An unconventional News Portal.

ಮೌನೇಶ್ ಪೋತರಾಜ್ ಸಾವಿಗೆ ‘ಮಾಲ್ಗುಡಿ ಟ್ವಿಸ್ಟ್’; ಕ್ರೈಂ ಸೀನ್ ಹುಟ್ಟುಹಾಕಿದ ಆ 7 ಶಂಕೆಗಳು

ಕಳೆದ ಸುಮಾರು ಮೂವತ್ತು ಗಂಟೆಗಳಿಂದ ಪತ್ರಕರ್ತ ಮೌನೇಶ್ ಸಾವು ಮತ್ತು ನಂತರ ಆತನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

    ...
    ವಿಚಾರ

    ‘ಜಾತ್ರೆಲಿ ಪೀಪಿ; ಸಮ್ಮೇಳನದಲ್ಲಿ ಪುಸ್ತಕ’: ಸಾಹಿತ್ಯದ ಹಬ್ಬ ಬದಲಾಗುವುದು ಯಾವಾಗ?

    83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಮುಗಿಯುವುದರ ಜೊತೆಯಲ್ಲೇ ಅನೇಕ ವಿವಾದ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರತಿ ಬಾರಿಯೂ ಒಂದಿಲ್ಲೊಂದು  ಚರ್ಚೆ, ವಾದ ವಿವಾದ, ಸಂವಾದಗಳು ಸಮ್ಮೇಳನದ ಆರಂಭದಲ್ಲೋ, ಮುಕ್ತಾಯದಲ್ಲೋ ಎದುರಾಗುವುದು ಸಂಪ್ರದಾಯವಾಗುತ್ತಿದೆ. ಚಂಪಾರ ಅಧ್ಯಕ್ಷ ಭಾಷಣದಲ್ಲಿ ‘ಕೋಮುವಾದಿ ಪಕ್ಷಗಳಿಗೆ ಮತ ನೀಡದೆ, ಜಾತ್ಯತೀತರಿಗೆ ಮತ ನೀಡಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.  ಈ ಮಾತು ಬಿಜೆಪಿಗೆ ತನ್ನನ್ನು ತಾನು ಕೋಮುವಾದಿ  ಎಂದು ಅರ್ಥೈಸಿಕೊಳ್ಳುವಂತೆಯೂ, ಜಾತ್ಯತೀತ ಎಂದರೆ ಕಾಂಗ್ರೆಸ್ ಎಂದು ಅರ್ಥೈಸಿಕೊಳ್ಳುವಂತೆಯು ಮಾಧ್ಯಮಗಳು  ಆರೋಪಿಸಿ,  ಚರ್ಚೆಯನ್ನು ವಿವಾದವನ್ನಾಗಿಸಿದವು. ಭಾರತದ ರಾಜಕಾರಣವನ್ನು ಸೋಗಲಾಡಿತನಕ್ಕೆ ದೂಡಿದ ಈ ಜಾತ್ಯಾತೀತ ಮತ್ತು ಕೋಮುವಾದಿ ಎಂಬ ಎರಡು ಪದಕಾರಣಗಳ ಆಳಕ್ಕಿಳಿದು ಚರ್ಚೆಯನ್ನು ಬೆಳೆಸುವಷ್ಟು ಪ್ರಬುದ್ಧತೆಯನ್ನು ಮಾಧ್ಯಮಗಳು ಸೇರಿದಂತೆ ಪಾಲ್ಗೊಂಡವರು ತೋರಿಸಲೇ  ಇಲ್ಲ.  ಅಸೂಕ್ಷ್ಮತೆ,  ಅಪ್ರಬುದ್ಧತೆ ಮತ್ತು ಅರಚಾಟಗಳೇ ನಮ್ಮ ಅಭಿವ್ಯಕ್ತಿಯ ಯುಗಧರ್ಮವಾಗಿ ಬದಲಾಗುತ್ತಿರುವ ಈ..

