An unconventional News Portal.

‘ಉಳಿವಿಗಾಗಿ ಹೋರಾಟ’: 40 ವರ್ಷಗಳಲ್ಲಿ 60% ಜೀವಿಗಳು ಭೂಮಿಯಿಂದ ನಾಪತ್ತೆ!

‘ಉಳಿವಿಗಾಗಿ ಹೋರಾಟ’: 40 ವರ್ಷಗಳಲ್ಲಿ 60% ಜೀವಿಗಳು ಭೂಮಿಯಿಂದ ನಾಪತ್ತೆ!

ಕಳೆದ 40 ವರ್ಷಗಳಲ್ಲಿ ಶೇಕಡಾ 60 ರಷ್ಟು ಮೀನುಗಳು, ಹಕ್ಕಿಗಳು, ಸಸ್ತನಿಗಳು, ಉಭಯವಾಸಿಗಳು ಮತ್ತು ಸರಿಸೃಪಗಳು ನಾಶವಾಗಿವೆ ಎಂದು ಸಂಶೋಧನೆಯೊಂದರಿಂದ ತಿಳಿದು ಬಂದಿದೆ. ಇದಕ್ಕೆ ಬಹುಮುಖ್ಯ ಕಾರಣ ಮನುಷ್ಯನ ಚಟುವಟಿಕೆಗಳು.

‘ಲಿವಿಂಗ್ ಪ್ಲಾನೆಟ್ ವರದಿ 2016’  ಬಿಡುಗಡೆಯಾಗಿದ್ದು ಅದರಲ್ಲಿ ಈ ಎಲ್ಲಾ ಮಾಹಿತಿಗಳಿವೆ. ಕಾಡಿನ ನಾಶ, ಮಾಲಿನ್ಯ, ಮಿತಿಮೀರಿದ ಮೀನುಗಾರಿಕೆ, ಖಾಯಿಲೆಗಳು ಮತ್ತು ಕಾಡು ಪ್ರಾಣಿಗಳ ಕಳ್ಳಸಾಗಣಿಕೆಯ ಕಾರಣಕ್ಕೆ ಇಂದು ಜೀವ ಸಂಕುಲ ಅಳಿವಿನ ಅಂಚಿನಲ್ಲಿದೆ ಎಂದು ಈ ವರದಿ ಹೇಳುತ್ತದೆ.

ವರ್ಲ್ಡ್ ವೈಡ್ಲೈಫ್ ಫೌಂಡೇಶನ್ (WWF) ಇತರ ಸಂಸ್ಥೆಗಳೊಂದೊಗೆ ಸೇರಿ ಈ ವರದಿ ಹೊರತಂದಿದೆ. ಸುಮಾರು 3700 ಜೀವಿಗಳ ಮೇಲೆ ವಿಶ್ವದ 14,000 ಭಾಗಗಳಲ್ಲಿ ನಿರಂತರ ಸಮೀಕ್ಷೆ ಮಾಡಿ ಈ ತೀರ್ಮಾನಕ್ಕೆ ಬರಲಾಗಿದೆ.

“6.5 ಕೋಟಿ ವರ್ಷಗಳ ಹಿಂದೆ ಡೈನೋಸಾರ್ಗಳು ನಾಶವಾದ ನಂತರ ಇದೀಗ ಸಮರೋಪಾದಿಯಲ್ಲಿ ಜೀವ ಸಂಕುಲ ಅಳಿವಿನ ಅಂಚಿಗೆ ಬಂದು ನಿಂತಿದೆ,” ಎಂದು WWFನ ಲಂಡನ್ ಘಟಕದ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮೈಕ್ ಬ್ಯಾರೆಟ್ ಆತಂಕ ವ್ಯಕ್ತಪಡಿಸಿದ್ದಾರೆ.

sumatran-tiger

“ನಮ್ಮ ಸುತ್ತ ಮುತ್ತ ಜೀವ ಸಂಕುಲ ನಾಶವಾಗುವುದರ ಬಗ್ಗೆ ನಾವು ಗಮನ ಹರಿಸುತ್ತಿಲ್ಲ. ನಾವು ಭೂಮಿ ಮೇಲೆ ಎಷ್ಟು ಸಮಯ ಬದುಕಬಹುದು ಎಂಬುದಕ್ಕೆ ಇವುಗಳ ನಾಶವೇ ಮಾಪನಗಳನ್ನು ಹೇಳುತ್ತವೆ,” ಎನ್ನುತ್ತಾರೆ ಬ್ಯಾರೆಟ್.

