An unconventional News Portal.

ಆದರ್ಶ ಹೌಸಿಂಗ್ ಸೊಸೈಟಿ ಹಗರಣ: ಕಟ್ಟಡ ನೆಲಸಮಕ್ಕೆ ನ್ಯಾಯಾಲಯ ಸೂಚನೆ

ಆದರ್ಶ ಹೌಸಿಂಗ್ ಸೊಸೈಟಿ ಹಗರಣ: ಕಟ್ಟಡ ನೆಲಸಮಕ್ಕೆ ನ್ಯಾಯಾಲಯ ಸೂಚನೆ

‘ಆದರ್ಶ ಹೌಸಿಂಗ್ ಸೊಸೈಟಿ ಹಗರಣ’ ಸಂಬಂಧಪಟ್ಟಂತೆ ಶುಕ್ರವಾರ ಮುಂಬೈ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಭಾರಿ ಸದ್ದು ಮಾಡಿದ್ದ ಹಗರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಆದರ್ಶ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸುವಂತೆ ಸೂಚನೆ ನೀಡಿದೆ.

ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿದ್ದ ಯೋಧರ ಕುಟುಂಬದವರಿಗೆ ನೀಡುವ ಸಲುವಾಗಿ ಮುಂಬೈನ ಕೊಲಾಬಾದಲ್ಲಿ ಆದರ್ಶ ಬಹುಮಹಡಿ ಕಟ್ಟಡವನ್ನು ಕಟ್ಟಲಾಗಿತ್ತು. ಇದು ಹಸಿರು ನೀತಿ ಮತ್ತಿತರ ಕಾನೂನುಗಳನ್ನು ಗಾಳಿಗೆ ತೂರಿ ನಿರ್ಮಾಣಗೊಂಡಿರುವ ಕಟ್ಟಡವಾಗಿರುವುದರಿಂದ ಇಡೀ ನಿರ್ಮಾಣವನ್ನೇ ನೆಲಸಮ ಮಾಡಿ ಎಂದು ನ್ಯಾಯಾಲಯ ಹೇಳಿದೆ.

ಹಿನ್ನೆಲೆ:

ರಕ್ಷಣಾ ಸಚಿವಾಲಯ ನಿರ್ಮಿಸಿದ್ದ 31 ಮಹಡಿಗಳ ಈ ಕಟ್ಟಡದಲ್ಲಿ ಯೋಧರು, ಹುತಾತ್ಮರ ಪತ್ನಿಯರ ಬದಲಿಗೆ ಸಚಿವರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಡಿಮೆ ದರದಲ್ಲಿ ಪ್ಲ್ಯಾಟ್ ಪಡೆದುಕೊಂಡಿದ್ದರು. ಈ ಬಗ್ಗೆ ತನಿಖೆ ನಡೆದು ಅಕ್ರಮ ಬೆಳಕಿಗೆ ಬಂದಿತ್ತು.ಇದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದ ಬಹುದೊಡ್ಡ ಹಗರಣವಾಗಿತ್ತು. ಇದರ ಪರಿಣಾಮವಾಗಿ ಅಶೋಕ್ ಚವಾಣ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. 31 ಮಹಡಿಗಳ ಕಟ್ಟಡದಲ್ಲಿ ಚವಾಣ್ ಅವರ ಕನಿಷ್ಠ 3 ಮಂದಿ ಬಂಧುಗಳೂ ಫ್ಲಾಟ್‍ಗಳನ್ನು ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಆ ಕಟ್ಟಡವನ್ನು ನೆಲಸಮಗೊಳಿಸಿಲು ಮುಂಬೈ ಹೈ ಕೋರ್ಟ್ ಸೂಚನೆ ನೀಡಿದ್ದು, ಈ ಕುರಿತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪ್ಲ್ಯಾಟ್ ನ ನಿವಾಸಿಗಳು ಮುಂದಾಗಿದ್ದಾರೆ.

Top