An unconventional News Portal.

    ...
    putta-gowri-final
    ರಾಜ್ಯ

    ‘ಕಾಡಿಗೆ ಬಂದ ಪುಟ್ಟಗೌರಿ’: ಧಾರಾವಾಹಿ, ಟ್ರಾಲಿಂಗ್‌, ವೀಕ್ಷಕರ ಮನಸ್ಥಿತಿ ಮತ್ತು ಹಿಡನ್ ಅಜೆಂಡಾ!

    ‘ದೋಸ್ತ, ಪುಟ್ಟಗೌರಿ ಕಾಡಿಗೆ ಬಂದಾಳ ಅಂತಲೇ… ಅಕ **** ಜಿಪಿಎಸ್‌ ಹಾಕ್ತೇನ ಹುಡುಕಿ ಉಡಿ ತುಂಬಿಸಿ ಕಳಿಸೋಣ’… ಹೀಗೆ ಶುರುವಾಗುತ್ತದೆ ಎರಡು ಚಿಂಪಾಂಜಿಗಳ ನಡುವಿನ ಸಂಭಾಷಣೆ. ಇದು, ಅಂಬಾನಿ ಒಡೆತನದ ಕನ್ನಡದ ಮನೋರಂಜನಾ ವಾಹಿನಿ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಹಸ್ರ ಟ್ರಾಲಿಂಗ್‌ಗಳ ಒಂದು ಸ್ಯಾಂಪಲ್ ಅಷ್ಟೆ. ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಲು ಆರಂಭಿಸಿತು. ಅಲ್ಲಿಂದ ಆರಂಭವಾದ ಟ್ರಾಲಿಂಗ್‌ಗಳು..

    October 13, 2017
    ...
    soldier-suicide-final
    ದೇಶ

    ಆತ್ಮಹತ್ಯೆಯ ಹಾದಿಯಲ್ಲಿ ದೇಶ ಕಾಯುವ ಸೈನಿಕ: ಅಂಕಿ ಅಂಶಗಳು ಮೂಡಿಸುತ್ತಿವೆ ಆತಂಕ

    ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಸಾವನ್ನಪ್ಪುತ್ತಿರುವ ಸೈನಿಕರ ಸಂಖ್ಯೆಗಿಂತ; ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಯೋಧರ ಸಂಖ್ಯೆ ಹೆಚ್ಚು. ಇದು ಭಾರತದ ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಸೇನಾ ವಿಭಾಗಗಳ ಅಂತರಂಗದ ಆತಂಕಕಾರಿ ಮಾಹಿತಿ. ಇದನ್ನು ಬಿಚ್ಚಿಟ್ಟಿದ್ದು ಬೇರೇ ಯಾರೂ ಅಲ್ಲ; ಸ್ವತಃ ರಕ್ಷಣಾ ಇಲಾಖೆ ನೀಡಿರುವ ಅಂಕಿ ಅಂಶಗಳು ದೇಶವನ್ನು ಕಾಯುವ ಸೈನಿಕರ ನಡುವೆ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಗಂಭೀರ ಪರಿಸ್ಥಿತಿಯನ್ನು ಬಹಿರಂಗಪಡಿಸಿವೆ. ಇಲಾಖೆಯು ನೀಡಿರುವ ಅಂಕಿ ಅಂಶಗಳ ಪ್ರಕಾರ, ಜ. 2014ರಿಂದ ಮಾರ್ಚ್‌ 2017ರವರೆಗೆ ಒಟ್ಟು 348 ಸೈನಿಕರು..

