An unconventional News Portal.

Posts created by ಎನ್ ಎಸ್ ಎ
    ...
    farmer_ploughing
    ದೇಶ

    ರೈತರ ಆತ್ಮಹತ್ಯೆಗೆ ಬ್ಯಾಂಕುಗಳ ಕೊಡುಗೆ ಅಪಾರ: ಲೇವಾದೇವಿಗಾರರ ಮೇಲಿನ ಆರೋಪ ನಿರಾಧಾರ

    ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಲೇವಾದೇವಿದಾರರಿಂದ ಪಡೆದ ಸಾಲವೇ ಜೀವಕ್ಕೆ ಕುತ್ತಾಯಿತು ಎಂಬ ಮಾತು ಕೇಳಿ ಬರುತ್ತದೆ. ಆದರೆ ಅದು ಸುಳ್ಳು ಎನ್ನುತ್ತಿದೆ ‘ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ’ (ಎನ್.ಸಿ.ಆರ್.ಬಿ) ದ ಮಾಹಿತಿ. 2015ರಲ್ಲಿ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇಕಡಾ 80 ರಷ್ಟು ಜನ ಬ್ಯಾಂಕುಗಳು ಮತ್ತು ನೋಂದಾಯಿತ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಎಂದು ಈ ದಾಖಲೆಗಳು ಹೇಳುತ್ತಿವೆ. ಇದೇ ಮೊದಲ ಬಾರಿಗೆ ಆತ್ಯಹತ್ಯೆ ಮಾಡಿಕೊಂಡ ರೈತರ ಮರು ಪಾವತಿಸಲಾಗದ ಸಾಲದ ಬಗ್ಗೆಯೂ ಎನ್.ಸಿ.ಆರ್.ಬಿ ಮಾಹಿತಿ..

    January 7, 2017
    ...
    om-puri-images
    ದೇಶ

    ಪಟಿಯಾಲಾ ಬ್ಯಾಂಕಿನಿಂದ ಅಂತರಾಷ್ಟ್ರೀಯ ಸಿನಿಮಾದವರೆಗೆ; ಬಹುಭಾಷಾ ನಟ ಓಂ ಪುರಿ ಇನ್ನು ನೆನಪು ಮಾತ್ರ

    “ಧೈರ್ಯ ಮತ್ತು ಪರಿಪೂರ್ಣ ಅಭಿನಯಕ್ಕೆ ನಾನು ಅಸೂಯೆ ಪಡುವ, ಜೀವಂತವಾಗಿರುವ ಏಕೈಕ ನಟ ಓಂ ಪುರಿ,” ಹೀಗಂತ ಭಾರತದ ಖ್ಯಾತ ನಟ ನಾಸೀರುದ್ದೀನ್ ಶಾ ‘ಅನ್ಲೈಕ್ಲೀ ಹೀರೋ ಓಂ ಪುರಿ’ ಪುಸ್ತಕದ ಮುನ್ನುಡಿಯಲ್ಲಿ ಬರೆದುಕೊಂಡಿದ್ದರು. ಆದರೆ ಅದೇ ವ್ಯಕ್ತಿ ಈಗ ನೆನಪು ಮಾತ್ರ. ಗುರುವಾರ ಸಂಜೆ ಮುಂಬೈನಲ್ಲಿ ಓಂ ಪುರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಓಂ ಪುರಿ ಮನೆಗೆ ಬಂದು ಅವರ ಕಾರ್ ಡ್ರೈವರ್ ಬಾಗಿಲು ಬಡಿದಿದ್ದಾರೆ. ಆದರೆ..

