An unconventional News Portal.

ಮೊಸುಲ್ ನಗರಕ್ಕೆ ಕಾಲಿಟ್ಟ ಇರಾಕ್ ಸೇನೆ: ಐಸಿಲ್ ಅಂತ್ಯಕ್ಕೆ ದಿನಗಣನೆ?

ಮೊಸುಲ್ ನಗರಕ್ಕೆ ಕಾಲಿಟ್ಟ ಇರಾಕ್ ಸೇನೆ: ಐಸಿಲ್ ಅಂತ್ಯಕ್ಕೆ ದಿನಗಣನೆ?

ಮೊಸುಲ್ ನಗರದ ಸುತ್ತ ಮುತ್ತಲಿನ 200 ಚದರ ಕಿಲೋಮೀಟರ್ ಪ್ರದೇಶವನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವನೆಂಟ್ (ಐಸಿಲ್ ಹಿಂದಿನ ಐಸಿಸ್)ನಿಂದ ಮುಕ್ತಗೊಳಿಸಿರುವುದಾಗಿ ಇರಾಕಿ- ಕುರ್ದಿಸ್ಥಾನದ ಅಧ್ಯಕ್ಷ ಮಸೂದ್ ಬರ್ಜಾನಿ ಹೇಳಿದ್ದಾರೆ.

ಇರಾಕಿ ಕುರ್ದಿಸ್ಥಾನ್ ಅಧ್ಯಕ್ಷ ಮಸೂದ್ ಬರ್ಜಾನಿ

ಇರಾಕಿ ಕುರ್ದಿಸ್ಥಾನ್ ಅಧ್ಯಕ್ಷ ಮಸೂದ್ ಬರ್ಜಾನಿ

ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ ಐಸಿಲ್ ತನ್ನ ಪ್ರಮುಖ ನೆಲೆಯನ್ನು ಕಳೆದುಕೊಳ್ಳುವ ದಿನಗಳು ಸಮೀಪಿಸಿದಂತಾಗಿದೆ. ಸದ್ಯ ಮೊಸುಲ್ ಐಸಿಲ್ ಕೈವಶದಲ್ಲಿರುವ ಏಕೈಕ ಭದ್ರ ಕೋಟೆಯಾಗಿದೆ. ಐಸಿಲ್ ಕೈಯಿಂದ ಮೊಸುಲನ್ನು ಮರು ವಶಪಡಿಸಿಕೊಳ್ಳಲು ಇರಾಕ್ ಮತ್ತು ಕುರ್ದಿಸ್ಥಾನ ಪೆಶ್ಮೆರ್ಗಾ ಪಡೆಗಳು ಜಂಟಿ ಕಾರ್ಯಾಚರಣೆಗೆ ಇಳಿದಿದ್ದು ಭೀಕರ ಕದನ ಜಾರಿಯಲ್ಲಿದೆ.

2014ರಿಂದ ಇರಾಕಿನ ಎರಡನೇ ಅತೀ ದೊಡ್ಡ ನಗರ ಮೊಸುಲ್ ಐಸಿಲ್ ವಶದಲ್ಲಿತ್ತು. ಇದೀಗ ನಗರವನ್ನು ಬಂಧ ಮುಕ್ತಗೊಳಿಸಲು ಆಪರೇಷನ್ ಜಾರಿಯಲ್ಲಿರುವ ಹೊತ್ತಲ್ಲೇ ಸೋಮವಾರ ಬರ್ಜಾನಿ, ‘200 ಚದರ ಕಿಲೋಮೀಟರ್ ಪ್ರದೇಶ ಮುಕ್ತವಾಗಿರುವುದನ್ನು’ ಘೋಷಿಸಿದ್ದಾರೆ.

ಮೊಸುಲ್ ನಗರದ ಸಮೀಪದಲ್ಲೇ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು “ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಇವತ್ತು ಪ್ರಮುಖ ತಿರುವು ನೀಡಿದ ದಿನ. ಇದೇ ಮೊದಲ ಬಾರಿಗೆ ಪೆಶ್ಮೆರ್ಗಾ ಪಡೆಗಳು ಮತ್ತು ಇರಾಕಿನ ಸೇನೆ ಒಗ್ಗಟ್ಟಾಗಿ ಒಂದೇ ಕಡೆ ಹೋರಾಡುತ್ತಿವೆ,” ಎಂದು ಬರ್ಜಾನಿ ಹೇಳಿದ್ದಾರೆ.

