಿಎನ್ಎನ್ ನೂಸ್-18 ವರದಿ ಮಾಡಿದೆ. ದಾವೂದ್ ರಕ್ತದ ಒತ್ತಡ ಹೆಚ್ಚಾಗಿದ್ದು ಸಕ್ಕರೆ ಕಾಯಿಲೆಯೂ ಸೇರಿಕೊಂಡಿದೆ. ಹೀಗಾಗಿ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದ್ದು, ಆ ಭಾಗವನ್ನು ತೆಗೆದು ಹಾಕಬೇಕು ಎಂಬ ವೈದ್ಯರ ಹೇಳಿಕೆಯೂ […]

  April 26, 2016
  ...

  ‘ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್’: ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ

  ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮದಲ್ಲಿ ನಡೆದ ‘ಡೀಲ್’ ಒಂದರ ಸುತ್ತ ಭ್ರಷ್ಟಾಚಾರದ ಗಂಭೀರ ಆರೋಪವೀಗ ಕೇಳಿ ಬಂದಿದೆ. 2005ರ ಸುಮಾರಿಗೆ ದೇಶವನ್ನು ಇಂಧನ ಸ್ವಾವಲಂಭಿ ಮಾಡುವ ಯೋಜನೆಯೊಂದನ್ನು ಘೋಷಿಸುವ ಮೂಲಕ ಭಾರಿ ಸುದ್ದಿ ಮಾಡಿದ್ದ ಯೋಜನೆ ಅದು. ಇವತ್ತು ಆ ಯೋಜನೆಯ ಅಂತರಾಳದಲ್ಲಿ ನಡೆದ ವ್ಯವಹಾರಗಳು ಬಹಿರಂಗವಾಗಿವೆ. ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮ (GSPC) ಯಾವುದೇ ತಾಂತ್ರಿಕ ಅನುಭವವಿಲ್ಲದ ಕಂಪನಿಗಳಿಗೆ ಶೇರು ನೀಡುವ ಮೂಲಕ, ಸುಮಾರು 19,700 ಸಾವಿರ ಕೋಟಿ ಹಗರಣ ನಡೆದಿದೆ ಎಂಬ […]

  April 26, 2016
  ...

  ರಿಯಲ್ ಎಸ್ಟೇಟ್ ಎಂಬ ‘ನಾಯಿಸಂತೆ’: ಕೂಸು ಹುಟ್ಟುವ ಮುನ್ನವೇ ‘Online ಕುಲಾವಿ’!

  ಮನೆ ಕಟ್ಟಬೇಕು ಎಂಬ ನಗರ ಪ್ರದೇಶದ ಜನರ ಕನಸುಗಳನ್ನೇ ಬಂಡವಾಳ ಮಾಡಿಕೊಂಡು, ಬೃಹತ್ ಪ್ರಮಾಣದ ಆನ್ಲೈನ್ ಉದ್ಯಮವೊಂದು ಸದ್ದಿಲ್ಲದೆ ಬೆಳೆದು ನಿಂತಿದೆ. ಭಿನ್ನ ಪ್ರಚಾರ ತಂತ್ರ, ತಂತ್ರಜ್ಞಾನದ ಬಳಕೆ, ಜನರನ್ನು ನಂಬಿಸಲು ಕಸರತ್ತುಗಳು, ದೊಡ್ಡ ಮಟ್ಟದ ಆದಾಯ ಹಾಗೂ ಯುವಕರೇ ತುಂಬಿಕೊಂಡಿರುವ  ವಿಚಿತ್ರ ಸಂಕರಗಳಿರುವ ಹೊಸ ಕಾಲದ ಉದ್ಯಮವಿದು. ಇಲ್ಲಿಯೂ ಪೈಪೋಟಿ ಇದೆ, ಮೋಸವಿದೆ, ವಂಚನೆ ಇದೆ, ಗಾಸಿಪ್ ಇದೆ, ತನ್ನದೇ ಜಾಲವಿದೆ, ಒಳಸುಳಿಗಳಿವೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಸಮಸ್ತ ಜಾತಕ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತೋಳ್ಬಲಕ್ಕಿಂತ ಯುಕ್ತಿಯನ್ನು ನಂಬಿಕೊಂಡು […]

  April 25, 2016
  ...

