An unconventional News Portal.

Posts created by ದೀಪಕ್ ಕುಮಾರ್ ಹೊನ್ನಾಲೆ
  ...

  ಬ್ಯಾಂಕ್‌ ಹಣ ಮುಳುಗಿಸಿದ ರೊಟೊಮ್ಯಾಕ್‌ ಕಂಪನಿ: ಇದು ಪೆನ್ನು ಮಾರುವವನಿಗೆ ಸಾಲ ಕೊಟ್ಟ ಕತೆ!

  ಬ್ಯಾಂಕ್‌ ಆಫ್‌ ಬರೋಡ ದಾಖಲಿಸಿದ ಸಾಲದ  ಪ್ರಕರಣಕ್ಕೆ ಸಂಬಂಧಿಸಿದಂತೆ ರೊಟೊಮ್ಯಾಕ್  ಪೆನ್‌ ತಯಾರಿಕಾ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಮತ್ತು ಅವರ ಪುತ್ರ ರಾಹುಲ್‌ನನ್ನು ಸಿಬಿಐ ಫೆ. 22ರಂದು ಬಂಧಿಸಿದ್ದಾರೆ.  ರೊಟೊಮ್ಯಾಕ್ ಕಂಪನಿ 7 ರಾಷ್ಟ್ರ್ರೀಕೃತ ಬ್ಯಾಂಕ್‌ಗಳಿಂದ ಒಟ್ಟು 2,919 ಕೋಟಿ ರೂಪಾಯಿ ಸಾಲ ಪಡೆದಿತ್ತು. ಸಾಲ ತೀರಿಸದೆ ಆ ಮೊತ್ತಕ್ಕೆ ಬಡ್ಡಿ ಸೇರಿ ಇವತ್ತಿಗೆ ಸುಮಾರು 3,695 ಕೋಟಿ ತಲುಪಿದೆ. ಸಾವಿರಾರು ಕೋಟಿ ರೂಪಾಯಿ ಸಾಲದ ಹಣವನ್ನು ಹಿಂತಿರುಗಿಸದೇ ದೇಶದಿಂದ ಪರಾರಿಯಾದ ವಿಜಯ್‌ ಮಲ್ಯ ಪ್ರಕರಣ […]

  February 23, 2018
  ...

  ಪಿಎನ್‌ಬಿ ಹಗರಣ: ಕತೆ ಹೇಳುವ ಕಾರ್ಟೂನ್‌ಗಳು

  ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಜತೆಜತೆಗೆ ಇನ್ನೂ ಹಲವಾರು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಗರಣದ ಬಗ್ಗೆ ದೇಶದ ಸುದ್ದಿ ಮಾಧ್ಯಮಗಳು ಪ್ರತಿನಿತ್ಯ ಒಂದಿಲ್ಲೊಂದು ವಿಷಯವನ್ನಿಡಿದು ಜನರ ಮುಂದೆ ಬರುತ್ತಿವೆ. ತನಿಖೆಯ ಕ್ಷಣಕ್ಷಣದ ಮಾಹಿತಿ, ಸಂಕ್ಷಿಪ್ತ ಸುದ್ದಿ, ವಿವರಣಾತ್ಮಕ ಲೇಖನ, ಅಂಕಣ, ಸ್ಪೆಷಲ್‌ ಸೀರೀಸ್, ಹೀಗೆ ಹಲವಾರು ನಮೂನೆಗಳಲ್ಲಿ ಹಗರಣದ ಮಾಹಿತಿಗಳನ್ನು ಬಿತ್ತರಿಸುತ್ತಿದ್ದಾರೆ. ಈ ಮಧ್ಯೆ ಗಮನ ಸೆಳೆಯುತ್ತಿರುವುದು ಹಗರಣದ ಕುರಿತಾದ ವ್ಯಂಗ್ಯ ಚಿತ್ರಗಳು. ಹಲವಾರು ಸಾಲುಗಳ ಮಾಹಿತಿಯನ್ನು ಒಂದೊಂದೇ ವ್ಯಂಗ್ಯ […]

  February 23, 2018
  ...

  ಭವಿಷ್ಯ ನಿಧಿ ಬಡ್ಡಿದರ ಇಳಿಕೆ: ಕಾರ್ಮಿಕರ ಜೇಬಿಗೆ ಕತ್ತರಿ ಹಾಕಲು ಹೊರಟಿತಾ ಮೋದಿ ಸರಕಾರ?

  ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಈ ವರ್ಷದ ತನ್ನ ಬಡ್ಡಿದರವನ್ನು ಶೇ.8. 55ಕ್ಕೆ ಕಡಿತಗೊಳಿಸಲು ತೀರ್ಮಾನಿಸಿದೆ. ಕಳೆದ ವರ್ಷ ಈ ದರ ಶೇ.8.65ರಷ್ಟಿತ್ತು. ಸುಮಾರು 5 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಸಂಘಟನೆಯ ಎಲ್ಲರಿಗೂ ಈ ದರ ಅನ್ವಯವಾಗಲಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ, ಈ ಬಡ್ಡಿದರವು ಅತಿ ಕಡಿಮೆ. ಫೆ.21ರಂದು ನಡೆದ ಸಂಘಟನೆಯ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಹಜವಾಗಿಯೇ ಇದು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈಗ […]

  February 22, 2018
  ...

  ಸಿರಿಯಾದಲ್ಲಿ ಮುಂದುವರಿದ ಮಾರಣಹೋಮ: ಹರಿಯುತ್ತಿರುವ ನೆತ್ತರಿಗೆ ಕೊನೆಯೆಂದು?

  ಸಿರಿಯಾದ ಡೆಮಾಸ್ಕಸ್‌ ಪ್ರದೇಶದ ಪೂರ್ವಭಾಗವಾದ ಘುಟಾದಲ್ಲಿ ವೈಮಾನಿಕ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 250 ದಾಟಿದ್ದು, 1,200ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಮೃತಪಟ್ಟವರಲ್ಲಿ 50ಕ್ಕೂ ಹೆಚ್ಚು ಜನ ಮಕ್ಕಳು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ತಿಳಿಸಿವೆ. 2013ರಿಂದಲೇ ಸೈನಿಕ ಕಾರ್ಯಾಚರಣೆಗಳು ನಡೆಯುತ್ತಿರುವ ಈ ಪ್ರದೇಶದಲ್ಲಿ ಕೇವಲ 48 ಗಂಟೆ ಅವಧಿಯೊಳಗೆ ಇಷ್ಟು ಪ್ರಮಾಣದ ಸಾವು ನೋವು ಈ ಹಿಂದೆ ಎಂದೂ ಸಂಭವಿಸಿರಲಿಲ್ಲ. ಸುಮಾರು 3,00,000 ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಗಡಿ ಕುರಿತಾಗಿ ಸಿರಿಯಾ […]

  February 21, 2018
  ...

  ವೈಟ್ ಕಾಲರ್‌ ಬ್ಯಾಂಕ್‌ ದರೋಡೆ; ನೀರವ್‌ ಮೋದಿ ಒಬ್ಬನೇ ಅಲ್ಲ.

  ಹಳೆಯದೊಂದು ಮಾತಿತ್ತು, ‘ಒಂದು ಸರಿ ಮೂರ್ಖನನ್ನಾಗಿ ಮಾಡಿದರೆ ನಿನಗೆ ನಾಚಿಕೆಯಾಗಬೇಕು, ಎರಡನೇ ಸಾರಿ ಮೂರ್ಖನಾದರೆ ನನಗೆ ನಾಚಿಕೆಯಾಗಬೇಕು.’ ಈ ಮಾತು ಸಧ್ಯ ಭಾರತದ ಬ್ಯಾಂಕ್‌ಗಳಿಗೆ ಅನ್ವಯವಾಗುವಂತಿದೆ. ಇವತ್ತಿನ ಬ್ಯಾಂಕಿಂಗ್ ಕ್ಷೇತ್ರಕ್ಕೆ ಈ ಮಾತನ್ನು ಬದಲಾಯಿಸಿಕೊಳ್ಳಿ… ‘ಒಂದು ಬಾರಿ ಬ್ಯಾಂಕ್‌ಗೆ ಮೋಸ ಮಾಡಿದರೆ, ಮೋಸ ಮಾಡಿದವರಿಗೆ ನಾಚಿಕೆಯಾಗಬೇಕು. ಎರಡನೇ ಬಾರಿ ಬ್ಯಾಂಕ್‌ಗೆ ಮೋಸವಾದರೆ – ಬ್ಯಾಂಕಿಂಗ್ ವ್ಯವಸ್ಥೆಗೆ ನಾಚಿಕೆಯಾಗಬೇಕು.’ ಇಲ್ಲಿ ಒಂದೆರಡು ಬಾರಿಯಲ್ಲ, ಬದಲಿಗೆ ಕಳೆದ 25 ವರ್ಷಗಳಲ್ಲಿ ಹಲವು ಬ್ಯಾಂಕ್‌ಗಳು ಹಲವು ಬಾರಿ ಮೋಸ ಹೋಗಿವೆ. ಹೀಗಿರುವಾಗ, ಇಡೀ […]

  February 20, 2018
  ...

  ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ : ಅಧುನಿಕ ವ್ಯವಸ್ಥೆಗಳ ಮಧ್ಯೆ ಕೈಚಳಕ ತೋರಿಸಿದ ಅಧಿಕಾರಿಗಳು

  ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮುಂಬೈನಲ್ಲಿರುವ ಬ್ರಾಡಿ ಹೌಸ್‌ ಶಾಖೆಯಲ್ಲಿ 11,300 ಕೋಟಿ ರೂ ಮೌಲ್ಯದ  ಮೋಸದ ವಹಿವಾಟು ನಡೆದಿರುವ ಸಂಗತಿ, ಈಗ ದೇಶದ ಇತರೆ ಬ್ಯಾಂಕ್‌ಗಳು ತಮ್ಮ ದಾಖಲೆಗಳನ್ನು ಮತ್ತೆ ಪರಿಶೀಲಿಸುವಂತೆ ಮಾಡಿದೆ. ನೀರವ್ ಮೋದಿ ವ್ಯವಹರಿಸುತ್ತಿದ್ದ ಬೇರೆ ಬ್ಯಾಂಕ್‌ಗಳಲ್ಲೂ ಕೂಡ ಇದೇ ರೀತಿಯ ವಂಚನೆ ನಡೆದಿದ್ದು, ಮೋಸದ ವಹಿವಾಟಿನ ಒಟ್ಟು ಮೊತ್ತ 20,000 ಕೋಟಿ ರೂ ದಾಟಿದೆ. ಪಂಜಾಬ್ ಬ್ಯಾಷನಲ್ ಬ್ಯಾಂಕ್ ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಪೊಲೀಸರು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ವಿದೇಶಿ ವಿನಿಮಯ ವಿಭಾಗದ […]

  February 18, 2018
  ...

  ಸುಭದ್ರ ಉದ್ಯೋಗಕ್ಕಾಗಿ ನಾಳೆ ಯುವ ಅಧಿವೇಶನ: ಪ್ರಣಾಳಿಕೆಯನ್ನು ಒಪ್ಪಲಿದ್ದಾರೆಯೇ ರಾಜಕೀಯ ಮುಖಂಡರು?

  ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಮತದಾರರನ್ನು ಸೆಳೆಯಲು ಪ್ರಯತ್ನಿಸುವುದು ಸಾಮಾನ್ಯ ಸಂಗತಿ. ಆದರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ಯುವಜನರು ತಮ್ಮದೇ ಆದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲು ಸಿದ್ಧರಾಗಿದ್ದಾರೆ. ಈ ಪ್ರಣಾಳಿಕೆಯನ್ನು ಯಾವ ಪಕ್ಷ ಪೂರ್ತಿಯಾಗಿ ಒಪ್ಪಿಕೊಂಡು, ಅದರಲ್ಲಿನ ಅಂಶಗಳನ್ನು ಈಡೇರಿಸಲು ಬದ್ಧವಾಗುತ್ತದೆಯೋ ಆ ಪಕ್ಷಕ್ಕೆ ಮಾತ್ರವೇ ಇವರು ಮತ ಚಲಾಯಿಸುವುದಾಗಿ ಘೋಷಿಸಿ, ಪರ್ಯಾಯ ರಾಜಕಾರಣವನ್ನು ನಡೆಸಲು ಅಣಿಯಾಗಿದ್ದಾರೆ. ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿರುವುದು ‘ಉದ್ಯೋಗಕ್ಕಾಗಿ ಯುವಜನರು’ ಎಂಬ ವೇದಿಕೆ. ನಮ್ಮ ದೇಶ ಹಾಗೂ ರಾಜ್ಯದಲ್ಲಿ […]

  February 17, 2018
  ...

