An unconventional News Portal.

Posts created by ಆರ್. ಶಕುಂತಲಾ
    ...

    ‘ಮೊದಲು ಅಮೆರಿಕ’ ನೀತಿಗೆ ಜೋತು ಬಿದ್ದ ಟ್ರಂಪ್; ಮಧ್ಯಮ ವರ್ಗದ ಅನಿವಾಸಿ ಭಾರತೀಯರದಲ್ಲಿ ಶುರುವಾಗಿದೆ ನಡುಕ

    ಇದು ಸುಮಾರು ಒಂದು ವರ್ಷದ ಹಿಂದಿನ ಮಾತು. 2016 ಅಂತ್ಯ ಹಾಗೂ 2017ರ ಆರಂಭದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಎನ್ನುವ ಅಮೆರಿಕದ ಉದ್ಯಮಿಯ ಹೆಸರು ವಿಶ್ವವನ್ನು ನಿಧಾನವಾಗಿ ಆವರಿಸಲು ಆರಂಭಿಸಿತ್ತು. ಸಪ್ತಸಾಗರಗಳಾಚೆ ಚುನಾವಣೆಗೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ದೊಡ್ಡ ಸದ್ದು ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ‘ನಾನು ಹಿಂದೂ ಧರ್ಮದ ದೊಡ್ಡ ಅಭಿಮಾನಿ’ ಮತ್ತು ‘ನಾನು ಭಾರತದ ದೊಡ್ಡ ಅಭಿಮಾನಿ’ ಎನ್ನುವ ಮಾತುಗಳು ಟ್ರಂಪ್ ಬಾಯಿಯಿಂದ ಹೊರಬೀಳುತ್ತಿದ್ದಂತೆ ಭಾರತದ ಮದ್ಯಮ ವರ್ಗ ಕುಣಿದು ಕುಪ್ಪಳಿಸಿತ್ತು. ಆದರೆ ಈಗ, ಟ್ರಂಪ್ ಹೆಸರು ಕೇಳುತ್ತಲೇ ಅದೇ ವರ್ಗ […]

    January 5, 2018
    ...

    ಪ್ರಜಾತಂತ್ರವನ್ನ ಪಾತಾಳಕ್ಕೆ ತಳ್ಳುತ್ತಿದೆಯೇ ಚುನಾವಣಾ ಚಾಣಾಕ್ಷ ‘ಶಾ’ ತಂತ್ರಗಾರಿಕೆ?

    2018 ಹಾಗೂ 2019 ಚುನಾವಣೆಯ ಪರ್ವಕಾಲ. ಈ ವರ್ಷ ದೊಡ್ಡ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 8 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ. ಪ್ರಜಾಧಿಕಾರದ ಪಡೆಯುವ ಪ್ರಕ್ರಿಯೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಗೆಲುವು-ಸೋಲಿನ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳು ರಟ್ಟೆಯರಳಿಸಿ ಪ್ರಚಾರದ ಕಣಕ್ಕೆ ಇಳಿದಿವೆ. ಪ್ರಮುಖ ಮೂರು ಪಕ್ಷಗಳ ಚುನಾವಣಾ ಪ್ರಚಾರದ ವೈಖರಿಗಳ ಪೈಕಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಾಗೂ 19 ರಾಜ್ಯಗಳ ಚುಕ್ಕಾಣಿ ಹಿಡಿದಿರುವ ಬಿಜೆಪಿ ರೂಪಿಸುತ್ತಿರುವ ಚುನಾವಣಾ ತಂತ್ರಗಾರಿಕೆ, ದೇಶದ ಚುನಾವಣಾ […]

    January 3, 2018
    ...

    ನಿರಾಶ್ರಿತರ ಶಿಬಿರದಲ್ಲಿ ನಡೀತು ‘ನಿಖ್ಹಾ’; ಜಗತ್ತಿನ ಗಮನ ಸೆಳೆಯಿತು ರೋಹಿಂಗ್ಯಾ ಜೋಡಿಯ ಹೊಸ ಹೆಜ್ಜೆ

