An unconventional News Portal.

    ...
    elphinstone-stampade-1
    ಸುದ್ದಿ ಸಾರ

    ಕಾಲ್ತುಳಿತಕ್ಕೆ 22 ಬಲಿ: ಮಳೆಯಿಂದ ಮುಂಬೈ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದುರಂತ

    ಮಹಾಮಳೆಯಿಂದ ಮೊದಲೇ ತತ್ತರಿಸಿದ್ದ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಕಾಲ್ತುಳಿತವೊಂದು ಸಂಭವಿಸಿದೆ. ಘಟನೆಯಲ್ಲಿ ಈವರೆಗೆ ಸಾವನ್ನಪ್ಪಿರುವ ಸಂಖ್ಯೆ 22ಕ್ಕೇರಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಎಲ್ಫಿಸ್ಟೋನ್ ರೈಲ್ವೆ ನಿಲ್ದಾಣದ ಪಾದಾಚಾರಿ ಮೇಲ್ಸೇತುವೆ ಮೇಲೆ ನಿಂತಿದ್ದ ಜನರಲ್ಲಿ 10.45ರ ಸುಮಾರಿಗೆ ಗೊಂದಲ ಉಂಟಾಯಿತು. ಈ ಸಮಯದಲ್ಲಿ ಮಳೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ನೂರಾರು ಜನ ಮೇಲ್ಸೇತುವೆ ಮೇಲೆ ಆಸರೆ ಪಡೆದುಕೊಂಡಿದ್ದರು. ಸೇತುವೆ ಕುಸಿಯುತ್ತಿದೆ ಎಂಬ ಜನ ಗಾಬರಿಗೊಂಡು ಅಡ್ಡಾದಿಡ್ಡಿ ಓಡಲು ಶುರುಮಾಡಿದರು. ಈ ಸಮಯದಲ್ಲಿ ನಡೆದ ಕಾಲ್ತುಳಿತದಿಂದಾಗಿ 22 ಜನ..

    September 29, 2017
    ...
    yashwanth-sinha-3
    ವಿಚಾರ

    ‘ಅರ್ಥ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವುದಕ್ಕಿಂತ; ಕುಟ್ಟಿ ಬೀಳಿಸುವುದು ಸುಲಭ’: ಯಶವಂತ್ ಸಿನ್ಹಾ

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರ ಬಂದ ನಂತರ ತೆಗೆದುಕೊಂಡ ಆರ್ಥಿಕ ನೀತಿಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಹಿರಿಯ ಬಿಜೆಪಿ ನಾಯಕ, ಆರ್ಥಿಕ ಸಚಿವರೂ ಆಗಿದ್ದ ಯಶವಂತ ಸಿನ್ಹಾ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಬರೆದ ಅಂಕಣ ಚರ್ಚೆಯನ್ನು ಹೊಸ ಆಯಾಮಕ್ಕೆ ಕೊಂಡೊಯ್ದಿದೆ. ಈ ಹಿನ್ನೆಲೆಯಲ್ಲಿ, ಸಿನ್ಹಾ ಬರೆದ ಅಂಕಣವನ್ನು ಯಥಾವತ್ತಾಗಿ ಅರುಣ ಕಾಸರಗುಪ್ಪೆ ‘ಸಮಾಚಾರ’ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದಾರೆ. ದೇಶದ ಅರ್ಥವ್ಯವಸ್ಥೆಗೆ ಕೇಂದ್ರ ಹಣಕಾಸು ಸಚಿವರು ತಂದಿಟ್ಟಿರುವ ಸ್ಥಿತಿ ನೋಡಿದ ಮೇಲೂ ಎದ್ದು ನಿಂತು ಸತ್ಯ ನುಡಿಯದಿದ್ದರೆ..

    September 28, 2017
    ...
    bjp-national-meet-1
    ದೇಶ

    ‘ಮೋದಿ ಅಲೆ’ಗೆ ಸಿಗದ ಸ್ಥಾನಮಾನ: ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಯ ‘ಸಪ್ತ ಸೂತ್ರಗಳು’!

