An unconventional News Portal.

  ...

  ನಿರಾಶ್ರಿತರ ಶಿಬಿರದಲ್ಲಿ ನಡೀತು ‘ನಿಖ್ಹಾ’; ಜಗತ್ತಿನ ಗಮನ ಸೆಳೆಯಿತು ರೋಹಿಂಗ್ಯಾ ಜೋಡಿಯ ಹೊಸ ಹೆಜ್ಜೆ

  ಮದುವೆ ಅನ್ನೋದು ಎರಡು ಜೀವಗಳನ್ನ ಬೆಸೆಯುವ ಮಧುರ ಸಂಬಂಧ ಅಂತಾ ಸಮಾಜ ನಂಬಿದೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ನಂಬುವವರೂ ಇದ್ದಾರೆ. ಜನ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾಗ ಮದುವೆ ಅನ್ನೋ ಬಂಧನಕ್ಕೆ ಒಳಗಾಗೋದು ಸಾಮಾನ್ಯ. ಮದುವೆ ಆಗಬೇಕು ಅಂದರೆ ಉತ್ತಮ ನೌಕರಿ ಸಿಗಬೇಕು ಅಂತಾ ಕಾಯುವವರೂ ಇದ್ದಾರೆ. ಆದರೆ, ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ನಡೆದ ಈ ಮದುವೆ ಎಲ್ಲರಿಗೂ ಅಚ್ಚರಿ ತಂದಿದೆ. ಬದುಕಿನ ಅಸ್ತಿತ್ವವೇ ಅಲುಗಾಡುತ್ತಿರುವ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ವಿಶ್ವದ ಕುತೂಹಲದ ಕೇಂದ್ರವಾಗಿದೆ. ಸೀರೆಗಳಿಂದ ಸುತ್ತುವರಿದಿರುವ ಪುಟ್ಟ […]

  December 31, 2017
  ...

  ‘ರುಸಾರಿ’ ಉಸಾಬರಿ ಸಾಕಿನ್ನು…: ಇರಾನ್ ಮಹಿಳೆಯರಿಗೆ ಅಧ್ಯಕ್ಷರ ನ್ಯೂ ಇಯರ್ ಗಿಫ್ಟ್‌

  ಇರಾನಿನ ಸುಧಾರಣಾವಾದಿ ಮನಸ್ಥಿತಿಯ ಅಧ್ಯಕ್ಷ ಹಸ್ಸನ್ ರೌಹಾನಿ ಕೈಗೊಂಡಿರುವ ನಿರ್ಧಾರ ವಿಶ್ವದೆಲ್ಲೆಡೆ ಅಚ್ಚರಿ ಕಾರಣವಾಗಿದೆ. ದೇಶದಲ್ಲಿ ಮಹಿಳೆಯರ ಉಡುಪುಗಳ ಮೇಲಿದ್ದ ನಿರ್ಧಾರವನ್ನು ಸಡಿಲಿಸಿರುವ ರೌಹಾನಿ, ಲಿಂಗ ಸಮಾನ ವಸ್ತ್ರ ಸಂಹಿತೆ ಕಡೆಗೆ ಹೆಜ್ಜೆ ಮುಂದಿಟ್ಟಿದ್ದಾರೆ. ಸದ್ಯ ಇರಾನ್‌ ಒಳಗೆ ನಡೆಯುತ್ತಿರುವ ಆಂತರಿಕ ಪ್ರತಿರೋಧ, ಪ್ರತಿಭಟನೆಗಳ ನಡುವೆ, ವರ್ಷದ ಕೊನೆಯಲ್ಲಿ ಅರಬ್‌ ದೇಶವೊಂದರಿಂದ ಸಂತಸದ ಸುದ್ದಿ ಬೀಳಲು ಕಾರಣರಾಗಿದ್ದಾರೆ. ಇರಾನಿನಲ್ಲಿದ್ದ ವಸ್ತ್ರಸಂಹಿತೆಯ ಪ್ರಕಾರ ಮಹಿಳೆಯರು ಮನೆಯಿಂದ ಹೊರಬರುವ ಮುನ್ನ ‘ರುಸಾರಿ’ ಎಂಬ ಹಿಜಾಬ್ ತರಹದ ಬಟ್ಟೆಯನ್ನು, ‘ಮಂಟಾವು’ ಹೆಸರಿನ ಉದ್ದ […]

  December 30, 2017
  ...

