An unconventional News Portal.

‘ಕನ್ಯೆ’ಯಾಗಿದ್ದರೆ ಮಾತ್ರ ಸೇನೆಯಲ್ಲಿ ಅವಕಾಶ!

‘ಕನ್ಯೆ’ಯಾಗಿದ್ದರೆ ಮಾತ್ರ ಸೇನೆಯಲ್ಲಿ ಅವಕಾಶ!

1b

ಸೇನೆ ಸೇರಲು ಇರಬೇಕಾದ ಅರ್ಹತೆಗಳೇನು? ಆರೋಗ್ಯವಂತ ದೇಹ ಮತ್ತು ಮನಸ್ಸು. ಇಷ್ಟಿದ್ದರೆ ಸಾಕೆ? ಇಲ್ಲ ಎನ್ನುತ್ತಾರೆ ಇಂಡೋನೇಷಿಯಾ ಮಿಲಿಟರಿಯ ಹಿರಿಯ ಅಧಿಕಾರಿಗಳು! ಇಲ್ಲಿನ ಸೇನೆಗೆ ಸೇರಲು ಬಯಸುವ ಯುವತಿಯರು ‘ಕನ್ಯತ್ವ’ವನ್ನೂ ಹೊಂದಿರಬೇಕು ಎಂಬ ಷರತ್ತನ್ನು ಅವರು ವಿಧಿಸಿದ್ದಾರೆ. ಈ ವಿಚಾರ ಅಂತರಾಷ್ಟ್ರೀಯ ಸಮುದಾಯದ ಟೀಕೆಗೆ ಗುರಿಯಾಗುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದೆ.

ಇಂಡೊನೇಷಿಯಾ ದಕ್ಷಿಣ ಏಷಿಯಾದಲ್ಲಿ ಬರುವ ಪುಟ್ಟ ದೇಶ. ಇತ್ತೀಚೆಗೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜೋಕೊ ವಿಡೋಡೊ ಎಂಬ ಜನಸಾಮಾನ್ಯನೊಬ್ಬ ಅಧ್ಯಕ್ಷನಾಗಿ ಆಯ್ಕೆಯಾಗುವ ಮೂಲಕ ಅಂತರಾಷ್ಟ್ರೀಯ ಗಮನ ಸೆಳೆದಿದ್ದ. ಜೋಕೊ ಇಂಡೊನೇಷಿಯಾದ ರಾಜಧಾನಿ ಜಕಾರ್ತ್ ಮುನಸಿಪಾಲಿಟಿ ಮೇಯರ್ ಆಗುವ ಮೂಲಕ ರಾಜಕೀಯ ಜೀವನ ಪ್ರವೇಶಿಸಿದವರು. ಅಲ್ಲಿ ತಳಮಟ್ಟದ ಬದಲಾವಣೆಗಳು ಜನರಲ್ಲಿ ಹೊಸ ಬಗೆ ಸಂಚಲನ ಮೂಡಿಸಿತ್ತು.

 

“ಇದರಲ್ಲಿ ಸಮಸ್ಯೆ ಏನಿದೆ? ಯುವತಿಯರ ನಡೆತೆ ಏನು ಎಂದು ತಿಳಿದುಕೊಳ್ಳಲು ಇದು ಒಳ್ಳೆಯ ವಿಧಾನ. ಇದನ್ನು ಟೀಕೆ ಮಾಡುವುದು ಸರಿಯಲ್ಲ,’’

– ಇಂಡೊನೇಷಿಯಾ ಮಿಲಿಟರಿ ಜನರಲ್ ಮೋಲ್ಡಿಕೊ 

ಇಂತಹ ದೇಶದಲ್ಲಿ ಇದೀಗ ಮಿಲಿಟರಿಗೆ ಯುವತಿಯರನ್ನು ಆಯ್ಕೆ ಮಾಡುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಸೇನೆ ಭರ್ತಿ ವೇಳೆ, ಯುವತಿಯರ ಕನ್ಯತ್ವ ಪರೀಕ್ಷೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ (two finger test) ಮಾಡಲಾಗುತ್ತದೆ. ‘ಯುವತಿಯರ ಕನ್ಯಪೊರೆ ಹರಿಯದಿದ್ದರೆ ಒಳ್ಳೆಯ ನಡೆತೆ ಹೊಂದಿದವರು. ಇಲ್ಲದಿದ್ದರೆ ಅವರು ತುಂಟಿಯರು. ನಡತೆ ಅವರ ನಡತೆ ಸರಿ ಇಲ್ಲದವರು’ ಎಂಬುದು ಅಲ್ಲಿನ ಸೇನಾಧಿಕಾರಿಗಳ ತಿಳಿವಳಿಕೆ.

ಇದನ್ನು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ ಗಟ್ಟಿ ದನಿಯಲ್ಲಿ ವಿರೋಧಿಸಿದೆ. “ಕನ್ಯತ್ವಕ್ಕೂ, ದೇಶದ ಆಂತರಿಕ ಭದ್ರತೆಗೂ ಸಂಬಂಧ ಇಲ್ಲ. ಸಾಂಪ್ರದಾಯಿಕ ರೀತಿಯನ್ನು ಕನ್ಯತ್ವ ಪರೀಕ್ಷೆ ನಡೆಸುವುದು ಯುವತಿಯರಿಗೆ ಮುಜುಗರ ಮೂಡಿಸುತ್ತಿದೆ. ಇದರಿಂದ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಂಸ್ಥೆ ಬರೆದ ಪತ್ರದಲ್ಲಿ ವಿವರಿಸಿದೆ.

1c

ಇದಕ್ಕೆ ಪ್ರತಿಕ್ರಿಯಿಸಿದ ಇಂಡೊನೇಷಿಯಾ ಮಿಲಿಟರಿ ಜನರಲ್ ಮೋಲ್ಡಿಕೊ, “ಇದರಲ್ಲಿ ಸಮಸ್ಯೆ ಏನಿದೆ? ಯುವತಿಯರ ನಡೆತೆ ಏನು ಎಂದು ತಿಳಿದುಕೊಳ್ಳಲು ಇದು ಒಳ್ಳೆಯ ವಿಧಾನ. ಇದನ್ನು ಟೀಕೆ ಮಾಡುವುದು ಸರಿಯಲ್ಲ,’’ ಎಂದಿದ್ದಾರೆ.  ಮಿಲಿಟರಿ ಸೇರಿ, ಬಂಧೂಕು ಹಿಡಿದು ಶತ್ರುಗಳನ್ನು ಎದುರಿಸುವುದಕ್ಕೂ, ಯುವತಿಯ ಕನ್ಯತ್ವಕ್ಕೂ ಸಂಬಂಧ ಇದೆ ಎಂದವರು ಪ್ರತಿಪಾದಿಸುತ್ತಾರೆ.

ಸಾಂಪ್ರದಾಯಿಕವಾಗಿ, ಯುವತಿಯರ ಗುಪ್ತಸ್ಥಳದಲ್ಲಿ ಎರಡು ಬೆರಳುಗಳನ್ನು ತೂರಿಸಿ, ಕನ್ಯಾಪೊರೆಯನ್ನು ಪರೀಕ್ಷಿಸುದೇ ತಪ್ಪು ಎಂದು ವೈದ್ಯ ಸಮೂಹ ವಾದಿಸುತ್ತಿದೆ. “ಇದು ನೈತಿಕವಾದುದ್ದಲ್ಲ,’’ ಎಂದು ಅಮೆರಿಕಾ ಮೂಲದ ವೈದ್ಯ ಸಂಘಗಳು ಹೇಳುತ್ತಿವೆ.

photos: internet

Top