    ಈಗಾಗಲೇ ಅಧಿಕಾರದಲ್ಲಿ ಮೂರೂವರೆ ವರ್ಷಗಳನ್ನು ಕಳೆದಿರುವ ಭಾರತೀಯ ಜನತಾ ಪಕ್ಷ, ಮತ್ತೆ ಅಧಿಕಾರಕ್ಕೆ ಏರುವ ಕನಸು ಕಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಮರಳಿ ಅಧಿಕಾರಕ್ಕೆ ಬರಲು ‘ಸಪ್ತ ಸೂತ್ರ’ಗಳನ್ನು ಪಕ್ಷ ಮುಂದಿಟ್ಟಿದೆ. ವಿಶೇಷ ಅಂದರೆ, ಎಲ್ಲಿಯೂ ಮೋದಿ ಅಲೆಯಾಗಲೀ, ವ್ಯಕ್ತಿ ಕೇಂದ್ರಿತ ಚುನಾವಣಾ ಪ್ರಚಾರದ ಮಾದರಿಯಾಗಲೀ ಸ್ಥಾನ ಪಡೆದುಕೊಂಡಿಲ್ಲ ಎಂಬುದು ವಿಶೇಷ. 2014ರಲ್ಲಿ ಬಿಜೆಪಿ ‘ಮೋದಿ ಅಲೆ’ಯನ್ನು ನೆಚ್ಚಿಕೊಂಡು ಚುನಾವಣೆಗೆ ಇಳಿದಿತ್ತು ಮತ್ತು ಅದರಲ್ಲಿ..

    September 27, 2017
    ...
    jayanth-patil-justice-hc
    ರಾಜ್ಯ

    ‘ಗುಜರಾತ್ ನಕಲಿ ಎನ್‌ಕೌಂಟರ್‌’ ಪ್ರಕರಣವನ್ನು ಸಿಬಿಐಗೆ ನೀಡಿದ್ದ ಹಿರಿಯ ನ್ಯಾ. ಪಟೇಲ್ ರಾಜೀನಾಮೆ ನೀಡಿದ್ದೇಕೆ?

    ಕರ್ನಾಟಕದ ಹೈಕೋರ್ಟ್‌ನಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಹಿರಿಯ ನ್ಯಾಯಾಧೀಶ, ಗುಜರಾತ್‌ ಮೂಲದ ಜಯಂತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ. ನ್ಯಾ. ಪಟೇಲ್‌ ಅವರ ರಾಜೀನಾಮೆಯನ್ನು ಸುಪ್ರಿಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಅಂಗೀಕರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಹಿರಿತನದ ಆಧಾರದ ಮೇಲೆ ಈ ಹಿಂದೆಯೇ ನ್ಯಾ. ಜಯಂತ್ ಪಟೇಲ್‌ ಗುಜರಾತ್‌ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಅವರನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತಾದರೂ, 2016ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಎಸ್‌. ಕೆ. ಮುಖರ್ಜಿ ಅಕ್ಟೋಬರ್‌..

    September 26, 2017
    ...
    maruthi-ravi-tv9
    ಟಿವಿ

    ‘ಉತ್ತಮ ಸಮಾಜ’ದಿಂದ ಹೊರಬಿದ್ದ ‘ಹಕ್ಕ’ ರವಿಕುಮಾರ್- ‘ಬುಕ್ಕ’ ಮಾರುತಿ!

    ಅದು ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದ್ದ ಸಮಯ. ಬಿ. ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ ಒಂದು ಭಾನುವಾರ ನೈಸ್‌ ವಿರುದ್ಧ ಪಾದಯಾತ್ರೆ ಆರಂಭಿಸಿದರು. ನಂತರ, ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌಡರು, “ಯಡಿಯೂರಪ್ಪ ಬಾ**” ಎಂದರು. ಸ್ಥಳದಲ್ಲಿದ್ದ ಟಿವಿ9 ವರದಿಗಾರೊಬ್ಬರು ಅದನ್ನು ಕಚೇರಿಗೆ ತಲುಪಿಸಿದರು. ಆಗ ಸಮಯ 11 ಗಂಟೆ. ಮಾಜಿ ಪ್ರಧಾನಿಗಳ ಭಾಷಣದ ವರದಿ ಚಿಕ್ಕ ಎವಿ (ಆಡಿಯೋ ವಿಝುವಲ್) ಪ್ರಸಾರವಾಯಿತು. ಆಗ ಎಲ್ಲಿದ್ದರೋ ಗೊತ್ತಿಲ್ಲ;..

