An unconventional News Portal.

ಜಾಹೀರಾತು: ಏನಿದರ ಹಿಂದಿನ ಹಕೀಕತ್ತು?

ಜಾಹೀರಾತು: ಏನಿದರ ಹಿಂದಿನ ಹಕೀಕತ್ತು?

ಜಾಹೀರಾತು ಎಲ್ಲಾ ಮಾಧ್ಯಮಗಳ ಬೆನ್ನೆಲುಬು. ಈ ಜಾಹೀರಾತುಗಳ ಪ್ರಸಾರದ ಹಿಂದಿನ ಲೆಕ್ಕಾಚಾರಗಳೇನು? ಒಂದು ಜಾಹೀರಾತು ನಿಮಗೆ ಇಷ್ಟವಾಗಲು ಕಾರಣಗಳೇನು? ಇದಕ್ಕಾಗಿ ಕಂಪೆನಿಯೊಂದು ಜನರ ಮನಸ್ಥಿತಿಯನ್ನು ಹೇಗೆ ಬಳಸಿಕೊಳ್ಳುತ್ತದೆ?  ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ.

2a

ಮಾಧ್ಯಮ ಜಾಹೀರಾತನ್ನು ಎಷ್ಟು ಅವಲಂಬಿಸಿದೆಯೋ, ಅಷ್ಟೇ ಜಾಹೀರಾತಿಗಳಿಗೂ ಮಾಧ್ಯಮ ಬೇಕು; ಒಂದನ್ನು ಬಿಟ್ಟು ಒಂದಿಲ್ಲ. ಜಾಹೀರಾತುಗಳ ರಚನೆಯ ಹಿಂದೆ ಅನೇಕ ಅಂಶಗಳು ಕೆಲಸ ಮಾಡುತ್ತವೆ. ಅವುಗಳಲ್ಲಿ ಅತೀ ಪ್ರಮುಖವಾದುದು ಜನರ ಯೋಚನೆಯನ್ನು ಬಳಸಿಕೊಂಡು ಉತ್ಪನ್ನವನ್ನು ಪ್ರಚಾರ ಮಾಡುವುದು.

ಪ್ರತಿ ಜಾಹೀರಾತಿಗೂ ತನ್ನ ಉತ್ಪನ್ನ ಮಾರಾಟವಾಗಬೇಕೆಂಬ ಕನಿಷ್ಟ ಉದ್ದೇಶ ಇದ್ದೇ ಇರುತ್ತೆ. ಅದಕ್ಕಾಗಿ ಜನರ ಮನಸ್ಸನ್ನು ಗೆಲ್ಲಬೇಕು. ಹಾಗಂತ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇಂದಿಗೂ ಯಾವ ಮನೋವಿಜ್ಞಾನಿಯೂ ಜನರ ಆಲೋಚನೆ ಏನು ಎಂಬುದು ವಿವರಿಸಿಲ್ಲ.

2b

ಪ್ರತಿ ಜಾಹೀರಾತಿನಲ್ಲೂ ಜನರ ಮನ ಗೆಲಲ್ಲು ನಡೆಸುವ ಪ್ರಯತ್ನಗಳು ಕಾಣಿಸ್ತವೆ. ಒಂದೊಂದು ಜಾಹೀರಾತೂ ಒಂದೊಂದು ವಿಧಾನದ ಮೂಲಕ ಜನರನ್ನು ತಲುಪಲು ಪ್ರಯತ್ನ ಮಾಡುತ್ತವೆ. ಸಂಶೋಧನೆಗಳ ಪ್ರಕಾರ ಜಾಹೀರಾತುಗಳು ಜನರನ್ನು ಆಕರ್ಷಿಸಲು ಎರಡು ವಿಧಾನಗಳನ್ನು ಬಳಸಿಕೊಳ್ಳುತ್ತವೆ.

ಮೊದಲನೆಯದ್ದು ಪರೋಕ್ಷ ವಿಧಾನ. ಇದರ ಉದ್ದೇಶ ಇಂಥದ್ದೊಂಧು ಕಂಪೆನಿ ಇದೆ ಎಂಬುದು ನಿಮಗೆ ಗೊತ್ತಾಗ್ಬೇಕು ಅಷ್ಟೇ. ನೀವು ಯಾವುದೇ ವಸ್ತುವನ್ನು ಕೊಳ್ಳಲು ಹೋದಾಗ ಈ ಕಂಪೆನಿಯ ಉತ್ಪನ್ನಗಳ ಮೇಲೆ ಒಮ್ಮೆಯಾದ್ರೂ ಕಣ್ಣಾಡಿಸಿ ನೋಡಬೇಕು. ಇಷ್ಟು ಸಾಧಿಸಿದರೆ ಜಾಹೀರಾತಿನ ಕೆಲಸ ಅರ್ಧ ಮುಗಿದಂತೆ.