  ‘ರಗ್ಬಿ ತರಬೇತಿ’ಗಾಗಿ ವಿದೇಶಕ್ಕೆ ಹೋದ ಮಕ್ಕಳು: ಕರ್ನಾಟಕದಲ್ಲಿ ಮಾನವ ಕಳ್ಳಸಾಗಣೆಯ ಬೇರುಗಳು

  ವರ್ಷದ ಕೊನೆಯಲ್ಲಿ ಉತ್ತರ ಭಾರತದಿಂದ ಮಕ್ಕಳ ಕಳ್ಳಸಾಗಣೆ ಜಾಲದ ಕುರಿತು ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಭಾರತದಿಂದ 25 ಮಕ್ಕಳನ್ನು ಕ್ರೀಡಾಕೂಟದ ನೆಪದಲ್ಲಿ ಫ್ರಾನ್ಸ್‌ಗೆ ಕರೆಸಿಕೊಂಡು, ಅಲ್ಲಿ ಮಾರಾಟಕ್ಕಿಟ್ಟ ತಂಡವನ್ನು ಪತ್ತೆಹಚ್ಚಲಾಗಿದೆ. ಫ್ರಾನ್ಸ್ ದೇಶದ  ಪೊಲೀಸ್ ಇಂಟರ್ ಪೋಲ್‌ನಿಂದ ಮಾಹಿತಿ ಪಡೆದ ಸಿಬಿಐ ಭಾರತದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.  ಲಲಿತ್ ಡೇವಿಡ್ ಡೀನ್, ಸಂಜೀವ್ ರಾಜ್ ಮತ್ತು ವರುಣ್ ಚೌಧರಿ ವಶದಲ್ಲಿರುವ ಆರೋಪಿಗಳು. ಇವರುಗಳು ದೆಹಲಿ, ಫರೀಯಾಬಾದ್ ಮೂಲದವರು ಎನ್ನಲಾಗಿದೆ. ಆರೋಪಿಗಳ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಮಾನವ ಕಳ್ಳಸಾಗಾಣಿಕೆಗೆ […]

  December 30, 2017
  ...

  ‘ಕವಿಶೈಲ ನೆನಪಿಸಿದ ಡೂಡಲ್’: ಕುವೆಂಪು ಗೂಗಲ್‌ ಲೋಗೋ ವಿನ್ಯಾಸಕ್ಕೆ ಅನುಮತಿ ನೀಡಿದ್ದು ಮಗಳು ತಾರಿಣಿ!

  ರಾಷ್ಟ್ರಕವಿ ಕುವೆಂಪು 113ನೇ ಜನ್ಮದಿನಕ್ಕೆ ಗೂಗಲ್ ಸರ್ಚ್‌ ಎಂಜಿನ್‌ ಅಚ್ಚರಿಯ ಡೂಡಲ್ ನೀಡಿದೆ. ಬಂಡೆಗಲ್ಲಿನ ಮೇಲೆ ಕುಳಿತು ಬರೆಯುತ್ತಿರುವ ಕುವೆಂಪು, ಮಲೆನಾಡಿನ ಪರಿಸರ, ಕಾಜಾಣ ಹಾಗೂ ಕವಿಶೈಲವನ್ನು ಹೋಲುವ ಚಿತ್ರದಲ್ಲಿ ಕನ್ನಡದಲ್ಲಿ ಬರೆದ ‘ಗೂಗಲ್’ ಅಕ್ಷರಗಳು ಗಮನ ಶುಕ್ರವಾರ ಗಮನ ಸೆಳೆದಿವೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಕಾದಂಬರಿಕಾರ ಎಂಬ ಪರಿಚಯ ಲೇಖನಗಳ ಜತೆಗೆ, ಸದರಿ ಡೂಡಲ್ ಹಿನ್ನೆಲೆಯಲ್ಲಿ ಒಂದಷ್ಟು ಸುದ್ದಿಗಳೂ ಸಿಗುತ್ತವೆ. ಒಟ್ಟಾರೆ, ಕಳೆದ 17 ವರ್ಷಗಳಿಂದ ಕುವೆಂಪು ಅವರ ಮೂಲ […]

  December 29, 2017
  ...

