An unconventional News Portal.

Posts created by Dayananda V
  ...

  ರಾಜತಾಂತ್ರಿಕ ಮಟ್ಟದಲ್ಲಿ ಎದ್ದ ಹೊಸ ವಿವಾದ ಮತ್ತು ಖಲಿಸ್ತಾನ ಚಳವಳಿಯ ರಕ್ತಸಿಕ್ತ ಅಧ್ಯಾಯ

  ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡೊ ಅವರಿಗಾಗಿ ನವದೆಹಲಿಯಲ್ಲಿ ಗುರುವಾರ ಸಂಜೆ (ಫೆಬ್ರುವರಿ 22, 2017) ಆಯೋಜಿಸಿರುವ ಔತಣಕೂಟ ವಿವಾದಕ್ಕೆ ಈಡಾಗಿದೆ. ಕೂಟಕ್ಕೆ ಖಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆಯ ಮಾಜಿ ಸದಸ್ಯ ಜಸ್ಪಾಲ್‌ ಸಿಂಗ್‌ ಅತ್ವಾಲ್‌ಗೂ ರಾಜತಾಂತ್ರಿಕ ಆಮಂತ್ರಣ ನೀಡಿರುವುದು ಇದಕ್ಕೆ ಕಾರಣ. 1987ರಲ್ಲಿ ಅಕಾಲಿದಳದ ಮುಖಂಡ ಮಲ್ಕಿಯತ್‌ ಸಿಂಗ್‌ ಸಿಧು ಕೊಲೆ ಯತ್ನ ಪ್ರಕರಣದ ಶಿಕ್ಷೆಗೆ ಗುರಿಯಾಗಿದ್ದ ಹಿನ್ನೆಲೆ ಅತ್ವಾಲ್‌ಗೆ ಇದೆ.  ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ಜಸ್ಪಾಲ್‌ ಅತ್ವಾಲ್‌ ಹೆಸರು ಇರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಕೆನಡಿಯನ್‌ ಹೈಕಮಿಷನ್‌ […]

  February 22, 2018
  ...

  ಗೌರಿ ಟ್ರಸ್ಟ್‌ ಬಗೆಗಿನ ಟೀಕೆಯೂ, ಆಶಯಗಳ ಬಗೆಗಿನ ಟಿಪ್ಪಣಿಗಳೂ…

  ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಐದು ತಿಂಗಳು ಕಳೆದಿವೆ. ಗೌರಿ ಆಶಯಗಳ ಸಾಕಾರದ ಉದ್ದೇಶವನ್ನಿಟ್ಟುಕೊಂಡು ಗೌರಿ ಟ್ರಸ್ಟ್‌ ಕೂಡಾ ಅಸ್ತಿತ್ವಕ್ಕೆ ಬಂದಿದೆ. ಗೌರಿ ಟ್ರಸ್ಟ್‌ನ ಹಣಕಾಸಿನ ಮೂಲ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಕೆಲ ಪ್ರಶ್ನೆಗಳು ಎದ್ದಿವೆ. ಇವು ಗೌರಿ ಟ್ರಸ್ಟ್‌ ಒಳಗಿರುವ ಕೆಲವರ ಬಗ್ಗೆ ಹಾಗೂ ಟ್ರಸ್ಟ್‌ ಸಾಗುತ್ತಿರುವ ದಾರಿಯ ಬಗ್ಗೆಯೂ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ. ಗೌರಿ ಲಂಕೇಶ್‌ ಸಹೋದ್ಯೋಗಿಯಾಗಿದ್ದ ಪತ್ರಕರ್ತ ಪಾರ್ವತೀಶ್‌ ಬಿಳಿದಾಳೆ ಫೇಸ್‌ಬುಕ್‌ನಲ್ಲಿ ಎತ್ತಿರುವ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ […]

  February 21, 2018
  ...

  ವಿದ್ವತ್ ಮೇಲೆ ಹಲ್ಲೆ ಪ್ರಕರಣ; ನಲಪಾಡ್ ಸೇರಿ 7 ಆರೋಪಿಗಳು 2 ದಿನ ಪೊಲೀಸ್ ಕಸ್ಟಡಿಗೆ

  ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೊರಂಟ್‌ನಲ್ಲಿ ಶನಿವಾರ ರಾತ್ರಿ ವಿದ್ವತ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಫೆಬ್ರುವರಿ 21ರವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ, ಪ್ರಕರಣದ ಪ್ರಮುಖ ಆರೋಪಿ ನಲಪಾಡ್ ಸೋಮವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದ. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭಾನುವಾರ ರಾತ್ರಿ ಕೆಲ […]

  February 19, 2018
  ...

