An unconventional News Portal.

Posts created by ಎನ್ ಎಸ್ ಎ
    ...
    jallikattu-marina-beach-protests
    ದೇಶ

    ಮರೀನಾ ಬೀಚ್ ಈಗ ಪ್ರತಿಭಟನೆಯ ತವರು: ಜೆಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಆಗ್ರಹ

    ಕಳೆದ ಮೂವತ್ತಾರು ಗಂಟೆಗಳಿಂದ ತಮಿಳುನಾಡಿನ ಮರೀನಾ ಬೀಚ್ ಪ್ರದೇಶದಲ್ಲಿ ಜಲ್ಲಿಕಟ್ಟು ಸ್ಪರ್ದೆಯ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಜನ ನಡೆಸುತ್ತಿರುವ ಪ್ರತಿಭಟನೆಯ ಕಾವು ಜೋರಾಗುತ್ತಲೇ ಇದೆ. ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಆದರೆ ತಹಬಂದಿಗೆ ತರಲು ಸಾಧ್ಯವಾಗಿಲ್ಲ. ಸದ್ಯ ಚೆನ್ನೈನ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಪ್ರತಿಭಟನೆಯನ್ನು ಕೈ ಬಿಡುವಂತೆ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಮನವಿ ಮಾಡಿಕೊಂಡಿದ್ದರೂ, ಪ್ರತಿಭಟನೆಯ ಕಾವು ತಣ್ಣಗಾಗುತ್ತಿಲ್ಲ. ಸರಕಾರ ಮತ್ತು ನ್ಯಾಯಾಲಯ ತಮ್ಮ ಮನವಿಯನ್ನು ಆಲಿಸಬೇಕು..

    January 19, 2017
    ...
    Spicejet_Boeing_737_800
    ವಿದೇಶ

    ಕರ್ನಾಟಕ ಬಜೆಟ್ ಮೀರಿಸಿದ ‘ಸ್ಪೈಸ್ ಜೆಟ್’ ಡೀಲ್: 150 ವಿಮಾನ ಖರೀದಿಗೆ ಎಷ್ಟಾಯ್ತು ಗೊತ್ತಾ?

    ನಾಗರಿಕ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್, ಅಮೆರಿಕಾ ಮೂಲದ ವಿಮಾನ ತಯಾರಿಕಾ ಕಂಪೆನಿ ಬೋಯಿಂಗ್ ಜತೆ 1.5 ಲಕ್ಷ ಕೋಟಿಯ ಒಪ್ಪಂದ ಮಾಡಿಕೊಂಡಿದೆ. 150 ಹೊಸ ಬೋಯಿಂಗ್ ವಿಮಾನಗಳ ಖರೀದಿಗೆ ಸ್ಪೈಸ್ ಜೆಟ್ ಮುಂದಾಗಿದ್ದು ಸರಿ ಸುಮಾರು ಕರ್ನಾಟಕ ಸರಕಾರದ ವರ್ಷದ ಬಜೆಟ್ಟಿನಷ್ಟು ಮೊತ್ತವನ್ನು ಪಾವತಿ ಮಾಡಲಿದೆ. ಇದು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ನಡೆದಿರುವ ಅತೀ ದೊಡ್ಡ ಮೊತ್ತದ ಡೀಲ್ ಆಗಿದೆ. ಬೋಯಿಂಗ್ 737-8 ಮ್ಯಾಕ್ಸ್ ಮಾದರಿಯ 100 ವಿಮಾನಗಳ ಖರೀದಿಗೆ ಸ್ಪೈಸ್ ಜೆಟ್ ಆರ್ಡರ್ ನೀಡಿದ್ದರೆ..

    January 14, 2017
    ...
    Rayanna Brigade
    ರಾಜ್ಯ

    ‘ರಾಯಣ್ಣ ಬ್ರಿಗೇಡ್’ ಹಿನ್ನೆಲೆಯಲ್ಲಿ ಅಸಮಾಧಾನ: ಬಿಜೆಪಿಯೊಳಗಿನ ಈ ಬೆಳವಣಿಗೆ ನಾಟಕನಾ?