    October 11, 2017
    ...
    road-accident-bng-final
    ರಾಜ್ಯ

    ‘ಗುಂಡಿ ಗಂಡಾಂತರ ರಾಜಕೀಯ’: 15 ಸಾವಿರ ಕಿ.ಮೀ ರಸ್ತೆ; 15 ಸಾವಿರ ಗುಂಡಿಗಳು; 15 ದಿನಗಳ ಗಡುವು

    ‘ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ'(ಸಿಟಿಟಿಪಿ)ಯನ್ನು ಅಳವಡಿಸಿಕೊಂಡಿರುವ, ಕೋಟ್ಯಾಂತರ ರೂಪಾಯಿ ಉದ್ಯಮವಾಗಿ ಬೆಳೆದಿರುವ ಬೆಂಗಳೂರಿನ ಟ್ರಾಫಿಕ್‌ ವ್ಯವಸ್ಥೆ ಇದೀಗ ರಸ್ತೆ ಗುಂಡಿಗಳಿಂದ ನಲುಗಿ ಹೋಗಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆ, ಕಳಪೆ ಕಾಮಗಾರಿ ಹಾಗೂ ಆಡಳಿತ ವರ್ಗದ ನಿರ್ಲಕ್ಷ್ಯತೆಯ ಫಲ; ಕಳೆದ ಒಂದು ವಾರದ ಅಂತರದಲ್ಲಿ ಮೂವರ ಬಲಿಯಾಗಿದೆ. ಅಕ್ಟೋಬರ್ 2ರಂದು ರಾತ್ರಿ ಮೈಸೂರು ರಸ್ತೆ ಮೇಲ್ಸೇತುವೆ ಬಳಿ ರಸ್ತೆ ಗುಂಡಿ ತಪ್ಪಿಸುವ ಸಹಾಸ ಮಾಡುತ್ತಿದ್ದ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಜೋಸೆಫ್ ಹಾಗೂ ಸಗಾಯ್ ಮೇರಿ ಎಂಬುವವರ ಮೇಲೆ ಬಸ್‌..

    October 10, 2017
    ...
    jey-amith-modi-1
    ದೇಶ

    ‘ನಾನೂ ತಿನ್ನಲ್ಲ; ತಿನ್ನಲೂ ಬಿಡಲ್ಲ’: ಅಮಿತ್‌ ಶಾ ಪುತ್ರನ ಕಂಪನಿ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ

    ಆಂಗ್ಲಭಾಷೆಯ ಅಂತರ್ಜಾಲ ಸುದ್ದಿತಾಣ ‘ದಿ ವೈರ್’ ಪ್ರಕಟಿಸಿದ ಸುದ್ದಿಯೊಂದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನು ಹುಟ್ಟುಹಾಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಒಡೆತನ ಕಂಪನಿಯೊಂದು ಕಳೆದ ಮೂರು ವರ್ಷಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬೆಳೆದ ಪರಿಯನ್ನು ವರದಿ ಬಿಚ್ಚಿಟ್ಟಿತ್ತು. ಭಾನುವಾರ ವರದಿ ಪ್ರಕಟವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ, ಶಾ ಪತ್ರನ ಕಂಪನಿ ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಆದೇಶಿಸಬೇಕು ಎಂದು ಅದು ಒತ್ತಾಯಿಸಿದೆ. ಈ..

    October 9, 2017
    ...
    child-with-out-nationality-1
    ರಾಜ್ಯ

    ‘ಚೈಲ್ಡ್ ವಿತ್‌ಔಟ್ ನ್ಯಾ‍ಷನಾಲಿಟಿ’: ವಾರದ ಹಿಂದೆ ಜೈಲಲ್ಲಿ ಹುಟ್ಟಿದ ಕಂದಮ್ಮಗೆ ರಾಷ್ಟ್ರೀಯತೆಯೇ ಇಲ್ಲ!