“ಈ ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಮತ್ತು ಮೊಸುಲ್ ಸ್ವತಂತ್ರವಾಗುತ್ತೆ ಎಂಬ ವಿಶ್ವಾಸವಿದೆ. ಆದರೆ ಭಯೋತ್ಪಾದನೆಯೇ ಇಲ್ಲಿಗೇ ಮುಗಿಯುವುದಿಲ್ಲ,” ಎಂದು ಬರ್ಜಾನಿ ಹೇಳಿದ್ದಾರೆ.

ಮೊಸಲ್ನ ದಕ್ಷಿಣ ಮತ್ತು ಪೂರ್ವ ಭಾಗದಿಂದ ದಾಳಿ ನಡೆಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಇನ್ನು ಅಮೆರಿಕಾ ಪಡೆಗಳು ಇರಾಕ್ ಮತ್ತು ಪೆಶ್ಮಾರ್ಗ್ ಪಡೆಗಳಿಗೆ ಸಾಥ್ ನೀಡಿದ್ದು, ಐಸಿಲ್ ನೆಲೆಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿವೆ. ಈ ಮೂಲಕ ಇರಾಕ್ ಪಡೆಗಳಿಗೆ ನಗರದದೊಳಕ್ಕೆ ಉಗಿಬೀಳಲು ಮತ್ತಷ್ಟು ಅವಕಾಶ ಸೃಷ್ಟಿಸಿದೆ.

ಈ ಕುರಿತು ಮಾತನಾಡಿರುವ ಅಮೆರಿಕಾ ಮಿಲಿಟರಿ ವಕ್ತಾರ ಕೊಲೋನೆಲ್ ಜಾನ್ ಡೊರೇನ್ “ನಾವು ನಮ್ಮ ಗುಪ್ತಚರ ಮತ್ತು ಸಾರಿಗೆ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಇದು ಇರಾಕಿಗಳಿಗೆ ಮುನ್ನುಗ್ಗಲು ಸಹಾಯ ಮಾಡುತ್ತದೆ,” ಎಂದಿದ್ದಾರೆ.

ಒಟ್ಟಾರೆ ಇಲ್ಲೀವರೆಗಿನ ಕಾರ್ಯಾಚರಣೆಯಲ್ಲಿ ಕನಿಷ್ಠ 9 ಗ್ರಾಮಗಳನ್ನು ಐಸಿಲ್ ಕೈಯಿಂದ ಇರಾಕ್ ಸೇನೆ ಮರು ವಶಪಡಿಸಿಕೊಂಡಿದೆ. ಆದರೆ ಎರ್ಬಿಲ್ ಮತ್ತು ಮೊಸುಲ್ ನಗರವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಮಾತ್ರ ಇನ್ನೂ ಐಸಿಲ್ ಕೈಯಲ್ಲೇ ಇದೆ.

iraq-mosul-warತನ್ನ ಸಾಮ್ರಾಜ್ಯ ಪತನವಾಗುವುದನ್ನು ನೋಡಲಾಗದ ಐಸಿಲ್, ಹೇಗಾದರೂ ಮಾಡಿ ತನ್ನ ಪ್ರಭುತ್ವ ಉಳಿಸಿಕೊಳ್ಳಬೇಕೆಂದು ಹೆಣಗಾಡುತ್ತಿದೆ. ತನ್ನ ಕೊನೆಯ ಪ್ರಯತ್ನವೆಂಬಂತೆ ಐಸಿಲ್ ಉಗ್ರರು ಆತ್ಮಹತ್ಯಾ ದಾಳಿಗಳನ್ನೂ ನಡೆಸುತ್ತಿದ್ದಾರೆ ಎಂದು ಸ್ಥಳದಲ್ಲಿರುವ ವರದಿಗಾರರು ಮಾಹಿತಿ ನೀಡಿದ್ದಾರೆ.

ಸೋಮವಾರದ ದಾಳಿಯಲ್ಲಿ ಪೆಶ್ಮಾರ್ಗ್ ಪಡೆಯ 5 ಜನ ಹಾಗೂ ಇರಾಕಿ ಸೇನೆಯ ಒಬ್ಬ ಸೈನಿಕ ಸಾವನ್ನಪ್ಪಿದ್ದಾನೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಈ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಸಮಸ್ಯೆಯೂಂದು ಉದ್ಭವಿಸಿದೆ. ಇರಾಕ್ ಸೇನೆ ಮತ್ತು ಪೇಶ್ಮಾರ್ಗ್ ಬಂಡುಕೋರರು ಒಟ್ಟಾಗಿ ಹೋರಾಡುತ್ತಿದ್ದಾರೆ. ಆದರೆ ಮೊಸುಲ್ ನಗರವನ್ನು ವಶಪಡಿಸಿಕೊಂಡ ನಂತರ, ಇದರ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಚಿತ್ರ ಕೃಪೆ: ಅಲ್ ಜಝೀರಾ

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top