    ಮದುವೆ ಅನ್ನೋದು ಎರಡು ಜೀವಗಳನ್ನ ಬೆಸೆಯುವ ಮಧುರ ಸಂಬಂಧ ಅಂತಾ ಸಮಾಜ ನಂಬಿದೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ನಂಬುವವರೂ ಇದ್ದಾರೆ. ಜನ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾಗ ಮದುವೆ ಅನ್ನೋ ಬಂಧನಕ್ಕೆ ಒಳಗಾಗೋದು ಸಾಮಾನ್ಯ. ಮದುವೆ ಆಗಬೇಕು ಅಂದರೆ ಉತ್ತಮ ನೌಕರಿ ಸಿಗಬೇಕು ಅಂತಾ ಕಾಯುವವರೂ ಇದ್ದಾರೆ. ಆದರೆ, ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ನಡೆದ ಈ ಮದುವೆ ಎಲ್ಲರಿಗೂ ಅಚ್ಚರಿ ತಂದಿದೆ. ಬದುಕಿನ ಅಸ್ತಿತ್ವವೇ ಅಲುಗಾಡುತ್ತಿರುವ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ವಿಶ್ವದ ಕುತೂಹಲದ ಕೇಂದ್ರವಾಗಿದೆ. ಸೀರೆಗಳಿಂದ ಸುತ್ತುವರಿದಿರುವ ಪುಟ್ಟ […]

    December 31, 2017
    ...

    ಗುಜರಾತ್ ಚುನಾವಣೆ: ಅಖಾಡದಲ್ಲಿ ಮೊಳಗಿದ ಬಾಲಿಷ ಹೇಳಿಕೆಗಳು; ಗಂಭೀರ ಪರಿಣಾಮಗಳು!

    ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಹಾಗೂ ಗುಜರಾತ್ನಲ್ಲಿ ಕಳೆದ 22 ವರ್ಷಗಳಿಂದ ಅಧಿಕಾರಿದಲ್ಲಿರುವ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಎರಡನೇ ಹಂತಕ್ಕೆ ಭರ್ಜರಿ ಭಾಷಣಗಳು ಮೊಳಗುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಆರೋಪ, ಪ್ರತ್ಯಾರೋಪಗಳಲ್ಲಿ ಸಾಕಷ್ಟು ವಿಷಯಗಳು ಬಂದು ಹೋಗಿವೆ. ರಾಜಕೀಯ ವಿಶ್ಲೇಷಕರು, ಮಾಧ್ಯಮಗಳು ಸೋಲು-ಗೆಲುವುಗಳ ಲೆಕ್ಕಾಚಾರ ಮಂಡಿಸಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎರಡರಲ್ಲಿ ಯಾವ […]

    December 12, 2017
    ...

    ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಜಾರಿ ಹಿಂದಿರುವ ಭನ್ವಾರಿದೇವಿಯ ಭಯಾನಕ ಕತೆ

    ಇದು ಅತ್ಯಾಚಾರದ ಅವಮಾನವನ್ನ ಮೆಟ್ಟಿ ನಿಂತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಧೀರ ಮಹಿಳೆಯ ಯಶೋಗಾಥೆ. ಗುಜ್ಜರ್ ಸಮುದಾಯದ ದಬ್ಬಾಳಿಕೆ ಮಿತಿ ಮೀರಿರುವ ರಾಜಸ್ಥಾನದ ಹಳ್ಳಿಯೊಂದರಲ್ಲಿ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುತ್ತಿರುವ ಗಟ್ಟಿಗಿತ್ತಿಯ ಸ್ಫೂರ್ತಿಯ ಕತೆ. ಮಹಿಳೆಯೊಬ್ಬರು ತಮ್ಮ ಜೀವನವನ್ನೇ ಹೋರಾಟದ ಅಸ್ತ್ರವಾಗಿಸಿಕೊಂಡು, ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ಸಾಹಸ ಕತೆ ಕೂಡ. ಈ ನಿಜ ಜೀವನದ ಕತೆಯ ನಾಯಕಿ ರಾಜಸ್ಥಾನದ ಭನ್ವಾರಿದೇವಿ. ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ, ನಮ್ಮ ನಿಧಾನಗತಿಯ ಕಾನೂನು ವ್ಯವಸ್ಥೆಯಲ್ಲಿ […]

    March 28, 2017
    ...

