An unconventional News Portal.

Posts created by samachara

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

  ...
  FEATURE STORY

  ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

  ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ ಸಿನಿಮಾ ಕ್ಷೇತ್ರಕ್ಕೆ ಹೊಸ ಗ್ರಾಮರ್ ಬರೆದವರು. ಕ್ಯಾನ್ಸರ್‌ ಕಾಯಿಲೆ ಜತೆ ಹೋರಾಟ ನಡೆಸುತ್ತಿದ್ದ ಅವರು, ಗುರುವಾರ ನಮ್ಮನ್ನು ಅಗಲಿದ್ದಾರೆ. ಅದು ಎಂಬತ್ತರ ದಶಕದ ಕಾಲ. ಆಗ ಪೌರಾಣಿಕ, ಭಕ್ತಿ ಪ್ರಧಾನ ಸಿನಿಮಾಗಳಿಗೆ ಒಗ್ಗಿಕೊಂಡಿತ್ತು ಸ್ಯಾಂಡಲ್‍ವುಡ್. ಸಾಮಾಜಿಕ ಸಿನಿಮಾಗಳ ನೋಡುತ್ತಾ ಕಣ್ಣೀರಿಡುತ್ತಿದ್ದ ಪ್ರೇಕ್ಷಕರಿಗೆ ಸಡನ್ನಾಗಿ ಶಾಕ್ ಕೊಟ್ಟವರು ಕಾಶೀನಾಥ್ ಎಂಬ..

  January 18, 2018
  ...
  EXCLUSIVE

  ‘ಕೆಂಪಾದವೋ ಎಲ್ಲಾ ಕೆಂಪಾದವೋ’: ಓಂ ಶಕ್ತಿ ನಂಬಿಕೆಯೂ, ಸಾರಿಗೆ ಸಂಸ್ಥೆಯ ಆದಾಯ ಮೂಲವೂ…

  ಕೆಂಪು ಬಟ್ಟೆ, ಕೆಂಪು ಕುಂಕುಮ, ಕೆಂಪು ಮಣಿಸರ, ಕೆಂಪು ಕೈಬಳೆ, ಕಟ್ಟಿದ ದಾರಗಳೂ ಕೆಂಪು. ಕೊನೆಗೆ ಯಾತ್ರೆಗೆ ಕರೆದೊಯ್ಯುವ ಕೆಎಸ್ಆರ್‌ಟಿಸಿ ಬಸ್ಸಿನ ಬಣ್ಣವೂ ಕೆಂಪು. ಅದರ ಸುತ್ತ ನಿಂಬೆಹಣ್ಣು, ಬೇವಿನ ಸೊಪ್ಪು… ಇದು ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಕಂಡುಬರುವ ಸಾವಿರಾರು ಸಂಖ್ಯೆಯ ‘ಓಂ ಶಕ್ತಿ’ ಮಾಲಾಧಾರಿಗಳ ಚಿತ್ರಣ. ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ‘ಓಂ ಶಕ್ತಿ’ ಭಕ್ತಾಧಿಗಳ ಪಾಲಿಗೆ ತಮ್ಮ ಹರಕೆಗಳನ್ನು ಪೂರೈಸುವ ಸಮಯ. ಈ ವೇಳೆಯಲ್ಲಿ ಬೆಂಗಳೂರು, ರಾಜ್ಯದ ನಾನಾ ಭಾಗಗಳಲ್ಲಿ ಹಾಗೂ ಪಕ್ಕದ..

  January 18, 2018
  ...
  ಸುದ್ದಿ ಸಾರ

  ಕೊರೆಗಾಂವ್‌ ಸಂಭ್ರಮಾಚರಣೆ ಮೇಲೆ ದಾಳಿ ಹಿನ್ನೆಲೆ: ದಲಿತ ಸಂಘಟನೆಗಳ ಬಂದ್ ಯಶಸ್ವಿ

  ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರ ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಮಹಾರಾಷ್ಟ್ರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಮುಂಬೈ ಸೇರಿದಂತೆ ಮಹಾರಾಷ್ಟ್ರದ ಬಹುತೇಕ  ನಗರಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಸೋಮವಾರ ಕೋರೆಗಾಂವ್‍ನಲ್ಲಿ ನಡೆಯುತ್ತಿದ್ದ ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವ ಆಚರಣೆ ವೇಳೆ ಘರ್ಷಣೆ ನಡೆದಿತ್ತು. ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಭೀಮಾ-ಕೋರೆಗಾಂವ್ ವಿಜಯೋತ್ಸವವನ್ನ ಸಂಭ್ರಮಿಸಲು..

