An unconventional News Portal.

ಮಾಲಿನ್ಯ ತಡೆಗೆ ಜಾಗತಿಕ ಮನ್ನಣೆ: ಕೇಜ್ರಿವಾಲ್ ಅಟ್ 42

ಮಾಲಿನ್ಯ ತಡೆಗೆ ಜಾಗತಿಕ ಮನ್ನಣೆ: ಕೇಜ್ರಿವಾಲ್ ಅಟ್ 42

ವಾಯು ಮಾಲಿನ್ಯ ತಡೆಯಲು ದಿಲ್ಲಿಯಲ್ಲಿ ನಡೆಸಿದ ಕಸರತ್ತಿಗೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ.

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಗತ್ತಿನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ‘ಸರಿ ಬೆಸ’ ಪ್ರಯೋಗ ಸಹಾಯ ಮಾಡಿದೆ. ಪ್ರತಿಷ್ಠಿತ ‘ಫಾರ್ಚುನರ್’ ಮ್ಯಾಗ್ಸಿನ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಕೇಜ್ರಿವಾಲ್ 42ನೇ ಸ್ಥಾನದಲ್ಲಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಇದರ ಜತೆಗಿದೆ.

ಉದ್ಯಮ, ರಾಜಕೀಯ, ಕಲೆ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರನ್ನು ಪ್ರಭಾವಿಗಳು ಎಂದು ಪಟ್ಟಿ ಮಾಡಲಾಗಿದೆ. “ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಮಾಲಿನ್ಯಗೊಂಡ ನಗರಗಳಲ್ಲಿ ದಿಲ್ಲಿಯನ್ನು ಗುರುತಿಸಿತ್ತು. ಇಂತಹ ನಗರದಲ್ಲಿ ಮಾಲಿನ್ಯ ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳು ಪರಿಣಾಮಕಾರಿದ್ದವು,’ ಎಂದು ಮ್ಯಾಗ್ಸಿನ್ ಕೇಜ್ರಿವಾಲ್ ಆಯ್ಕೆಗೆ ಕಾರಣ ನೀಡಿದೆ.

arvind_tweet_fortune_list

ಇದನ್ನು ಸಮಾಜಿಕ ತಾಣ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ಇದು ಜನರಿಗೆ ‘ಸರಿ ಬೆಸ’ ಯೋಜನೆಯನ್ನು ಯಶಸ್ಸುಗೊಳಿಸಿದ ಜನರಿಗೆ ಸಲ್ಲಬೇಕಾದ ಗೌರವ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಪಟ್ಟಿಯಲ್ಲಿ ಇಟಲಿಯ ಮೇಯರ್ ಡೊಮೆನಿಕೋ ಲುಸಾನೋ 40 ಸ್ಥಾನ ಪಡೆದಿದ್ದಾರೆ. ‘ಮಧ್ಯಪ್ರಾಚ್ಯದ ವಲಸೆಗಾರರನ್ನು ತನ್ನ ನಗರದೊಳಗೆ ಬರಲು ಅವಕಾಶ ಮಾಡಿಕೊಡುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ಹಾಗೂ ಸಾಮಾಜಿಕ ಭದ್ರತೆಗೆ ಸಹಾಯ ಮಾಡಿದ್ದಾರೆ,’ ಎಂದು ಮ್ಯಾಗ್ಸಿನ್ ಹೇಳಿದೆ.

Top