    September 25, 2017
    ...
    modi-jaity-patel
    ದೇಶ

    ದಸರಾ ಹಬ್ಬಕ್ಕೆ ಬೆಲೆ ಏರಿಕೆಯ ಬಂಪರ್ ಕೊಡುಗೆ: ಪೆಟ್ರೋಲ್‌ ಯಾಕೆ ಜಿಎಸ್‌ಟಿ ಕೆಳಗೆ ಬರುತ್ತಿಲ್ಲ?

    ದಸರಾ ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಗೆ ಬೆಲೆ ಏರಿಕೆಯ ಬಿಸಿ ತಟ್ಟಲು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ಏರುತ್ತಿರುವ ಪೆಟ್ರೊಲ್‌ ಬೆಲೆ, ಮೂರು ವರ್ಷಗಳಲ್ಲಿ ದಾಖಲೆಯ ಏರಿಕೆ ಕಂಡಿದೆ. ತರಕಾರಿ, ಸೊಪ್ಪು, ಧಾನ್ಯಗಳು, ಅಡುಗೆ ಅನಿಲಗಳ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಮಧ್ಯಮ ವರ್ಗದ ಮಾಸಿಕ ವೆಚ್ಚದಲ್ಲಿ ಒಂದು ಅಂದಾಜಿನ ಪ್ರಕಾರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶೇ. 20ರಷ್ಟು ಹೆಚ್ಚಳವಾಗಿದೆ. ಬೆಲೆ ಏರಿಕೆಗೆ ವಿರೋಧ:  ಈಗಾಗಲೇ ಶಿವಸೇನೆ ಸೇರಿದಂತೆ ನಾನಾ ರಾಜಕೀಯ ಪಕ್ಷಗಳು ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿವೆ…

    September 25, 2017
    ...
    reddy-janashri-letter-final
    ಟಿವಿ

    ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!

    ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಹೊಸ ಸುದ್ದಿ ವಾಹಿನಿಗಳ ಆರಂಭಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅದೇ ವೇಳೆ ‘ಆರು ತಿಂಗಳಿನಿಂದ ಸಂಬಳ ಆಗಿಲ್ಲ’ ಎಂದು ಬಿಜೆಪಿ ನಾಯಕರೊಬ್ಬರು ಮಾಲೀಕರಾಗಿರುವ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು, ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಅವರುಗಳು ಬರೆದ ಎರಡು ಪ್ರತ್ಯೇಕ ಪತ್ರಗಳು ‘ಸಮಾಚಾರ’ಕ್ಕೆ ಲಭ್ಯವಾಗಿವೆ. ಒಂದು ಪತ್ರ ಕೈಬರಹದಲ್ಲಿದ್ದು, ಎರಡು ಪುಟಗಳಲ್ಲಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಆರ್ಥಿಕ ಸಂಕಷ್ಟಗಳನ್ನು ವಿವರಿಸುತ್ತದೆ. ಮತ್ತೊಂದು ಪತ್ರದಲ್ಲಿ ಪ್ರತಿಭಟನೆಯ ದಾರಿ ತುಳಿಯುವ ಮುನ್ಸೂಚನೆ..

    September 23, 2017
    ...
    vg-siddhartha-1
    ರಾಜ್ಯ

    ಕಾಫಿ ಕುಟುಂಬದ ಹಿನ್ನೆಲೆ, ಮಾವನ ರಾಜಕೀಯ ಪ್ರಭಾವ: ‘ಕಾಫಿ ಡೇ ಸಿದ್ದಾರ್ಥ್’ ಉದ್ಯಮಿಯಾಗಿದ್ದು ಹೇಗೆ?