  January 3, 2018
  ...
  ಸುದ್ದಿ ಸಾರ

  ಬಜರಂಗದಳದ ಮಾಜಿ ಕಾರ್ಯಕರ್ತ ದೀಪಕ್ ಹತ್ಯೆ: ಕಾಟಿಪಳ್ಳದ ಸುತ್ತಮುತ್ತ ಪರಿಸ್ಥಿತಿ ಉದ್ವಿಘ್ನ

  ದಕ್ಷಿಣದ ಕನ್ನಡ ಜಿಲ್ಲೆಯ ಕಾಟಿಪಾಳ್ಳ ಬಳಿ ಹಾಡಹಗಲೇ ನಡೆದ ಮಾರಕಾಸ್ತ್ರಗಳ ದಾಳಿಗೆ ಬಜರಂಗ ದಳದ ಕಾರ್ಯಕರ್ತರೊಬ್ಬರು ಬಲಿಯಾಗಿದ್ದಾರೆ. ದೀಪಕ್ ಮೃತಪಟ್ಟ ವ್ಯಕ್ತಿ. ಕೈಕಂಬದ ನಿವಾಸಿಯಾಗಿದ್ದ ಇವರ, ಮೊಬೈಲ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮೊದಲು ಬಜರಂಗದಳ ಕಾರ್ಯಕರ್ತರಾಗಿದ್ದು, ಸದ್ಯ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. “ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಮೋಟಾರ್ ಬೈಕಿನಲ್ಲಿ ತೆರಳುತ್ತಿದ್ದ ದೀಪಕ್‌ರನ್ನು ಕಾರಿನಲ್ಲಿ ಬಂದ ನಾಲ್ಕು ಜನ ಮುಸುಕುದಾರಿಗಳು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಅವರು ದೀಪಕ್ ಮೇಲೆ ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳುವ..

  January 3, 2018
  ...
  ವಿಚಾರ

  ‘ತ್ರಿವಳಿ ತಲಾಕ್ ವಿರುದ್ಧ ಹೋರಾಟ, ಮುಸ್ಲಿಂ ಸಮುದಾಯದ ಸುಧಾರಣೆಗೆ ನಡೆಯುತ್ತಿರುವ ಆಂದೋಲನ’: ನಸ್ರೀನ್ ಮಿಠಾಯಿ

  ನಸ್ರೀನ್ ಮಿಠಾಯಿ. ತ್ರಿವಳಿ ತಲಾಕ್ ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಮುಸ್ಲಿಂ ಸಮುದಾಯದ ಸುಧಾರಣೆಯ ದೃಷ್ಟಿಯಿಂದ ಅದರಲ್ಲೂ ಮುಸ್ಲಿಂ ಮಹಿಳೆಯರ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಇಂತಹ ಒಂದು ತೀರ್ಪು ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿದ್ದಲ್ಲ. ಇದರ ಹಿಂದೆ ಹಲವು ವರ್ಷಗಳ ಕಾಲ ನೊಂದ ಮಹಿಳೆಯರೇ ಮುಂದಾಳತ್ವ ವಹಿಸಿ ನಡೆಸಿದ ಹೋರಾಟವಿದೆ; ಅಪಾರ ಶ್ರಮವಿದೆ. ಪವಿತ್ರ ಖುರಾನ್ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ತಮಗೆ ನ್ಯಾಯವನ್ನು ಕೇಳಿ ಯಶಸ್ವಿಯೂ ಆಗಿದ್ದಾರೆ. ತಾವು ಮತ್ತೆ ಮತ್ತೆ ಅನ್ಯಾಯಕ್ಕೊಳಗಾದಾಗಲೆಲ್ಲ ಮುಸ್ಲಿಂ ವೈಯಕ್ತಿಕ..

  January 2, 2018
  ...
  ಸುದ್ದಿ ಸಾರ

  ‘ಬೇಲಿಯೇ ಎದ್ದು ಹೊಲ ಮೇಯ್ದಾಗ’: ತತ್ಕಾಲ್ ಟಿಕೆಟ್ ಬುಕ್ಕಿಂಗ್‌ ವಂಚನೆ ಪ್ರಕರಣದಲ್ಲಿ ಸಿಬಿಐ ತಂತ್ರಜ್ಞನೇ ಅಪರಾಧಿ!

