An unconventional News Portal.

ವಿನಾಯಕ್ ಬಾಳಿಗ ಕೊಲೆ ಪ್ರಕರಣ: ಇಬ್ಬರು ಯುವಕರ ಬಂಧನ

ವಿನಾಯಕ್ ಬಾಳಿಗ ಕೊಲೆ ಪ್ರಕರಣ: ಇಬ್ಬರು ಯುವಕರ ಬಂಧನ

ಕೊಲೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗ.

ಕೊಲೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗ.

ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿಶಿತ್ ಮತ್ತು ವಿನೀತ್ ಬಂಧಿತರು. ಸಾವರ್ಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಲಾಬಿಗಳ ವಿರುದ್ಧ ಹೋರಾಡುತ್ತಿದ್ದ ಬಾಳಿಗರನ್ನು ಮಾ. 21ರಂದು ಇರಿದು ಕೊಲೆ ಮಾಡಲಾಗಿತ್ತು. ಅವರು ದಕ್ಷಿಣ ಕನ್ನಡ ಮೂಲದ ಕೆಲವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ವಿರುದ್ಧವೂ ದನಿ ಎತ್ತಿದ್ದವರು. ಹೀಗಾಗಿ, ಅವರ ಕೊಲೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು.

ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ಪೊಲೀಸ್ ಇಲಾಖೆ ರಚಿಸಿತ್ತು. ಪ್ರಾಥಮಿಕ ತನಿಖೆಯಿಂದ ಬಾಳಿಗ ಅವರ ಕೊಲೆಯ ಹಿಂದೆ ಕೆಲವು ಲಾಬಿಗಳು ಕೆಲಸ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ಪ್ರಕರಣವನ್ನು ಶೀಘ್ರ ತನಿಖೆ ನಡೆಸಬೇಕು ಎಂದು ವಿಚಾರವಾದಿಗಳ ಸಂಘ ಒತ್ತಾಯಿಸಿತ್ತು. ಸಂಘದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, “ಬಾಳಿಗ ಅವರ ಕೆಲಸದಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಮಸ್ಯೆಯಾಗಿತ್ತು. ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಜನರಿಗೆ ಆಗುತ್ತಿದ್ದ ತೊಂದರೆಗಳನ್ನು ಪ್ರಶ್ನಿಸಿ, ಮೂಲವನ್ನು ಕೆದಕುವ ಪ್ರಯತ್ನ ಮಾಡುತ್ತಿದ್ದರು. ಅವರ ದಾಖಲಿಸಿದ ಪ್ರಕರಣವೊಂದರ ವಿಚಾರಣೆ ಗುರುವಾರ ನಡೆದಿತ್ತು,” ಎಂದು ‘ನ್ಯೂಸ್ ಕನ್ನಡ’ಕ್ಕೆ ಪ್ರತಿಕ್ರಿಯಿಸಿದ್ದರು.

ಧಾರವಾಡ ಮೂಲದ ವಿಚಾರವಾದಿ ಎಂ. ಎಂ. ಕಲ್ಬುರ್ಗಿ ಅವರನ್ನು, ಅವರ ಮನೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ರಾಜ್ಯ ಸರಕಾರ ವಹಿಸಿದೆ. ಆದರೆ, ಈವರೆಗೆ ಹೇಳಿಕೊಳ್ಳುವ ಪ್ರಗತಿ ಕಂಡಿಲ್ಲ. ಹೀಗಿರುವಾಗಲೇ, ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದ ವಿನಾಯಕ್ ಬಾಳಿಗ ಕೊಲೆ ನಡೆದಿದೆ. ಪ್ರಕರಣವನ್ನು ಆದಷ್ಟು ಬೇಗ ತನಿಖೆ ನಡೆಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top