  ಆನ್‌ಲೈನ್ ಪತ್ರಕರ್ತನ ಮೊದಲ ಅಸೈನ್‌ಮೆಂಟ್: ಸಿಐಡಿ ‘ಸೈಬರ್ ಕ್ರೈಂ ಠಾಣೆ’ ದರ್ಶನ!

  ‘ಸಮಾಚಾರ’ಕ್ಕೆ ಸೇರಿದ ನಂತರ, ನನ್ನ ಎರಡನೇ ಅಸೈನ್‌ಮೆಂಟ್: ಸೈಬರ್ ಕ್ರೈಂ ಪೊಲೀಸ್ ಠಾಣೆ ಪಾಲಿಗೆ ಮೊದಲ ಭೇಟಿ. 2017ರಲ್ಲಿ ದಾಖಲಾದ ಸೈಬರ್ ಕ್ರೈಂಗಳ ಮಾಹಿತಿ ನೀಡುವ ಸ್ಟೋರಿ ಮಾಡಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಸಿಐಡಿ ಕೇಂದ್ರ ಕಛೇರಿಯ ಒಳಗೆ ಇರುವ ಸೈಬರ್ ಕ್ರೈಂ ಪೊಲೀಸ್‌ ಠಾಣೆ ಕಡೆ ಹೊರಟೆ. ಅಲ್ಲಿ ಡಿವೈಎಸ್ಪಿ ಶರತ್ ಭೇಟಿ ಮತ್ತು ಒಂದಷ್ಟು ಮಾಹಿತಿ ಪಡೆಯುವುದು ಉದ್ದೇಶವಾಗಿತ್ತು. ಅವರಿಗೆ ಏನೇನು ಪ್ರಶ್ನೆಗಳನ್ನು ಕೇಳಬೇಕು? ಮನಸು ಲೆಕ್ಕ ಹಾಕುತ್ತಿತ್ತು. ಮಧ್ಯಾಹ್ನ ಸುಮಾರು 3:30ರ […]

  December 29, 2017
  ...

  ಬುದ್ದಿಜೀವಿಗಳು ಗಂಜಿ ಗಿರಾಕಿಗಳು, ಮಾಧ್ಯಮ ಪ್ರೆಸ್ಟಿಟ್ಯೂಟ್ಸ್‌, ಸಂವಿಧಾನ- ಡೋಂಟ್‌ ಟಚ್‌!

  ಒಬ್ಬಂಟಿಯಾದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಕೊನೆಗೂ ದೇಶದ ಕ್ಷಮೆ ಕೇಳಿದ್ದಾರೆ. ಜಾತ್ಯಾತೀತರ ರಕ್ತ ಹಾಗೂ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಸಂಸತ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಭಟನೆ, ದೂರು ದಾಖಲು ಪ್ರಕ್ರಿಯೆಗಳಿಗೂ ನಾಂದಿ ಹಾಡಿತ್ತು. ಇದಕ್ಕೆ ಸ್ವ ಪಕ್ಷೀಯ ರಾಜ್ಯ ನಾಯಕರಿಂದ ಬೆಂಬಲ ಸಿಗದೆ, ಅತ್ತ ಕೇಂದ್ರ ನಾಯಕರೂ ಜತೆಗೆ ನಿಲ್ಲದೆ ಹೋದ ಸ್ಥಿತಿಯಲ್ಲಿ ಹೆಗಡೆ ಸಂಸತ್‌ನಲ್ಲಿಯೇ ತಮ್ಮ ಹೇಳಿಕೆಗೆ ಗುರುವಾರ […]

  December 29, 2017
  ...

