An unconventional News Portal.

  ...

  ಅರ್ಧ ಶತಮಾನದ ಕನ್ನಡ ಶಾಲೆಯ ಉಳಿವು ಮತ್ತು ನಿತ್ಯ 60 ಕಿ.ಮೀ ದೂರದ ತಾಯಿ, ಮಗಳ ಪ್ರಯಾಣವೂ…

  ಮಂಗಳೂರು ಹತ್ತಿರದ ಮುಲ್ಕಿಯಲ್ಲಿರುವ ಕನ್ನಡ ಪ್ರಾಥಮಿಕ ಶಾಲೆಯು ಸುಮಾರು ಅರ್ಧ ಶತಮಾನದ ಇತಿಹಾಸ ಹೊಂದಿದೆ. ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವುದು ಕೇವಲ ನಾಲ್ಕು ವಿದ್ಯಾರ್ಥಿಗಳು ಮಾತ್ರ. ಬೋಧನೆಗೆಂದು ಇರುವುದು ಕೇವಲ ಒಬ್ಬರೇ ಶಿಕ್ಷಕರು ಎಂದರೆ ನೀವು ನಂಬಲೇಬೇಕು. ಅಳಿವಿನಿನ ಅಂಚಿನಲ್ಲಿರುವ ಈ ಶಾಲೆ ಇನ್ನೂ ಉಳಿದಿರುವುದು ತಾಯಿ ಮತ್ತು ಮಗಳ ದೃಢ ಸಂಕಲ್ಪದಿಂದ ಎಂದರೆ ಆಶ್ಚರ್ಯ ಅಲ್ಲವೇ?  ಹೌದು, ಈ ಕನ್ನಡ ಶಾಲೆಯನ್ನು ಉಳಿಸುವ ಸಲುವಾಗಿ ದಿನಗೂಲಿ ನೌಕರರಾದ ತಾಯಿ (ಲಕ್ಷ್ಮೀ) ಕಷ್ಟಪಟ್ಟು ಮಗಳನ್ನು ಓದಿಸುತ್ತಿದ್ದಾರೆ. […]

  January 31, 2018
  ...

  ತೈಲಬೆಲೆ ಏರಿಕೆ ಸಾಧ್ಯತೆ; ಮತ್ತೊಂದು ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಲಿದೆಯಾ ದೇಶ?

  ತೈಲ ಬೆಲೆಯ ಹೆಚ್ಚಳ ರಾಷ್ಟ್ರದ ಆರ್ಥಿಕತೆಯ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಹುದು? ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿರುವ ಪ್ರಕಾರ 2018-19ರಲ್ಲಿ ಕಚ್ಚಾ ತೈಲದ ಬೆಲೆಯು ಶೇ. 12ರಷ್ಟು ಏರಿಕೆಯಾಗಲಿದೆ. ಒಂದು ಬ್ಯಾರಲ್ ಕಚ್ಚಾತೈಲದ ಬೆಲೆಯು  ಸಧ್ಯದ ಬೆಲೆಗಿಂತ ಸುಮಾರು 650 ರೂಗಳಷ್ಟು ಏರಿಕೆ ಕಾಣಲಿದೆ. ಈ ಅಂತರರಾಷ್ರ್ಟೀಯ ವಿದ್ಯಮಾನ ಖಂಡಿತವಾಗಿಯೂ ದೇಶದ ಆರ್ಥಿಕತೆಯ ಮೇಲೆ ತೀವ್ರತರದ ಪರಿಣಾಮವನ್ನು ಬೀರಲಿದೆ. ಕಚ್ಚಾ ತೈಲದ ಬೆಲೆ 10 ಡಾಲರ್‌ನಷ್ಟು ಏರಿಕೆಯಾದರೆ ದೇಶದ ಜಿಡಿಪಿ ದರವು ಶೇ.0.2ರಿಂದ ಶೇ.0.3ರಷ್ಟು ಕುಸಿಯಬಹುದು ಎಂದು […]

  January 31, 2018
  ...

  ರಾಜ್ಯ ಆರನೇ ವೇತನ ಆಯೋಗ ಶಿಫಾರಸ್ಸು ಜಾರಿ: ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರದಾನವಾಗಲಿದೆಯಾ ನಿರ್ಧಾರ?

  ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರಕಾರ ರಚಿಸಿದ್ದ ಆರನೇ ವೇತನ ಆಯೋಗ ಇಂದು ವರದಿಯ ಮೊದಲ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ಸರಕಾರಿ ನೌಕರರ ವೇತನವನ್ನು ಶೇಕಡ 30 % ಹೆಚ್ಚಳ ಮಾಡುವತ್ತ ಸರಕಾರ ಹೆಜ್ಜೆಯಿಟ್ಟಿದೆ. ಸರಕಾರದ ಈ ನಿರ್ಧಾರ ಚುನಾವಣೆಯಲ್ಲಿ ಸರಕಾರಿ ನೌಕರರನ್ನು ತನ್ನತ್ತ ಸೆಳೆಯುವಂತೆ ಮಾಡಲಿದೆಯಾ ಎಂಬ ಪ್ರಶ್ನೆಯೀಗ ಮೇಲೆದ್ದಿದೆ. ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜ್ಯ ಸರಕಾರ ಮತದಾರರನ್ನು ತನ್ನತ್ತ ಸೆಳೆಯಲು […]

  January 31, 2018
  ...

  ‘ಸೂಪರ್ ಬ್ಲೂ ಬ್ಲಡ್ ಮೂನ್’: ಒಂದೆಡೆ ಜ್ಯೋತಿಷ್ಯ, ಮತ್ತೊಂದೆಡೆ ವಿಜ್ಞಾನ; ನಿಮ್ಮ ಆಯ್ಕೆ ಯಾವುದು?

  ಖಂಡಗ್ರಾಸ ಸಂಪೂರ್ಣ ಚಂದ್ರಗ್ರಹಣ, ಎಂಟು ರಾಶಿಯವರ ಬದುಕು ಆಗಲಿದೆ ನರಕ. ಚಂದ್ರಗ್ರಹಣ ಹೊತ್ತು ತರಲಿದೆ ಸಾಲು ಸಾಲು ಕಂಟಕ. ಕೆಟ್ಟ ಗ್ರಹಣದಿಂದ ಜನರೊಳಗೆ ಉಂಟಾಗಿದೆ ನಡುಕ. ಈ ಭಯಂಕರ ಚಂದ್ರಗ್ರಹಣ ರಾಶಿ, ನಕ್ಷತ್ರಗಳ ಮೇಲೆ ಬೀರಲಿರುವ ಫಲಾಫಲಗಳೇನು? ತಿಳಿಯಲು ಮುಂದೆ ಓದಿ… ಇದು ಕನ್ನಡ ವೆಬ್‌ಸೈಟ್‌ ಒಂದರಲ್ಲಿನ ಲೇಖನದ ಮೊದಲ ಭಾಗ. ಗುರುವಾರ ನಡೆಯಲಿರುವ ಚಂದ್ರಗ್ರಹಣದ ಬಗ್ಗೆ ಜೋತಿಷ್ಯ ಏನು ಹೇಳುತ್ತದೆ ಎಂಬ ಲೇಖನದ ಆರಂಭಿಕ ಸಾಲುಗಳಿವು. ಪ್ರಾರಂಭದಲ್ಲೇ ದಂಗು ಬಡಿಸುವ ಈ ಸಾಲುಗಳನ್ನು ಓದಿದ ನಂತರ […]

  January 31, 2018
  ...

  ಧಾರ್ಮಿಕ ರಾಜಕಾರಣದ ಖಡಕ್ ಮುಸ್ಲಿಂ ಧ್ವನಿ ಓವೈಸಿ; ರಾಜ್ಯಕ್ಕೆ ಬಂದರೆ ಏನಾಗಬಹುದು ಊಹಿಸಿ!

  “ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಜೊತೆಗೆ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಇರುವ ಹಿನ್ನಲೆಯಲ್ಲಿ ಮತ ವಿಭಜನೆ ಮಾಡುವ ಸಲುವಾಗಿ ಅವರು ಓವೈಸಿ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ಇಂತಹ ಮಾರ್ಗಗಳು ಹೊಸದೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಇಂಥ ಮಾರ್ಗಗಳನ್ನು ಅನುಸರಿಸಿಯೇ ಅದು ಅಧಿಕಾರಕ್ಕೆ ಬಂದಿದೆ. ಅಲ್ಲಿನ ಮುಸ್ಲಿಮ್ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಬಿಜೆಪಿಯು ಒಳಮೈತ್ರಿ ಮಾಡಿಕೊಂಡಿತ್ತು. ಈಗ ಕರ್ನಾಟಕದಲ್ಲೂ ಅದೇ ತಂತ್ರವನ್ನು ಅನುಸರಿಸಲು ಬಿಜೆಪಿ ಮುಂದಾಗಿದೆ,” ಎಂದು ಎರಡು […]

  January 31, 2018
  ...

