An unconventional News Portal.

    ...
    sea-weed-farming-1
    ರಾಜ್ಯ

    ಮೀನುಗಾರರ ಅಭಿವೃದ್ಧಿಗೆ ‘ಸೀ ವೀಡ್‌ ಕೃಷಿ’: ಉಜಿರೆಯಲ್ಲಿ ಮೋದಿ ಮುಂದಿಟ್ಟ ಯೋಜನೆಯ ಹಿನ್ನೆಲೆ ಏನು?

    ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮತ್ತೆ ಸುದ್ದಿಕೇಂದ್ರದಲ್ಲಿದೆ. ಒಂದು ವಾರದ ಅಂತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ರಮದ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಈ ಇಬ್ಬರು ರಾಜಕಾರಣಿಗಳು ಅಲ್ಲಿನ ವೇದಿಕೆಯಲ್ಲಿ ಮಾತನಾಡಿದ ಅಂಶಗಳಿಗಿಂತ, ಅವರು ದೇವಸ್ಥಾನಕ್ಕೆ ಭೇಟಿ ವಿಚಾರವೇ ಹೆಚ್ಚು ಚರ್ಚೆಗೆ ಒಳಗಾಯಿತು. ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿಗೂ ಮುನ್ನ ಮೀನೂಟ ಸೇವಿದ್ದು ಹಾಗೂ ಪ್ರಧಾನಿ ಮೋದಿ..

    October 30, 2017
    ...
    dharmathala-real-estate-final
    ದೇಶ

    ಮಂಜುನಾಥನ ಹೆಸರಿನಲ್ಲಿ ‘ರಿಯಲ್‌ ಎಸ್ಟೇಟ್’: ಹೆಗ್ಗಡೆ ಕುಟುಂಬದ ಭೂದಾಹದ ಕತೆಗಳು!

    ನಾವು ಹೇಳಲು ಹೊರಟಿರುವ ಕತೆ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು 8 ಕಿ. ಮೀ ದೂರದಲ್ಲಿರುವ ಸಣ್ಣ ಊರಿನದ್ದು; ಹೆಸರು ನೀರಚಿಲುಮೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶೈಕ್ಷಣಿಕ ಸಾಮ್ರಾಜ್ಯ ಹರಡಿಕೊಂಡಿರುವ ಉಜಿರೆಗೆ ಹೊಂದಿಗೊಂಡ ಸಣ್ಣ ಪ್ರದೇಶವಿದು. ಇಲ್ಲೊಂದು ಜಮೀನು; ಆ ಜಮೀನಿನಲ್ಲಿ ಈಗಲೂ ಇಬ್ರಾಹಿಂ ತಮ್ಮ ಪತ್ನಿ ರಶೀದಾ ಮತ್ತು ಇಬ್ಬರು ಮಕ್ಕಳೊಂದಿಗೆ ಪುಟ್ಟ ಮನೆಯೊಂದರಲ್ಲಿ ವಾಸವಿದ್ದಾರೆ. ಇಬ್ರಾಹಿಂ ಸಣ್ಣ ವ್ಯಾಪಾರಿ; ಕರಾವಳಿಯ ಬೇಸಿಗೆಯ ಬೇಗೆಯಲ್ಲಿ  ಸೈಕಲ್ ಮೇಲೆ ಐಸ್ ಕ್ಯಾಂಡಿ ಡಬ್ಬ ಇಟ್ಟು ಊರೂರು ತಿರುಗಿ, ತಣ್ಣನೆಯ ಕುಲ್ಫಿಗಳನ್ನು ಮಾರುವುದು..

    October 28, 2017
    ...
    thailand-king-funeral-3
    ವಿದೇಶ

    ಚಿನ್ನ ಲೇಪಿತ ಬೆಳ್ಳಿಯ ಶವಪೆಟ್ಟಿಗೆಯಲ್ಲಿ ವರ್ಷಪೂರ್ತಿ ಕೊಳೆತ ಥಾಯ್‌ ದೊರೆಯ ದೇಹಕ್ಕೆ ಇಂದು ಅಂತ್ಯಕ್ರಿಯೆ!

