An unconventional News Portal.

    ...
    youtube-1
    ರಾಜ್ಯ

    ‘ಯೂ- ಟ್ಯೂಬ್ ಚಾನಲ್’ಗಳಲ್ಲಿ ನಡೆಯುತ್ತಿರುವ ಈ ಹೊಸ ದಂಧೆಯ ಬಗ್ಗೆ ಓದಿದರೆ ನೀವು ‘ಶಾಕ್’ ಆಗ್ತೀರಾ; ಯಾಕೆ ಗೊತ್ತಾ?

    ಹೀಗೆ, ಅಗತ್ಯವೇ ಇಲ್ಲದ, ದಿಕ್ಕು ತಪ್ಪಿಸುವಂತಹ, ಆ ಕ್ಷಣಕ್ಕೆ ಓದುಗರ ಅಥವಾ ನೋಡುಗರ ಭಾವನೆ ಕೆರಳಿಸುವಂತಹ ‘ತಲೆ ಬರಹ’ದಿಂದಾಗಿ ಅಂತರ್ಜಾಲದಲ್ಲಿ ನಿಮ್ಮ ಅಭಿರುಚಿ ಹಾಳಾಗುತ್ತಿದೆ. ಉದಾಹರಣೆಗೆ; ನಾವಿಲ್ಲಿ ನೀಡಿರುವ ತಲೆ ಬರಹವನ್ನು ನೀವು ಕ್ಲಿಕ್ ಮಾಡಿ, ಈ ಸ್ಟೋರಿಯನ್ನು ಓದಲು ಆರಂಭಿಸಿರೋದು! ಆದರೆ, ನಮ್ಮ ಉದ್ದೇಶ ದಿಕ್ಕಿ ತಪ್ಪಿಸುವ ತಲೆ ಬರಹ ನೀಡಿ, ನಿಮ್ಮ ಕ್ಲಿಕ್ ಸಂಪಾದನೆ ಮಾಡುವುದಲ್ಲ. ಬದಲಿಗೆ, ಅಂತರ್ಜಾಲದ ಸೇವೆಗಳನ್ನು ಇವತ್ತಿಗೆ ಅಪಾಯಕಾರಿ ಮನಸ್ಥಿತಿಗಳು ಹೇಗೆ ಆವರಿಸಿಕೊಳ್ಳುತ್ತಿವೆ ಎಂಬ ಕುರಿತು ನಿಮ್ಮನ್ನು ಎಚ್ಚರಿಸುವುದು. ನೀವೂ ಕೂಡ..

    August 18, 2017
    ...
    hartal-hdk-rape-case
    ರಾಜ್ಯ

    ಸಂದರ್ಶನಕ್ಕೆ ಹೋದವರಿಗೆ ಸಿಕ್ಕಿತ್ತು ‘ಸ್ಕೂಪ್’: ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದ ‘ಸೆನ್ಸೇಷನ್ ಸ್ಟೋರಿ’ ಹಿಂದಿನ ಅಸಲಿ ಕತೆ!

    ಇದು, ಏಳು ವರ್ಷಗಳ ಹಿಂದೆ ಮೇ ತಿಂಗಳ ಮೊದಲ ಭಾನುವಾರ ರಾಜ್ಯದಲ್ಲಿ ಸೆನ್ಸೇಷನ್ ಹುಟ್ಟುಹಾಕಿದ್ದ ವರದಿಯೊಂದರ ಬಗೆಗಿನ ವರದಿ. ಅಂದು ಸಚಿವರಾಗಿದ್ದ ಹರತಾಳು ಹಾಲಪ್ಪ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ‘ತನಿಖಾ ವರದಿ’ಯೊಂದರ ಅಸಲಿ ಕತೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರದ ಮೊದಲ ವಿಕೆಟ್ ಪತನಕ್ಕೆ ಕಾರಣವಾದ ಸುದ್ದಿ ಹುಟ್ಟಲು ಕಾರಣವಾದ ಘಟನಾವಳಿಗಳನ್ನು ‘ಸಮಾಚಾರ’ ಇಲ್ಲಿ ಕಟ್ಟಿಕೊಡಲಿದೆ. ಅದು, ಮೇ. 2, 2010. ಭಾನುವಾರ. ಬೆಳಗ್ಗೆ ‘ವಿಜಯ ಕರ್ನಾಟಕ’ ಪತ್ರಿಕೆ..

