An unconventional News Portal.

    ...
    dk-3
    ರಾಜ್ಯ

    ‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’: ಐಟಿ ದಾಳಿ ನಂತರ ಡಿಕೆಶಿ ನೀಡಿದ ಹೇಳಿಕೆ ಹಿಂದಿರುವ ನಿಗೂಢಾರ್ಥಗಳು!

    “ಕಳೆದ ಮೂರು ದಿನಗಳಿಂದ ನನ್ನ ಮನೆ, ನನ್ನ ಸ್ನೇಹಿತರ ಮನೆ, ನನ್ನ ಸಂಬಂಧಿಕರ ಮನೆಗಳನ್ನು ಹಗಲೂ ರಾತ್ರಿ ಕಾಯ್ದಿದ್ದೀರಿ. ತಮ್ಮದೇ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚಿತ್ರಿಸಿದ್ದೀರಿ. ಒಂದನ್ನು ಸ್ಪಷ್ಟಪಡಸುತ್ತೇನೆ; ನನ್ನ ಕಷ್ಟಕಾಲದಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡಿದ, ಬೆಂಬಲ ನೀಡಿದ ಮಾಧ್ಯಮಗಳಿಗೆ, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನಾನಾ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಕಾನೂನು ಬಿಟ್ಟು, ಸಂವಿಧಾನವನ್ನು ಬಿಟ್ಟು ನಡೆದುಕೊಂಡಿಲ್ಲ. ನನ್ನ ದೆಹಲಿ ಮನೆಯಲ್ಲಿ, ಎಲ್ಲೆಲ್ಲಿ ಐಟಿ ದಾಳಿ ನಡೆದಿದೆಯೋ, ಅದರ ಪಂಚನಾಮದ..

    August 5, 2017
    ...
    dks-1
    ರಾಜ್ಯ

    ಡಿಕೆಶಿ ‘ಬಂಧನ’ದ ಸುತ್ತ ಲೆಕ್ಕಾಚಾರಗಳು: ಐಟಿ ದಾಳಿಯ ಅಂತ್ಯ; ಹೊಸ ರಾಜಕೀಯ ಅಧ್ಯಾಯದ ಆರಂಭಕ್ಕೆ ಮುನ್ನುಡಿ!

    ಮೂರು ದಿನಗಳಿಂದ ರಾಜ್ಯದ ಪ್ರಭಾವಿ ಸಚಿವ ಡಿ. ಕೆ. ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆಯುತ್ತಿರುವ ಐಟಿ ದಾಳಿಯ ಅಂತ್ಯ, ಹೊಸ ರಾಜಕೀಯ ಅಧ್ಯಾಯವೊಂದರ ಆರಂಭಕ್ಕೆ ಮುನ್ನುಡಿ ಬರೆಯಲಿದೆ. ಹೀಗೊಂದು ವಿಶ್ಲೇಷಣೆ ಈಗ ರಾಜಕೀಯ ಹಾಗೂ ಕಾನೂನು ಪರಿಣಿತರ ವಲಯದಲ್ಲಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ದಾಳಿ ಒಂದು ವೇಳೆ ಡಿ. ಕೆ. ಶಿವಕುಮಾರ್ ಅವರ ಬಂಧನದಲ್ಲಿ ಅಂತ್ಯವಾದರೆ, ಅದು ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಅನುವು ಮಾಡಿಕೊಡಲಿದೆ. ಅದರಲ್ಲೂ ವಿಶೇಷವಾಗಿ ಆಡಳಿತರೂಢ ಕಾಂಗ್ರೆಸ್..

    August 4, 2017
    ...
    dks-2
    ರಾಜ್ಯ

    ಐಟಿ ತೋಡಿದ ‘ಹಳ್ಳ’ಕ್ಕೆ ಡಿಕೆಎಸ್ ಎಂಬ ‘ತೋಳ’ ಬಿದ್ದಾಗ; ಯಥಾಸ್ಥಿತಿಗೆ ಇಂಬು ನೀಡುತ್ತಿರುವ ಪ್ರತಿಕ್ರಿಯೆಗಳು!

    “ನಾನು ರಾಜಕಾರಣಿ ಮಾತ್ರವಲ್ಲ; ಉದ್ಯಮಿ ಕೂಡ…” ಹೀಗಂತ ಹಿಂದೊಮ್ಮೆ ಹೇಳಿಕೊಂಡಿದ್ದರು ಇಂಧನ ಸಚಿವ ಡಿ. ಕೆ. ಶಿವಕುಮಾರ್. ಸಾತನೂರು ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಶಿವಕುಮಾರ್ ಇವತ್ತಿಗೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ಗ್ರಾನೈಟ್ ಉದ್ಯಮ, ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹಣ ಗಳಿಸುವ ಮೂಲಗಳನ್ನು ಸೃಷ್ಟಿಕೊಂಡಿದ್ದಾರೆ. ಗುರುತರವಾದ ಆರೋಪಗಳನ್ನು ನಾನಾ ನ್ಯಾಯಾಲಯಗಳಲ್ಲಿ ಎದುರಿಸುತ್ತಿದ್ದಾರೆ. ಇವರ ಮೇಲೆ ಐಟಿ ದಾಳಿ ನಡೆದಿರುವುದು ರಾಜ್ಯದ ಜನರಿಗಾಗಲೀ, ಸ್ವತಃ ಶಿವಕುಮಾರ್ ಅವರಿಗಾಗಲೀ ಅಚ್ಚರಿ ಮೂಡಿಸುವ ಬೆಳವಣಿಗೆ ಏನಲ್ಲ…

