An unconventional News Portal.

Posts created by samachara
  ...

  ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ಗೆ ಬಿಯರ್ ಕುಡಿಸಿದ ‘ಟ್ವಿಟರ್ ಹುಡುಗಿಯರು’!

  “ಇತ್ತೀಚೆಗೆ ಹುಡುಗಿಯರೂ ಬಿಯರ್ ಕುಡಿಯುತ್ತಿರುವುದನ್ನು ಗಮನಿಸಿದರೆ, ನನಗೆ ಭಯ ಶುರುವಾಗಿದೆ,” ಎಂದಿದ್ದಾರೆ ಗೋವಾ ಸಿಎಂ ಮನೋಹರ್ ಪರಿಕ್ಕರ್. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಪ್ರತಿಕ್ರಿಯೆ ನೀಡುವ ಮೂಲಕ ಹುಡುಗಿಯರು ಮನೋಹರ್ ಪರಿಕ್ಕರ್ ಅವರ ಕಾಲೆಳೆದಿದ್ದಾರೆ. ಗೋವಾ ರಾಜ್ಯ ಸರಕಾರದ ಶಾಸಕಾಂಗ ಕಚೇರಿ ಆಯೋಜಿಸಿದ್ದ ‘ಯುವ ಜನರ ಸಂಸತ್ತು’ ಕಾರ್ಯಕ್ರಮದಲ್ಲಿ ಪರಿಕ್ಕರ್ ಭಾಗವಹಿಸಿ ಮಾತನಾಡಿದ್ದರು.  “ಗೋವಾ ರಾಜ್ಯವನ್ನು ವ್ಯಸನ ಮುಕ್ತವಾಗಿಸುವ ಅಭಿಯಾನ ಜಾರಿಯಲ್ಲಿದೆ. ಆದರೆ, ಅದು ಮದ್ಯಮುಕ್ತವಾಗಲಿದೆ ಎಂದು ನನಗೆ ನಂಬಿಕೆಯಿಲ್ಲ. ಇತ್ತೀಚೆಗೆ ಹುಡುಗಿಯರೂ ಬಿಯರ್ […]

  February 10, 2018
  ...

  ರಾಹುಲ್ ಗಾಂಧಿ ‘ಟೆಂಪಲ್ ರನ್’ ಮತ್ತು ಸೌಹಾರ್ದತೆಯ ತಾಣ ಖ್ವಾಜಾ ಬಂದೇ ನವಾಜ್ ದರ್ಗಾ

  ರಾಜ್ಯದ ಮುಂಬರುವ ಚುನಾವಣೆಯನ್ನು ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಎದುರಿಸಲು ಮುಂದಾಗಿದೆ, ಆಡಳಿತ ಪಕ್ಷ ಕಾಂಗ್ರೆಸ್ ‘ಹಿಂದೂ ವಿರೋಧಿ’ ಎನ್ನುವ ಆರೋಪದಿಂದ ಮುಕ್ತಗೊಳ್ಳುವ ಪ್ರಯತ್ನ ನಡೆಸುತ್ತಿದೆ. ಗುಜರಾತ್ ಚುನಾವಣೆಗಾಗಿ ಅಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅಲ್ಲಿ ‘ಟೆಂಪಲ್ ರನ್’ ನಡೆಸಿದ್ದರು. ಅದನ್ನೇ ಈಗ ಕರ್ನಾಟಕದಲ್ಲಿಯೂ ಮುಂದುವರೆಸುವವರಿದ್ದಾರೆ. ಇದರ ಭಾಗವಾಗಿ ಹೈದರಾಬಾದ್ ಕರ್ನಾಟಕದ ದೇವಸ್ಥಾನ, ಅನುಭವ ಮಂಟಪ, ದರ್ಗಾ ಹಾಗೂ ಮಠಕ್ಕೆ ರಾಹುಲ್ ಗಾಂಧಿ ಶನಿವಾರದಿಂದ ಸೋಮುವಾರದ ನಡುವೆ ಭೇಟಿ ನೀಡಲಿದ್ದಾರೆ. ಇಲ್ಲಿನ ಕಲಬುರಗಿ ಜಿಲ್ಲೆಯ ಶ್ವಾಜಾ ಬಂದೇ ನವಾಜ್ […]

  February 9, 2018
  ...

