An unconventional News Portal.

ನಗ್ನ ಸೌಂದರ್ಯದ ಮಾದಕತೆ ಆಚೆಗೂ ಈಕೆ ಗಟ್ಟಿಗಿತ್ತಿ!

ನಗ್ನ ಸೌಂದರ್ಯದ ಮಾದಕತೆ ಆಚೆಗೂ ಈಕೆ ಗಟ್ಟಿಗಿತ್ತಿ!

ಮಹಿಳೆಯರ ದೇಹ ಸದ್ಯದ ಮಾರುಕಟ್ಟೆಯಲ್ಲಿ ಬಿಕರಿಗಿರುವ ಸರಕು. ಜಾಹಿರಾತುಗಳಿಂದ ಹಿಡಿದು ಅಶ್ಲೀಲ ಸಿನೆಮಾ ತಯಾರಿಕೆವರೆಗೂ ಮಹಿಳೆಯ ಮಾಂಸಖಂಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇವತ್ತಿನ ಜೀವನ ಶೈಲಿಯ ಇಂತಹ ಆಲೋಚನೆಯನ್ನು ಕೆಲವರು ವಿರೋಧಿಸುತ್ತಾರೆ. ಮಹಿಳೆ ದೈಹಿಕವಾಗಿ ಸೌಂದರ್ಯವತಿ. ಜತೆಗೆ, ಆಕೆ ಪುರುಷರ ಹಾಗೆಯೇ ಗಟ್ಟಿಗಿತ್ತಿ ಎಂಬುದು ಅವರ ಪ್ರತಿಪಾದನೆ. ಇದನ್ನು ಆಧಾರವಾಗಿಟ್ಟುಕೊಂಡು ಆಂಟನ್ ಬೆಲೆವೋಷಂಕೋ ಎಂಬ ಛಾಯಾಚಿತ್ರ ನಿಪುಣ ಕಪ್ಪು ಬಿಳುಪಿನ ಫೊಟೋಗಳ ಮೂಲಕ ಭಿನ್ನ ನೆಲೆಯಲ್ಲಿ ಮಹಿಳೆಯನ್ನು ತೋರಿಸುವ ಪ್ರಯತ್ನ ಮಾಡಿದ್ದಾನೆ.

ಇಲ್ಲಿರುವ ಚಿತ್ರಗಳು ಆತ ತೆಗೆದವು. ಇಲ್ಲಿ ಮಹಿಳೆಯ ದೈಹಿಕ ಸೌಂದರ್ಯದ ಜತೆಗೆ ಆಕೆಯ ಮಾಂಸಖಂಡಗಳಲ್ಲಿ ಹುದುಗಿರುವ ಸಾಮರ್ಥ್ಯವನ್ನೂ ಬಿಂಬಿಸುವ ಪ್ರಯತ್ನವಿದೆ. ಇದರ ಆಚೆಗೆ ನಾವೇನೂ ಹೇಳಲು ಹೋಗುವುದಿಲ್ಲ. ಆಂಟನ್ ತೆಗೆದ ಚಿತ್ರಗಳುಂಟು, ನೀವುಂಟು…

4a4b4c4d4e4f

Top