  ನಕಲಿ ಸಿಎಚ್‌ಎಸ್‌; ಅಸಲಿ ಚುನಾವಣಾ ಪೂರ್ವ ಸಮೀಕ್ಷೆ: ಜೆಡಿಎಸ್‌ ಅಂಗಳಕ್ಕೆ ಬಂದು ನಿಂತ ತನಿಖೆ!

  ಜನವರಿ ಆರಂಭದಲ್ಲಿ ಸಿಎಚ್‌ಎಸ್‌ ಎಂಬ ಸಂಸ್ಥೆಯ ಹೆಸರಿನಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ಹೊರತರಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಸಮೀಕ್ಷೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಮಾಡಿಸಿದ್ದಾರೆ ಎಂಬುದಾಗಿ ಸಂಸ್ಥೆ ಹೇಳಿತ್ತು. ಆದರೆ ಸಮೀಕ್ಷೆಗೂ ತಮಗೂ ಸಂಬಂಧವಿಲ್ಲ ಎಂದು ಪರಮೇಶ್ವರ್‌ ಪತ್ರಿಕಾ ಪ್ರಕಟಣೆ ನೀಡಿದ್ದರು; ನಂತರ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿರುವ ಪೊಲೀಸರಿಗೆ ಸಮೀಕ್ಷೆಯ ಹಿಂದೆ ಜೆಡಿಎಸ್‌ ಪಕ್ಷದ ಕೈವಾಡ ಇರುವ ಶಂಕೆಯಿದೆ. ಈ ಮೂಲಕ ಚುನಾವಣೆಗೂ […]

  January 31, 2018
  ...

  ದೆಹಲಿಯಲ್ಲಿ ಎಂಟು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ: ಎತ್ತ ಸಾಗುತ್ತಿದೆ ‘ವಿಶ್ವಗುರು’?

  ರಾಷ್ಟ್ರದ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ದೆಹಲಿಯ ಶಾಲಿಮಾರ್ ಬಾಗ್‌ ಪ್ರದೇಶದಲ್ಲಿ 8 ತಿಂಗಳ ಹೆಣ್ಣು ಮಗುವಿನ ಮೇಲೆ 28 ವಯಸ್ಸಿನ ಸೋದರ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಾಯಿಯು ತಮ್ಮ ಮಗುವನ್ನು ಸಹೋದರ ಸಂಬಂಧಿ ಮನೆಯಲ್ಲಿ ಬಿಟ್ಟು ಗಂಡನೊಂದಿಗೆ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಹಸುಗೂಸಿನ ಮೇಲೆ […]

  January 30, 2018
  ...

  ಆಕಾಶಕಾಯಗಳ ನೆರಳು ಬೆಳಕಿನಾಟ: ಒಂದೂವರೆ ಶತಮಾನದ ನಂತರ ಮತ್ತೆ ‘ಕೆಂಪು ಚಂದಿರ’

  ಅನೇಕರು ‘ಸೂಪರ್ ಮೂನ್’ನ್ನು ಈಗಾಗಲೇ ಕಣ್ತುಂಬಿಕೊಂಡಿರಬಹುದು; ದೊಡ್ಡದಾದ ಚಂದ್ರನನ್ನು ಕಂಡು ಆಶ್ಚರ್ಯ ಪಟ್ಟಿದ್ದಿರಬಹುದು. ಆದರೆ ಬುಧವಾರ ಮತ್ತೊಮ್ಮೆ ನಮ್ಮನ್ನೆಲ್ಲಾ ಚಕಿತಗೊಳಿಸಲು ಅಣಿಯಾಗಿದ್ದಾನೆ. ನಾಳೆ ಕೆಂಪು ಬಣ್ಣದ ದೊಡ್ಡ ಗುಲಾಬಿ ಹೂವಿನಂತೆ ಚಂದಿರ ಕಾಣಿಸಲಿದ್ದಾರೆ. ಅದಕ್ಕೆ ವಿಜ್ಞಾನಿಗಳು ಕೊಟ್ಟಿರುವ ಹೆಸರು ‘ಸೂಪರ್ ಬ್ಲೂ ಬ್ಲಡ್ ಮೂನ್’. ಒಂದೂವರೆ ಶತಮಾನದ ನಂತರ, ಮತ್ತೊಮ್ಮೆ ಹೀಗೊಂದು ಚಂದಿರ ಮುಖವನ್ನು ನಾವು ಕಾಣಬಹುದಾಗಿದೆ. ಇದು ವಿಜ್ಞಾನದ ಕೌತುಕವೇ ಹೊರತು, ಜ್ಯೋತಿಷ್ಯ- ಭವಿಷ್ಯ, ಕರ್ಮಕಾಂಡ ಯಾವುದೂ ಅಲ್ಲ ಎನ್ನುತ್ತಿದೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- […]