    ವರ್ಷದ ಹಿಂದೆ ನಿಧನರಾಗಿದ್ದ ಥಾಯ್ಲೆಂಡ್‌ನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ಕಳೇಬರದ ಅಂತ್ಯಕ್ರಿಯೆಗೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜ ಎಂಬ ಖ್ಯಾತಿಗೆ ಒಳಗಾಗಿದ್ದ ಅದುಲ್ಯದೇಜ್‌ ತಮ್ಮ 88ನೇ ಇಳೀವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದರು. ಅಲ್ಲಿನ ಜನರ ಪಾಲಿಗೆ ‘ದೇವಮಾನವ’ರಾಗಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿ ಸುದೀರ್ಘ ಆಡಳಿತ ನಡೆಸಿದ್ದರು. 1946ರಲ್ಲಿ ಪಟ್ಟಕ್ಕೇರಿದ್ದ ಅವರ ಕಳೇಬರವನ್ನು ವರ್ಷದಿಂದ ಕಾಪಿಟ್ಟುಕೊಂಡ ದೇಶ ಒಂದು ವರ್ಷದ ಶೋಕಾಚರಣೆ ನಡೆಸಿತ್ತು. ಈಗಾಗಲೇ ಥಾಯ್ಲೆಂಡ್‌ನಲ್ಲಿ ಅಂತ್ಯಕ್ರಿಯೆ ಸಂಪ್ರದಾಯಗಳು ಆರಂಭಗೊಂಡಿವೆ. ಇಲ್ಲಿನ ಅರಮನೆಯಲ್ಲಿ ಬೌದ್ಧ ಧರ್ಮದ..

    October 26, 2017
    ...
    modi-amit
    ದೇಶ

    ಧರ್ಮ ಮೀರಿಸಿದ ಜಾತಿ ಅಜೆಂಡಾ: ಮೋದಿ- ಶಾ ಜೋಡಿಗೆ ಈ ಬಾರಿ ಗುಜರಾತ್‌ ಸುಲಭದ ತುತ್ತಲ್ಲ

    “ನನ್ನ 30 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಇಂತಹದೊಂದು ಚುನಾವಣೆಯ ಅಖಾಡವನ್ನು ನೋಡಿರಲಿಲ್ಲ,” ಎಂದರು ಆಶಿಶ್ ಅಮಿನ್. ಅಹಮದಬಾದ್‌ನಲ್ಲಿರುವ ‘ನವ ಗುಜರಾತ್‌ ಸಮಯ್‌’ ಪತ್ರಿಕೆಯ ರಾಜಕೀಯ ವಿಭಾಗದಲ್ಲಿ ಅವರೀಗ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಗುಜರಾತ್‌ ಚುನಾವಣೆಯ ಹಿನ್ನೆಲೆಯಲ್ಲಿ ಅನುಭವಿ ವರದಿಗಾರ ಅಮಿನ್‌ ಸಾಕಷ್ಟು ಒಳನೋಟಗಳೊಂದಿಗೆ ಮಾತನಾಡುತ್ತಿದ್ದಾರೆ. “ಇದೇ ಮೊದಲ ಬಾರಿಗೆ ಜಾತಿ ವಿಚಾರ ಚುನಾವಣೆಯ ಕೇಂದ್ರಸ್ಥಾನಕ್ಕೆ ಬಂದಿದೆ. ಕಳೆದ 22 ವರ್ಷಗಳಲ್ಲಿ ಗುಜರಾತ್‌ ಚುನಾವಣೆಗಳು ನಡೆದಿದ್ದು ಧರ್ಮ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆ. ಆದರೆ ಇದೇ ಮೊದಲ..