  ಸಿಬಿಐ ಅಥವಾ ಸೆಂಟ್ರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಶನ್. ರಾಜಕೀಯ ಮೇಲಾಟಗಳೇನೆ ಇರಲಿ, ಇವತ್ತಿಗೂ ದೇಶದ ಪ್ರತಿಷ್ಠಿಯ ತನಿಖಾ ಸಂಸ್ಥೆ ಎಂಬ ಹೆಗ್ಗಳಿಕೆ ಸಿಬಿಐಗೆ ಇದೆ. ವಂಚನೆಗಳ ಬೆನ್ನು ಬೀಳುವುದು ಸಿಬಿಐ ಮೂಲಮಂತ್ರ. ಆದರೆ, ಇಲ್ಲಿ ಸಿಬಿಐನಲ್ಲಿ ಕೆಲಸ ಮಾಡುತ್ತಿದ್ದ ಪ್ರೋಗ್ರಾಮರ್‌ ಒಬ್ಬ ವಂಚನೆಗೆ ಇಳಿಯುವ ಮೂಲಕ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತೀಯ ರೈಲ್ವೆ ಟಿಕೆಟ್ ಬುಕ್‌ ಮಾಡಲು ಆನ್‌ಲೈನ್ ವ್ಯವಸ್ಥೆ ಇದೆ. ಇದನ್ನು ದೇಶಾದ್ಯಂತ ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಆದರೆ ಈ ಟಿಕೆಟಿಂಗ್ ವ್ಯವಸ್ಥೆಯನ್ನೇ ಬುಡಮೇಲು..

  December 28, 2017
  ...
  ಸುದ್ದಿ ಸಾರ

  ‘ಹೆಗಡೆ ಹೇಳಿಕೆ ವಿವಾದ’: ಸಂಸತ್‌ನಲ್ಲಿ ಗದ್ದಲ; ಸಾಗರದಲ್ಲಿ ದೂರು ದಾಖಲು

  ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಬಾಲಿಶ ಹೇಳಿಕೆ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿದೆ. ‘ಸಂವಿಧಾನವನ್ನು ಬದಲಿಸುವ ನಾವು ಬಂದಿದ್ದೇವೆ’ ಎಂಬ ಹೆಗಡೆ ಹೇಳಿಕೆ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರಮಟ್ಟದ ಸುದ್ದಿ ಮಾಧ್ಯಮಗಳ ಗಮನ ಸೆಳೆದಿತ್ತು. ಬುಧವಾರ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ಹೆಗಡೆಯನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಬೆಳಗ್ಗೆ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆ, ಅನಂತ್ ಕುಮಾರ್ ಹೆಗಡೆ ಹೇಳಿಕೆ ಚರ್ಚೆಗೆ ನಾಂದಿ ಹಾಡಿತು. ಈ ವಿಚಾರದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ..

  December 27, 2017
  ...
  ಸುದ್ದಿ ಸಾರ

  ಮತ್ತೊಬ್ಬ ಮಾನವಹಕ್ಕು ಹೋರಾಟಗಾರನನ್ನು ಜೈಲಿಗಟ್ಟಿದ ಚೈನಾ ಕಮ್ಯುನಿಸ್ಟ್ ಸರಕಾರ

  ಆನ್‌ಲೈನ್‌ನಲ್ಲಿ ‘ಸೂಪರ್ ವಲ್ಗರ್ ಬುಚ್ಚರ್’ ಎಂಬ ಹೆಸರಿಂದ ಸರ್ಕಾರದ ನೀತಿಗಳನ್ನು ಪ್ರಶ್ನಿಸಿ, ಸೂಕ್ಷ್ಮ ಬರಹಗಳ ಮುಖಾಂತರ ಹೆಸರು ಗಳಿಸಿದ್ದ ಮಾನವಹಕ್ಕುಗಳ ಹೋರಾಟಗಾರ ವು-ಗನ್‌ಗೆ ಚೈನಾ ಸರಕಾರ ಮಂಗಳವಾರ ಎಂಟು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ವೂ-ಗನ್ ತಮ್ಮ ಬ್ಲಾಗ್‌ನಲ್ಲಿ ಬರೆಯುವುದರ ಜೊತೆಗೆ ಬೀದಿಗಳಲ್ಲಿ ವಿನೂತನ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಟೈಆನ್ಜಿನ್ ದ್ವಿಸದಸ್ಯತ್ವ ಪೀಠವು ಇವರಿಗೆ ಸರಕಾರದ ನಡೆಗಳನ್ನು ಪ್ರಶ್ನಿಸಿದ ಆರೋಪದ ಮೇಲೆ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಮುಂಚೆಯೇ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟಿಸಿದ್ದಕ್ಕಾಗಿ ಪೂರ್ವ..