  January 30, 2018
  ...

  ‘ಕೇಂದ್ರ ಬಜೆಟ್ 2018-19’: ಜೇಟ್ಲಿ ಮಂಡಿಸಲಿರುವ ಐದನೇ ಮುಂಗಡ ಪತ್ರ ಮತ್ತು ಆರ್ಥಿಕ ಸಮೀಕ್ಷೆ

  ಹಣಕಾಸು ಸಚಿವ ಅರುಣ್ ಜೇಟ್ಲಿ ಇದೇ ಗುರುವಾರ 2018-19ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಇದು ಸತತವಾಗಿ ಅವರು ಮಂಡಿಸುತ್ತಿರುವ 5 ನೇ ಬಜೆಟ್  ಬಜೆಟ್‌. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌  ಕೂಡ ಇದಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಕೆಲವು ಸಚಿವರ ಸ್ಥಾನಪಲ್ಲಟವಾಗಿತ್ತು. ಆದರೆ ಅರುಣ್ ಜೇಟ್ಲಿ ಮೊದಲಿನಿಂದಲೂ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಗಮನಾರ್ಹ. ಈ ಬಾರಿ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಭಾರತದ ಅಭ್ಯುದಯದ ಕುರಿತು […]

  January 30, 2018
  ...

  ‘ಕೈಗಳಿವೆ, ಬೆರಳುಗಳಿಲ್ಲ; ಕಾರ್ ಓಡಿಸ್ತೀನಿ, ಡಿಎಲ್‌ ಇಲ್ಲ’: ವಿಶೇಷ ಚೇತನರಿಗೆ ಇಲ್ಲಿ ಕಾನೂನೇ ತೊಡಕು!

  “ನಮ್ಮ ತಂದೆ ಬಂಡೆ ಒಡೆಯುವ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಸಿಡಿಮದ್ದುಗಳನ್ನು ಬಳಸುತ್ತಿದ್ದರು. ಒಮ್ಮೆ ಡೈನಾಮೈಟ್‌ನ್ನು ಮನೆಯಲ್ಲಿ ಇಟ್ಟಿದ್ದರು. ಆಗ ನನಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಅದರ ಅಪಾಯವೇ ತಿಳಿದಿರಲಿಲ್ಲ. ಸ್ನೇಹಿತರೆಲ್ಲರೂ ಅದರ ಜೊತೆಗೆ ಆಟ ಆಡಲು ಪ್ರಾರಂಭಿಸಿದೆವು. ಅದೊಂದು ದುರಾದೃಷ್ಟದ ದಿನ. ಡೈನಾಮೈಟ್‌ ಸಿಡಿದು ನನ್ನ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಆವತ್ತಿನ ಅಪಘಾತ ನನಗೆ ಇನ್ನೂ ಕಣ್ಮುಂದೆ ಕಟ್ಟಿದಂತಿದೆ,” ಎಂದರು ಹನುಮಂತ.  ಹೀಗೆ ಹೇಳುವಾಗ ಅವರ ಕಣ್ಣುಗಳಲ್ಲಿ ಸಣ್ಣ ನೀರಿನ ಪೊರೆ ಇತ್ತು; ಮಾತುಗಳು ಹೃದಯದಿಂದ ಹೊರಡುತ್ತಿದ್ದವು. ಬೆಂಗಳೂರಿನ […]

  January 29, 2018

Top