    “ಎಂಟು ವರ್ಷದ ಕೆಳಗೆ, ನಾನು ಅಮೆರಿಕಾದ ಉದ್ಯಮಿ ಮೈಕೆಲ್ ಮೊರಿಟ್ಜ್‌ ಜತೆ ಊಟ ಮಾಡುತ್ತಿದ್ದೆ. ಈ ಸಮಯದಲ್ಲಿ ಅವರು ಅವತ್ತಿಗೆ ಎರಡು ಹೊಸ ಕಂಪನಿಗಳ ಮೇಲೆ ತಲಾ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ಕತೆಯನ್ನು ಹೇಳಿದರು. ಯಾರೂ ಹೂಡಿಕೆ ಮಾಡಲು ಮುಂದೆ ಬಾರದಿದ್ದ ಸಮಯದಲ್ಲಿ ಮೈಕೆಲ್ ಹಣ ಹೂಡಿದ್ದರು. ಮುಂದೆ ಅವು ಸಿಸ್ಕೊ ಮತ್ತು ಗೂಗಲ್ ಹೆಸರಿನಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದವು. ನನಗೆ ಅಂತಹ ಕತೆಗಳು ಸ್ಫೂರ್ತಿ ನೀಡುತ್ತವೆ. ಇವತ್ತು ಯಾರಾದರೂ ಶ್ರೀಮಂತರಿದ್ದರೆ, ಮುಂದಿನ 10..

    September 21, 2017
    ...
    mexico-2
    ವಿದೇಶ

    32 ವರ್ಷಗಳ ಹಿಂದಿನ ಕಹಿನೆನಪು ಮರುಕಳಿಸಿದಾಗ; ಕುಸಿದ ಕಟ್ಟಡಗಳು, ಪ್ರಾಣತೆತ್ತ ಮಕ್ಕಳು

    ಅಲ್ಲೀಗ ಎಲ್ಲಿ ನೋಡಿದರೂ ಕುಸಿದು ಬಿದ್ದ ಕಟ್ಟಡಗಳು, ಸಾಲು ಸಾಲು ಹೆಣಗಳು…ಹೆಚ್ಚು ಕಡಿಮೆ 32 ವರ್ಷಗಳ ಹಿಂದಿನ ಕಹಿ ನೆನಪನ್ನು ಮರುಕಳಿಸಿದ ದೃಶ್ಯಾವಳಿಗಳು… ಇದು ಮೆಕ್ಸಿಕೋದಲ್ಲಿ ಕೆಲವೇ ಹೊತ್ತಿನ ಮುಂಚೆ ದಾಖಲಾದ ಪ್ರಬಲ ಭೂಕಂಪನದ ಪರಿಣಾಮಗಳು. ಈವರೆಗೆ ಸುಮಾರು 149 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಸ್ಥಳೀಯ ಕಾಲಮಾನ ಮಂಗಳವಾರ ಶಾಲೆಗೆ ತೆರಳಿದ್ದ ಮಕ್ಕಳನ್ನೂ ಕೂಡ ಪ್ರಕೃತಿಯ ವಿಕೋಪ ಸುಮ್ಮನೆ ಬಿಡಲಿಲ್ಲ. ಈವರೆಗೆ ಸುಮಾರು 22 ಮಕ್ಕಳು..

    September 20, 2017
    ...
    People hold placards and candles during a vigil for Gauri Lankesh, a senior Indian journalist who according to police was shot dead outside her home on Tuesday by unidentified assailants in southern city of Bengaluru, in Ahmedabad
    GAURI LANKESH FILES

    ಮೂರು ದಿನಕ್ಕೆ ‘ಮೂವತ್ತಾರು ಥಿಯರಿ’: ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ಮಿಸ್ಟರಿ!

    ರಾಜ್ಯದ ರಾಜಧಾನಿಯಲ್ಲಿ ನಡೆದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನ ಕಳೆದಂತೆ ನಿಗೂಢತೆಗೆ ಹೆಚ್ಚು ಸುತ್ತಿಕೊಳ್ಳುತ್ತಿದೆ. 13 ದಿನಗಳ ಹಿಂದೆ ರಾಜರಾಜೇಶ್ವರಿನಗರದ ತಮ್ಮ ಮನೆಯ ಮುಂದೆ ಗೌರಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ರಾಜ್ಯ ಸರಕಾರ ಕುಟುಂಬದವರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು. ಸುಮಾರು 100 ಜನರ ತಂಡ ಕಳೆದ 12 ದಿನಗಳಲ್ಲಿ ನಾನಾ ಜಾಡು ಹಿಡಿದು ತನಿಖೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೇಷನ್ ಹುಟ್ಟುಹಾಕಿರುವ, ನ್ಯೂಸ್‌..

    September 18, 2017

Top