    January 6, 2017
    ...
    endosulfan
    ರಾಜ್ಯ

    ಎಂಡೋಸಲ್ಫಾನ್ ಪೀಡಿತರ ಆತ್ಮಹತ್ಯೆ; ಊರಿಗೆ ಬಂದರೂ ‘ಸಾವಿಗೆ ಮಿಡಿಯದ’ ಸಿದ್ಧರಾಮಯ್ಯ

    ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದರು. ಅಬುದಾಭಿ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಮಗನ ಮದುವೆ ಅವರ ಭೇಟಿ ಉದ್ದೇಶವಾಗಿತ್ತು. ಮಂಗಳೂರಿನಲ್ಲಿ ಮುಖ್ಯಮಂತ್ರಿ ಇಳಿಯುವ ಹೊತ್ತಿಗೆ, ಜಿಲ್ಲೆಯ ಇನ್ನೊಂದು ಮೂಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬದ ನಾಲ್ವರು ಆತ್ಮಹತ್ಯೆಯ ಸುದ್ದಿಯೂ ಬಂದಿತ್ತು. ಆದರೆ ಮಂಗಳೂರಿನಲ್ಲಿ ಮದುವೆಯಲ್ಲಿ ಭಾಗವಹಿಸಿದ ‘ಜನರ ಮುಖ್ಯಮಂತ್ರಿ’ ಸಿದ್ಧರಾಮಯ್ಯ, ಎಂಡೋ ಸಂತ್ರಸ್ತರತ್ತ ಕಣ್ಣೆತ್ತಿಯೂ ನೋಡದೇ ಬಂದ ಹಾದಿಯಲ್ಲೇ ಸಂಜೆ ವೇಳೆಗೆ ವಿಮಾನ ಹತ್ತಿ ವಾಪಾಸಾಗುತ್ತಾರೆ. ತಮ್ಮದಲ್ಲದ ತಪ್ಪಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಾ,..

    January 5, 2017
    ...
    isreal-soldier-azaria
    ವಿದೇಶ

    ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

    ಆತನಿಗಿನ್ನೂ 20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ. ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್..

    January 5, 2017
    ...
    nasim zaidi
    ದೇಶ

    ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ: ಆರಂಭಿಕ ಸಮೀಕ್ಷೆಗಳು ಹೇಳುತ್ತಿರುವುದೇನು?

    ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಬುಧವಾರ ಹೊರಬಿದ್ದಿದೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ್, ಮಣಿಪುರ ಮತ್ತು ಗೋವಾದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 4ರಿಂದ ಮತದಾನ ಆರಂಭವಾಗಲಿದೆ. ಇನ್ನು ಎಲ್ಲಾ ರಾಜ್ಯಗಳ ಮತ ಎಣಿಕೆ ಮಾರ್ಚ್ 11ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಡಾ. ನಜೀಮ್ ಜೈದಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಐದು ರಾಜ್ಯಗಳ ತಳಮಟ್ಟದಲ್ಲಿ ಪಕ್ಷಗಳ ಬಲಾಬಲ, ಆರಂಭಿಕ ಹಂತದ..

    January 4, 2017
    ...
    shrinivas-prasad-bjp-2
    ರಾಜ್ಯ

    ‘ಬದನವಾಳು’ವಿನಿಂದ ಬಿಜೆಪಿವರೆಗೆ: ಕುತೂಹಲ ಮೂಡಿಸಿರುವ ದಲಿತ ಹೋರಾಟಗಾರನ ‘ಲಿಂಗಾಯತ ಸಮೀಕರಣ’!

    ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ. ಮುಂದೆ ನಡೆಯಲಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ರಾಜಕೀಯ ನಡೆಯಂತೆ ಭಾಸವಾದರೂ, ಆಳದಲ್ಲಿ ಹಳೇ ಮೈಸೂರು ಭಾಗದ ಹೊಸ..

    January 2, 2017
    ...
    mulayam_akhilesh-copy
    ಸುದ್ದಿ ಸಾರ

    ‘ಅಪ್ಪ v/s ಮಗ’: ಉತ್ತರ ಪ್ರದೇಶದ ‘ಯಾದವೀ ಕಲಹ’ಕ್ಕೆ ಸಿನಿಮೀಯ ಟ್ವಿಸ್ಟ್

    ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ‘ಸಮಾಜವಾದಿ ಕೌಟುಂಬಿಕ ಸಂಘರ್ಷ’ ಸಿನಿಮೀಯ ತಿರುವುದು ತೆಗೆದುಕೊಂಡಿದೆ. ಶುಕ್ರವಾರ ರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಸ್ವಂತ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಹೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ 6 ತಿಂಗಳಿಗೂ ಕಡಿಮೆ ಅವಧಿ ಇದೆ ಎನ್ನುವಾಗ ಆಡಳಿತರೂಢ..

    December 31, 2016
    ...
    coal-mining
    ಸುದ್ದಿ ಸಾರ

    ಜಾರ್ಖಂಡ್ ಕಲ್ಲಿದ್ದಲು ಗಣಿಯಲ್ಲಿ ದುರಂತ: ಐವರ ಸಾವು, 40 ಜನ ಸಿಲುಕಿರುವ ಶಂಕೆ

    ಜಾರ್ಖಂಡ್ ಕಲ್ಲಿದ್ದಲು ಗಣಿ ಕುಸಿದು 5 ಜನ ಸಾವನ್ನಪ್ಪಿದ್ದಾರೆ. ಇನ್ನೂ 40 -45 ಜನ ಗಣಿಯಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಲಾಲ್ ಮಟಿಯಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಇದು ಈಸ್ಟೆರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಇಸಿಎಲ್) ಕಂಪೆನಿಗೆ ಸೇರಿದೆ. “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿವರೆಗೆ ನಾಲ್ಕು ಮೃತ ದೇಹಗಳು ಸಿಕ್ಕಿವೆ. ಒಂದು ದೇಹ ಕಾಣಿಸುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ,” ಎಂದು ಇಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಂಜನ್ ಮಿಶ್ರಾ..