ನಾವಿಂದು ಯಾವುದೇ ರಸ್ತೆ ಬದಿ ಮಾರುವ ಉತ್ಪನ್ನಗಳನ್ನೇ ನೋಡಿದ್ರೂ, ಡೀಸೆಲ್, ಫ್ಯೂಮಾ,  ಆಡಿಡಾಸ್, ನೈಕಿ ಮುಂತಾದ ಉತ್ಪನ್ನಗಳ ಲೋಗೋ ಇರುವ ನಕಲಿ ಉತ್ಪನ್ನಗಳು ಕಾಣಸಿಗುತ್ತವೆ. ಅವೇ ಬ್ರಾಂಡ್‍ನ ಅಸಲಿ ಉತ್ಪನ್ನಗಳು ಮಾಲ್‍ಗಳಲ್ಲಿ, ದುಬಾರಿ ಬೆಲೆ ಸಿಗುತ್ತವೆ. ಬೀದಿಗೂ, ಮಾಲ್ಗಳಿಗೂ ಇರುವ ಅಂತರ್ ಸಂಬಂಧ ಇದು.

ಎರಡನೆಯ ವಿಧಾನದಲ್ಲಿ ವಸ್ತುವಿನ ವಿಶೇಷತೆಗಳ ಬಗ್ಗೆ ನಿಮಗೆ ತಿಳಿಸುವುದು. ಇದನ್ನು ಬಳಸಿದ್ರೆ ಉಪಯೋಗ ಏನು ಅನ್ನೋದನ್ನು ಹೇಳಿ, ವಸ್ತುವನ್ನು ಕೊಳ್ಳುವಂತೆ ಒತ್ತಡ ಹಾಕುವುದು. ಈ ವಸ್ತು ತುಂಬಾ ವಿಶೇಷವಾದದ್ದು. ಈ ಉತ್ಪನ್ನ ಖರೀದಿಸಿದ್ರೆ ನಿಮಗೆ ಬಹಳಷ್ಟು ಲಾಭವಿದೆ. ಇಂಥ ಭಾವನೆಯನ್ನು ಜನರಲ್ಲಿ ತುಂಬಲು ಪ್ರಯತ್ನಿಸ್ತವೆ.

ಒಂದೊಮ್ಮೆ ನಿಮ್ಮ ಮನಸ್ಸಿಗೆ ಜಾಹೀರಾತಿನ ಮೂಲಕ ಈ ಭಾವನೆಗಳು ಬಂದಿದ್ದೇ ಆದ್ರೆ ಆ ಉತ್ಪನ್ನಗಳ ಖರೀದಿಗೆ ನೀವು ಮನಸ್ಸು ಮಾಡಿಯೇ ಮಾಡ್ತೀರಿ. ಇದು ಕಂಪೆನಿಗಳ ಮೂಲ ತತ್ವ. ಹೀಗಾಗಿಯೇ ಜಾಹೀರಾತುಗಳು ಉತ್ಪನ್ನಗಳನ್ನು ಮಾರಲು ಮನುಷ್ಯರ ಭಾವನೆಗಳನ್ನು ಬಳಸಿಕೊಳ್ತವೆ.

ಇದಕ್ಕೆ ಮೊದಲು ಗುರಿಯಾಗುವವರು ಮಹಿಳೆಯರು. ಸೌಂದರ್ಯವರ್ಧಕಗಳು, ಫ್ಯಾಷನ್ ವಸ್ತುಗಳ ವಿಚಾರದಲ್ಲಿ ಈ ರೀತಿಯ ಭಾವನಾತ್ಮಕ ಸಂಬಂಧಗಳು ಮಹಿಳೆಯರಿಗೆ ತುಂಬಾನೇ ಜಾಸ್ತಿ. ಸುಂದರ ಮಾಡೆಲ್‍ಗಳು ಜಾಹೀರಾತಿನಲ್ಲಿದ್ದಾಗ ನಾವು ಅದೇ ರೀತಿ ಕಾಣ್ತೇವೆ ಎಂದುಕೊಳ್ಳುತ್ತಾರೆ. ವಿಶ್ವದ ಎಲ್ಲಾ ಬೃಹತ್ ಬ್ರಾಂಡ್‍ಗಳು ಇದೇ ಮನಸ್ಥಿತಿಯ ಮೇಲೆ ವ್ಯಾಪಾರ ಮಾಡ್ತವೆ. ತಾನು ಸುಂದರವಾಗಿ ಕಾಣಬೇಕು, ತಾನು ಆಕರ್ಷಕವಾಗಿ ಇರಬೇಕು; ಇವು ಎಲ್ಲಾ ಜನರ ಸಾಮಾನ್ಯ ಯೋಚನೆಗಳು. ಜನರನ್ನು ಸೆಳೆದುಕೊಳ್ಳಲು ಈ ರೀತಿಯ ಅರ್ಥ ಬರುವ ಸಾಲುಗಳನ್ನು ಜಾಹೀರಾತಿನಲ್ಲಿ ಬಳಸಲಾಗುತ್ತದೆ. ಇದು ಮಹಿಳೆಯರನ್ನು ಉತ್ಪನ್ನಗಳತ್ತ ಸುಲಭವಾಗಿ ಸೆಳೆಯುತ್ತವೆ. ಇದು ಜಾಹೀರಾತಿನ ಹಿಂದಿರುವ ಸಾಮಾನ್ಯ ಸತ್ಯ.