  ಬೆಂಗಳೂರು ಉಪನಗರ ರೈಲ್ವೆ ಸೇವೆಗೆ ಬಜೆಟ್ ಅಂಗೀಕಾರ: ನನಸಾಗುವ ಹಾದಿಯಲ್ಲಿ ಬಹುಕಾಲದ ಕನಸು

  ಬೆಂಗಳೂರು ಟ್ರಾಫಿಕ್‌ ಜಂಜಾಟದಲ್ಲಿ ಮಿಂದೆದ್ದ ಜನರ ಸುದೀರ್ಘ ದಿನಗಳ ಬೇಡಿಕೆಗೆ ಗುರುವಾರದ ಬಜೆಟ್‌ನಲ್ಲಿ ಆಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಉಪನಗರಗಳನ್ನು ಸಂಪರ್ಕಿಸುವ, ಸಬ್‌ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಒಟ್ಟು 17,000 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಮುಂದಿನ ಒಂದೆರಡು ವರ್ಷಗಳ ಅಂತರದಲ್ಲಿ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಈಗ ನಿಚ್ಚಳವಾಗಿದೆ.  ಬೆಂಗಳೂರು ಬೆಳೆದುನಿಂತ ನಗರ. ಜನಸಂಖ್ಯೆ ಕೋಟಿ ಮೀರಿದೆ. ಪ್ರತಿನಿತ್ಯ ಲಕ್ಷಾಂತರ ಜನ ನಾನಾ ಕಾರಣಗಳಿಗಾಗಿ ಸಂಚಾರ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. […]

  February 1, 2018
  ...

  ಜೇಟ್ಲಿ ಬಜೆಟ್ 2018-19: ಏನಿರುತ್ತೆ, ಏನಿರಲ್ಲಗಳ ಆಚೆಗೆ; ಸಂಪೂರ್ಣ ಮಾಹಿತಿ- ವಿಶ್ಲೇಷಣೆ

  ಇನ್ನೇನು ಕೆಲವೇ ಹೊತ್ತಿನಲ್ಲಿ ಕೇಂದ್ರ ಸರಕಾರದ 2018-19ನೇ ಸಾಲಿನ ಮುಂಗಡ ಪತ್ರದ ಮಂಡನೆ ಆರಂಭವಾಗಿದೆ. ಇದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಐದನೇ ಬಜೆಟ್‌. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಆಯವ್ಯಯ ಪತ್ರ ಕೂಡ.  ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು 1947ರ ನವೆಂಬರ್‌ 26ರಂದು. ಸಂವಿಧಾನದ ಆರ್ಟಿಕಲ್ 112ರ ಅಡಿಯಲ್ಲಿ ‘ವಾರ್ಷಿಕ ಆರ್ಥಿಕ ಹೇಳಿಕೆ’ಯನ್ನು ಆಯಾ ಆರ್ಥಿಕ ವರ್ಷದ ಕೊನೆಯ ದಿನ ಮಂಡಿಸಿಕೊಂಡು ಬರಲಾಗುತ್ತಿತ್ತು. ಕಳೆದ ವರ್ಷದಿಂದ ಆರ್ಥಿಕ ವರ್ಷದ […]

  February 1, 2018
  ...

  ದೆಹಲಿಯಲ್ಲಿ ಎಂಟು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ: ಎತ್ತ ಸಾಗುತ್ತಿದೆ ‘ವಿಶ್ವಗುರು’?

  ರಾಷ್ಟ್ರದ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ದೆಹಲಿಯ ಶಾಲಿಮಾರ್ ಬಾಗ್‌ ಪ್ರದೇಶದಲ್ಲಿ 8 ತಿಂಗಳ ಹೆಣ್ಣು ಮಗುವಿನ ಮೇಲೆ 28 ವಯಸ್ಸಿನ ಸೋದರ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಾಯಿಯು ತಮ್ಮ ಮಗುವನ್ನು ಸಹೋದರ ಸಂಬಂಧಿ ಮನೆಯಲ್ಲಿ ಬಿಟ್ಟು ಗಂಡನೊಂದಿಗೆ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಹಸುಗೂಸಿನ ಮೇಲೆ […]

  January 30, 2018
  ...