    ರಾಜ್ಯ ಬಿಜೆಪಿ ಪಕ್ಷದಲ್ಲಿ ‘ರಾಯಣ್ಣ ಬ್ರಿಗೇಡ್’ ವಿವಾದದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಧ್ಯೆ ಪತ್ರ ಸಮರಕ್ಕೆ ನಾಂದಿ ಹಾಡಿದೆ. ಜತೆಗೆ, ಬಿಜೆಪಿ ಪಕ್ಷದಡೆಗೆ ಜನರ ಗಮನವನ್ನು ಸೆಳೆಯುವಂತೆ ಮಾಡಿದೆ. ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ 24 ಮಂದಿ ಬಿಜೆಪಿ ನಾಯಕರು ನಾಲ್ಕು ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದರು. ಆದರೆ ಇದು ಕಿಡಿಗೇಡಿಗಳ ಕೃತ್ಯ ಎಂದು ಬಿಜೆಪಿ ನಾಯಕ ಗೋ..

    January 13, 2017
    ...
    Retro Photo Effect: https://www.tuxpi.com/photo-effects/retro
    ರಾಜ್ಯ

    ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ: ಸಾವಿನ ಮನೆಯಲ್ಲಿ ‘ಕ್ಯಾಂಪಸ್ ರಾಜಕೀಯ’

    ಮಲೆನಾಡು ಭಾಗದ ಕಾಲೇಜೊಂದರ ‘ಕ್ಯಾಂಪಸ್ ರಾಜಕೀಯ’ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಮೂಲಕ ಈ ಭಾಗದಲ್ಲಿ ರಾಜಕೀಯ ಮೇಲಾಟ ಸೃಷ್ಟಿಸಿದೆ. ಶೃಂಗೇರಿಯ ಜೆಸಿಬಿಎಂ ಕಾಲೇಜು ಮತ್ತು ನಿವೃತ್ತ ಯೋಧದ ಸಂಘ ಜನವರಿ ಮೊದಲ ವಾರದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮ ಮತ್ತು ನಂತರ ನಡೆದ ಘಟನಾವಳಿಗಳು ಆಸಹ್ಯಕರ ತಿರುವು ಪಡೆದುಕೊಂಡಿವೆ. ‘ಸಾವಿನ ಮನೆಯಲ್ಲಿ ಗಳ ಹಿರಿಯುವ’ ಕೆಲಸ ಶುರುವಾಗಿದೆ. ಜತೆಗೆ, ಕಾಲೇಜಿನ ಕ್ಯಾಂಪಸ್ಗಳಲ್ಲಿ ನಡೆಯುವ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳು ಮತ್ತು ಅವುಗಳು ಬೀರುವ ಕೆಟ್ಟ ಪರಿಣಾಮಗಳು ಹೇಗಿರುತ್ತವೆ ಎಂಬುದಕ್ಕೆ ಸಾಕ್ಷಿಯೊಂದು ಲಭ್ಯವಾಗಿದೆ. ನಡೆದಿದ್ದೇನು?: ಶೃಂಗೇರಿಯ..

    January 12, 2017
    ...
    modi-cm-bribe
    ದೇಶ

    ಮೋದಿ ಮೇಲೆ ಲಂಚದ ಆರೋಪ: ಪ್ರಕರಣವನ್ನು ಸುಪ್ರಿಂ ಕೋರ್ಟ್ ಕೈಬಿಟ್ಟಿದ್ದು ಯಾಕೆ?

    ಸಾಕ್ಷ್ಯಗಳ ಕೊರತೆಯ ಕಾರಣವನ್ನು ಮುಂದೊಡ್ಡಿ ಪ್ರಧಾನಿ ನರೇಂದ್ರ ಮೋದಿ ಮೇಲಿನ 25 ಕೋಟಿ ಲಂಚ ಸ್ವೀಕಾರ ಪ್ರಕರಣವನ್ನು ಸುಪ್ರಿಂ ಕೋರ್ಟ್ ಬುಧವಾರ ಕೈ ಬಿಟ್ಟಿದೆ. ಈ ಮೂಲಕ ರಾಜಕೀಯವಾಗಿ ಧೂಳೆಬ್ಬಿಸಿದ್ದ ಜನಪ್ರಿಯ ‘ಸಹರಾ ಡೈರಿ’ ಪ್ರಕರಣದಲ್ಲಿ ನರೇಂದ್ರ ಮೋದಿ ನಿರಾಳರಾಗಿದ್ದಾರೆ. 2014ರ ‘ಸಹರಾ ಡೈರಿ’ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಶೇಷ ತನಿಖೆಗೆ ಆದೇಶ ನೀಡುವಂತೆ ವಕೀಲ ಕಂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಬುಧವಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮತ್ತೊಮ್ಮೆ ಅಫಿದವಿಟ್ ಸಲ್ಲಿಸಿದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ..

    January 12, 2017
    ...
    bsf-border-force-1
    ದೇಶ

    ಮೇಲಾಧಿಕಾರಿಗಳು v/s ಸೈನಿಕರು: ಇದು ‘ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್’ನ ಇನ್ನೊಂದು ಮುಖ!