ಜಾಹೀರಾತುಗಳನ್ನು ನೋಡಿದಾಗ ಮಹಿಳೆಯ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂದು ಸಂಶೋಧನೆಯನ್ನೂ ನಡೆಸಲಾಗಿದೆ.

ತಮ್ಮ ಉತ್ಪನ್ನಗಳ ಮಾರಾಟಕ್ಕೆ ಬೃಹತ್ ಕಂಪೆನಿಗಳು ಇನ್ನೊಂದು ವಿಧಾನವನ್ನು ಅನುಸರಿಸುತ್ತವೆ. ಒಂದು ಬ್ರಾಂಡ್ ಅನ್ನು ಪದೇ ಪದೇ ಜನರ ಕಿವಿಯಲ್ಲಿ ಬೀಳುವಂತೆ ಮಾಡಲಾಗುತ್ತದೆ. ಆಗ ಜನ ಅದೇ ಬ್ರಾಂಡ್ ಹೆಸರು ಇರುವ ನಕಲಿ ಉತ್ಪನ್ನಗಳನ್ನು ಮೊರೆ ಹೋಗ್ತಾರೆ. ಆದ್ರೆ ಅವರಲ್ಲಿ ಅಸಲಿ ಬ್ರಾಂಡ್‍ನ ಉತ್ಪನ್ನವನ್ನು ಖರೀದಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಇದೇ ಮುಂದೆ ಕಂಪೆನಿಗೆ ಓರ್ವ ಗ್ರಾಹಕನನ್ನು ಸೃಷ್ಟಿಸುತ್ತದೆ.

2c

 

ಮುಂದೆ ಮಾಲ್‍ಗಳಲ್ಲಿ ಈ ಉತ್ಪನ್ನಗಳ ಮಾರಾಟ ಆರಂಭವಾಗುತ್ತದೆ. ಇದು ವಿಶ್ವದ ದೊಡ್ಡ ಬ್ರಾಂಡ್‍ಗಳು ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಅನುಸರಿಸುತ್ತಿರುವ ಮಾರ್ಗ. ನಾವಿಂದು ಯಾವುದೇ ರಸ್ತೆ ಬದಿ ಮಾರುವ ಉತ್ಪನ್ನಗಳನ್ನೇ ನೋಡಿದ್ರೂ, ಡೀಸೆಲ್, ಫ್ಯೂಮಾ,  ಆಡಿಡಾಸ್, ನೈಕಿ ಮುಂತಾದ ಉತ್ಪನ್ನಗಳ ಲೋಗೋ ಇರುವ ನಕಲಿ ಉತ್ಪನ್ನಗಳು ಕಾಣಸಿಗುತ್ತವೆ. ಅವೇ ಬ್ರಾಂಡ್‍ನ ಅಸಲಿ ಉತ್ಪನ್ನಗಳು ಮಾಲ್‍ಗಳಲ್ಲಿ, ದುಬಾರಿ ಬೆಲೆ ಸಿಗುತ್ತವೆ. ಬೀದಿಗೂ, ಮಾಲ್ಗಳಿಗೂ ಇರುವ ಅಂತರ್ ಸಂಬಂಧ ಇದು.

