An unconventional News Portal.

  ...

  ಆಂಗ್ ಸಾನ್ ಸೂಕಿ; ರೊಹಿಂಗ್ಯಾ ವಿಚಾರದಲ್ಲಿ ಯಾಕೆ ‘ಮೂಕಿ’?

  ರೋಹಿಂಗ್ಯರ ಮೇಲೆ ನಡೆದ ಹಿಂಸಾಚಾರ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಲು ಆಂಗ್ ಸಾನ್ ಸೂಕಿ ನಿರಾಕರಿಸಿದ್ದಾರೆ. ‘ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರ ಮತ್ತು ಲೈಂಗಿಕ ಹಿಂಸೆಯ ಕುರಿತು ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ,’ ಎಂದು ಆಂಗ್ ಸಾನ್ ಸೂಕಿ ಕಳೆದ ವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್‌ಗೆ ಕಳುಹಿಸಿದ ಪತ್ರ ಈಗ ಬಹಿರಂಗವಾಗಿದೆ. ಈ ಮೊದಲು, “ಎಲ್ಲ ಮುಸ್ಲಿಮರೂ ದೇಶವನ್ನು ತೊರೆದಿಲ್ಲ. ಅನೇಕ ಮುಸ್ಲಿಮರು ಇಲ್ಲಿಯೇ ಉಳಿದಿದ್ದಾರೆ. ಈ ಕುರಿತು ಪರಿಶೀಲಿಸಲು ಅಂತಾರಾಷ್ಟ್ರೀಯ ಸಮಿತಿಗೆ […]

  December 27, 2017
  ...

  ‘ಹೆಗಡೆ ಹೇಳಿಕೆ ವಿವಾದ’: ಸಂಸತ್‌ನಲ್ಲಿ ಗದ್ದಲ; ಸಾಗರದಲ್ಲಿ ದೂರು ದಾಖಲು

  ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಬಾಲಿಶ ಹೇಳಿಕೆ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿದೆ. ‘ಸಂವಿಧಾನವನ್ನು ಬದಲಿಸುವ ನಾವು ಬಂದಿದ್ದೇವೆ’ ಎಂಬ ಹೆಗಡೆ ಹೇಳಿಕೆ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರಮಟ್ಟದ ಸುದ್ದಿ ಮಾಧ್ಯಮಗಳ ಗಮನ ಸೆಳೆದಿತ್ತು. ಬುಧವಾರ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ಹೆಗಡೆಯನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಬೆಳಗ್ಗೆ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆ, ಅನಂತ್ ಕುಮಾರ್ ಹೆಗಡೆ ಹೇಳಿಕೆ ಚರ್ಚೆಗೆ ನಾಂದಿ ಹಾಡಿತು. ಈ ವಿಚಾರದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ […]

  December 27, 2017
  ...

  ಮತ್ತೊಬ್ಬ ಮಾನವಹಕ್ಕು ಹೋರಾಟಗಾರನನ್ನು ಜೈಲಿಗಟ್ಟಿದ ಚೈನಾ ಕಮ್ಯುನಿಸ್ಟ್ ಸರಕಾರ

  ಆನ್‌ಲೈನ್‌ನಲ್ಲಿ ‘ಸೂಪರ್ ವಲ್ಗರ್ ಬುಚ್ಚರ್’ ಎಂಬ ಹೆಸರಿಂದ ಸರ್ಕಾರದ ನೀತಿಗಳನ್ನು ಪ್ರಶ್ನಿಸಿ, ಸೂಕ್ಷ್ಮ ಬರಹಗಳ ಮುಖಾಂತರ ಹೆಸರು ಗಳಿಸಿದ್ದ ಮಾನವಹಕ್ಕುಗಳ ಹೋರಾಟಗಾರ ವು-ಗನ್‌ಗೆ ಚೈನಾ ಸರಕಾರ ಮಂಗಳವಾರ ಎಂಟು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ವೂ-ಗನ್ ತಮ್ಮ ಬ್ಲಾಗ್‌ನಲ್ಲಿ ಬರೆಯುವುದರ ಜೊತೆಗೆ ಬೀದಿಗಳಲ್ಲಿ ವಿನೂತನ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಟೈಆನ್ಜಿನ್ ದ್ವಿಸದಸ್ಯತ್ವ ಪೀಠವು ಇವರಿಗೆ ಸರಕಾರದ ನಡೆಗಳನ್ನು ಪ್ರಶ್ನಿಸಿದ ಆರೋಪದ ಮೇಲೆ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಮುಂಚೆಯೇ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟಿಸಿದ್ದಕ್ಕಾಗಿ ಪೂರ್ವ […]

  December 27, 2017
  ...