  ‘ಒಪ್ಪಿತ ಸಂಬಂಧ; ತುಪ್ಪದ ಹೋಮ’: ಕೇಸು ಖುಲಾಸೆಗೊಂಡರೂ ನಿಲ್ಲದ ಕಂಪನ; ಹವ್ಯಕರ ಬಂಧನ!

  ಇದೊಂದು ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿರುವ ಜನಪ್ರಿಯ ಮಠ, ತುಪ್ಪದಲ್ಲಿ ಹೋಮ ಮಾಡುವ ಮೂಲಕ ವಾತಾವರಣದ ಆಮ್ಲಜನಕವನ್ನು ಹೆಚ್ಚಿಸುತ್ತೀವಿ ಎಂದು ಪ್ರಚಾರ ಪಡೆದವರು. ಮಲೆನಾಡಿನ ಗಿಡ್ಡ ತಳಿಯ ಹಸುಗಳ ಸಾಕಾಣಿಕೆಯ ಮೂಲಕ ‘ಗೋ ಸಂರಕ್ಷಣೆ’ಯ ಮಹತ್ವವನ್ನು ಹಂಚುತ್ತಿದ್ದವರು. ಹೀಗಿರುವಾಗಲೇ ಮಠದ ಉತ್ತರಾಧಿಕಾರಿಯಾಗಿ ಬಂದ ಯುವ ಸ್ವಾಮೀಜಿಯ ‘ಒಪ್ಪಿತ ಲೈಂಗಿಕ ಸಂಬಂಧ’ ಜಗಜ್ಜಾಹೀರಾಯಿತು. ಮೂರು ವರ್ಷಗಳ ಅಂತರದಲ್ಲಿ ದೂರು, ತನಿಖೆ, ವಿಚಾರಣೆಗಳೆಲ್ಲಾ ನಡೆದು ಹೋದವು. ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡಿತು. ಮಳೆ ನಿಂತ ಮೇಲೂ ಹನಿಗಳು ಉದುರುವಂತೆ; ನ್ಯಾಯಾಲಯದಲ್ಲಿ ಪರಿಹಾರ ಕಂಡ ಪ್ರಕರಣ, […]

  December 29, 2017
  ...

  ‘ಲೈಫ್‌ ಸೀರಿಸ್‌- 1’: ಆತ್ಮಹತ್ಯೆ ಮೀರಿದ ಬದುಕಿನ ಹೋರಾಟ; ಸೈಕಲ್ ಸಂಚಾರಿ ಗೋವಿಂದ್ ಎದುರಿಗೆ ಸಿಕ್ಕಾಗ…

  ವರ್ಷ 2017 ಕಳೆಯುತ್ತಿದೆ. ಇನ್ನು ಮೂರು ದಿನಗಳ ನಂತರ ಬರುವ ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವರ್ಷದ ಮೊದಲ ದಿನವೇ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರು ರಾಷ್ಟ್ರೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು. ಕಾರಣ, ಹಿಂದಿನ ದಿನ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಮಯದಲ್ಲಿ ಎಂ. ಜಿ. ರಸ್ತೆಯಲ್ಲಿ ನೆರೆದಿದ್ದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ. ಅದರ ಬೆನ್ನಿಗೇ ನಗರದ ಮತ್ತೊಂದು ರಸ್ತೆಯಲ್ಲಿ ವೃತ್ತಿಪರ ಯುವತಿಯನ್ನು ಅಡ್ಡಗಟ್ಟಿದ ದೃಶ್ಯಾಗಳು ಪರದೆಯನ್ನು ಆವರಿಸಿದ್ದವು. ಅಲ್ಲಿಂದ ಹಿಡಿದು ದಾನಮ್ಮವರೆಗೆ ಹಲವು ಕಹಿ ಹಾಗೂ ಸಿಹಿ ಘಟನೆಗಳಿಗೆ ಕಳೆದ 362 […]

  December 28, 2017
  ...

  ‘ಬೇಲಿಯೇ ಎದ್ದು ಹೊಲ ಮೇಯ್ದಾಗ’: ತತ್ಕಾಲ್ ಟಿಕೆಟ್ ಬುಕ್ಕಿಂಗ್‌ ವಂಚನೆ ಪ್ರಕರಣದಲ್ಲಿ ಸಿಬಿಐ ತಂತ್ರಜ್ಞನೇ ಅಪರಾಧಿ!