  ಕನ್ನಡ, ಯೋಗ್ಯತೆ & ಅನಂತ ಕುಮಾರ್ ಹೆಗಡೆ ಭಾಷಾ ‘ಕೌಶಲ’; ಶುದ್ಧ ಕನ್ನಡದಲ್ಲೇ ವಿರೋಧಿಸಿದ ಶಾಸಕ ಸುರೇಶ್ ಕುಮಾರ್

  ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವವರು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ. ಈಗ ಅವರು ಭಾಷಾ ಶುದ್ಧತೆಯ ಬಗ್ಗೆ ನೀಡಿರುವ ಹೇಳಿಕೆಯಿಂದ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಶುದ್ಧ ಕನ್ನಡ ಮತ್ತು ಕನ್ನಡ ಮಾತನಾಡುವ ಯೋಗ್ಯತೆಯ ಬಗ್ಗೆ ಅನಂತ ಕುಮಾರ್ ಹೆಗಡೆ ಹೇಳಿಕೆಯನ್ನು ಅವರ ಪಕ್ಷದವರೇ ಆದ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್‌.ಸುರೇಶ್‌ ಕುಮಾರ್ ಶುದ್ಧ ಕನ್ನಡದಲ್ಲೇ ವಿರೋಧಿಸಿದ್ದಾರೆ.  ‘ಶುದ್ಧ ಕನ್ನಡ’ದ ಬಗ್ಗೆ ತಾವು ನೀಡಿದ್ದ ಹೇಳಿಕೆಗೆ ತಮ್ಮ ಪಕ್ಷದವರಿಂದಲೇ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅನಂತ ಕುಮಾರ್ ಹೆಗಡೆ ಕ್ಷಮೆ […]

  February 19, 2018
  ...

  ರೈತ ಮುಖಂಡ, ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಇನ್ನಿಲ್ಲ

  ರೈತ ಮುಖಂಡ, ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ (69) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬ್ಬಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಎದೆನೋವಿನಿಂದ ಕುಸಿದು ಬಿದ್ದ ಅವರನ್ನು ಮಂಡ್ಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುಟ್ಟಣ್ಣಯ್ಯ 1949ರ ಡಿಸೆಂಬರ್ 23ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕೆ.ಎಸ್. ಶ್ರೀಕಂಠೇಗೌಡ, ತಾಯಿ ಕೆ.ಎಸ್. ಶಾರದಮ್ಮ. ಹುಟ್ಟೂರಿನಲ್ಲಿಯೇ ಎಸ್.ಎಸ್.ಎಲ್.ಸಿ.ವರೆಗೆ ಓದಿದ ಪುಟ್ಟಣ್ಣಯ್ಯ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ […]

  February 18, 2018
  ...

  ಹ್ಯಾರಿಸ್ ಪುತ್ರ ನಲಪಾಡ್‌ ಗೂಂಡಾಗಿರಿ, ಯುವಕನ ಮೇಲೆ ಹಲ್ಲೆ; ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ನಡೆದಿದ್ದೇನು?

  ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಮತ್ತು ಆತನ ಬೆಂಬಲಿಗರು ಶನಿವಾರ ರಾತ್ರಿ ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೊರಂಟ್‌ನಲ್ಲಿ ಉದ್ಯಮಿ ಲೋಕನಾಥ್‌ ಎಂಬುವರ ಪುತ್ರ 24 ವರ್ಷದ ವಿದ್ವತ್‌ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮುಖ ಮತ್ತು ತಲೆಗೆ ಗಂಭೀರವಾಗಿ ಗಾಯವಾಗಿರುವ ವಿದ್ವತ್‌ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ನಲಪಾಡ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಲಪಾಡ್‌ ಮತ್ತು ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್‌ 341, 506, 143, […]

  February 18, 2018
  ...

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯ ಮೂಲ ಬಹಿರಂಗ ಕಡ್ಡಾಯ; ಸುಪ್ರೀಂಕೋರ್ಟ್

  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆದಾಯ ಮಾತ್ರವಲ್ಲ, ಅದರ ಮೂಲವನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ಅಭ್ಯರ್ಥಿಯ ಪತ್ನಿ ಮತ್ತು ಮಕ್ಕಳ ಆದಾಯ ಮೂಲದ ಮಾಹಿತಿಯನ್ನೂ ನಾಮಪತ್ರದೊಂದಿಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.  ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆದಾಯದ ಮಾಹಿತಿ ನೀಡುವುದರ ಜತೆಗೆ ಆದಾಯದ ಮೂಲವನ್ನೂ ಬಹಿರಂಗ ಪಡಿಸಬೇಕೆಂದು ಕೋರಿ ‘ಲೋಕ ಪ್ರಹರಿ’ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ನ್ಯಾಯಪೀಠ ಈ […]

  February 16, 2018
  ...