    October 24, 2017
    ...
    siddaramaiah-hegde-final
    ರಾಜ್ಯ

    ಧರ್ಮಸ್ಥಳದ ‘ಮೀಟರ್ ಬಡ್ಡಿ ವ್ಯವಹಾರ’ಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಹೀಗೇಕೆ ನಡೆದುಕೊಂಡರು?

    ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿಯ ಕೊನೆಯ ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಕ್ಷದ ಒಳಜಗಳದ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು. ಸುದ್ದಿಯಾಗದೇ ಹೋಗಿದ್ದು; ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮತ್ತು ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ ‘ಬಡ್ಡಿ ವ್ಯವಹಾರ’ದ ಲಾಭಾಂಶವನ್ನು ವಿತರಿಸಿ ಬಂದಿದ್ದು! ಸಮಾಜವಾದಿ ಹಿನ್ನೆಯ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ(ಎಸ್‌ಕೆಡಿಆರ್‌ಡಿಪಿ)ಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ..

    October 23, 2017
    ...
    home-for-rent-final
    ರಾಜ್ಯ

    ಮನೆ ಬಾಡಿಗೆಗೆ ಇದೆ; ಸಸ್ಯಹಾರಿಗಳಿಗೆ ಮಾತ್ರ: ಸೂರಿನ ವ್ಯಾಪಾರಕ್ಕೆ ಆಹಾರ ಪದ್ಧತಿಯೇ ಮಾನದಂಡ!

    ಮನೆ ಖಾಲಿ ಇದೆ; ಆದರೆ ಸಸ್ಯಹಾರಿಗಳಿಗೆ ಮಾತ್ರ… ಹೀಗೊಂದು ಫಲಕ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಮನೆಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವಾಗ ಬಾಡಿಗೆದಾರರ ಆಹಾರ ಪದ್ಧತಿಯನ್ನೇ ಮಾನದಂಡವಾಗಿಸಿಕೊಳ್ಳುವ ಪರಿಪಾಠ ಇದು. ಕಾನೂನಿ ಅಡಿಯಲ್ಲಿ ಖಾಸಗಿ ಆಸ್ತಿಯನ್ನು ಯಾರಿಗೆ ಬಾಡಿಗೆಗೆ ಅಥವಾ ಲೀಸ್‌ಗೆ ನೀಡಬೇಕು ಎಂಬುದನ್ನು ಮಾಲೀಕರೇ ನಿರ್ಧರಿಸುವ ಸ್ವಾತಂತ್ರ್ಯವಿದೆ. ಹಾಗಿದ್ದೂ, ‘ಸಸ್ಯಹಾರಿಗಳಿಗೆ ಮಾತ್ರ’ ಎಂಬ ಮನೆಗಳ ಮಾಲೀಕರ ನಿಯಮ, ಸಾಮಾಜಿಕ ನೆಲೆಯಲ್ಲಿ ಸಮುದಾಯವನ್ನು ಅವುಗಳ ಆಹಾರ ಪದ್ಧತಿಯ ಕಾರಣಕ್ಕೇ ಒಳಗೊಳ್ಳುವ ಅಥವಾ ದೂರ ಇಡುವ ಪ್ರಕ್ರಿಯೆಯಂತೆ ಕಾಣಿಸುತ್ತಿದೆ…