    December 30, 2016
    ...
    time-einstein
    SPECIAL SERIES

    ಜೀನಿಯಸ್ ಮ್ಯಾನ್- 5: ಗಾಂಧಿಯನ್ನು ಎಂದೂ ಭೇಟಿಯಾಗದ ಐನ್‌ಸ್ಟೈನ್ ಸತ್ತಾಗ ಮೆದುಳೇ ನಾಪತ್ತೆಯಾಗಿತ್ತು!

    ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮಿಂದ ಒಳ್ಳೆಯದಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಒಂದಷ್ಟು ಪ್ರಯತ್ನಗಳನ್ನೂ ಮಾಡುತ್ತಾರೆ. ಕೊನೆಗೊಂದು ದಿನ ಒಳ್ಳೆಯದು ಮಾಡಬೇಕು ಎಂದು ಹೊರಟ್ಟಿದ್ದೇ ಕೆಡುಕಿಗೆ ಕಾರಣವಾಯ್ತು ಎಂದು ಗೊತ್ತಾದಾಗ ಮನಸ್ಥಿತಿ ಹೇಗಿದ್ದರಬಹುದು? ಐನ್‌ಸ್ಟೈನ್ ವಿಚಾರದಲ್ಲೂ ಅದೇ ಆಯಿತು. ಹಿಟ್ಲರನ ಆಟಾಟೋಪಕ್ಕೆ ಬ್ರೇಕ್ ಹಾಕಲು ಅಣು ಬಾಂಬ್ ತಯಾರಿಸುವಂತೆ ಅಮೆರಿಕಾ ಅಧ್ಯಕ್ಷ ರೂಸ್ವೆಲ್ಟ್ಗೆ ಪತ್ರ ಕಳಿಸಿದ್ದು ತಮ್ಮ ಜೀವನದ ಬಹುದೊಡ್ಡ ತಪ್ಪೆ೦ದು ಐನ್‌ಸ್ಟೈನ್ ತಮ್ಮನ್ನೇ ತಾವು ಹಳಿದುಕೊಳ್ಳುತ್ತಿದ್ದರು. ಲಕ್ಷಾಂತರ ಜನರ ಸಾವಿಗೆ ಕಾರಣನಾದೆನಲ್ಲಾ ಎಂಬ ಕೊರಗು ಅವರಲ್ಲಿತ್ತು. ಇದೇ ವಿಚಾರವಾಗಿ ಖಿನ್ನತೆಯಿಂದ..

    December 30, 2016
    ...
    tgs-sachin-naik-wife-final
    ರಾಜ್ಯ

    ‘ಇದು ನಿಮ್ಮದೇ ಪಾಪದ ಕೂಸು’: ರಿಯಲ್ ಎಸ್ಟೇಟ್ ವಂಚಕ ಸಚಿನ್ ನಾಯಕ್ ಮತ್ತೆ ಅಖಾಡಕ್ಕೆ?

    ಇತ್ತೀಚಿನ ದಿನಗಳಲ್ಲಿ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನಡೆದಿರುವ ಬಹುದೊಡ್ಡ ರಿಯಲ್ ಎಸ್ಟೇಟ್ ವಂಚನೆ ಪ್ರಕರಣದಲ್ಲಿ ಮೋಸ ಹೋದವರ ಅರಣ್ಯ ರೋದನೆ ಮುಂದುವರಿದಿದೆ. ಟಿಜಿಎಸ್, ಡ್ರೀಮ್ಸ್ ಜಿಕೆ ಮತ್ತಿತರ ಕಂಪನಿಗಳ ಹೆಸರಿನಲ್ಲಿ ಫ್ಲಾಟ್, ಸೈಟ್, ವಿಲ್ಲಾಗಳನ್ನು ನೀಡುತ್ತೇವೆ ಎಂದು ಹೇಳಿ ಗ್ರಾಹಕರಿಂದ ಹಣ ಪಡೆದು ವಂಚನೆ ಎಸಗಲಾಗಿತ್ತು. ಈ ಕಂಪನಿಗಳ ಪ್ರಮೋಟರ್ ಸಚಿನ್ ನಾಯಕ್ ಅಲಿಯಾಸ್ ಸುಮನ್ ಕುಮಾರ್ ದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಈತ, ವಂಚನೆ ಎಸಗಿದ ಜನರಿಗೆ ಪರಿಹಾರ ನೀಡುವ ಭರವಸೆ ಮೇರೆಗೆ..

    December 29, 2016

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top