An unconventional News Portal.

ಪತ್ನಿ ಹೃದಯದ ಬದಲು, ವಿಮಾನವನ್ನೇ ಅಪಹರಿಸಿದ ‘ಮುಸ್ತಫಾ’!

ಪತ್ನಿ ಹೃದಯದ ಬದಲು, ವಿಮಾನವನ್ನೇ ಅಪಹರಿಸಿದ ‘ಮುಸ್ತಫಾ’!

ಈಜಿಪ್ಟ್ ವಿಮಾನ ಅಪಹರಣ ಪ್ರಕರಣ ಮಂಗಳವಾರ ಸಾಮಾಜಿಕ ಜಾಲತಾಣ ಟ್ವಟರ್ನಲ್ಲಿ ತಮಾಷೆಯ ಅಲೆಯನ್ನು ಸೃಷ್ಟಿಸಿತು. ಬೆಳಗ್ಗೆ ಈಜಿಪ್ಟ್ನ ಅಲೆಗ್ಸಾಂಡ್ರಿಯಾದಿಂದ ರಾಜಧಾನಿ ಕೈರೋ ಕಡೆ ಹೊರಟಿದ್ದ ವಿಮಾನ ಅಪಹರಣಕ್ಕೀಡಾದ ಸುದ್ದಿ ಭಿತ್ತರವಾಗುತ್ತಿದ್ದಂತೆ ಸಹಜವಾಗಿಯೇ ಆತಂಕ ಮನೆ ಮಾಡಿತ್ತು. ಇತ್ತೀಚೆಗೆ ಈಜಿಪ್ಟ್ನಲ್ಲಿ ರಷ್ಯಾ ವಿಮಾನವೊಂದು ಪತನಗೊಂಡಿತ್ತು. ಜತೆಗೆ, ಮೂರು ತಿಂಗಳ ಅಂತರದಲ್ಲಿ ನಡೆದ ಪ್ಯಾರಿಸ್ ಹಾಗೂ ಬ್ರೂಸೆಲ್ ಮೇಲೆ ಐಸಿಸ್ ದಾಳಿ ಹಿನ್ನೆಲೆಯಲ್ಲಿ, ಇದೂ ಕೂಡ ಭಯೋತ್ಪಾದಕರ ಕೃತ್ಯ ಎಂಬ ಶಂಕೆಯೂ ವ್ಯಕ್ತವಾಗಿತ್ತು.

ಆದರೆ, ಅಪಹರಣಕ್ಕೆ ಈಡಾದ ವಿಮಾನ ಈಜಿಪ್ಟ್ ಪಕ್ಕದ ಸಿಪ್ರಸ್ನಲ್ಲಿ ಬಂದಿಳಿತು. ಅಲ್ಲಿನ ಲಾರ್ನಕ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ‘ಈಜಿಪ್ಟ್ ಏರ್’ ವಿಮಾನಯಾನ ಸಂಸ್ಥೆ ಅಪಹರಕಾರನ ಜತೆ ಮಾತುಕತೆ ನಡೆಸಿತು. ಆತ ಯಾವಾಗ, ತನ್ನ ವಿಚ್ಚೇದಿತ ಪತ್ನಿಗೆ ತಲುಪಿಸಲು ಪತ್ರವೊಂದನ್ನು ನೀಡುತ್ತಿದ್ದಂತೆ, ಟ್ವಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಘಟನೆಯನ್ನು ಗಮನಿಸುತ್ತಿದ್ದವು ಹಾಸ್ಯದ ಮೊರೆ ಹೋದರು. ಇಲ್ಲಿರುವ 10 ಟ್ವೀಟ್ಗಳು, ಘಟನೆಯಲ್ಲಿ ‘ಪತ್ನಿಗಾಗಿ ವಿಮಾನವನ್ನು ಅಪಹರಿಸಿರಬಹುದು’ ಎಂಬ ಪ್ರಾಥಮಿಕ ಮಾಹಿತಿಯನ್ನು ಇಟ್ಟುಕೊಂಡು ಹುಟ್ಟಿದಂತವು.

ಒಮ್ಮೆ ಕಣ್ಣಾಡಿಸಿ…

  • EH1
  • EH2
  • EH3
  • EH4 EH5
  • EH6 EH7 EH8
  • EH9 EH10

Top