    ಮಗುವೊಂದು ತಾಯಿ ಗರ್ಭದಿಂದ ಹೊರಬೀಳುತ್ತಿದ್ದಂತೆ ಸಾಮಾಜಿಕ ಚೌಕಟ್ಟುಗಳ ಬಂಧನಕ್ಕೆ ಒಳಗಾಗುತ್ತದೆ. ಮೊದಲು ಲಿಂಗ, ನಂತರ ಹೆಸರು, ಆ ಮೂಲಕ ಜಾತಿ, ಧರ್ಮ ಹಾಗೂ ಮಗುವಿನ ರಾಷ್ಟ್ರೀಯತೆಗಳು ನಿರ್ಧರಿಸಲ್ಪಡುತ್ತವೆ. ಆದರೆ ಬೆಂಗಳೂರಿನಲ್ಲಿ ವಾರದ ಹಿಂದೆ ಹುಟ್ಟಿದ ಮಗುವೊಂದು ‘ರಾಷ್ಟ್ರೀಯತೆ’ಯ ಚೌಕಟ್ಟುಗಳಿಂದ ಹೊರಗೆ ಉಳಿದಿದೆ. ಎ ಬೇಬಿ ವಿತ್‌ಔಟ್‌ ನ್ಯಾ‍ಷನಾಲಿಟಿ! ಮೇ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿಯರು ಹಾಗೂ ಅವರಿಗೆ ಸಹಾಯ ಮಾಡಿದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಸಿಸಿಬಿಯ ‘ವಿಶೇಷ ತನಿಖಾ ವಿಭಾಗ’ದ ಪೊಲೀಸರು ಬಂಧಿಸಿದ್ದರು…

    October 6, 2017
    ...
    janashri-reddy-final
    ಟಿವಿ

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ’: ಜನಾರ್ಧನ ರೆಡ್ಡಿಗೆ ‘ಜನಶ್ರೀ’ ಸಿಬ್ಬಂದಿ ಡೆಡ್‌ಲೈನ್

    ‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ…’  ಇದು ಬೆಂಗಳೂರಿನ ಕೋರಮಂಗಲದಲ್ಲಿರುವ ‘ಜನಶ್ರೀ ನ್ಯೂಸ್‌’ ಕಚೇರಿಯಲ್ಲಿ ನಿನ್ನೆಯಿಂದ ಪ್ರತಿಭಟನೆ ಆರಂಭಿಸಿರುವ 123 ಸಿಬ್ಬಂದಿಗಳು ಹಾಗೂ ಪತ್ರಕರ್ತರು ನೀಡಿರುವ ಕೊನೆಯ ಎಚ್ಚರಿಕೆ. ಬಿಜೆಪಿ ನಾಯಕ, ಮಾಜಿ ಸಚಿವ, ಅಕ್ರಮ ಗಣಿ ಹಗರಣದ ಪ್ರಮುಖ ಆರೋಪಿ ಜನಾಧರ್ನ ರೆಡ್ಡಿ ಮಾಲೀಕತ್ವದ ಸುದ್ದಿ ವಾಹಿನಿಯಲ್ಲಿ ಸಂಬಳ ಇಲ್ಲದೆ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಪರದಾಡುತ್ತಿರುವ ಸ್ಥಿತಿಯನ್ನು ‘ಸಮಾಚಾರ’ ನಿಮ್ಮೆದುರಿಗೆ ಇಟ್ಟಿತ್ತು. ಇದರ ಮುಂದುವರಿದ ಬೆಳವಣಿಗೆಯಲ್ಲಿ, ಗಾಂಧಿ ಜಯಂತಿಯ ದಿನ, ಅಕ್ಟೋಬರ್‌ 2ರಿಂದ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿ..

    October 3, 2017
    ...
    prakash-raj-profile
    ರಾಜ್ಯ

    ಪ್ರಕಾಶ್ ರಾಜ್ ಭಾ‍ಷಣ ಎಬ್ಬಿಸಿತು ತರಂಗ: ಶುರುವಾಯಿತು ನೋಡಿ, ತೇಜೋವಧೆಯ ಮೃದಂಗ

    ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್…ಈ ದೇಶ ಕಂಡ ಅದ್ಭುತ ನಟ, ಸಾಮಾಜಿಕ ಪ್ರಜ್ಞೆ ಇರುವ ನಾಗರಿಕ. ಹಾಗಂತ ಕೆಲವು ದಿನಗಳ ಹಿಂದೆ ಹೇಳಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ, ಭಾನುವಾರ ಬೆಂಗಳೂರಿನಲ್ಲಿ ನಡೆದ 11ನೇ ಡಿವೈಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನಟ ಪ್ರಕಾಶ್ ರಾಜ್, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದೇಶದ ಜ್ವಲಂತ ವಿಚಾರಗಳ ಕುರಿತು ಪ್ರಧಾನಿ ಮೋದಿ ವಹಿಸುವ ಮೌನದ ಕುರಿತು ಬಿಜೆಪಿಯ ಒಂದು ಕಾಲದ..