    ಕೇಂಬ್ರಿಡ್ಜ್ ರಿಟರ್ನ್ ಮಿಸ್ ಭಾಟಿಯಾ ಮತ್ತು ಸಂಘರ್ಷದ ನಾಡಿನ ಕೊಲೆ ಬೆದರಿಕೆಗಳು

    ಸದ್ಯ ದೇಶದ ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಹೊಸತಲ್ಲ. ಹಾಗಂತ ಹೋರಾಟ ಎಂಬುದು ಸುಂದರ ಗುಲಾಬಿಗಳನ್ನು ಹೊಂದಿರುವ ತೋಟವೇನೂ ಅಲ್ಲ. ಅದರಲ್ಲೂ, ಬಸ್ತಾರ್‌ನಂತಹ ಸೇನಾಪಡೆ ಮತ್ತು ನಕ್ಸಲೀಯರ ನಡುವೆ ನಿರಂತರ ಕಾಳಗಕ್ಕೆ ಸಾಕ್ಷಿಯಾಗಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಇನ್ನೂ ಕಷ್ಟ. ಅಂತಹದೊಂದು ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದುಕೊಂಡು ಬಂದಿರುವ ಮಿಸ್. ಭಾಟಿಯಾ. ಆದಿವಾಸಿಗಳಿರುವ ಛತ್ತೀಸ್‌ಗಢ ರಾಜ್ಯದ ಪರ್ಪಾ ಗ್ರಾಮದಲ್ಲಿ ಭಾಟಿಯಾ […]

    February 28, 2017
    ...

    ಊಟದ ಸಮಯ, ಹಣ ಉಳಿಸಲು ಮುಂದಾದ ಉದ್ಯಮಿ 30 ದಿನ ಆಹಾರ ಇಲ್ಲದೆ ಕಳೆದ!

    ಒಂದು ದಿನ ಬೆಳಗ್ಗೆ ಸರಿಯಾದ ಸಮಯಕ್ಕೆ ತಿಂಡಿ ತಿಂದಿಲ್ಲ ಅಂದರೆ, ತಲೆ ಸುತ್ತು ಬಂದು ಪ್ರಜ್ಞೆತಪ್ಪಿ ಬಿದ್ದುಬಿಡೋ ಸ್ಥಿತಿ ನಿರ್ಮಾಣವಾಗುತ್ತೆ. ಸರಿಯಾಗಿ ಆಹಾರ ಸಿಗದೆ ಜಗತ್ತಿನಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೊಬ್ಬರಿ 30 ದಿನಗಳ ಕಾಲ ಆಹಾರ ಸೇವಿಸದೆ ಬದುಕಬಲ್ಲ. ಎಲ್ಲರಂತೆ ಚಟುವಟಿಕೆಯಿಂದ ಇರಬಲ್ಲ ಅಂದರೆ ನಂಬಲು ಸಾಧ್ಯವಾ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಈ ಉದ್ಯಮಿ. ಅಮೆರಿಕದ ಅಟ್ಲಾಂಟಾದ ಉದ್ಯಮಿ ರಾಬ್ ರೈನ್ಹಾರ್ಟ್ಗೆ ಪ್ರತಿದಿನ ಅಡುಗೆ ಮಾಡಿಕೊಳ್ಳುವುದು, ಊಟಕ್ಕಾಗಿ ಸಾಕಷ್ಟು […]

    February 18, 2017
    ...

    ‘ಗಡಿ ಎಂಬ ಬೇಲಿ’ಯೊಳಗೆ ಬಂಧಿಯಾದವನು 5 ದಶಕಗಳ ನಂತರ ತಾಯ್ನಾಡಿಗೆ ಕಾಲಿಟ್ಟ ಕತೆ!

    ಕಳೆದ ಶನಿವಾರ ಚೈನಾದ ಕ್ಸಿಯಾನ್ಯಾಂಗ್ ನಗರ ಒಬ್ಬ ವಿಶೇಷ ಅತಿಥಿಯ ಆಗಮನಕ್ಕೆ ಕಾದಿತ್ತು. ‘ತವರಿಗೆ ಸ್ವಾಗತ, ಇದೊಂದು ಕಠಿಣ ಪ್ರಯಾಣವಾಗಿತ್ತು’. ಅನ್ನುವ ಫಲಕಗಳನ್ನು ಹಿಡಿದಿದ್ದ ಜನ ತಮ್ಮ ಮನೆ ಮಗನನ್ನ ಸ್ವಾಗತಿಸಿದರು. ಆ ವ್ಯಕ್ತಿ ಬರೊಬ್ಬರಿ 54ವರ್ಷಗಳ ಬಳಿಕ ತನ್ನೂರಿಗೆ, ತನ್ನ ದೇಶಕ್ಕೆ ಮರಳಿದ್ದ. ಅದಕ್ಕೂ ಮುನ್ನ ಭಾರತದ ನಾನಾ ಜೈಲುಗಳಲ್ಲಿ ನಂತರ ಇಲ್ಲಿಯೇ ಸಂಸಾರಿಗನಾಗಿ ಬದುಕು ಸವೆಸಿದ್ದ.  ಈ ಸುದೀರ್ಘ ಅವಧಿಯಲ್ಲಿ ಆತನ ಮಕ್ಕಳು ಮುದುಕರಾಗಿದ್ದರು, ಸಣ್ಣ ಹಳ್ಳಿಗಳು ಬೆಳೆದು ದೊಡ್ಡ ದೊಡ್ಡ ನಗರಗಳಾಗಿದ್ದವು. ಆ ಊರಿನ […]

    February 13, 2017
    ...

    ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಡಿದ ವಿದ್ಯಾರ್ಥಿ ನಾಯಕ ಈಗ ತರಕಾರಿ ವ್ಯಾಪಾರಿ

    ಪ್ರತ್ಯೇಕ ರಾಜ್ಯ ರಚನೆಯ ಹೋರಾಟ ಒಂದು ಸುದೀರ್ಘ ಪ್ರಕ್ರಿಯೆ. ಪ್ರಾದೇಶಿಕ ಅಭಿವೃದ್ಧಿ ಆಶಯಕ್ಕೆ ಕಟ್ಟುಬಿದ್ದು ಜನ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಹಾಗೆ, ಪ್ರತ್ಯೇಕತೆಯ ಕೂಗನ್ನ ಮುನ್ನಡೆಸಿ ಹೊಸ ರಾಜ್ಯಗಳ ಉದಯಕ್ಕೆ ಕೊಡುಗೆ ನೀಡುವ ಚಳಿವಳಿಕಾರರು, ಕೊನೆಗೆ ಉನ್ನತ ಸ್ಥಾನಮಾನಗಳನ್ನ ಪಡೆದ ಉದಾಹರಣೆಗಳಿವೆ. ಆದರೆ, ಜಾರ್ಖಂಡ್ ರಾಜ್ಯದ ರಚನೆಗಾಗಿ ನಮ್ಮ ಜೀವನವನ್ನೇ ಮೀಸಲಿಟ್ಟು ಹೋರಾಡಿದ ನಾಯಕನೊಬ್ಬ ಇದೀಗ ಬೀದಿಬದಿಯ ತರಕಾರಿ ವ್ಯಾಪಾರಿ ಅಂದ್ರೆ, ನೀವು ನಂಬಬೇಕು. ಬಿಹಾರದ ರಾಜ್ಯದಿಂದ ಪ್ರತ್ಯೇಕವಾಗಿ ಜಾರ್ಖಂಡ್ ರಾಜ್ಯ ಉದಯಿಸಿ 17 ವಸಂತಗಳೇ ಕಳೆದಿವೆ. ವಿಚಿತ್ರ […]

    February 9, 2017
    ...

    ‘ವಿಚಿತ್ರ ಕಾನೂನು’: ಇಲ್ಲಿ ಬಡವರಿಗೆ ಆಹಾರ ನೀಡಿದರೆ ಪೊಲೀಸರು ಬಂಧಿಸುತ್ತಾರೆ!

    ವಸತಿ ರಹಿತರಿಗೆ ಅನ್ನ, ಆಹಾರ ನೀಡಲು ಹೋದವರಿಗೆ ಕೈಕೋಳ ತೊಡಿಸುವ ಕಾನೂನುಗಳು ಅಮೆರಿಕಾದಲ್ಲಿವೆ ಎಂದರೆ ನೀವು ನಂಬಬೇಕು. ಇಲ್ಲಿನ ಫ್ಲೋರಿಡಾದ ಟ್ಯಾಂಪ ನಗರದಲ್ಲಿ ಇರುವ ಇಂತದೊಂದು ವಿಚಿತ್ರ ಕಾನೂನು ಆಗಾಗ್ಗೆ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಲ ದಿನಗಳ ಹಿಂದೆ ಟ್ಯಾಂಪಾ ಪಾರ್ಕೊಂದರಲ್ಲಿ ಬಡವರಿಗೆ ಊಟ ಮತ್ತು ಬಟ್ಟೆಗಳನ್ನು ವಿತರಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ಲೈಕ್ಸ್ ಗ್ಯಾಸ್ಲೈಟ್ ಪಾರ್ಕ್ನಲ್ಲಿ ‘ಫುಡ್ ನಾಟ್ ಬಾಂಬ್ಸ್’ ಎನ್ನುವ ಸಂಘಟನೆಯ ಕಾರ್ಯಕರ್ತರು ಮನೆಯಿಲ್ಲದ ಜನರಿಗೆ ಊಟವನ್ನ ವಿತರಿಸುತ್ತಿದ್ದರು. […]

    February 7, 2017

Top