  ಸಿಬಿಐ ಅಥವಾ ಸೆಂಟ್ರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಶನ್. ರಾಜಕೀಯ ಮೇಲಾಟಗಳೇನೆ ಇರಲಿ, ಇವತ್ತಿಗೂ ದೇಶದ ಪ್ರತಿಷ್ಠಿಯ ತನಿಖಾ ಸಂಸ್ಥೆ ಎಂಬ ಹೆಗ್ಗಳಿಕೆ ಸಿಬಿಐಗೆ ಇದೆ. ವಂಚನೆಗಳ ಬೆನ್ನು ಬೀಳುವುದು ಸಿಬಿಐ ಮೂಲಮಂತ್ರ. ಆದರೆ, ಇಲ್ಲಿ ಸಿಬಿಐನಲ್ಲಿ ಕೆಲಸ ಮಾಡುತ್ತಿದ್ದ ಪ್ರೋಗ್ರಾಮರ್‌ ಒಬ್ಬ ವಂಚನೆಗೆ ಇಳಿಯುವ ಮೂಲಕ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತೀಯ ರೈಲ್ವೆ ಟಿಕೆಟ್ ಬುಕ್‌ ಮಾಡಲು ಆನ್‌ಲೈನ್ ವ್ಯವಸ್ಥೆ ಇದೆ. ಇದನ್ನು ದೇಶಾದ್ಯಂತ ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಆದರೆ ಈ ಟಿಕೆಟಿಂಗ್ ವ್ಯವಸ್ಥೆಯನ್ನೇ ಬುಡಮೇಲು […]

  December 28, 2017
  ...

  ಕಂಬಿ ಹಿಂದಿನ ಕತೆ- 6: ಕಳುಹಿಸಿದ್ದು ಎಂಎಂಎಸ್‌, ಮರಳಿ ಬಂದಿದ್ದು ಗುಂಡು; ಪ್ರತಿಷ್ಠೆ ಮತ್ತು ಜೈಲೂಟದ ಪಾಠಗಳು!

  ಮಲೆನಾಡು ಜಿಲ್ಲೆ ಚಿಕ್ಕಮಗಳೂರಿನ ಒಂದು ಹಳ್ಳಿ. ಕಾಫಿ ಸೀಮೆ. ಭತ್ತ, ಅಡಿಕೆ, ಏಲಕ್ಕಿ, ಬಾಳೆಗಳು ಈ ಪ್ರದೇಶವನ್ನು ಹಸಿರಾಗಿಟ್ಟಿವೆ. ಟಿವಿ, ಮೊಬೈಲುಗಳು ಈ ಹಳ್ಳಿಯನ್ನು ಹೊಕ್ಕಿ ಬಹಳ ಕಾಲ ಆಗಿದೆ. ಸಹಜವಾಗಿ ಯುವಕ ಯುವತಿಯರ ಕೈಯಲ್ಲಿ ಮೊಬೈಲುಗಳಿವೆ. ಆ ಹಳ್ಳಿಯಲ್ಲಿ ಬಹುತೇಕ ಎಲ್ಲರಿಗೂ ತೋಟ ಗದ್ದೆಗಳಿವೆ. ಕೆಲವರಿಗೆ ಹತ್ತರಿಂದ ಇಪ್ಪತ್ತು, ಹಲವರಿಗೆ ಒಂದರಿಂದ ಐದು ಏಕರೆಗಳವರೆಗೆ ಭೂಮಿಯಿದೆ. ಊರಿನ ಬಹುತೇಕ ಯುವಕ ಯುವತಿಯರು ವಿದ್ಯಾವಂತರು. ಪಿಯುಸಿ, ಪದವಿ ಓದಿದವರು. ಒಕ್ಕಲಿಗರ ಕುಟುಂಬಗಳೇ ಹೆಚ್ಚಿವೆ. ಇಲ್ಲಿ ಕಾಫಿ, ಅಡಿಕೆ […]

  December 28, 2017

Top