  ಕಾವೇರಿ ತೀರ್ಪಿಗೆ ಭಿನ್ನ ಪ್ರತಿಕ್ರಿಯೆಗಳು: ಕರ್ನಾಟಕಕ್ಕೆ ಸಮಾಧಾನ, ತಮಿಳುನಾಡಿನ ಅಸಮಾಧಾನ

  ಕಾವೇರಿ ನೀರು ಹಂಚಿಕೆ ವಿಷಯವಾಗಿ ಸುಪ್ರೀಂಕೋರ್ಟ್‌ನ ತೀರ್ಪು ಶುಕ್ರವಾರ ಹೊರಬಿದ್ದಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಕಾವೇರಿ ನ್ಯಾಯಮಂಡಳಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದಕ್ಕಿಂತ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಂತಾಗಿದೆ. “ಈ ತೀರ್ಪು ಸಮಾಧಾನ ತಂದಿದೆ” ಎಂಬ ಅಭಿಪ್ರಾಯ ಕರ್ನಾಟಕದಲ್ಲಿ ವ್ಯಕ್ತವಾಗಿದ್ದರೆ, “ನಮಗೆ ಅನ್ಯಾಯವಾಗಿದೆ” ಎಂದು ತಮಿಳುನಾಡು ಹೇಳಿದೆ. ಈ ಮೂಲಕ ತಮಿಳುನಾಡು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದೆ. “ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ 28 ವರ್ಷಗಳ ಕರ್ನಾಟಕದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಇದೊಂದು ಐತಿಹಾಸಿಕ ತೀರ್ಪು. ಎರಡೂ […]

  February 16, 2018
  ...

  ಪಿಎನ್‌ಬಿ ಹಗರಣ: ಯಾರು ಈ ಗುಜರಾತ್‌ ಮೂಲದ ವಜ್ರ ವ್ಯಾಪಾರಿ ನೀರವ್‌ ಮೋದಿ?

  ಅಂತರರಾಷ್ಟ್ರೀಯ ವಾಣಿಜ್ಯ ಪತ್ರಿಕೆಗಳಲ್ಲಿ, ಫ್ಯಾಷನ್‌ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಶ್ರೀಮಂತ ವಜ್ರದ ವ್ಯಾಪಾರಿ ಈಗ ಬಹುದೊಡ್ಡ ಹಗರಣದಲ್ಲಿ ಸಿಕ್ಕು ಸುದ್ದಿಯಲ್ಲಿದ್ದಾರೆ. ವಜ್ರದ ವ್ಯಾಪಾರಿ ನೀರವ್‌ ಮೋದಿ ಸದ್ಯ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ರೂ. 11,000 ಕೋಟಿ ಹಗರಣದ ಆರೋಪಿ. ಫೋರ್ಬ್ಸ್‌ ಸಿರಿವಂತರ ಪಟ್ಟಿ ಸೇರಿದ್ದ ಗುಜರಾತ್‌ ಮೂಲದ ನೀರವ್‌ ಮೋದಿ ವಿರುದ್ಧ ಜನವರಿ 31ರಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಸಿಬಿಐ, ತಲೆಮರೆಸಿಕೊಂಡಿದ್ದಾರೆಂಬ ಕಾರಣಕ್ಕೆ ನೀರವ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ಜಗತ್ತಿನ ಪ್ರತಿಷ್ಠಿತ ವ್ಯಾಪಾರಿ ಮಾರ್ಗಗಳಾದ ನ್ಯೂಯಾರ್ಕ್‌ನ […]

  February 16, 2018
  ...

  ‘ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸರಳಗೊಳಿಸುತ್ತೇವೆ’: ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಡೆಸಿದ ನಾಲ್ಕು ದಿನಗಳ ಜನಾಶೀರ್ವಾದ ಯಾತ್ರೆ ಮಂಗಳವಾರ ಮುಗಿದಿದೆ. ಕಲಬುರಗಿ ಮತ್ತು ಬೀದರ್‌ನಲ್ಲಿ ಮಂಗಳವಾರ ಸಭೆ ನಡೆಸಿದ ರಾಹುಲ್, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆಯನ್ನು ಸರಳಗೊಳಿಸುತ್ತೇವೆ” ಎಂಬ ಭರವಸೆ ನೀಡಿದ್ದಾರೆ. ಈ ಹಿಂದೆ ಜಿಎಸ್‌ಟಿಯನ್ನು ‘ಗಬ್ಬರ್‌ ಸಿಂಗ್ ಟ್ಯಾಕ್ಸ್‌’ ಎಂದು ಕರೆದಿದ್ದ ರಾಹುಲ್ ಈಗ ಅದೇ ವ್ಯವಸ್ಥೆಯನ್ನು ಸರಳಗೊಳಿಸುವ ಮಾತನ್ನಾಡಿದ್ದಾರೆ. ಕಲಬುರಗಿಯಲ್ಲಿ ವೃತ್ತಿಪರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ರಾಹುಲ್, “ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ […]

  February 13, 2018

Top