    November 29, 2017
    ...
    ದೇಶ

    ‘ಹಾದಿಯಾ ಪ್ರಕರಣ’: ಸೋತಿದ್ದು ಲವ್‌ ಜಿಹಾದ್‌; ಗೆದ್ದಿದ್ದು ಧರ್ಮ ಮೀರದ ಪ್ರೀತಿ!

    ಆಕೆಯ ಹೆಸರು ಅಖಿಲಾ. 25 ವರ್ಷದ ಮೆಡಿಕಲ್ ವಿದ್ಯಾರ್ಥಿನಿ. 2016ರ ಆರಂಭದಲ್ಲಿ ಆಕೆಯ ತಂದೆ ‘ಮಗಳು ಕಾಣೆಯಾಗಿದ್ದಾಳೆ’ ಎಂದು ದೂರು ನೀಡಿದರು. ಜನವರಿ 2ರಂದು ಮನೆಯಲ್ಲಿ ಮಗಳು ನಮಾಝ್‌ ಮಾಡುತ್ತಿದ್ದದ್ದು ಅಶೋಕನ್ ಗಮನಕ್ಕೆ ಬಂದಿತ್ತು. ಸಹಧರ್ಮವೊಂದರ ಆಚರಣೆಗೆ ಮಗಳು ಇಳಿದಿರುವುದನ್ನು ನೋಡಿದ ತಂದೆ ಮನಸ್ಸು ಕುಪಿತಗೊಂಡಿತ್ತು. ಅಶೋಕನ್ ಕಮ್ಯುನಿಸ್ಟ್ ಪಕ್ಷದ ಡಿವೈಎಫ್‌ಐ ಸಂಘಟನೆಯ ಮಾಜಿ ಸದಸ್ಯ ಎಂದು ವರದಿಗಳು ಹೇಳುತ್ತವೆ. ಅದಾದ ನಂತರ ತಂದೆ- ಮಗಳ ನಡುವೆ ವಾಗ್ವಾದಗಳೂ ನಡೆದಿದ್ದವು. ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್‌ ಹೋಮೊಯೋಪಥಿಕ್ ಮೆಡಿಸಿನ್ ಅಂಡ್ ಸರ್ಜರಿ ಓದುತ್ತಿದ್ದ..

    November 27, 2017
    ...
    ಗುಜರಾತ್ ಚುನಾವಣೆ- 2017

    ಅಖಾಡಕ್ಕೆ ಪ್ರಧಾನಿ ಮೋದಿ: ಈ ಬಾರಿಯೂ ‘ಕೈ’ ತಪ್ಪುತ್ತಾ ಬಾಪೂ ನಾಡು?

    ದೇಶದ ಗಮನ ಸೆಳೆಯುತ್ತಿರುವ ಗುಜರಾತ್‌ ಚುನಾವಣೆಯ ಫಲಿತಾಂಶ; ಪ್ರಚಾರದ ಕೊನೆಯ ಹಂತದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗಳ ಮೇಲೆ ತೀರ್ಮಾನವಾಗಲಿದೆ… ಹೀಗಂತ ನವೆಂಬರ್ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು; ‘ಸಮಾಚಾರ’. ಇದೀಗ ಪ್ರಧಾನಿ ಮೋದಿ ರ‍್ಯಾಲಿಗಳಿಗೆ ಸೋಮವಾರ ಚಾಲನೆ ಸಿಕ್ಕಿದೆ. ಗುಜರಾತ್‌ ಚುನಾವಣೆ ದಿನಾಂಕಗಳು ಘೋಷಣೆಯಾದ ನಂತರ, ಇದೇ ಮೊದಲ ಬಾರಿಗೆ ಪ್ರಧಾನಿ ಮತಪ್ರಚಾರಕ್ಕೆ ಇಳಿದಿದ್ದಾರೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ನಂತರ ತಾರಾ ಪ್ರಚಾರಕರಾಗಿ ಮೋದಿ ಗುಜರಾತ್‌ ಅಖಾಡಕ್ಕೆ ಆಗಮಿಸಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಗುಜರಾತ್‌ ಚುನಾವಣಾ..

