An unconventional News Portal.

40 ಸಾವಿರ ಕಿ.ಮೀ ಸುತ್ತಾಟದಲ್ಲಿ ಸೆರೆ ಸಿಕ್ಕ ಅಪರೂಪದ ಅಲೆಮಾರಿಗಳು!

40 ಸಾವಿರ ಕಿ.ಮೀ ಸುತ್ತಾಟದಲ್ಲಿ ಸೆರೆ ಸಿಕ್ಕ ಅಪರೂಪದ ಅಲೆಮಾರಿಗಳು!

1_African-Nomads_samachara

ಒಂದು ಚಿತ್ರ ಮೂಡಿಸುವ ಭಾವಗಳಿಗೆ ಚೌಕಟ್ಟು ಎಂಬುದು ಇರುವುದಿಲ್ಲ. ಇವತ್ತಿನ ಯೂ-ಟ್ಯೂಬ್ ಜಮಾನದಲ್ಲೂ ಭಾವಚಿತ್ರಗಳು ಇನ್ನೂ ಬೆಲೆ ಕಳೆದುಕೊಂಡಿಲ್ಲ. ಇದಕ್ಕೆ ಕಾರಣ, ಚಿತ್ರಗಳು ಚೌಕಟ್ಟು ಮೀರಿ ನೋಡುಗರ ನಡುವೆ ನಡೆಸುವ ಸಂವಾದ. ಹೀಗಾಗಿಯೇ, ಫೊಟೋಗ್ರಫಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಇದರ ನಡುವೆಯೂ ಕೆಲವರು ಅದೊನ್ನೊಂದು ಪ್ಯಾಷನ್ ಆಗಿ ತೆಗೆದುಕೊಂಡು ಅಪರೂಪದ ಚಿತ್ರಗಳ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಇರುವವರ ಪೈಕಿ ಜರ್ಮನಿಯ ಮಾರಿಯೋ ಗರ್ತ್ ಕೂಡ ಒಬ್ಬರು.

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಸಮುದಾಯಗಳ ಸಾಂಪ್ರದಾಯಿಕ ಜೀವನ ಶೈಲಿಯನ್ನು ಇವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ ಹವ್ಯಾಸವನ್ನು ಇಟ್ಟುಕೊಂಡವರು. ಇದಕ್ಕಾಗಿ ಆಫ್ರಿಕಾದಾದ್ಯಂತ ಸುಮಾರು 40 ಸಾವಿರ ಕಿ.ಮೀ ಸುತ್ತಾಡಿದ್ದಾರೆ. ನಾಗರೀಕತೆಯ ದಾಳಿಯ ನಡುವೆಯೂ ಅಳಿದುಳಿದ ಅಲೆಮಾರಿ ಜನ ಬದುಕನ್ನು ಕಟ್ಟಿಕೊಡುವ ಹಲವು ಚಿತ್ರಗಳನ್ನು ಅವರು ತೆಗೆದಿದ್ದಾರೆ. ಇತ್ತೀಚೆಗೆ ಅವುಗಳನ್ನು ಹೊರಜಗತ್ತಿಗೆ ಬಿಡುಗಡೆ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ. ಮುಂದಿನ ತಲೆಮಾರಿಗೆ ಈ ಸಮುದಾಯಗಳು ಉಳಿಯುವುದು ಕಷ್ಟ. ಈಗಲೇ ನೋಡಿ; ಕಣ್ತುಂಬಿಕೊಳ್ಳಿ.

2_Himbi-Grl-Naimbia-samachara

ಈಕೆ ಆಫ್ರಿಕಾದಲ್ಲಿರುವ ನಾಂಬಿಯಾದಲ್ಲಿ ಬದುಕುತ್ತಿರುವ ಹುಂಬಿ ಎಂಬ ಅಪರೂಪದ ಸಮುದಾಯದ ಹೆಣ್ಣುಮಗಳ ಚಿತ್ರ. ಹಾಲಿವುಡ್ ಹಿರೋಯಿನ್ಗಳಿಗೂ ಕಮ್ಮಿ ಇಲ್ಲದ ಈಕೆಯ ಕೇಶ ವಿನ್ಯಾಸ ಫ್ಯಾಷನ್ ಡಿಸೈನರ್ಗಳಿಗೆ ಹೊಸ ಐಡಿಯಾ ನೀಡಬಲ್ಲದು. ಹಾಗೆಯೇ, ಇವರು ಕಾಡು ಪ್ರಾಣಿಗಳ ಚರ್ಮದಿಂದ ತಯಾರಿಸಿದ ಆಭರಣ ಕೂಡ.

 

3_Hamar-Lady-Ethiopia-samachara

ಇದು ಇಥಿಯೋಪಿಯಾ ದೇಶದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬಳ ಚಿತ್ರ. ಹಮಾರ್ ಎಂದು ಗುರುತಿಸುವ ಈ ಜನಾಂಗದವರು ಸಮುದ್ರವನ್ನೇ ದೇವರು ಎಂದು ಪೂಜಿಸುವವರು. ಹೀಗಾಗಿ, ಇವರ ಅಲಂಕಾರ ಕೂಡ ಸಮುದ್ರ ದೇವತೆ ನೀಡುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ತಯಾರಿಸಿದಂತವು.

 

4_image-Suri-Lady-Ethiopia-samachara

ಅದೇ ಇಥಿಯೋಪಿಯಾದ ದಟ್ಟ ಕಾಡಿನ ನಡುವೆ ಸಿಗುವ ಇನ್ನೊಂದು ಅಲೆಮಾರಿ ಜನಾಂಗದ ಮಹಿಳೆಯೊಬ್ಬರ ಚಿತ್ರವಿದು. ಇವರನ್ನು ಸೂರಿ ಎಂದು ಕರೆಯುತ್ತಾರೆ. ಕಾಡಿನ ಜತೆಗಿನ ಅವರ ಅವಿನಾಭಾವ ಸಂಬಂಧ ಅವರ ಉಡುಗೆ ತೊಡುಗೆಗಳಲ್ಲೂ ಅಭಿವ್ಯಕ್ತಗೊಳ್ಳುತ್ತಿದೆ.

 

5_Mursi-mother-with-her-child-Ethiopia-samachara

ಇದು ಸಂಬೂರ್ ಎಂದು ಕರೆಯುವ  ಬುಡಕಟ್ಟು ಸಮುದಾಯದ ಮಹಿಳೆಯ ಚಿತ್ರ. ಕಂಕಳಲ್ಲಿ ಮಗುವನ್ನು ಇಟ್ಟುಕೊಂಡ ಈಕೆಯ ಬಾಯಿಯನ್ನು ಮರದ ತುಂಡೊಂದು ಅಲಂಕರಿಸಿದೆ. ಆಕೆ ಧರಿಸಿರುವ ಉಳಿದ ಆಭರಣಗಳ ಬಗ್ಗೆ ಬಿಡಿಸಿ ಹೇಳಬೇಕಿಲ್ಲ, ಅಲ್ವಾ?

photos: internet

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top