An unconventional News Portal.

Posts created by ಪ್ರಶಾಂತ್ ಹುಲ್ಕೋಡು
  ...

  ‘ಆಫ್‌ ದಿ ರೆಕಾರ್ಡ್‌ EXCLUSIVE’: ಮರಣೋತ್ತರ ವರದಿಗೂ ಮುನ್ನವೇ ದಾನಮ್ಮಳ ಚಾರಿತ್ರ್ಯ ‘ಮಣ್ಣು ಮಾಡಿದ’ ಐಪಿಎಸ್‌ ಅಧಿಕಾರಿ

  ಇದು ರಾಜ್ಯದ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಅಪ್ರಾಪ್ತೆಯೊಬ್ಬಳ ಚಾರಿತ್ರ್ಯ ವಧೆಗೆ ಮುಂದಾದ ಗಂಭೀರ ಪ್ರಕರಣ. ಕಳೆದ ವರ್ಷದ ಕೊನೆಯ ತಿಂಗಳಲ್ಲಿ ವಿಜಯಪುರದ ಬಾಲಕಿ ದಾನಮ್ಮ ಅತ್ಯಾಚಾರ ಪ್ರಕರಣ ಭಾರಿ ಸದ್ದು ಮಾಡಿತ್ತು. ಶಾಲೆ ಕಲಿಯುತ್ತಿದ್ದ, ದಲಿತ ಸಮುದಾಯದ ದಾನಮ್ಮ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದ ಸುದ್ದಿ ಅದು. ದೆಹಲಿಯ ‘ನಿರ್ಭಯಾ ಪ್ರಕರಣ’ವನ್ನು ನೆನಪು ಮಾಡಿಕೊಟ್ಟ ಮಾಧ್ಯಮಗಳು, ದಾನಮ್ಮ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಉತ್ತರ ಕರ್ನಾಟಲದ ಅಥಣಿ, […]

  January 19, 2018
  ...

  ‘ಬಾವುಟ, ಕೋಮು ದ್ವೇಷ, ಗಾಂಜಾ ವ್ಯಸನ, ಕ್ರೈಂ’: ದೀಪಕ್ ಕಾಟಿಪಳ್ಳ ಹತ್ಯೆ ಪ್ರಕರಣದ ಸುದ್ದಿ ಆಚೆಗಿನ ಸತ್ಯಗಳು!

  ಬಾಬ್ರಿ ಮಸೀದಿ ದ್ವಂಸ ಪ್ರಕರಣದ ನಂತರ ಮಂಗಳೂರಿನ ಕಾಟಿಪಳ್ಳ ಗ್ರಾಮದಲ್ಲಿ ಹುಟ್ಟಿಕೊಂಡ ಧಾರ್ಮಿಕ ಸೋಗಿನ ಹತ್ಯೆಗಳ ಇತಿಹಾಸಕ್ಕೆ ಮತ್ತೊಂದು ಅಧ್ಯಾಯ ಸೇರಿಕೊಂಡಿದೆ. ಅತ್ಯಂತ ಸ್ಫುಟವಾಗಿ ಬ್ಯಾರಿ ಭಾಷೆಯನ್ನು ಮಾತನಾಡುತ್ತಿದ್ದ, ಮರಾಠಿ ಕುಟುಂಬದ ಹಿನ್ನೆಲೆಯ ದೀಪಕ್ ರಾವ್‌ ಎಂಬ ಯುವಕ ಬುಧವಾರ ಹಾಡುಹಗಲೇ ಕೊಲೆಯಾಗಿದ್ದಾನೆ. ಮುಸ್ಲಿಂ ಮಾಲೀಕತ್ವದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಕ್‌, ಮದ್ಯಾಹ್ನದ ಸುಮಾರಿಗೆ ಕಾಟಿಪಳ್ಳದ ಎರಡನೇ ಬ್ಲಾಕ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ನಾಲ್ವರು ಹಂತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪಾರಿಯಾಗಿದ್ದರು. ಕರಾವಳಿ […]

  January 4, 2018
  ...