    November 27, 2017
    ...
    ರಾಜ್ಯ

    ಮೊದಲ ಸಾಹಿತ್ಯ ಸಮ್ಮೇಳನದ ಇಂಗ್ಲಿಷ್ ಭಾಷಣ; 103 ವರ್ಷಗಳ ಐತಿಹಾಸಿಕ ಪಯಣ

    83ನೇ‌ ಕನ್ನಡ‌ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಸಂಭ್ರಮದಿಂದ‌ ಸಜ್ಜಾಗಿದೆ. ತನ್ನೂರಿನ ಹಿರಿಯ ಪತ್ರಕರ್ತ, ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರ ಅಕಾಲಿಕ ಸಾವಿನ ಸೂತಕವನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಬಾರಿಯ ಸಾಹಿತ್ಯ ಪರಿಚಾರಿಕೆಗೆ ಅರಮನೆ ನಗರಿ ಸಾಕ್ಷಿಯಾಗಲಿದೆ. ನ. 24ರಂದು ಚಾಲನೆ ಪಡೆದುಕೊಳ್ಳಲಿರುವ ಸಾಹಿತ್ಯದ ಹಬ್ಬ ಮೂರು ದಿನಗಳ ಕಾಲ ನಾಡು, ನುಡಿ, ಸಂಸ್ಕೃತಿ, ಅಸ್ಮಿತೆಗಳ ಚರ್ಚೆ ನಡೆಸಲಿದೆ. ಸಮ್ಮೇಳನವನ್ನು ಆಯೋಜನೆ ಮಾಡುತ್ತಿರುವುದು ‘ಕರ್ನಾಟಕ‌ ಸಾಹಿತ್ಯ ಪರಿಷತ್ತು’. ಕನ್ನಡದ ಸಾಹಿತ್ಯ ಕೃಷಿಯನ್ನು ಬೆಳೆಸುವ, ನಾಡಿನ ಆರೋಗ್ಯಕರ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವ..

    November 23, 2017
    ...
    ರಾಜ್ಯ

    ಚುನಾವಣೆ ಘೋಷಣೆ ಮತ್ತು ವಾಸ್ತವ: ಮದ್ಯಕ್ಕೆ ನಿಷೇಧ ಹೇರುತ್ತಾ ಸಿದ್ದರಾಮಯ್ಯ ಸರಕಾರ?

    -ಕಿರಣ್ ಕುಮಾರ್ ಎಂ. ಎಲ್.  ಸಂಪೂರ್ಣ ಮದ್ಯಪಾನ ನಿಷೇಧ… ಹೀಗೊಂದು ಕೂಗು ಮುಂದಿನ ಚುನಾವಣೆ ವೇಳೆಗೆ ಬಲವಾಗಿ ಕೇಳಿಬರುವ ಸಾಧ್ಯತೆ ಇದೆ. ಇತ್ತೀಚೆಗೆ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಮದ್ಯ ನಿಷೇಧ ಜಾರಿಗಾಗಿ ಭಾರಿ ಪ್ರತಿಭಟನೆಯೂ ನಡೆದಿದೆ. ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಸಂಪೂರ್ಣ ಮದ್ಯ ನಿಷೇಧ ಕಾಯ್ದೆ ನಮ್ಮ ರಾಜ್ಯದಲ್ಲಿ ಏಕೆ ಸಾದ್ಯವಿಲ್ಲ? ಎನ್ನುವುದು ಅಂದು  ನೆರೆದಿದ್ದ ನಾಯಕರು ಸಿದ್ದರಾಮಯ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಕಾಕತಾಳೀಯ ಎಂಬಂತೆ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ..

    November 21, 2017
    ...
    ರಾಜ್ಯ

    ‘ವೈದ್ಯೋ ನಾರಾಯಣ ಬಲಿ’: ಖಾಸಗಿ ಆಸ್ಪತ್ರೆಗಳ ಲಾಬಿಗೆ ಬೇಲಿ ಹಾಕಲು ಹೊರಟ ಸರಕಾರ ಎಡವಿದ್ದು ಎಲ್ಲಿ?