ಜೀವ ಸಂತತಿ ನಾಶವಾಗಿರುವ ಪಟ್ಟಿಯನ್ನು ಈ ವರದಿ ಒಳಗೊಂಡಿದ್ದು, ಗೊರಿಲ್ಲಾಗಳು, ಚಿಂಪಾಂಜಿಗಳ ಜಾತಿಗೆ ಸೇರಿದ ಒರಾಂಗ್ಟನ್’ಗಳು, ಆನೆಗಳು, ಘೇಂಡಾಮೃಗಗಳು, ಹುಲಿಗಳು, ಹಿಮಚಿರತೆಗಳು ನಾಶಗೊಂಡ ಪ್ರಾಣಿಗಳಲ್ಲಿ ಮೊದಲ ಸ್ಥಾನದಲ್ಲಿವೆ. ಇವತ್ತು ಸಮುದ್ರದಲ್ಲಿರುವ 10 ರಲ್ಲಿ 9 ಮೀನುಗಳನ್ನು ಹಿಡಿಯಲಾಗಿದೆ. ಇದರಿಂದ ಸಮುದ್ರದ ಜೀವಿಗಳಲ್ಲಿ 40 ಶೇಕಡಾ ಜೀವಿಗಳು ನಾಪತ್ತೆಯಾಗಿವೆ. ಇನ್ನು ಹವಳದ ದಿಣ್ಣೆಗಳೂ ಮರೆಯಾಗಿದ್ದು ಕೆಲವು ಹಾಳಾಗಿವೆ. ಈಗಿನ ಸಂಶೋಧನೆಗಳ ಪ್ರಕಾರ ಜೀವಿಗಳ ನಾಶ ಇದೇ ರೀತಿ ಮುಂದುವರಿದರೆ 2020ರ ಹೊತ್ತಿಗೆ ಈ ಪ್ರಮಾಣ ಶೇಕಡಾ 67 ತಲುಪಲಿದೆ ಎಂದು ವರದಿ ಅಂದಾಜಿಸಲಾಗಿದೆ.

ಸಮರೋಪಾದಿಯಲ್ಲಿ ನಾಶ

ಮನುಷ್ಯನ ಚಟುವಟಿಕೆಗಳು ಇದೇ ರೀತಿ ಮುಂದುವರಿದರೆ ಬಹುಮುಖ್ಯವಾಗಿ ಸಿಹಿ ನೀರನ್ನು ಅವಲಂಬಿಸಿರುವ ಪ್ರಾಣಿಗಳು ಹೆಚ್ಚು ತೊಂದರೆಗೆ ಒಳಗಾಗಲಿವೆ. ಸಿಹಿ ನೀರಿನ ಮೂಲಗಳಾದ ಕೆರೆಗಳು ನದಿಗಳು ಜೌಗು ಪ್ರದೇಶಗಳು ಮರೆಯಾಗಿವೆ. ಈ ಕಾರಣಕ್ಕೆ ಸಿಹಿ ನೀರನ್ನು ಅವಲಂಬಿಸಿರುವ 881 ಪ್ರಾಣಿಗಳಲ್ಲಿ ಶೇಕಡಾ 81ರಷ್ಟು ನಾಶವಾಗಿವೆ ಎಂದು ಈ ವರದಿ ಹೇಳುತ್ತದೆ.

ಭೂಮಿಯ ಮೇಲಿನ ಪ್ರದೇಶಗಳಲ್ಲಿ ಸಿಹಿ ನೀರನ ಪಾಲು ಶೇಕಡಾ 1ಕ್ಕಿಂತ ಕಡಿಮೆಯಾಗಿದೆ. ಆದರೆ ಪ್ರಾಣಿಗಳ ವಿಚಾರಕ್ಕೆ ಬಂದಾಗ ಇದನ್ನೇ ನಂಬಿ ಶೇಕಡಾ 10 ಕ್ಕಿಂತ ಹೆಚ್ಚು ಪ್ರಾಣಿಗಳು ಜೀವಿಸುತ್ತವೆ. ಭೂಮಿ ಮೇಲಿನ ಪ್ರಾಣಿಗಳ ನಾಶಕ್ಕೆ ನಗರೀಕರಣ ಮತ್ತು ಕೃಷಿಯೇ ಪ್ರಮುಖ ಕಾರಣವಾಗಿದೆ. ಇದರ ಜತೆಗೆ ಬೇಟೆಯಾಡುವುದರಿಂದಲೂ ಪ್ರಾಣಿಗಳು ಕಣ್ಮರೆಯಾಗಿವೆ. ಬೇಟೆಯಾಡಿ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುವ ದಂಧೆಯೇ ಇವತ್ತು ಹುಟ್ಟಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