  ಟಿವಿ9, ಪಬ್ಲಿಕ್ ಟಿವಿ ಬಹಿರಂಗ ಕಿತ್ತಾಟಕ್ಕೆ ‘ಬಾರ್ಕ್‌ ಸಾಕ್ಷಿ’: ಚುನಾವಣೆ, ಜಾಹೀರಾತು ಮತ್ತು ಉದ್ಯಮಶೀಲತೆ!

  ”ಸದಾ ಎಲ್ಲರನ್ನೂ ಜರಿಯುತ್ತ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದೇ ಸತ್ಯ ಎಂದು ವಾದಿಸುವ ಅ ಮಹಾಶಯ ಸಂಪಾದಕರು ಈಗ ಕನ್ನಡಿಗರ ಕ್ಷಮೆ ಕೇಳುವ ಸಮಯ ಬಂದಿದೆ. ಸುಳ್ಳು ಹೇಳಿದವರು ಸಿಕ್ಕಿಹಾಕಿಕೊಳ್ಳಲೇಬೇಕು ಎಂಬ ನೀತಿಯಂತೆಯೇ, ಈಗ ಚಾನಲ್‌ ಸಂಪಾದಕರು ರೆಡ್‌ ಹಾಂಡ್‌ ಅಗಿ ಸಿಕ್ಕಿಬಿದ್ದಿದ್ದಾರೆ. ಅವರು ಹೇಳಿರುವ ಸುಳ್ಳಿಗೆ ಈಗ ತಕ್ಕ ಉತ್ತರ ನೀಡುವ ಸಮಯ ಬಂದಿದೆ. ಟಿವಿ ಚಾನಲ್‌ಗಳ ರೇಟಿಂಗ್‌ಗಳ ಬಗ್ಗೆ ವಿಶ್ವಾಸಾರ್ಹ ಅಂಕಿ ಅಂಶ ನೀಡುವ  ಬಾರ್ಕ್‌ ಬಗ್ಗೆಯೇ ಹೇಳಿರುವ ಈ ಸಂಪಾದಕ […]

  January 1, 2018
  ...

  ‘ಒಪ್ಪಿತ ಸಂಬಂಧ; ತುಪ್ಪದ ಹೋಮ’: ಕೇಸು ಖುಲಾಸೆಗೊಂಡರೂ ನಿಲ್ಲದ ಕಂಪನ; ಹವ್ಯಕರ ಬಂಧನ!

  ಇದೊಂದು ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿರುವ ಜನಪ್ರಿಯ ಮಠ, ತುಪ್ಪದಲ್ಲಿ ಹೋಮ ಮಾಡುವ ಮೂಲಕ ವಾತಾವರಣದ ಆಮ್ಲಜನಕವನ್ನು ಹೆಚ್ಚಿಸುತ್ತೀವಿ ಎಂದು ಪ್ರಚಾರ ಪಡೆದವರು. ಮಲೆನಾಡಿನ ಗಿಡ್ಡ ತಳಿಯ ಹಸುಗಳ ಸಾಕಾಣಿಕೆಯ ಮೂಲಕ ‘ಗೋ ಸಂರಕ್ಷಣೆ’ಯ ಮಹತ್ವವನ್ನು ಹಂಚುತ್ತಿದ್ದವರು. ಹೀಗಿರುವಾಗಲೇ ಮಠದ ಉತ್ತರಾಧಿಕಾರಿಯಾಗಿ ಬಂದ ಯುವ ಸ್ವಾಮೀಜಿಯ ‘ಒಪ್ಪಿತ ಲೈಂಗಿಕ ಸಂಬಂಧ’ ಜಗಜ್ಜಾಹೀರಾಯಿತು. ಮೂರು ವರ್ಷಗಳ ಅಂತರದಲ್ಲಿ ದೂರು, ತನಿಖೆ, ವಿಚಾರಣೆಗಳೆಲ್ಲಾ ನಡೆದು ಹೋದವು. ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡಿತು. ಮಳೆ ನಿಂತ ಮೇಲೂ ಹನಿಗಳು ಉದುರುವಂತೆ; ನ್ಯಾಯಾಲಯದಲ್ಲಿ ಪರಿಹಾರ ಕಂಡ ಪ್ರಕರಣ, […]

  December 29, 2017
  ...