    ರಾಜ್ಯದಲ್ಲಿ ಆರೋಗ್ಯ ಸೇವಾ ಕ್ಷೇತ್ರ ಸುದ್ದಿಕೇಂದ್ರಕ್ಕೆ ಬಂದಿದೆ. ಕಳೆದ ನಾಲ್ಕು ದಿನಗಳಿಂದ ಸರಕಾರ ಮತ್ತು ಖಾಸಗಿ ವೈದ್ಯರ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ರಾಜ್ಯ ಸರಕಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು (ತಿದ್ದುಪಡಿ) ಕಾಯ್ದೆ- 2017 ಇದಕ್ಕೆ ಕಾರಣ. ತಿದ್ದುಪಡಿ ವಿದೇಯಕ ಜಾರಿಯಾದರೆ ಖಾಸಗಿ ವೈದ್ಯರ ಹಕ್ಕುಗಳು ಹರಣವಾಗುತ್ತವೆ, ಆರೋಗ್ಯ ಸೇವೆ ನೀಡುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂಬುದು ಪ್ರತಿಭಟನೆಗೆ ಇಳಿದ ವೈದ್ಯರ ಆರೋಪ. ರಾಜ್ಯಾದ್ಯಂತ ಖಾಸಗಿ..

    November 16, 2017
    ...
    ರಾಜ್ಯ

    ಗಣಪತಿ ಆತ್ಮಹತ್ಯೆ ಪ್ರಕರಣ: ಬೂದಿ ಮುಚ್ಚಿದ ಕೆಂಡ ಕೆದಕುತ್ತಾ ಸಿಬಿಐ ತನಿಖೆ?

    ಪೊಲೀಸ್ ಅಧಿಕಾರಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಬೂದಿ ಮುಚ್ಚಿದ ಕೆಂಡದಂತೆ ನಿಧಾನವಾಗಿ ಹೊಗೆಯಾಡಲು ಆರಂಭಿಸಿದೆ. ಮಂಗಳವಾರ ಗಣಪತಿ ಅಸಹಜವಾಗಿ ಸಾವು ಕಂಡ ಮಡಿಕೇರಿಯ ವಿನಾಯಕ ಲಾಡ್ಜ್‌ನ ಕೊಠಡಿ ಸಂಖ್ಯೆ 315ರಲ್ಲಿ ಗುಂಡಿನ ಚೂರೊಂದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪ್ರಕರಣ ನಡೆದು ಒಂದೂವರೆ ವರ್ಷಗಳ ನಂತರ ಲಾಡ್ಜ್‌ ಕೋಣೆಯಲ್ಲಿ ಗುಂಡಿನ ಚೂರು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ, ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆದ ಸಿಐಡಿ ತನಿಖೆಯ ವಸ್ತುನಿಷ್ಟತೆಯನ್ನು ಇದು ಪ್ರಶ್ನಿಸುವಂತೆ ಮಾಡಿದೆ. ಇದೇ ಜುಲೈ ತಿಂಗಳ ಮೊದಲ ವಾರದಲ್ಲಿ..

    November 15, 2017
    ...
    ದೇಶ

    ಬಾಪೂ ನಾಡಿನ ‘ಹನಿಟ್ರ್ಯಾಪ್‌ ಸರಣಿ’: ಹಾರ್ದಿಕ್ ಪಟೇಲ್, ಬಿಜೆಪಿ ಮತ್ತು ‘ಡರ್ಟಿ ಪಾಲಿಟಿಕ್ಸ್’