  ಕಾವೇರಿ ವಿಚಾರದಲ್ಲಿ ಒಕ್ಕಟ್ಟು; ಮಹದಾಯಿ ವಿಚಾರದಲ್ಲಿ ಬಿಕ್ಕಟ್ಟು: ಇದ್ಯಾವ ಸೀಮೆ ‘ನೀರಿನ ರಾಜಕೀಯ’?

  ಮೂರು ದಶಕಗಳ ನೀರು ಹಂಚಿಕೆ ವಿವಾದಕ್ಕೆ ಮೂರು ದಿನಗಳಲ್ಲಿ ಪರಿಹಾರ ಸಿಗದಿದ್ದರೂ; ಚುನಾವಣಾ ಹಿನ್ನಲೆಯಲ್ಲಿ ರಾಜ್ಯದ ಎರಡು ಪ್ರಮುಖ ಪಕ್ಷಗಳಿಗೆ ಮಹಾದಾಯಿ ವಿಚಾರ ದಾಳವಾಗಿ ಬಳಕೆಯಾಗಿದೆ. ಕಾವೇರಿ ವಿಚಾರದಲ್ಲಿ ದೇವರಾಜ್‌ ಅರಸು ಸರಕಾರದಿಂದ ಹಿಡಿದು ಮೊನ್ನೆಮೊನ್ನೆವರೆಗೂ ಪಕ್ಷಾತೀತವಾಗಿ ದನಿ ಎತ್ತಿದ ರಾಜಕಾರಣಿಗಳೀಗ, ಮಹದಾಯಿ ನೀರಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿಗೆ ಬಂದ ರೈತರನ್ನು ಬೀದಿ ಬೀದಿ ಸುತ್ತಿಸುವ ‘ಹೀನ ರಾಜಕೀಯ’ವನ್ನು ಯಶಸ್ವಿಯಾಗಿ ಮಾಡಿಮುಗಿಸಿದ್ದಾರೆ. ಈ ಮೂಲಕ ಕಾವೇರಿಯಲ್ಲಿ ಒಗ್ಗಟ್ಟು, ಚುನಾವಣೆ ಹತ್ತಿರ ಬಂದಾಗ ಮಹಾದಾಯಿ ಬಿಕ್ಕಟ್ಟು ಎಂದು ಬಿಂಬಿಸುವ ಪ್ರಯತ್ನಕ್ಕೆ […]

  December 27, 2017
  ...

  ‘ಅಂಬೇಡ್ಕರ್ ಬದುಕಿದ್ದರೆ ದಲಿತರ ಕೈಗೆ ಬಂದೂಕು ಕೊಡಿ ಅನ್ನುತ್ತಿದ್ದರು’: ಕೋಟಿಗಾನಹಳ್ಳಿ ರಾಮಯ್ಯ ಸಂದರ್ಶನ

  ಮೊದಲಿದ್ದ ಖದರ್‌ನ್ನು ಕಳೆದುಕೊಂಡಿದ್ದು ದೇಹ ಮಾತ್ರ. ಅದೇ ಹಳೆ ಹೋರಾಟದ ದಿನಗಳನ್ನು ನೆನಪಿಸುವ ದನಿ, ಘೋಷಣೆಗಳು ಹಾಗೂ ಕಾಲಕ್ಕಿಂತ ಮುಂದಿರುವ ಆಲೋಚನೆಗಳು. ‘ನನ್ನ ಕೈಗೊಂದು ಬಂದೂಕು ಕೊಡಿ, 1000 ಬುಲೆಟ್ ಕೊಡಿ, ಅದ್ಯಾವನು ದಲಿತ ಹೆಣ್ಣು ಮಕ್ಕಳ ಮೈ ಮೊಟ್ಟುತ್ತಾರೋ ನೋಡೊಣ..’ ಎಂದರು ಕೋಟಗಾನಹಳ್ಳಿ ರಾಮಯ್ಯ.  ಬಿಳಿ ಅಂಗಿ, ಕಾಟನ್ ಪ್ಯಾಂಟ್‌, ಮೇಲೊಂದು ನೀಲಿ ಬಣ್ಣದ ಜರ್ಕಿನ್ ತೊಟ್ಟಿದ್ದ ಕೆ. ರಾಮಯ್ಯ ಮಾತನಾಡತೊಡಗಿದರು. ಕೋಲಾರದ ಬೆಟ್ಟದ ಬುಡದಲ್ಲೀಗ ಅವರೊಂದು ತಾತ್ಕಾಲಿಕ ಕಚೇರಿ ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಕೋಲಾರದ ಜಿಲ್ಲಾಧಿಕಾರಿಗೆ ‘ನನಗೊಂದು ಬಂದೂಕು […]

  December 27, 2017
  ...