    October 3, 2017
    ...
    gauri-lankesh-pic-1
    GAURI LANKESH FILES

    ‘ನಾನೂ ಗೌರಿ’ಯಿಂದ ‘OUR GAURI’ವರೆಗೆ: ಪ್ರತಿರೋಧಗಳ ವರಸೆ; ತನಿಖೆ ಮೂಡಿಸದ ಭರವಸೆ

    ‘ಗಾಂಧಿಯನ್ನು ಕೊಂದವರೇ ಗೌರಿಯನ್ನೂ ಕೊಂದರು.’ ಹೀಗೊಂದು ಹೇಳಿಕೆ ಗಾಂಧಿ ಜಯಂತಿಯ ದಿನವಾದ ಇಂದು ದೇಶದ ನಾನಾ ಕಡೆಗಳಲ್ಲಿ ಮೊಳಗಿದೆ. ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ಅಕ್ಟೋಬರ್‌ 5ಕ್ಕೆ ಒಂದು ತಿಂಗಳು ತುಂಬುತ್ತದೆ. ಅದು ರಾಜಧಾನಿ ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆಯೊಬ್ಬರ ಮೊದಲ ಹತ್ಯೆ ಮತ್ತು ಕರ್ನಾಟಕ ಎರಡು ವರ್ಷಗಳ ಹಿಂದೊಮ್ಮೆ ಕಂಡ ಸಂಶೋಧಕ ಎಂ. ಎಂ. ಕಲ್ಬುರ್ಗಿ ಅವರ ಹತ್ಯೆಗೆ ಸಾಮ್ಯತೆ ಇದ್ದ ಸರಣಿಯ ಮುಂದುವರಿದ ಭಾಗ. ಗೌರಿ ಹತ್ಯೆ ಹಿನ್ನೆಲೆಯಲ್ಲಿ ಈವರೆಗೆ ನಡೆದ ಘಟನಾವಳಿಗಳನ್ನು ಗಮನಿಸಿದರೆ,..

    October 2, 2017
    ...
    catalan-freedom-protest-2
    ವಿದೇಶ

    ಅಖಂಡತೆಯ ಅಳಿವು: ಕ್ಯಾಟಲೋನಿಯ ಜನರ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಅಸ್ತು ಎಂದ ಜನಾಭಿಪ್ರಾಯ

    ಗೊಂದಲ, ಘರ್ಷಣೆಗಳ ನಡುವೆ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಕೊನೆಗೂ ‘ಕ್ಯಾಟಲೋನಿಯ’ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಜನ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಸ್ಪೇನ್‌ ದೇಶದ ಸುಮಾರು 75 ಲಕ್ಷ ಜನಸಂಖ್ಯೆ ಇರುವ ಕ್ಯಾಟಲೋನಿಯ ಸಮುದಾಯ ಪ್ರತ್ಯೇಕ ದೇಶವೊಂದನ್ನು ಹೊಂದಲು ಪ್ರಕ್ರಿಯೆಗಳು ಆರಂಭವಾಗಿವೆ. ಯುರೋಪ್‌ ಖಂಡದ ಪುಟ್ಟ ದೇಶ ಸ್ಪೇನ್‌ನ ಈಶಾನ್ಯ ಭಾಗದ ಸಣ್ಣ ಪ್ರದೇಶವೇ ಕ್ಯಾಟಲೋನಿಯ. ನಮ್ಮ ದೇಶದಲ್ಲಿ ‘ಸಪ್ತ ಸಹೋದರಿಯರು’ ಎಂದು ಕರೆಯುವ ಈಶಾನ್ಯ ಭಾರತದ ಪುಟ್ಟ ರಾಜ್ಯಗಳಂತೆ ಇಲ್ಲಿನ ಜನ ತಮ್ಮದೇ ಆದ ಅಸ್ಮಿತೆಗಳಿಗಾಗಿ ಹೋರಾಟ ಮಾಡಿಕೊಂಡು ಬಂದವರು…

    October 2, 2017
  • 1
  • 2

Top