    ಅರೆಸೇನಾ ಪಡೆಗಳಲ್ಲಿ ಒಂದಾದ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಕ್ಯಾಂಪ್ಗಳಲ್ಲಿ ಅಧಿಕಾರಿಗಳು ಇಂಧನ ಮತ್ತು ಆಹಾರವನ್ನು ಸಾರ್ವಜನಿಕರಿಗೆ ಮಾರುಕಟ್ಟೆರ ಅರ್ಧ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಸಂಗತಿಯನ್ನು ‘ದಿ ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. ಶ್ರೀನಗರ ವಿಮಾನ ನಿಲ್ದಾಣ ಸಮೀಪದ ಹುಮ್ಹಾಮಾ ಬಿಎಸ್ಎಫ್ ಕೇಂದ್ರ ಕಚೇರಿಯ ಪಕ್ಕದಲ್ಲಿರುವ ಅಂಗಡಿಗಳ ಮಾಲಿಕರು ಪೆಟ್ರೋಲ್ ಮತ್ತು ಡೀಸೆಲ್ ಫಲಾನುಭವಿಗಳಾಗಿದ್ದಾರೆ. ಇದೇ ರೀತಿ ಆಹಾರಗಳನ್ನೂ ಮಾರುತ್ತಾರೆ ಎಂದು ಓರ್ವ ಜವಾನ ಹಾಗೂ ನಾಗರಿಕರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. “ಅವರು (ಬಿಎಸ್ಎಫ್..

    January 11, 2017
    ...
    public-tv-vs-facebook
    ಟಿವಿ

    ಫೇಸ್ ಬುಕ್ V/S ಪಬ್ಲಿಕ್ ಟಿವಿ: ಟೀಕೆ ಎಂಬ ಟಿಆರ್ಪಿಯೂ; ‘ದರಿದ್ರ’ ತಂದೊಡ್ಡಿದ ಫಜೀತಿಯೂ…

    “ರಚನಾತ್ಮಕ ಟೀಕೆಗಳಿಂದ ಸಮಸ್ಯೆ ಇಲ್ಲ. ಆದರೆ ಸೊಂಟದ ಕೆಳಗಿನ ಭಾಷೆಯದ್ದೇ ತೊಂದರೆ. ಅಸಹ್ಯ ಟೀಕೆಗಳು ಮಾನಸಿಕವಾಗಿ ಪರಿಣಾಮ ಬೀರುತ್ತವೆ. ಇದರಿಂದ ಏಕಾಗ್ರತೆಗೆ ಭಂಗವಾಗಿದೆ,” ಹೀಗಂದವರು ಪಬ್ಲಿಕ್ ಟಿವಿಯ ಮುಖ್ಯ ನಿರೂಪಕಿ ರಾಧಾ ಹಿರೇಗೌಡರ್. ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿ ಮತ್ತು ಅವರ ವಿರುದ್ಧ ನಡೆಯುತ್ತಿರುವ ಟೀಕೆಗಳ ಹಿನ್ನಲೆಯಲ್ಲಿ ಅವರು ‘ಸಮಾಚಾರ’ದ ಜತೆಗಿನ ಮಾತುಕತೆಯಲ್ಲಿ ಹೇಳಿದ್ದು ಹೀಗೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಗುರಿಯಾದ ಚಾನಲ್  ಪಬ್ಲಿಕ್ ಟಿವಿ; ನಿರೂಪಕರ ವಿಚಾರಕ್ಕೆ ಬಂದಾಗ ಬಹುಶಃ ಅದು..

    January 10, 2017
    ...
    pu-board
    ರಾಜ್ಯ

    ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಪಿಯುಸಿ ಉಪನ್ಯಾಸಕರು; ಬಿ.ಎಡ್ ಗೊಂದಲ ಮುಗಿಯುವುದು ಯಾವಾಗ?