    August 3, 2017
    ...
    DK-Shivakumar_Eagleton resort
    ರಾಜ್ಯ

    ರೆಸಾರ್ಟ್ ರಾಜಕೀಯಕ್ಕೆ ಐಟಿ ದಾಳಿಯ ಟ್ವಿಸ್ಟ್: ಒಂದೇ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಇಷ್ಟೆಲ್ಲಾ ನಡೆಸಬೇಕಾ?

    ರಾಜ್ಯಕ್ಕೆ ಚಿರಪರಿಚಿತವಾಗಿದ್ದ ‘ರೆಸಾರ್ಟ್ ರಾಜಕಾರಣ’ಕ್ಕೆ ಬುಧವಾರ ಬೆಳಗ್ಗೆ ಐಟಿ ದಾಳಿಯ ‘ಶಾಕ್’ ನೀಡಲಾಗಿದೆ. ಗುಜರಾತ್ ಕಾಂಗ್ರೆಸ್ ಶಾಸಕರು ಬಿಡಾರ ಹೂಡಿದ್ದ ಬಿಡದಿಯ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆ 7 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಜತೆಗೆ, ಅವರ ಉಪಚಾರಕ್ಕೆ ನಿಂತಿದ್ದ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಮನೆಗಳ ಮೇಲೆ ದಾಳಿ ನಡೆದಿದೆ. ಶಿವಕುಮಾರ್ ತಮ್ಮ, ಸಂಸದ ಡಿ. ಕೆ. ಸುರೇಶ್ ಹಾಗೂ ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆದಿದೆ ಎಂದು ವರದಿಗಳು..

    August 2, 2017
    ...
    lingayat-religion-rally
    ರಾಜ್ಯ

    ‘ಅಲ್ಪಸಂಖ್ಯಾತ ಲಿಂಗಾಯತ ಧರ್ಮ’ದ ಘೋಷಣೆ ಹೇಗೆ?: ಮೀಸಲಾತಿ ಕೋಟದಲ್ಲಿ ಆಗುವ ವ್ಯತ್ಯಾಸಗಳೇನು?

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗಲೇ, ಸ್ವತಂತ್ರ ಲಿಂಗಾಯತ ಧರ್ಮದ ಬೇಡಿಕೆ ಹೊಸ ಉತ್ಸಾಹಗಳೊಂದಿಗೆ ಎದ್ದು ಬಂದಿದೆ. ಅಧಿಕಾರದಲ್ಲಿರುವವರ ಒತ್ತಾಸೆಗಳೂ ಇದರ ಹಿಂದಿರುವುದು, ಸಹಜವಾಗಿಯೇ ಪ್ರತ್ಯೇಕ ಧರ್ಮದ ಬೇಡಿಕೆಗೆ ಆನೆ ಬಲ ಸಿಕ್ಕಂತಾಗಿದೆ. ಹೀಗಾಗಿಯೇ ಹಿಂದೆಂದೂ ಇಲ್ಲದಷ್ಟು, ಈ ಬಾರಿ ‘ಸ್ವತಂತ್ರ ಲಿಂಗಾಯತ ಧರ್ಮ’ಕ್ಕಾಗಿ ಸಲ್ಲಿಕೆಯಾಗುತ್ತಿರುವ ಮನವಿಗೆ ಭಾರಿ ಪ್ರಚಾರವೂ ಸಿಗುತ್ತಿದೆ. ಹಾಗೆ ನೋಡಿದರೆ, ಗ್ರಾಮೀಣ ಭಾಗದ ವೀರಶೈವ- ಲಿಂಗಾಯತ ಸಮುದಾಯದಲ್ಲಿ ಸ್ವತಂತ್ರ ಧರ್ಮದ ತಾತ್ವಿಕ ಚರ್ಚೆಗಳು ದೊಡ್ಡ ಪರಿಣಾಮಗಳನ್ನು ಇನ್ನೂ ಮೂಡಿಸಿಲ್ಲ. ಆದರೆ ರಾಜಕೀಯದ ಪಡಸಾಲೆಯಲ್ಲಿ ಹಾಗೂ..

    August 1, 2017

Top