    October 21, 2017
    ...
    vidhan-soudha-doc-final
    ರಾಜ್ಯ

    ‘ಸಾಕ್ಷ್ಯಚಿತ್ರಗಳ ವಿವಾದಸೌಧ’: ನಿರ್ದೇಶಕರ ಬಿನ್ನಹಗಳೂ, ಸಾಮಾಜಿಕ ನ್ಯಾಯದ ಆಗ್ರಹಗಳೂ

    ಇದು ಕರ್ನಾಟಕದ ‘ಶಕ್ತಿಕೇಂದ್ರ’; ಜನ ಓಟು ಹಾಕಿ ಆಯ್ಕೆ ಮಾಡಿ ಕಳುಹಿಸುವ ಪ್ರತಿನಿಧಿಗಳು ‘ಸರಕಾರ ಕೆಲಸ’ವನ್ನು ‘ದೇವರ ಕೆಲಸ’ ಎಂದುಕೊಂಡು ಹೊಣೆಗಾರಿಕೆ ನಿಭಾಯಿಸಲು ಕಛೇರಿಗಳಿರುವ ಬೃಹತ್ ಕಟ್ಟಡ. ವಾಸ್ತುಶಿಲ್ಪದಲ್ಲಿ ಬ್ರಿಟನ್ ರಾಣಿಯ ಮನಸ್ಸನ್ನೂ ಕದ್ದ ಶಿಲ್ಪಕಲೆ ಇದು.  ಅಂದಿನ ಪ್ರಧಾನಿ ನೆಹರೂ ಅವರಿಂದ ಶಂಕುಸ್ಥಾಪನೆಗೊಂಡು, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೇಲ್ವಿಚಾರಣೆಯಲ್ಲಿ ಕಣ್ಮನ ಸೆಳೆಯುವಂತೆ ನಿರ್ಮಾಣಗೊಂಡ ಲ್ಯಾಂಡ್‌ಮಾರ್ಕ್‌ ವಿಧಾನಸೌಧ. ಐತಿಹಾಸಿಕ ಕಟ್ಟಡ ವಿಧಾನಸೌಧಕ್ಕೂ, ವಿವಾದಗಳಿಗೂ ಹತ್ತಿರದ ನಂಟಿದೆ. ಎಷ್ಟರ ಮಟ್ಟಿಗೆ ಎಂದರೆ; ಕಟ್ಟಡದ ನೀಲನಕ್ಷೆಯನ್ನು ಕಾರ್ಯರೂಪಕ್ಕೆ ತಂದ ಕೆಂಗಲ್ ಹನುಮಂತಯ್ಯ ಅವರೇ ಅದರ ಉದ್ಘಾಟನೆ..

    October 19, 2017
    ...
    tarana-burke-me-too-final
    ರಾಜ್ಯ

    ‘ಸಹಾನುಭೂತಿ- ಸಬಲೀಕರಣ’: ತರಾನ ಬುರ್ಕೆ ದಶಕದ ಹಿಂದೆ ಹುಟ್ಟುಹಾಕಿದ್ದು ‘#MeToo ಅಭಿಯಾನ’!

    ‘#MeToo ಅಥವಾ #ನಾನೂಕೂಡ’… ಹೀಗೊಂದು ಹ್ಯಾಶ್‌ಟ್ಯಾಗ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹಾಲಿವುಡ್‍ ನಿರ್ಮಾಪಕ ಹಾರ್ವೆ ವೈನ್‍ಸ್ಟೀನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಕೆಲವು ನಟಿಯರು ಕೇಸು ದಾಖಲಿಸಿದ್ದರು. ದೂರು ದಾಖಲಿಸಿದವರಿಗೆ ಬೆಂಬಲ ನೀಡುವ ಸಲುವಾಗಿ ಹಲವು ಖ್ಯಾತ ನಟಿಯರು ‘#MeToo’ ಬಳಸಿ, ತಮ್ಮ ಅನುಭವಗಳನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡತೊಡಗಿದರು. ಅದಕ್ಕೀಗ ಪ್ರಪಂಚದಾದ್ಯಂತ ಮಹಿಳಾ ಸಮುದಾಯವು ಸ್ಪಂದಿಸಲು ಆರಂಭಿಸಿದೆ. ಕರ್ನಾಟಕ ಕೂಡ ಹೊರತಾಗಿಲ್ಲ. ಈ ‘ನಾನೂಕೂಡ’ ಎಂಬ ಹ್ಯಾಶ್‌ಟ್ಯಾಗ್‌ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟರೆ ಕೆಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತವೆ…

    October 18, 2017
    ...
    sebastian-kurz-1
    ಸುದ್ದಿ ಸಾರ

    ‘ಪುಟ್ಟ ದೇಶಕ್ಕೊಬ್ಬ ಯುವ ನಾಯಕ’: ಆಸ್ಟ್ರಿಯಾದ ಅತ್ಯುನ್ನತ ಹುದ್ದೆಯ ಸನಿಹಕ್ಕೆ ಬಂದ ಸೆಬಾಸ್ಟಿಯನ್‌!