    ಕರ್ನಾಟಕ ರಾಜ್ಯ ಸರಕಾರದ ‘ಬಿ.ಎಡ್ ಕಡ್ಡಾಯ’ ಗೊಂದಲ ನಿವಾರಣೆಯಾಗುವಂತೆ ಕಾಣಿಸುತ್ತಿಲ್ಲ. ಪಿಯು ಉಪನ್ಯಾಸಕರಿಗೆ ಬಿ.ಎಡ್ ಕಡ್ಡಾಯ ನಿಯಮದಿಂದ ಇದೀಗ 2013ರಲ್ಲಿ ನೇಮಕೊಂಡವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಉಪನ್ಯಾಸಕರಿಗೆ ಬಿ.ಎಡ್ ಕಲಿಯಲು ಸರಿಯಾದ ಅವಕಾಶವನ್ನೂ ಸೃಷ್ಟಿಸದೆ ಪದವಿಪೂರ್ವ ಶಿಕ್ಷಣ ಇಲಾಖೆ ಗೊಂದಲ ನಿರ್ಮಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಏನು ಸಮಸ್ಯೆ? 2013ರಲ್ಲಿ ಪಿಯುಸಿ ಉಪನ್ಯಾಸಕರ ನೇಮಕಾತಿಗಾಗಿ ಸುತ್ತೋಲೆ ಹೊರಡಿಸಲಾಗಿತ್ತು. ಈ ವೇಳೆ ವಿಜ್ಞಾನದ ಕೆಲವು ವಿಷಯಗಳಿಗೆ ಬಿ.ಎಡ್ ಮುಗಿಸಿದ ಉಪನ್ಯಾಸಕರ ಕೊರತೆ ಕಾಣಿಸಿಕೊಂಡಿತು. ಆಗ ನಿಯಮಾವಳಿ..

    January 9, 2017
    ...
    diddalli-nanjappa-death
    ರಾಜ್ಯ

    ‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

    ‘ಲೈನ್ ಮನೆ’ ಜೀತದ ನೋವಿನಲ್ಲೇ ಪ್ರಾಣ ಬಿಟ್ಟ ಆದಿವಾಸಿ ನಂಜಪ್ಪ.. ದಿಡ್ಡಳ್ಳಿಗೆ ಕಾಲಿಟ್ಟ ಹೋರಾಟಗಾರರ ವಿರುದ್ಧ ಪೊಲೀಸರಿಗೆ ದೂರು.. ಪುನರ್ವಸತಿಗೆ ಸರಕಾರದ ಕಡೆಯಿಂದ ನಿಧಾನಗತಿಯ ಪ್ರಕ್ರಿಯೆ.. ಇವಿಷ್ಟು ರಾಜ್ಯದ ಸುದ್ದಿಕೇಂದ್ರದಲ್ಲಿ ವಾರಗಳ ಕಾಲ ಜಾಗ ಪಡೆದುಕೊಂಡಿದ್ದ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸದ್ಯದ ಸ್ಥಿತಿಗತಿ. ಕೊಡಗಿನ ‘ಲೈನ್ ಮನೆ’ ಜೀತದಿಂದ ಬೇಸತ್ತು ದಿಡ್ಡಳ್ಳಿಯಲ್ಲಿ ಬಿಡಾರ ಹೂಡಿದ್ದ ಆದಿವಾಸಿ ಎರವರ ನಂಜಪ್ಪ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ ಅವರ ಜೀವ ಬಲಿ ಪಡೆದುಕೊಂಡಿದ್ದರೆ, ವಾಸ್ತವದಲ್ಲಿ ಜೀತ ಪದ್ಧತಿ..

    January 8, 2017
    ...
    bjp_national_executive_meeting-new_delhi
    ದೇಶ

    ‘ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ’: ‘ಬಡವರ ಭೂಮಿ’ಯಲ್ಲಿ ಪಂಚರಾಜ್ಯಗಳ ಚುನಾವಣಾ ಬೆಳೆ

    “ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಬಡವರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಕೈಗೊಂಡ ದೂರದೃಷ್ಟಿಯ ಯೋಜನೆ ಅನಾಣ್ಯೀಕರಣ.” ಹೀಗಂದವರು ಪ್ರಧಾನಿ ನರೇಂದ್ರ ಮೋದಿ. ನವದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯ ಶನಿವಾರದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕಾರಣಿಯಲ್ಲಿ ಮಾತನಾಡಿದ ಮೋದಿ, ‘ಬಡವರ ಸೇವೆ ಎಂದರೆ ದೇವರ ಸೇವೆ’ ಎಂದು ವ್ಯಾಖ್ಯಾನಿಸಿದರು. “ನನಗೆ ಅಧಿಕಾರ, ಸ್ವರ್ಗ, ಎರಡನೇ ಜನ್ಮ ಯಾವುದೂ ಬೇಕಾಗಿಲ್ಲ; ಆದರೆ ಬಡವರ ಸಮಸ್ಯೆಗಳು ಕೊನೆಯಾಗಬೇಕು,” ಎಂದು ಹೇಳಿದರು. ಇಡೀ..

    January 8, 2017

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top