  December 27, 2017
  ...
  ಸುದ್ದಿ ಸಾರ

  ‘ಕ್ರೈಂ ಇನ್ ಜಪಾನ್’: ಪುಟ್ಟ ದೇಶಕ್ಕೆ ಶಾಕ್ ನೀಡಿದ ಹೊಸ ಅಪರಾಧ ಪ್ರಕರಣ!

  ಜಪಾನ್; ಇತರೆ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಹೋಲಿಸಿದಾಗ ಅತೀ ಕಡಿಮೆ ಅಪರಾಧ ಪ್ರಕರಣಗಳನ್ನು ಹೊಂದಿರುವ ದೇಶ. ಆದರೆ ಮಂಗಳವಾರ ಮಾನವೀಯತೆಯೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರ ಜಪಾನಿನ ಒಸಾಕಾ ಪ್ರದೇಶದಿಂದ ವರದಿಯಾಗಿದೆ. ಸಾಮಾನ್ಯವಾಗಿ ಅಪರಾಧ ಸುದ್ದಿಗಳಿಗೆ ಆದ್ಯತೆ ನೀಡದ ಇಲ್ಲಿನ ಮಾಧ್ಯಮಗಳಲ್ಲೀಗ ಮಗಳನ್ನು 15 ವರ್ಷಗಳ ಕಾಲ ಬಂಧನದಲ್ಲಿಟ್ಟು, ಕೊಲೆ ಮಾಡಿದ ದಂಪತಿಯ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದೆ. 33 ವರ್ಷ ಪ್ರಾಯದ ಮಗಳನ್ನು ಚಿಕ್ಕ ಕೊಠಡಿಯೊಂದರಲ್ಲಿ ಸುಮಾರು 15 ವರ್ಷಗಳಷ್ಟು ಹಿಂದೆಯೇ ಕೂಡಿ ಹಾಕಿದ ತಂದೆ ತಾಯಿಯರನ್ನು ನೆಯಾಗಾವಾದ ಪೋಲಿಸ್..

  December 26, 2017
  ...
  ಮೀಡಿಯಾ 2.0

  ‘ದಿ ಸ್ಟೋರಿ ಆಫ್ ಸಮಾಚಾರ’: ಸ್ವತಂತ್ರ ಮಾಧ್ಯಮ ಕಟ್ಟುವ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ; ಧನ್ಯವಾದಗಳು!

  ಅದು 2016ರ ಜನವರಿ ತಿಂಗಳು. ಅಷ್ಟೊತ್ತಿಗಾಗಲೇ ಕರ್ನಾಟಕದ ಸಾಕಷ್ಟು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಮಿಂದೆದ್ದ ಒಂದು ಚಿಕ್ಕ ಪತ್ರಕರ್ತರ ತಂಡಕ್ಕೆ ‘ಸ್ವಾತಂತ್ರ್ಯ’ದ ಮಹತ್ವ ಅರಿವಿಗೆ ಬಂದಿತ್ತು. ಮಾಧ್ಯಮಗಳು ರಾಜಕೀಯ ವ್ಯಕ್ತಿಗಳಿಂದ, ಪಕ್ಷಗಳಿಂದ, ಕಾರ್ಪೊರೇಟ್ ರಂಗದಿಂದ, ಉದ್ಯಮಿಗಳಿಂದ ಹೀಗೆ ನಾನಾ ಬಂಡವಾಳದ ಮೂಲಗಳಿಂದ ಮುಕ್ತವಾಗಿರಬೇಕು ಎಂದು ಅನ್ನಿಸಿತ್ತು. ಆದರೆ ಅದು ಆಶಯ ಮಾತ್ರ. ವಾಸ್ತವದಲ್ಲಿ ಹಣವಿಲ್ಲದೆ, ಬಂಡವಾಳ ಹೂಡುವವರು ಇಲ್ಲದೆ ಮಾಧ್ಯಮ ನಡೆಸುವುದು ಸಾಧ್ಯವಾ? ಸಾಧ್ಯವಿದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ಇಳಿಸದೆ ಜನರನ್ನು ನಂಬಿಸುವುದು..

  December 22, 2017

FOOT PRINT

Top