  ಮಾಣಿಕ್ ಸರ್ಕಾರ್‌ಗೆ ಅಗ್ನಿ ಪರೀಕ್ಷೆ: ಈಶಾನ್ಯ ಭಾರತದಲ್ಲಿ ಗಣತಂತ್ರದ ಜಾತ್ರೆ

  ಭಾನುವಾರ ಭಾರತದ ಮೂರನೇ ಚಿಕ್ಕ ರಾಜ್ಯವೆನಿಸಿರುವ ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಇದೇ ತಿಂಗಳ 27ರಂದು ಈಶಾನ್ಯ ಭಾರತದ ಮತ್ತೆರಡು ರಾಜ್ಯಗಳಾದ ಮೇಘಾಲಯ ಮತ್ತು ನಾಗಲ್ಯಾಂಡ್‌ಗಳಲ್ಲಿ ಮತದಾನ ನಡೆಯಲಿದೆ. ಮುಂದಿನ ತಿಂಗಳು ೩ನೇ ತಾರೀಖಿಗೆ ಮೂರೂ ರಾಜ್ಯಗಳ ಜನ ಹೊಸ ಸರಕಾರ ರಚನೆಗೆ ಸಾಕ್ಷಿಯಾಗಲಿದ್ದಾರೆ.  ಈಗಾಗಲೇ ಈಶಾನ್ಯ ಭಾರತದ 8 ರಾಜ್ಯಗಳಲ್ಲಿ ಅಸ್ಸಾಂ, ಮಣಿಪುರ, ಮಿಜೋರಾಮ್‌ ರಾಜ್ಯಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ ನಾಗಲ್ಯಾಂಡ್‌ನಲ್ಲಿ ಸಮ್ಮಿಶ್ರ ಸರಕಾರ ರಚಿಸಿದೆ. ಈಗ ನಡೆಯಲಿರುವ ಚುನಾವಣೆಗಳಲ್ಲಿ ಮೂರೂ ರಾಜ್ಯಗಳನ್ನು […]

  February 17, 2018
  ...

  ದಕ್ಷಿಣ ರಾಜ್ಯಗಳ ಜಲಕ್ಷಾಮ: ಸಮಸ್ಯೆಗೆ ಗೋದಾವರಿ ಜೋಡಣೆ ನೀಡುತ್ತಾ ಪರಿಹಾರ?

  ಕಾವೇರಿ ಕಣಿವೆಯಲ್ಲಿ ದೊರೆಯುವ ಒಟ್ಟು ನೀರಿನಲ್ಲಿ ಶೇ.80ರಷ್ಟು ಪಾಲು ನನ್ನದು ಎಂಬ  ತಮಿಳುನಾಡು ವಾದಕ್ಕೆ ಸ್ಪಂದಿಸದ ಸುಪ್ರೀಂ ಕೋರ್ಟ್‌ ಕರ್ನಾಟಕ್ಕೆ 14.75 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ನ್ಯಾಯ ಮಂಡಳಿ ತಮಿಳುನಾಡಿಗೆ ಹರಿಸುವಂತೆ ಸೂಚಿಸಿದ್ದ 192 ಟಿಎಂಸಿ ನೀರಿನ ಪ್ರಮಾಣವನ್ನು 177.25 ಟಿಎಂಸಿಗೆ ಕಡಿತಗೊಳಿಸಿದೆ. ಕಾವೇರಿ ನದಿ ನೀರಿನಲ್ಲಿ ಪಾಲು ಪಡೆಯುತ್ತಿರುವ ನಾಲ್ಕೂ ರಾಜ್ಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದೆಯಾದರೂ, ತಮಿಳುನಾಡಿಗೆ ಬೇಡಿಕೆಯಿಟ್ಟಷ್ಟು ಪ್ರಮಾಣದ ನೀರು ದೊರೆತಿಲ್ಲ. ತಮಿಳುನಾಡಿನ ಈ ನೀರಿನ ಬೇಡಿಕೆಯನ್ನು ಪೂರೈಸುವ […]

  February 16, 2018
  ...

  ನೆತಾನ್ಯಾಹು ‘ಕೇಸ್ 1000 & 2000’: ವಿಶ್ವಾಸದ್ರೋಹದ ಸುಳಿಯಲ್ಲಿ ಇಸ್ರೇಲ್ ಪ್ರಧಾನಿ

  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲಿದ್ದ ಎರಡು ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಲಭ್ಯವಾಗಿವೆ ಎಂದು ಇಸ್ರೇಲಿ ಪೊಲೀಸರು ಮಂಗಳವಾರ ತಡರಾತ್ರಿ ತಿಳಿಸಿದ್ದಾರೆ. ಪೊಲೀಸರ ಈ ಹೇಳಿಕೆ ಇಸ್ರೇಲ್ ರಾಜಕೀಯ ಪರಿಸರದಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂಬಂಧಿತ ಅಧಿಕಾರಿಗಳು ಪ್ರಧಾನಿ ನೆತನ್ಯಾಹು ಮೇಲಿದ್ದ ಮೋಸ, ಲಂಚ ಪಡೆದಿರುವುದು ಮತ್ತು ವಿಶ್ವಾಸ ದ್ರೋಹದ ಪ್ರಕರಣಗಳ ಕುರಿತಾದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ಕುರಿತು ದೂರದರ್ಶನಗಳಲ್ಲಿ ಹೇಳಿಕೆ ನೀಡಿರುವ ನೆತನ್ಯಾಹು, “ನನ್ನ ಮೇಲಿರುವ ಕೇಸುಗಳು […]

  February 14, 2018

Top