  ‘ಕ್ರೈಂ ಇನ್ ಜಪಾನ್’: ಪುಟ್ಟ ದೇಶಕ್ಕೆ ಶಾಕ್ ನೀಡಿದ ಹೊಸ ಅಪರಾಧ ಪ್ರಕರಣ!

  ಜಪಾನ್; ಇತರೆ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಹೋಲಿಸಿದಾಗ ಅತೀ ಕಡಿಮೆ ಅಪರಾಧ ಪ್ರಕರಣಗಳನ್ನು ಹೊಂದಿರುವ ದೇಶ. ಆದರೆ ಮಂಗಳವಾರ ಮಾನವೀಯತೆಯೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರ ಜಪಾನಿನ ಒಸಾಕಾ ಪ್ರದೇಶದಿಂದ ವರದಿಯಾಗಿದೆ. ಸಾಮಾನ್ಯವಾಗಿ ಅಪರಾಧ ಸುದ್ದಿಗಳಿಗೆ ಆದ್ಯತೆ ನೀಡದ ಇಲ್ಲಿನ ಮಾಧ್ಯಮಗಳಲ್ಲೀಗ ಮಗಳನ್ನು 15 ವರ್ಷಗಳ ಕಾಲ ಬಂಧನದಲ್ಲಿಟ್ಟು, ಕೊಲೆ ಮಾಡಿದ ದಂಪತಿಯ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದೆ. 33 ವರ್ಷ ಪ್ರಾಯದ ಮಗಳನ್ನು ಚಿಕ್ಕ ಕೊಠಡಿಯೊಂದರಲ್ಲಿ ಸುಮಾರು 15 ವರ್ಷಗಳಷ್ಟು ಹಿಂದೆಯೇ ಕೂಡಿ ಹಾಕಿದ ತಂದೆ ತಾಯಿಯರನ್ನು ನೆಯಾಗಾವಾದ ಪೋಲಿಸ್ […]

  December 26, 2017
  ...

  ‘ಬಾಟಲಿ ಹಳೇದೆ, ಕುಡಿಸಲು ಬಂದವರು ಹೊಸಬರು ಅಷ್ಟೆ’: ಸಂವಿಧಾನ ತಿದ್ದುಪಡಿ ಅಜೆಂಡಾ ಮತ್ತು ಮಾಧ್ಯಮಗಳ ಗಳಗಂಟ!

  “ಡಾ.ಬಿ.ಆರ್.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ.” ಇದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿರುವ ಆರ್ಎಸ್‌ಎಸ್ 1949ರಲ್ಲಿ ತನ್ನ ಮುಖವಾಣಿ ಪತ್ರಿಕೆಯಲ್ಲಿ ಬರೆದುಕೊಂಡದ್ದು. “ಹಿಂದೂಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು,” ಹೀಗೆ ಬರೆದುಕೊಂಡಿದ್ದು ಸಂಘಪರಿವಾರದ ಗುರೂಜಿ ಗೋಳ್ವಾಲ್ಕರ್. ಹಾಗೆಯೇ, ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, ‘ಹಿಂದುತ್ವ’ಪದ ಹುಟ್ಟು ಹಾಕಿದ […]

  December 26, 2017
  ...

  ‘ಒಂದು ಪದ; ನಾನಾ ವ್ಯಾಖ್ಯಾನ’: ವಿವಾದ ಪಕ್ಕಕ್ಕಿಡಿ, ಇಷ್ಟಕ್ಕೂ ‘ಜಾತ್ಯಾತೀತ’ ಎಂದರೆ ಏನರ್ಥ ನೋಡಿ!

  ಏನೇ ಹೇಳಿ, ಚುನಾವಣೆ ಹತ್ತಿರ ಬಂದಾಗ ವಿವಾದಿತ ಹೇಳಿಕೆಗಳು, ಬೆಂಕಿ ಹಚ್ಚುವ ಮಾತುಗಳು, ಉದ್ರೇಕಕಾರಿ ಅಜೆಂಡಾಗಳು ಮುನ್ನೆಲೆಗೆ ಬರುವುದು ಸಾಮಾನ್ಯ. ಕೆಲವು ದಿನಗಳ ಹಿಂದೆ, ರಾಜಕಾರಣಿಗಳ ಪರಸ್ಪರ ಏಕ ವಚನ ಪ್ರಯೋಗವೇ ಸುದ್ದಿಯಲ್ಲಿತ್ತು. ರಾಜಕೀಯದಲ್ಲಿರುವವರು ನಾಲಿಗೆ ಹರಿಯ ಬಿಡಬಾರದು ಎಂದು ಕಿವಿಮಾತುಗಳು ಕೇಳಿಬಂದಿದ್ದವು. ಇದೀಗ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ‘ಜಾತ್ಯಾತೀತ’ ಎಂಬ ಪದವನ್ನು ಎಳೆದು ತಂದಿದ್ದಾರೆ. ಇಷ್ಟಕ್ಕೂ ಈ ಜ್ಯಾತ್ಯಾತೀತ ಎಂದರೇನು? ಇದೊಂದನ್ನು ಬಿಟ್ಟು ಉಳಿದೆಲ್ಲಾ ಚರ್ಚೆಗಳು ಅದರ ಸುತ್ತ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಸಂವಿಧಾನದ ಮೊದಲ […]

  December 26, 2017
  ...