    ಯುರೋಪ್ ಖಂಡದ ನಟ್ಟನಡುವೆ ಇರುವ ಪುಟ್ಟ ದೇಶ ಆಸ್ಟ್ರಿಯಾ ಹೊಸ ನಾಯಕನ ನಿರೀಕ್ಷೆಯಲ್ಲಿದೆ. ಇಲ್ಲಿನ ಚುನಾವಣೆಯಲ್ಲಿ ಬಲಪಂಥೀಯ ಮನಸ್ಥಿತಿಯ- ಕನ್ಸರ್ವೇಟಿವ್‌ ಪಕ್ಷ- ಪೀಪಲ್ಸ್‌ ಪಾರ್ಟಿ ಜಯಗಳಿಸುವ ಸಾಧ್ಯತೆಯನ್ನು ಸಮೀಕ್ಷೆಗಳು ಮುಂದಿಟ್ಟಿವೆ. ಒಂದು ವೇಳೆ ಪೀಪಲ್ಸ್‌ ಪಾರ್ಟಿ ಅಧಿಕಾರಕ್ಕೆ ಬಂದರೆ, ಅದರ ಅಧ್ಯಕ್ಷ ಸೆಬಾಸ್ಟಿಯನ್‌ ಕರ್ಝ್‌ ದೇಶದ ಹೊಸ ಚಾನ್ಸಲರ್‌ ಆಗಲಿದ್ದಾರೆ. ಸೆಬಾಸ್ಟಿಯನ್‌ಗೆ ಈಗ 31 ವರ್ಷ! ಐವತ್ತರ ಆಸುಪಾಸಿನಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ‘ಯುವ ನಾಯಕ’ ಎಂದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಮೂವತ್ತು ಎಂಬುದು ರಾಜಕೀಯ..

    October 16, 2017
    ...
    gauri-killing-suspects-final
    GAURI LANKESH FILES

    ಗೌರಿ ಹತ್ಯೆ ಪ್ರಕರಣದಲ್ಲಿ ‘ತಿಪ್ಪೆ ಸಾರಿಸಿದ’ ಎಸ್‌ಐಟಿ: ಇಬ್ಬರು ಶಂಕಿತರ ಮೂರು ರೇಖಾಚಿತ್ರ ಬಿಡುಗಡೆ!

    ಬೆಂಗಳೂರಿನಲ್ಲಿ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು 40 ದಿನಗಳ ನಂತರ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳನ್ನು ಎಸ್‌ಐಟಿ ಶನಿವಾರ ಬಿಡುಗಡೆ ಮಾಡಿದೆ; ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ. ತನಿಖಾ ತಂಡಕ್ಕೆ ಲಭ್ಯವಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆ ಸಿಕ್ಕ ಶಂಕಿತರ ಚಹರೆಯನ್ನು ಆಧರಿಸಿ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಕಲಾವಿದರು ರೇಕಾಚಿತ್ರಗಳನ್ನು ಬಿಡಿಸಿದ್ದಾರೆ. “ಇದರಲ್ಲಿ ಇರಡು ರೇಖಾಚಿತ್ರಗಳು ನಿಖರವಾಗಿದ್ದು, ಇನ್ನೊಂದು ಚಿತ್ರ ಸಾಮ್ಯತೆಯ ಸಮೀಪದಲ್ಲಿದೆ,” ಎಂದು..

    October 14, 2017
  • 1
  • 2

Top