  ಮೊದಲ ದಿನವೇ ಕೋಲಾಹಲ: ಅಧಿವೇಶನಕ್ಕೆ ಉತ್ತರಖಾಂಡ್ ವಿಚಾರವೇ ಹಾಲಹಲ!

  ನಿರೀಕ್ಷೆಯಂತೆ ಸೋಮವಾರದಿಂದ ಪ್ರಾರಂಭವಾದ ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾಗಿ ಕಲಾಪವನ್ನು ಮುಂದೂಡಿದ ಪ್ರಸಂಗ ಮೊದಲ ದಿನವೇ ನಡೆಯಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಆಡಳಿತರೂಢ ಎನ್‍ಡಿಎ ವಿರುದ್ದ ಮುಗಿ ಬಿದ್ದವು. ಚುನಾಯಿತ ಸರ್ಕಾರವನ್ನು(ಉತ್ತರಖಾಂಡ್) ದುರುದ್ದೇಶಪೂರ್ವಕವಾಗಿ ವಜಾಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿದೆ. ಜನ ಅಧಿಕಾರ ಕೊಟ್ಟಿದ್ದಾರೆಂಬ ಒಂದೇ ಒಂದು ಕಾರಣಕ್ಕಾಗಿ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದರ ಬಗ್ಗೆ ಚರ್ಚೆ ನಡೆಸಲು ಸಭಾಪತಿ […]

  April 25, 2016
  ...

  ಅಮೆರಿಕಾದ ಡ್ರೋಣ್ ದಾಳಿಗೆ ಭಟ್ಕಳ ಮೂಲದ ಐಸಿಸ್ ಯುವಕ ಬಲಿ

  ಸಿರಿಯಾದಲ್ಲಿ ಕೆಲ ದಿನಗಳ ಹಿಂದೆ  ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕರ್ನಾಟಕದ ಉಗ್ರನೊಬ್ಬ ಹತನಾಗಿದ್ದಾನೆ. ಮೃತ ಉಗ್ರ 26 ವರ್ಷದ ಮಹಮ್ಮದ್ ಶಫಿ ಆರ್ಮರ್ ಕರ್ನಾಟಕದ ಭಟ್ಕಳ ಮೂಲದವನು ಎಂದು ತಿಳಿದುಬಂದಿದೆ. ಈತ ಭಾರತದಲ್ಲಿ ಐಸಿಸ್ ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಭಟ್ಕಳ ಮೂಲದ 26 ವರ್ಷದ ಆರ್ಮರ್, ಐಸಿಸ್ ಸಂಘಟನೆಯ ಪ್ರಮುಖನಾಗಿದ್ದ ಅಬೂಬಕ್ಕರ್ ಬಾಗ್ದಾದಿಯೊಂದಿಗೆ ಆತ್ಮೀಯನಾಗಿದ್ದ. ಮೊದಲಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಅರ್ಮರ್, ನಂತರದಲ್ಲಿ ಐಸಿಸ್ ಗೆ ಭಾರತೀಯ ಯುವಕರನ್ನು […]

  April 25, 2016
  ...

  ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿಗೆ ಮುಕ್ತಿ

  2006ರ ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸೋಮವಾರ ಖುಲಾಸೆಗೊಳಿಸಲಾಗಿದೆ. ಮುಂಬೈನ ವಿಶೇಷ ನ್ಯಾಯಾಲಯದ ನ್ಯಾ. ವಿ. ವಿ. ಪಾಟೀಲ್ ಅವರ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಎಲ್ಲಾ 9 ಮುಸ್ಲಿಂ ಆರೋಪಿಗಳನ್ನೂ ಆರೋಪ ಮುಕ್ತರನ್ನಾಗಿ ಮಾಡಿದ್ದು, ಅವರ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 6 ಮಂದಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಇಬ್ಬರು ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಸಲ್ಮಾನ್ ಫಾರ್ಸಿ, ಶಬೀರ್ ಅಹ್ಮದ್, ನೂರುಲ್‍ಹುದಾ ದೋಹ, ರಾಯಿಸ್ ಅಹಮದ್, ಮೊಹಮ್ಮದ್ ಅಲಿ, ಆಸಿಫ್ […]

  April 25, 2016
  ...

  ‘ಬೆಂಕಿ ಬಿದ್ದ ಮನೆ’ಯಲ್ಲಿ ಚಳಿ ಕಾಯಿಸಿಕೊಳ್ಳಲು ಹೊರಟವರು!

  ಇದು ‘ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಂಡರು’ ಎಂಬ ಗಾದೆಯನ್ನು ನೆನಪಿಸುವ ಪ್ರಸಂಗ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಗಾರ್ಮೆಂಟ್ಸ್ ಮಹಿಳೆಯರ ಬೃಹತ್ ಪ್ರತಿಭಟನೆಯ ಲಾಭ ಪಡೆಯುವ ಕಸರತ್ತುಗಳು ಶುರುವಾಗಿವೆ. ಬೊಮ್ಮನಹಳ್ಳಿಯ ಮುಖ್ಯ ರಸ್ತೆ ಹಾಗೂ ಗಲ್ಲಿಗಳಲ್ಲಿ ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಬಂಧುಗಳಿಗಾಗಿ ಹೊಸ ಪಿಎಫ್ ನೀತಿಯನ್ನು ರದ್ಧುಪಡಿಸಲು ಶ್ರಮಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಧನ್ಯವಾದಗಳು’ ಎಂಬ ದೊಡ್ಡ ದೊಡ್ಡ ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ಕೆಳಗಡೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ಹೆಸರು […]

  April 25, 2016
  ...

  ಇಸಾಗೆ ನೀಡಿದ್ದ ವೀಸಾ ವಾಪಾಸ್: ಚೀನಾ ವಿರೋಧಕ್ಕೆ ಮಣಿದ ಭಾರತ

  ‘ಜಾಗತಿಕ ಐಘೂರ್ ಕಾಂಗ್ರೆಸ್’ ನಾಯಕ, ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ದೋಲ್ಕನ್ ಇಸಾಗೆ ನೀಡಿದ್ದ ವೀಸಾವನ್ನು ಭಾರತ ಹಿಂತೆಗೆದುಕೊಂಡಿದೆ. ತಿಂಗಳ ಕೊನೆಯಲ್ಲಿ ಧರ್ಮಶಾಲದಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವ ಸ್ಥಾಪನಾ ಸಮ್ಮೇಳನ’ದಲ್ಲಿ ಇಸಾ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಭಾರತ ವೀಸಾ ನೀಡುತ್ತಿದ್ದಂತೆ ನೆರೆಯ ರಾಷ್ಟ್ರ ಚೀನಾ ತನ್ನ ಪ್ರಬಲ ವಿರೋಧವನ್ನು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ವೀಸಾ ವಾಪಾಸ್ ಪಡೆದಿದೆ ಎಂದು ಮೂಲಗಳು ಹೇಳಿವೆ. ಈ ಕುರಿತು ಎನ್ಡಿಟಿವಿಗೆ ಮಾತನಾಡಿರುವ ಇದಾ, “ನನ್ನನ್ನು ಭಯೋತ್ಪಾದಕ ಎಂದು ಚೀನಾ ಹಣೆಪಟ್ಟಿ ಕಟ್ಟಿದೆ. ಹೀಗಾಗಿ ಭಾರತ […]

  April 25, 2016

Top