  ಕಂಬಿ ಹಿಂದಿನ ಕತೆ- 5: ಭೂ ಮಾಲೀಕರ ಕೆಂಗಣ್ಣಿಗೆ ಬಿದ್ದ ಟೀನೇಜ್ ಲವ್; ಜೈಲಿನಲ್ಲಿ ಕಮರಿದ ಅಂತರ್ಜಾತಿ ಪ್ರೀತಿ!

  ಅವನ ಪ್ರಾಯ 19 ವರ್ಷಗಳು.ರಾಯಚೂರು ಜಿಲ್ಲೆಯ ಒಂದು ಕುಗ್ರಾಮ ಆತನ ಊರು. ಆ ಹಳ್ಳಿಗೆ ನೇರ ಬಸ್ ಸೌಕರ್ಯವಿಲ್ಲ. ಪಕ್ಕದ ಊರಿನವರೆಗೆ ಬೆಳಿಗ್ಗೆ ಮತ್ತು ಸಂಜೆ ಕೇವಲ ಒಂದು ಬಸ್ ಬಂದು ಹೋಗುತ್ತದೆ. ಅಲ್ಲಿಂದ ಇವನ ಊರಿಗೆ ಮೂರು ಕಿಲೋ ಮೀಟರುಗಳ ದೂರ. ಈತನದು ಬಡ ರೈತ ಕುಟುಂಬ. ಮೂರು ಎಕರೆಯಷ್ಟು ಒಣ ಭೂಮಿ ಈತನ ಕುಟುಂಬಕ್ಕಿದೆ. ಬೆಳೆ ಕೈಗೆ ಬರುವುದು ಅಷ್ಟಕ್ಕಷ್ಟೆ. ದಕ್ಷಿಣ ಕರ್ನಾಟಕದ ಒಣ ಭೂಮಿಗೂ ರಾಯಚೂರು ಭಾಗದ ಒಣಭೂಮಿಗೂ ಅಜಗಜಾಂತರ ವ್ಯತ್ಯಾಸ. ಬೇರೆ […]

  December 25, 2017
  ...

  ‘ಕಣದಲ್ಲಿ ವಿಶೇಷ ಅಭ್ಯರ್ಥಿ’: ಜಯನಗರದಲ್ಲಿ ರವಿಕೃಷ್ಣಾ ರೆಡ್ಡಿ ಮತ ಪ್ರಚಾರ; ಪರ್ಯಾಯ ರಾಜಕೀಯ ಮತ್ತು ಜನಸ್ಪಂದನೆ

  ಎಲ್ಲಾ ಮುಖ್ಯರಸ್ತೆಗಳು, ಒಳದಾರಿಗಳು, ಚಿಕ್ಕಪುಟ್ಟ ಓಣಿಗಳ್ಯಾವುದನ್ನೂ ಬಿಡದೇ, ಪ್ರತಿಯೊಂದು ಮನೆಬಾಗಿಲನ್ನು ತಟ್ಟಿ ಮನೆಯವರು ಹೊರ ಬರುವವರೆಗೂ ಕಾದು, ಅವರೊಟ್ಟಿಗೆ ಮಾತನಾಡುವುದು, ರಸ್ತೆಯಲ್ಲಿನ ಎಲ್ಲಾ ವಾಹನಗಳಿಗೆ ಚಿಕ್ಕ ಕರಪತ್ರವೊಂದನ್ನು ಸಿಕ್ಕಿಸುವುದು, ದಾರಿಯುದ್ದಕ್ಕೂ ಜನರೊಡನೆ ಮಾತನಾಡುವುದು, ಭ್ರಷ್ಟಾಚಾರವಿರದ ಆಡಳಿತಕ್ಕೆ ದಾರಿ ಮಾಡಿಕೊಡಬೇಕೆಂದು ಮನವಿ ಮಾಡುವುದು… ಇದು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತೀನಿ ಎಂದು ಈಗಾಗಲೇ ಘೋಷಿಸಿರುವ ರವಿಕೃಷ್ಣಾ ರೆಡ್ಡಿ ಕೈಗೊಂಡಿರುವ ಪ್ರಚಾರದ ವೈಖರಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ […]

  December 25, 2017

Top