2d

ಶ್ರೀಮಂತರು ತಮ್ಮ ಗತ್ತು, ಅಹಂನ ತೋರಿಕೆಗಾಗಿ ದೊಡ್ಡ ದೊಡ್ಡ ಬ್ರಾಂಡ್‍ಗಳ, ದುಬಾರಿ ಉತ್ಪನ್ನಗಳನ್ನು ಬಳಸಿದಾಗ ಸಾಮಾನ್ಯರು ಅವರತ್ತಲೇ ನೋಡುತ್ತಾರೆ. ಹೀಗೆ ಒಂದು ಬ್ರಾಂಡ್ ಅಂದರೇನೆ ಶ್ರೀಮಂತಿಕೆ, ಪ್ರತಿಷ್ಠೆ ಎಂಬ ಭಾವನೆಗಳು ಹುಟ್ಟಿಕೊಳ್ತವೆ. ಇದು ದೀರ್ಘ ಕಾಲ ಜನರ ಮನಸ್ಸಲ್ಲಿ ಬ್ರಾಂಡ್ ಅನ್ನು ಉಳಿಸಿ ಬಿಡ್ತದೆ. ಸಾಮಾನ್ಯರು ನಾವೂ ಆ ಉತ್ಪನ್ನಗಳನ್ನು ಖರೀದಿಸ್ಬೇಕು ಎಂಬ ಭಾವನೆಗಳನ್ನು ಬೆಳೆಸಿಕೊಳ್ತಾರೆ. ಇದಕ್ಕೆ ಬೇರಾವ ಕಾರಣಗಳೂ ಇರೋದಿಲ್ಲ. ಆಪಲ್ ಉತ್ಪನ್ನಗಳು ಇದಕ್ಕೆ ಉತ್ತಮ ಉದಾಹರಣೆ.

ಉತ್ಪನ್ನದತ್ತ ಜನರ ಮನಸ್ಸನ್ನು ಸೆಳೆಯಲು ಜಾಹೀರಾತುಗಳು ಇನ್ನಿತರೆ ಮಾರ್ಗಗಳನ್ನು ಅನುಸರಿಸ್ತವೆ. ಒಂದು ಅಧ್ಯಯನದ ಪ್ರಕಾರ ಜಾಹೀರಾತಿನಲ್ಲಿರುವ ಬಣ್ಣ ಕೂಡ ಜನರನ್ನು ಸೆಳೆಯುವಲ್ಲಿ ಶೇಕಡಾ 70 ರಷ್ಟು ಕೆಲಸ ಮಾಡ್ತದೆ. ಹಾಗಾಗಿ ಬಣ್ಣಗಳನ್ನು ತುಂಬಾ ಜಾಗರೂಕತೆಯಿಂದ ಬಳಸಲಾಗುತ್ತದೆ. ಸಂಗೀತ ಜಾಹೀರಾತನ್ನು ಮತ್ತಷ್ಟು ಆಕರ್ಷಣೀಯವಾಗಿಸುತ್ತದೆ. ವೀಡಿಯೋ, ಸಂಗೀತ, ಬಣ್ಣ, ವ್ಯಕ್ತಿಗಳೆಲ್ಲಾ ಜಾಹೀರಾತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕಾಗೇ ಜಾಹೀರಾತಿಗೆ ಕ್ರಿಕೆಟ್ ಸ್ಟಾರ್‍ಗಳನ್ನು, ಸಿನಿಮಾ ಮಂದಿಯನ್ನು ಬಳಸಲಾಗುತ್ತದೆ.

 

2e

ಪುರುಷರಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಮಹಿಳೆಯರನ್ನು ಬಳಸುವುದು ಇದೇ ಕಾರಣಕ್ಕೆ. ಸುಂದರವಾಗಿರುವ ಹುಡುಗಿಯರ ಬಗ್ಗೆ ಪುರುಷರಾದವರಿಗೆ ಆಕರ್ಷಣೆ ಇದ್ದೇ ಇರುತ್ತೆ. ಇದನ್ನೇ ಬಳಸಿಕೊಂಡು ಪುರುಷರನ್ನು ಸೆಳೆಯಲು ಯೋಜನೆ ರೂಪಿಸಲಾಗುತ್ತದೆ.

ಬಹುಶಃ ನೀವು ಜಾಹೀರಾತುಗಳನ್ನು ಜಾಹೀರಾತಿಗಳಾಗಿ ಮಾತ್ರವೇ ನೋಡುತ್ತಿರುತ್ತೀರಿ. ಇನ್ನು ಮುಂದೆ ಪ್ರತಿ ಜಾಹೀರಾತನ್ನು ಗಮನಿಸಿ. ಮೇಲೆ ಹೇಳಿರುವ ವೈಜ್ಞಾನಿಕ ಅಂಶಗಳು ನಿಮ್ಮನ್ನು ಜಾಹೀರಾತಿನ ಆಚೆಗೆ ಇರುವ ಹುನ್ನಾರಗಳ ಬಗೆಗೂ ಆಲೋಚಿಸುವಂತೆ ಮಾಡದಿದ್ದರೆ ಕೇಳಿ ನೋಡಿ…

photos: internet

Top