  ‘ಅಂಬೇಡ್ಕರ್ ಬದುಕಿದ್ದರೆ ದಲಿತರ ಕೈಗೆ ಬಂದೂಕು ಕೊಡಿ ಅನ್ನುತ್ತಿದ್ದರು’: ಕೋಟಿಗಾನಹಳ್ಳಿ ರಾಮಯ್ಯ ಸಂದರ್ಶನ

  ಮೊದಲಿದ್ದ ಖದರ್‌ನ್ನು ಕಳೆದುಕೊಂಡಿದ್ದು ದೇಹ ಮಾತ್ರ. ಅದೇ ಹಳೆ ಹೋರಾಟದ ದಿನಗಳನ್ನು ನೆನಪಿಸುವ ದನಿ, ಘೋಷಣೆಗಳು ಹಾಗೂ ಕಾಲಕ್ಕಿಂತ ಮುಂದಿರುವ ಆಲೋಚನೆಗಳು. ‘ನನ್ನ ಕೈಗೊಂದು ಬಂದೂಕು ಕೊಡಿ, 1000 ಬುಲೆಟ್ ಕೊಡಿ, ಅದ್ಯಾವನು ದಲಿತ ಹೆಣ್ಣು ಮಕ್ಕಳ ಮೈ ಮೊಟ್ಟುತ್ತಾರೋ ನೋಡೊಣ..’ ಎಂದರು ಕೋಟಗಾನಹಳ್ಳಿ ರಾಮಯ್ಯ.  ಬಿಳಿ ಅಂಗಿ, ಕಾಟನ್ ಪ್ಯಾಂಟ್‌, ಮೇಲೊಂದು ನೀಲಿ ಬಣ್ಣದ ಜರ್ಕಿನ್ ತೊಟ್ಟಿದ್ದ ಕೆ. ರಾಮಯ್ಯ ಮಾತನಾಡತೊಡಗಿದರು. ಕೋಲಾರದ ಬೆಟ್ಟದ ಬುಡದಲ್ಲೀಗ ಅವರೊಂದು ತಾತ್ಕಾಲಿಕ ಕಚೇರಿ ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಕೋಲಾರದ ಜಿಲ್ಲಾಧಿಕಾರಿಗೆ ‘ನನಗೊಂದು ಬಂದೂಕು […]

  December 27, 2017
  ...

  ಬಾಪೂ ನಾಡಿನಲ್ಲಿ ಬಿಜೆಪಿ ಪ್ರಯಾಸದ ಗೆಲುವು: ಫಲಿತಾಂಶದ ಅಂತರಾಳ; ಬದಲಾವಣೆ ತುಡಿತಕ್ಕೆ ಅಸ್ತು ಅಂದ ಮತದಾರ!