parrot

“ಸದ್ಯ ಈ ವರದಿ ಎಲ್ಲರಿಗೂ ಎಚ್ಚರಿಕೆಯ ಗಂಟೆ. ಇನ್ನಾದರೂ ಈ ಪ್ರಾಣಿಗಳನ್ನು ಉಳಿಸುವತ್ತ ಚಿಂತನೆ ಮಾಡಬೇಕಾಗಿದೆ,” ಎಂದು ವರದಿ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಂಡನ್ ಝುವಾಲಜಿ ಕೇಂದ್ರದ ನಿರ್ದೇಶಕರಾದ ಕೆನ್ ನಾರಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಾಣಿಗಳ ನಾಶದಲ್ಲಾಗುತ್ತಿರುವ ವೇಗದ ಬಗ್ಗೆಯೂ ವರದಿ ಬೆಳಕು ಚೆಲ್ಲುತ್ತದೆ. ವಿಶ್ವದಲ್ಲಿರುವ ಪ್ರಾಣಿಗಳ ನಾಶ ಇತ್ತೀಚಿನ ವರ್ಷಗಳಲ್ಲಿ ಎಂದಿಗಿಂತಲೂ ಹೆಚ್ಚಾಗಿದೆ. ಆಫ್ರಿಕಾದ ಆನೆಗಳ ವಿಚಾರಕ್ಕೆ ಬಂದಾಗ ದಂತಕ್ಕಾಗಿಯೇ ಇಲ್ಲಿ 2006ರ ನಂತರ ಕಾಲು ಭಾಗಕ್ಕಿಂತ ಹೆಚ್ಚಿನ ಆನೆಗಳನ್ನು ಕೊಲ್ಲಲಾಗಿದೆ.

ಇಂದು ವಿಶ್ವದ ಮಣ್ಣಿನಲ್ಲಿ ಮೂವತ್ತು ಶೇಕಡಾ ಮಣ್ಣು ಕೊಚ್ಚಿ ಹೋಗಿದೆ. ಶೇಕಡಾ 50 ಕಾಡು ನಾಶವಾಗಿದೆ. ಇದರಿಂದ ವಾತಾವರಣ ಸಮತೋಲನ ತಪ್ಪಿದೆ, ಇಂಗಾಲದ ಬಿಡುಗಡೆಗೆ ನಿಯಂತ್ರಣವೂ ಇಲ್ಲವಾಗಿದೆ. ಆರೋಗ್ಯಪೂರ್ಣ ಕಾಡುಗಳು, ನದಿಗಳು ಮತ್ತು ಸಮುದ್ರಗಳು ಇದ್ದಾಗ ಮಾತ್ರ ಜೀವ ವೈವಿಧ್ಯ ಇರಲು ಸಾಧ್ಯ. ಜೀವಿಗಳು ನಾಶವಾಗುತ್ತಿದ್ದಂತೆ ಈ ವಾತಾವರಣವೇ ನಾಶವಾಗುತ್ತದೆ. ಆಗ ಶುದ್ಧ ಗಾಳಿ, ನೀರು, ಆಹಾರ ಮತ್ತು ಇವುಗಳಿಂದ ನಮಗೆ ಸಿಗುವ ಉತ್ತಮ ವಾತಾವರಣವೇ ಇರುವುದಿಲ್ಲ,” ಎನ್ನುತ್ತಾರೆ WWF ನಿರ್ದೇಶಕ ಮಾರ್ಕೋ ಲ್ಯಾಂಬಾರ್ಟಿನಿ.

ಚಿತ್ರ ಕೃಪೆ: WWF

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top