An unconventional News Portal.

ಇಸ್ರೇಲಿನ ಏಕೈಕ ಮಹಿಳಾ ಜೈಲಿನಿಂದ ‘ನೇರ ಪ್ರಸಾರ’!

ಇಸ್ರೇಲಿನ ಏಕೈಕ ಮಹಿಳಾ ಜೈಲಿನಿಂದ ‘ನೇರ ಪ್ರಸಾರ’!

ಜೈಲು ಎಂಬುದು ಹೊರ ಜಗತ್ತಿನ ಪಾಲಿಗೆ ಯಾವತ್ತಿಗೂ ಕುತೂಹಲ ಕೇಂದ್ರಬಿಂದು. ಹೀಗಿರುವಾಗ ಇಸ್ರೇಲಿನಲ್ಲಿರುವ ಏಕೈಕ ಮಹಿಳಾ ಸೆರಮನೆ ಒಳಗೆ ಹೇಗಿರಬಹುದು? ಅಲ್ಲಿರುವ ಮಹಿಳಾ ಕೈದಿಗಳ ಬದುಕು ಹೇಗಿರಬಹುದು? ಹೀಗೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಸ್ರೇಲಿನ ಮಹಿಳಾ ಮ್ಯಾಗ್ಸಿನ್ ಒಂದು ಪ್ರಿಸನ್ ಗೌರ್ವನರ್ ಕಚೇರಿಯನ್ನು ಎಡತಾಕಿತು. ಸೆಂಟ್ರಲ್ ಇಸ್ರೇಲಿನಲ್ಲಿರುವ ‘ನಿವೆ ತಿಝ್ರಾ’ ಸೆರೆಮನೆಯ ಒಳಗಿನ ಕತೆಗಳನ್ನು ಹೊರಜಗತ್ತಿನ ತಿಳಿಸುವ ಅನುಮತಿಯನ್ನೂ ಪಡೆದುಕೊಂಡಿತು.

ಮ್ಯಾಗ್ಸಿನ್ ಪರವಾಗಿ ಮಹಿಳಾ ಸೆರೆಮನೆಗೆ ತನ್ನ ಕ್ಯಾಮೆರಾ ಜತೆಗೆ ಕಾಲಿಟ್ಟವನು ಫೊಟೋಗ್ರಾಫರ್ ತೋಮರ್ ಇಫ್ರಾ. ಈತ ಮಹಿಳಾ ಜೈಲಿನ ಒಳಹೊರಗೆ ಒಂದಷ್ಟು ತಿಂಗಳು ಒಡಾಟದ ನಂತರ ಸುಮಾರು 500 ಚಿತ್ರಗಳ ಮೂಲಕ ಸೆರಮನೆಯ ಕತೆಯನ್ನು ಹೊರಜಗತ್ತಿನ ತೆರೆದಿಟ್ಟ. ಇದೇ ಪ್ರಿಸನ್ ಹಿಂದೊಮ್ಮೆ ಪ್ಯಾಲಿಸ್ತೇನಿ ಮಹಿಳೆಯಯ ಮೇಲೆ ದೌರ್ಜನ್ಯದಿಂದಾಗಿ ಸುದ್ದಿಕೇಂದ್ರಕ್ಕೆ ಬಂದಿತ್ತು. ಇದೀಗ ತೋಮರ್ ತೆಗೆದ ಚಿತ್ರಗಳು ಇಸ್ರೇಲಿ ಮಹಿಳಾ ಸೆರಮನೆಯ ಕತೆಯನ್ನು ಹೇಳಲು ಬಯಸುತ್ತಿವೆ. ನೀವೂ ಒಮ್ಮೆ ನೋಡಿ, ಜೈಲು ಹಕ್ಕಿಗಳ ಕತೆಗಳಿಗೆ ಕಿವಿ ಕೊಡಿ.

5_Israel’s-woman-exclusive-prison 4-Israel’s-woman-exclusive-prison 4_Israel’s-woman-exclusive-prison 3-Israel’s-woman-exclusive-prison 1-Israel’s-woman-exclusive-prison 2-Israel’s-woman-exclusive-prison

 

Top