An unconventional News Portal.

ಐದು ಪೈಸೆಗಾಗಿ ನಲುವತ್ತು ವರ್ಷಗಳ ಕಾನೂನು ಹೋರಾಟ

ಐದು ಪೈಸೆಗಾಗಿ ನಲುವತ್ತು ವರ್ಷಗಳ ಕಾನೂನು ಹೋರಾಟ

ಐದು ಪೈಸೆ ಚಲಾವಣೆ ನಿಂತು ದಶಕಗಳೇ ಕಳೆದಿದೆ. ಆದರೆ ಐದು ಪೈಸೆಯ ವಿಚಾರವಾಗಿ ವಿಶೇಷ ಪ್ರಕರಣ ದೆಹಲಿಯಲ್ಲಿ ನಡೆಯುತ್ತಿದೆ. ಅಲ್ಲದೆ ಇದಕ್ಕಾಗಿ ಈಗಾಗಲೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ದೆಹಲಿ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿದ್ದ ರಣವೀರ್ ಸಿಂಗ್ 1973 ರಲ್ಲಿ 15 ಪೈಸೆ ಪಡೆದು ಆಕೆಗೆ 10 ಪೈಸೆ ಟಿಕೆಟ್ ನೀಡಿ ಐದು ಪೈಸೆ ಜೇಬಿಗಿಳಿಸಿದ್ದರು.ದುರದೃಷ್ಟವಶಾತ್  ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದರು. ಬಳಿಕ ರಣವೀರ್ ಅವರನ್ನು ಡಿಟಿಸಿ ಅಮಾನತು ಗೊಳಿಸಿತು. ಅಲ್ಲದೆ ತನಿಖೆ ವೇಲೆ ಆರೋಪ ಸಾಬೀತಾಗಿದ್ದರಿಂದ ಸೇವೆಯಿಂದಲೇ ಅವರನ್ನು ಉಚ್ಚಾಟಿಲಾಯಿತು. ಇದನ್ನು ಪ್ರಶ್ನಿಸಿ ರಣವೀರ್ ಸಿಂಗ್ ಕಾರ್ಮಿಕ ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ನಡೆಸಿದ ಕೋರ್ಟ್ 1990 ರಲ್ಲಿ ರಣವೀರ್ ಸಿಂಗ್ ಅವರನ್ನು ಉಚ್ಚಾಟಿಸಿದ್ದು ಕಾನೂನು ಬಾಹಿರ ಅಂತ ತೀರ್ಪ ನೀಡಿತು.

ಈ ತೀರ್ಪನ್ನು ಪ್ರಶ್ನಿಸಿ ಡಿಟಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್ ಜನವರಿಯಲ್ಲಿ ರಣವೀರ್ ಸಿಂಗ್ ಪರ ತೀರ್ಪು ನೀಡಿತು. ಜೊತೆಗೆ ಇಲ್ಲಿಯವರೆಗೆ ಕಾನೂನು ಸಮರ ಮಾಡಿದ್ದಕ್ಕಾಗಿ 30 ಸಾವಿರ ರೂಪಾಯಿ ಜೊತೆಗೆ ಗ್ರ್ಯಾಚ್ಯೂಟಿಗೆ 1.28 ಲಕ್ಷ ಹಾಗೂ ಇತರೆ ಭತ್ಯೆ ಸೇರಿ 1.37 ಲಕ್ಷ ನೀಡುವಂತೆ ಆದೇಶಿಸಿದೆ.

ಇಷ್ಟಕ್ಕೇ ಕಾನೂನು ಸಮರ ಮುಗಿದಿಲ್ಲ. ಮುಂದಿನ ವಿಚಾರಣೆ ಮೇ 26 ರಂದು ಕರ್ಕಾರ್ದೂಮ ನ್ಯಾಯಾಲಯದಲ್ಲಿ ನಡೆಯಲಿದೆ. ಕಳೆದ 40 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ರಣವೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಮನಸ್ಸಿನ ನೆಮ್ಮದಿಗಾಗಿ ಹಿರಿಯರು ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದರೆ ನಾನು ಕೋರ್ಟ್ಗೆ ಅಲೆಯುತ್ತಿದ್ದೇನೆ’ ಎಂದು ಹೇಳುತ್ತಾರೆ. ಅಂದ ಹಾಗೆ 5 ಪೈಸೆ ಪ್ರಕರಣಕ್ಕಾಗಿ ರಣವೀರ್ ಸಿಂಗ್ ಇಲ್ಲಿವರೆಗೆ 47 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ.

Leave a comment

Top