  ಗುಜರಾತ್ ಗದ್ದುಗೆಗೆ ಬಿಜೆಪಿ ಮರಳಿದೆ. ಆದರೆ ನಿರೀಕ್ಷೆ ಇಟ್ಟಷ್ಟು ಸೀಟುಗಳನ್ನು ಪಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ತವರು ನೆಲದಲ್ಲಿಯೇ ವಿಫಲರಾಗಿದ್ದಾರೆ. ಕಾಂಗ್ರೆಸ್ ಊಹೆಗೂ ಮೀರಿ ಸ್ಪರ್ದೆ ನೀಡಿದೆ. ಅದಕ್ಕಿಂತ ಹೆಚ್ಚಾಗಿ, ಗುಜರಾತಿಗರು ಇಬ್ಬರು ಹೋರಾಟಗಾರರನ್ನು ವಿಧಾನಸಭೆಗೆ ಕಳುಹಿಸಿದ್ದಾರೆ; ಪರ್ಯಾಯ ರಾಜಕಾರಣದ ಕನಸಿಗೆ ನೀರೆರಿದ್ದಾರೆ. ಮೇಲ್ನೋಟಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಮತಗಟ್ಟೆಗಳ ಸಮೀಕ್ಷೆಗೆ ಹತ್ತಿರವಿದ್ದರೂ, ಅಂತರಾಳದಲ್ಲಿ ಆಲೋಚನೆಗೆ ದೂಡುವಂತಹ ಆಯಾಮಗಳನ್ನು ಹೊಂದಿದೆ ಎಂಬುದು ಗಮನಾರ್ಹ. ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಗೆ, 2014ರಿಂದ […]

  December 18, 2017
  ...

  ‘ಗುಜರಾತ್ ಫಲಿತಾಂಶ’: ಕೈಕೊಟ್ಟ ಸಮೀಕ್ಷೆಗಳು; ‘ಕೈ’ಹಿಡಿಯದ ಯೋಗೇಂದ್ರ ಯಾದವ್ ಊಹೆಗಳು!

  ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆದ ಹಲವು ವಿಚಾರಗಳಲ್ಲಿ ಯೋಗೇಂದ್ರ ಯಾದವ್ ನುಡಿದ ‘ಭವಿಷ್ಯ’ ಕೂಡ ಒಂದು. ದೇಶದ ಬಹುತೇಕ ಸರ್ವೆ ಏಜೆನ್ಸಿಗಳು, ಮಾಧ್ಯಮಗಳು ಪ್ರಧಾನಿ ಮೋದಿ ತವರು ರಾಜ್ಯ ಬಿಜೆಪಿಗೆ ಅನಾಯಾಸ ತುತ್ತಾಗಲಿದೆ ಎನ್ನುತ್ತಿದ್ದವು. ಅದೇ ವೇಳೆಯಲ್ಲಿ, ಚುನಾವಣಾ ವಿಶ್ಲೇಷಕರೂ ಆಗಿರುವ ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ಭಿನ್ನ ನೆಲೆಯ ಸಾಧ್ಯತೆಗಳನ್ನು ಜನರ ಮುಂದಿಟ್ಟರು. ಯೋಗೇಂದ್ರ ಯಾದವ್ ಸ್ವತಃ ಸೆಫಾಲಜಿಸ್ಟ್; ಚುನಾವಣೆಗಳ ವಿಶ್ಲೇಷಕರು. ಹಿಂದೆ ಆಮ್‌ ಆದ್ಮಿ ಪಕ್ಷದಲ್ಲಿದ್ದಾಗ, ದಿಲ್ಲಿಯ 2014 ಚುನಾವಣೆ ವೇಳೆಯಲ್ಲಿ ಎಎಪಿ […]

  December 18, 2017
  ...

  ನಿರೂಪಕ ವರ್ಸಸ್ ಮಾಜಿ ಮುಖ್ಯಮಂತ್ರಿ: ಬ್ಲಾಕ್‌ಮೇಲ್ ಆರೋಪ; ವಿಶ್ವಾಸಾರ್ಹತೆಯ ಲೋಪ!

  ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ನಂತರದ ದಿನಗಳಲ್ಲಿ ಕನ್ನಡ ಸುದ್ದಿವಾಹಿನಿಗಳು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಲಿವೆಯಾ? ಸದ್ಯ, ಈ ಕುರಿತು ಮುನ್ಸೂಚನೆಯೊಂದು ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಟಿವಿ9 ಕರ್ನಾಟಕ ವಾಹಿನಿಯ ನಿರೂಪಕ ರಂಗನಾಥ್ ಭಾರದ್ವಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಅವರು, “ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಪಕ್ಷದ ಅಭ್ಯರ್ಥಿಯೊಬ್ಬರಿಗೆ ರಂಗನಾಥ್ ಭಾರದ್ವಾಜ್ ಬೆದರಿಕೆ ಹಾಕಿರುವ ವಿಡಿಯೋ ಇದೆ,” ಎಂಬ ಬಾಂಬ್‌ ಹಾಕಿದ್ದಾರೆ. ಹೀಗೆ, ಮುಖ್ಯವಾಹಿನಿಯ ಮಾಧ್ಯಮವೊಂದರ ಪ್ರಮುಖ […]

  December 15, 2017
  ...