  ಹೂಟ್ ರಿಪೋರ್ಟ್‌- 2017: ‘ಪತ್ರಿಕಾ ಸ್ವಾತಂತ್ರ್ಯದ ಹರಣ; ಮೋದಿಯ ರಾಷ್ಟ್ರೀಯತೆಯೇ ಕಾರಣ’

  ಭಾರತದಲ್ಲಿ ಪತ್ರಕರ್ತರಿಗೆ ಭಯಾನಕ ಪರಿಸ್ಥಿತಿ ಎದುರಾಗಿದೆ ಎಂದು ‘ಹೂಟ್’ ಇತ್ತೀಚಿಗೆ ಬಿಡುಗಡೆಗೊಳಿಸಿರುವ ತನ್ನ ‘ಮೀಡಿಯಾ ಫ್ರೀಡಂ ಅಂಡ್ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ ಇನ್ 2017’  ವರದಿಯಲ್ಲಿ ತಿಳಿಸಿದೆ. ಹಲವಾರು ಕಾರಣಗಳಿಂದ ಪತ್ರಕರ್ತರು ಸಂದಿಗ್ಧ ಪರಿಸರದಲ್ಲಿ ಬದುಕು ಸಾಗಿಸುವಂತಾಗಿದೆ. ಇದರೊಂದಿಗೆ ಮುಖ್ಯವಾಹಿನಿಯ ಬಹುಪಾಲು ಮಾಧ್ಯಮಗಳು ದೊಡ್ಡ ಬಂಡವಾಳಶಾಹಿಗಳು ಹಾಗೂ ರಾಜಕೀಯ ನಾಯಕರ ಕೈಗಳಲ್ಲಿದ್ದು, ಅವೇ ಹೆಚ್ಚು ಜನರನ್ನು ತಲುಪುತ್ತಿವೆ ಎಂದು ಈ ವರದಿ ಹೇಳಿದೆ. ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಾಂಕ ತಿಳಿಸುವಂತೆ 2017ರಲ್ಲಿ ಭಾರತವು ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ […]

  January 27, 2018
  ...

  ತೆರಿಗೆ ಇಲಾಖೆಗೆ ವಂಚನೆ: ಪ್ರತಿಷ್ಠಿತ ಐಟಿ ಕಂಪನಿಗಳ ಸಾವಿರಾರು ಉದ್ಯೋಗಿಗಳ ಅಕ್ರಮ ಬಯಲು

  ಐಬಿಎಂ, ವೊಡಾಫೋನ್, ಬಯೋಕಾನ್‌ ಮತ್ತು ಇನ್ಫೋಸಿಸ್‌ನಂತಹ ಮುಂತಾದ ಪ್ರತಿಷ್ಠಿತ  ಐಟಿ ಕಂಪನಿಗಳ ನೌಕರರಿಂದ ನಕಲಿ (ತಪ್ಪು ಮಾಹಿತಿಯ) ಐಟಿ ರಿಟರ್ನ್‌ ಸಲ್ಲಿಸಿ, ಆದಾಯ ತೆರಿಗೆ ರಿಫಂಡ್‌ ಮಾಡಿಸಿಕೊಳ್ಳಲು ನೆರವಾಗುತ್ತಿದ್ದ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಜಾಲವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಈ ಕುರಿತು ವಿಚಾರಣೆ ಆರಂಭವಾಗಿದೆ.  ದೇಶದ ಐಟಿ ಕ್ಷೇತ್ರದ ರಾಜಧಾನಿ ಎಂದು ಬೆಂಗಳೂರನ್ನು ಕರೆಯಲಾಗುತ್ತದೆ. ಇಲ್ಲಿನ ಹೆಸರಾಂತ ಚಾರ್ಟರ್ಡ್‌ ಅಕೌಂಟೆಂಟ್‌ ಕಚೇರಿಯ ಮೇಲೆ ಬುಧವಾರದಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. “ ಪ್ರತಿಷ್ಠಿತ […]

  January 26, 2018
  ...

  ನಿಮ್ಮದೇ ಮಾತು, ನಿಮ್ಮದೇ ನಾಲಿಗೆ; ತಿರುಚೋ ‘ಕಿಡಿಗೇಡಿತನ’ ನಮಗ್ಯಾಕೆ ಸದಾನಂದ ಗೌಡರೇ?

  ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಸದಾನಂದ ಗೌಡರು ಮಹದಾಯಿ ವಿಚಾರವಾಗಿ ‘ಸಮಾಚಾರ’ಕ್ಕೆ ನೀಡಿದ ವಿವಾದಾತ್ಮಕ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಅದರ ಬೆನ್ನಲ್ಲೇ ತಪ್ಪು ಮುಚ್ಚಿಕೊಳ್ಳಲು ಯತ್ನಿಸಿದ ಸದಾನಂದ ಗೌಡರು, ಅವರ ಟ್ವಿಟ್ಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಮಹದಾಯಿ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆ, ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸುವ ಅಗತ್ಯವಿದೆ ಎಂಬ ನನ್ನ ಹೇಳಿಕೆಯನ್ನು ತಿರುಚಲಾಗಿದೆ, ಸುಳ್ಳು ಹಬ್ಬಿಸಿ ಜನರನ್ನು ಗೊಂದಲಕ್ಕೆ ತಳ್ಳುವ ಕಿಡಿಗೇಡಿಗಳಿಗೆ ಇದೊಂದು ಉದ್ಯೋಗವಾಗಿಬಿಟ್ಟಿದೆ,” ಎಂದಿದ್ದಾರೆ. ” ಮಹದಾಯಿ ಉತ್ತರ ಕರ್ನಾಟಕದ […]

  January 25, 2018
  ...

  ‘ಕ್ಷಮಿಸು ದೇವಿ’: ಶಿರಸಿ ಮಾರಿಕಾಂಬೆ ಹೆಸರು, ‘ಗುಮ್ಮ’ರ ಕಾರುಬಾರು; ಇಲ್ಲೀಗ ಮರಗಳ ಮಾರಣಹೋಮದ್ದೇ ಪುಕಾರು!

  ಶಿರಸಿಯಲ್ಲೀಗ ಮಾರಿಕಾಂಬಾ ದೇವಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಅದೇ ವೇಳೆ, ಜಾತ್ರೆ ನೆಪದಲ್ಲಿ ಮರಗಳ ಕಡಿತಲೆಗೂ ಸಿದ್ಧತೆಗಳು ನಡೆಯುತ್ತಿವೆ. ಒಂದು ಕಡೆ ಧಾರ್ಮಿಕ ನಂಬಿಕೆ, ಮತ್ತೊಂದು ಕಡೆ ಅದನ್ನು ಬಳಸಿಕೊಂಡು ಪ್ರಕೃತಿಯ ಹಗಲು ದರೋಡೆಯ ಆರೋಪಗಳೀಗ ಸ್ಥಳೀಯ ಮಟ್ಟದಲ್ಲಿ ಕೇಳಿ ಬರುತ್ತಿವೆ.  ಇಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮಾರಿಕಾಂಬ ಜಾತ್ರೆ ನಡೆಯುತ್ತದೆ. ಈ ವರ್ಷದ ಜನವರಿ 10ರಿಂದಲೇ ಜಾತ್ರೆಗಾಗಿ ಪೂರ್ವ ತಯಾರಿಗಳು ಆರಂಭವಾಗಿವೆ. ಎಲ್ಲವೂ ದೇವಸ್ಥಾನ ಮಂಡಳಿ ಪ್ರಕಟಿಸಿದಂತೆ ನಡೆದರೆ, ಫೆ. 20ಕ್ಕೆ ದೇವರ ರಥಕ್ಕಾಗಿ ಕಾಡಿನಿಂದ […]

  January 24, 2018
  ...

  ‘ಮಹದಾಯಿ ಉತ್ತರ ಕರ್ನಾಟಕದ ಸಮಸ್ಯೆ; ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ’: ಮಾಜಿ ಸಿಎಂ ಸದಾನಂದಗೌಡ

  “ಇದು ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯ. ಆದಕಾರಣ ಇದನ್ನು ಸುಮ್ಮನೇ ರಾಜ್ಯವ್ಯಾಪಿ ವಿಸ್ತರಣೆ ಮಾಡಿಕೊಂಡು ಜನರಿಗೆ ದೊಡ್ಡ ಕಿರುಕುಳ ಕೊಡುವಂತದ್ದು ಅಷ್ಟು ಒಳ್ಳೆ ಸಂಪ್ರದಾಯವಲ್ಲ. ನಿಜ, ನಮ್ಮ ಹಕ್ಕುಗಳ ವಿಷಯ ಬಂದಾಗ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಅವಕಾಶವಿದೆ. ಆದರೆ ಇದು ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ದಕ್ಷಿಣ ಕರ್ನಾಟಕದ ಜನರು ಅಷ್ಟೊಂದು ಒತ್ತು ಕೊಡುವುದು ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ,” ಹೀಗಂತ ಹೇಳಿದವರು ಕೇಂದ್ರ ಸಚಿವ, ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಸದಾನಂದ […]

  January 24, 2018

Top