    ನಿರೀಕ್ಷೆಯಂತೆಯೇ ಗುಜರಾತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಸೀಡಿಯ’ ಮೊರೆ ಹೋಗಿದೆ; ಹಾರ್ದಿಕ್ ಪಟೇಲ್ ಹೋಲುವ ಖಾಸಗಿ ದೃಶ್ಯಗಳು ಹರಿದಾಡುತ್ತಿವೆ. ಇಲ್ಲಿ ಪಾಟೀದಾರ್ ಸಮುದಾಯದ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ನಾಯಕ, 24 ವರ್ಷದ ಹಾರ್ದಿಕ್ ಪಟೇಲ್ ಹೋಲುವ ‘ಸೆಕ್ಸ್‌ ಸಿಡಿ’ಯೊಂದು ಹೊರಬಿದ್ದಿದೆ. ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ, ನಂತರ ಗುಜರಾತ್‌ನ ಸುದ್ದಿ ವಾಹಿನಿಗಳಲ್ಲಿ ಕಳೆದ 24 ಗಂಟೆಯಿಂದ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದರ ಹಿಂದೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಇದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತಿವೆ. ಸೀಡಿಯಲ್ಲೇನಿದೆ?: ..

    November 14, 2017
    ...
    ದೇಶ

    ‘ಬರೀ ಓಳು’: ದೇಶದ ಅಭಿವೃದ್ಧಿಗೆ ಬಿಜೆಪಿ ರಾಜ್ಯಗಳ ಮಾನದಂಡ; ಎಷ್ಟು ಸತ್ಯ? ಎಷ್ಟು ಸುಳ್ಳು?

    ದೇಶದ ಅಭಿವೃದ್ಧಿ ವಿಚಾರ ಬಂದಾಗ ರಾಜ್ಯಗಳನ್ನೇ ಮಾನದಂಡವಾಗಿ ತೆಗೆದುಕೊಳ್ಳುವ ಪರಿಪಾಠ ಆರಂಭವಾಗಿದ್ದು 2000ನೇ ಇಸವಿಯ ಈಚೆಗೆ. ಅದಕ್ಕೆ ಕಾರಣ, ‘ಗುಜರಾತ್ ಅಭಿವೃದ್ಧಿ ಮಾದರಿ’. ಇವತ್ತು ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ, ಹೀಗೊಂದು ಮಾದರಿಯ ಮಾನದಂಡವನ್ನು ದೇಶಾದ್ಯಂತ ಹರಿಯ ಬಿಡಲಾಗಿತ್ತು. ಕಳೆದ ಕೆಲವು ದಿನಗಳ ಅಂತರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು, ಎಡಪಕ್ಷಗಳನ್ನು ಟೀಕಿಸಲು ಅವು ಆಡಳಿತದಲ್ಲಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಭಿವೃದ್ಧಿಯನ್ನು ವಿಮರ್ಶೆಗೆ ಒಳಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಟೀಕೆಗಳ ಹಿಂದೆ ರಾಜಕೀಯ..

    November 9, 2017
    ...
    ದೇಶ

    ‘ಹ್ಯಾಪಿ ಬರ್ತ್‌ಡೆ ಡಿಮೋ’: ಕಪ್ಪು ಹಣವನ್ನು ಅನಾಯಾಸವಾಗಿ ಬದಲಿಸಿಕೊಂಡ ಕುಳಗಳ ಕತೆ!

    ನವೆಂಬರ್ 8, 2016.. ನಾಳೆಗೆ ಸರಿಯಾಗಿ ಒಂದು ವರ್ಷ. ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡ ದಿನ. ಚಲಾವಣೆಯಲ್ಲಿದ್ದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ತತಕ್ಷಣದಿಂದಲೇ ರದ್ಧುಗೊಳಿಸಿದರು. ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರಧಾನಿ ಅವರ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಗಳೂರಿನ ಬಿಲ್ಡರ್‌ ಒಬ್ಬರ ಮನೆಯಲ್ಲಿ ಸಂಚಲನ ಸೃಷ್ಟಿಯಾಯಿತು. ಆ ಹೊತ್ತಿಗೆ ಅವರ ಮನೆಯಲ್ಲಿ ಇದ್ದದ್ದು ಸುಮಾರು 15 ಕೋಟಿ ನಗದು ಹಣ ಮತ್ತು ಅದರಲ್ಲಿ ಬಹುತೇಕ..

    November 7, 2017
  • 1
  • 2

FOOT PRINT

Top