  ಪರಪ್ಪನ ಅಗ್ರಹಾರಕ್ಕೆ ‘ಹೆಲೋ’ ಹೇಳಿದ ರವಿ ಬೆಳಗೆರೆ: ಬದಲಾದ ಕಾಲ ಹಾಗೂ ಉತ್ತರ ಸಿಗದ ಪ್ರಶ್ನೆಗಳು

  ಸುಪಾರಿ ಸಂಚಿನ ಆರೋಪ ಹೊತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಕೊನೆಗೂ ಜೈಲು ಪಾಲಾಗಿದ್ದಾರೆ; ಅವರೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ 12785! ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಶುಕ್ರವಾರ ಬಂಧನಕ್ಕೆ ಒಳಗಾಗಿದ್ದರು. ನ್ಯಾಯಾಲಯ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ 4 ದಿನಗಳ ಕಸ್ಟಡಿಗೂ ನೀಡಿತ್ತು. ಸಿಸಿಬಿ ಪೊಲೀಸರು ಪಡೆದುಕೊಂಡಿದ್ದ ವಿಚಾರಣಾ ಅವಧಿ ಸೋಮವಾರ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಬೆಳಗೆರೆಯನ್ನು ಹಾಜರುಪಡಿಸಿದರು. ಈ ಸಮಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪರಪ್ಪನ […]

  December 11, 2017
  ...

  ‘ಸುಪಾರಿ ಸಂಚಿನ ಪ್ರಕರಣ’: ಎಸ್‌ಐಟಿ ತನಿಖೆ ಹಾಗೂ ರವಿ ಬೆಳಗೆರೆ ಬಂಧನದ ಸುತ್ತ ಮಿಸ್ಸಿಂಗ್‌ ಲಿಂಕ್ಸ್‌

  ಜನಪ್ರಿಯತೆಯ ಉತ್ತುಂಗವನ್ನು ಅನುಭವಿಸಿ ಪತ್ರಕರ್ತನೊಬ್ಬ ತೆರೆಮರೆಗೆ ಸರಿಯುತ್ತಿದ್ದ ಹಾದಿಯಲ್ಲಿ ಸೆರೆಮನೆ ಪಾಲಾಗಿದ್ದಾರೆ. ಕರ್ನಾಟಕ ಕಂಡ ಅಪರೂಪದ, ವಿವಾದಿತ ಟ್ಯಾಬ್ಲಾಯ್ಡ್‌ ಪತ್ರಕರ್ತ ರವಿ ಬೆಳಗೆರೆ ಈಗ ಸಿಸಿಬಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದರು, ಅದಕ್ಕಾಗಿ 15 ಸಾವಿರ ಹಣವನ್ನು ಮುಂಗಡ ನೀಡಿದ್ದರು ಎಂಬುದು ಅವರ ಮೇಲಿರುವ ಆರೋಪ. ಪ್ರಕರಣ ಈಗಾಗಲೇ ನಾನಾ ಮಜಲುಗಳಲ್ಲಿ ಸುದ್ದಿಕೇಂದ್ರವನ್ನು ಆವರಿಸಿಕೊಂಡಿದೆ. ರಾಜ್ಯದಲ್ಲಿ ಪತ್ರಕರ್ತನೊಬ್ಬ ಇನ್ನೊಬ್ಬ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಮೊದಲ ಪ್ರಕರಣನಾ ಇದು? […]

  December 9, 2017

Top