    August 17, 2017
    ...
    adani-modi-1
    ದೇಶ

    ಬಾಯಲ್ಲಿ ಕಪ್ಪು ಹಣ; ಬಗಲಲ್ಲಿ ಉದ್ಯಮಿ ಗೌತಮ್ ಅದಾನಿ: 1500 ಕೋಟಿ ವಂಚನೆ ಬಗ್ಗೆ ಪ್ರಧಾನಿ ಮೋದಿ ಏನಂತಾರೆ?

    ‘ಕಪ್ಪು ಹಣ’ದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಅವರ ಉದ್ಯಮಿ ಗೆಳೆಯ ಗೌತಮ್ ಅದಾನಿ ಸುಮಾರು 1500 ಕೋಟಿ ಹಣವನ್ನು ‘ತೆರಿಗೆ ಕಳ್ಳರ ಸ್ವರ್ಗ’ಕ್ಕೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತೆರಿಗೆ ಗುಪ್ತಚರ ನಿರ್ದೇಶನಾಲಯ (ಡಿಐಆರ್)ದ 97 ಪುಟಗಳ ವರದಿಯನ್ನು ‘ದಿ ಗಾರ್ಡಿಯನ್’ ಬಹಿರಂಗಪಡಿಸಿದ್ದು, ಅದಾನಿ ಗ್ರೂಪ್ ಕಂಪನಿಗಳು ಕೃತಕ ಬಿಲ್ ಸೃಷ್ಟಿಸಿ 1500 ಕೋಟಿ ರೂಪಾಯಿಗಳನ್ನು ವಿದೇಶಗಳಿಗೆ ರವಾನಿಸಿರುವುದು ಡಿಐಆರ್ ತನಿಖೆ ಬಯಲಿಗೆಳೆದಿದೆ. ವಿದ್ಯುತ್ ವಾಹಕ (ಎಲೆಕ್ಟ್ರಿಸಿಟಿ ಟ್ರಾನ್ಸ್’ಮಿಷನ್) ಉಪಕರಣಗಳ..

    August 17, 2017
    ...
    indira-canteen-2
    ಸುದ್ದಿ ಸಾರ

    ‘ಅವರದ್ದು ಮನ್ ಕಿ ಬಾತ್; ನಮ್ಮದು ವಾಂಗೀಬಾತ್’: ರಾಜಧಾನಿಯ ಬಡವರ ಪಾಲಿನ ‘ಅನ್ನ ಭಾಗ್ಯ’ ಇಂದಿರಾ ಕ್ಯಾಂಟೀನ್

    ಅವರದ್ದು ಮೂರು ವರ್ಷಗಳಲ್ಲಿ ‘ಮನ್ ಕಿ ಬಾತ್’, ನಮ್ಮದು… ವಾಂಗೀಬಾತ್… ಹೀಗಂತ ಹೇಳಿದ್ದು ಸಿಎಂ ಸಿದ್ದರಾಮಯ್ಯ. ಬೆಂಗಳೂರಿನ ಅಶೋಕ ಪಿಲ್ಲರ್ ಸಮೀಪದ ‘ಇಂದಿರಾ ಕ್ಯಾಂಟೀನ್’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಮಾತುಗಳಲ್ಲಿ ಛೇಡಿಸಿದರು. “ಇಂದಿರಾ ಗಾಂಧಿ ಬಡವರನ್ನು, ರೈತರನ್ನು ಬ್ಯಾಂಕ್ ಮೆಟ್ಟಿಲು ಹತ್ತುವಂತೆ ಮಾಡಿದ್ದರು. ಆದರೆ, ಡಿಮಾನಟೈಸೇಷನ್ ಹೆಸರಿನಲ್ಲಿ ಪ್ರಧಾನಿ ಮೋದಿ ಬ್ಯಾಂಕ್’ಗಳಿಂದ ಬಡವರನ್ನು, ರೈತರನ್ನು ದೂರ ಇಡಲು ಹೊರಟಿದ್ದಾರೆ. ಕಪ್ಪು ಹಣ ತರುತ್ತೇನೆ ಎಂದರು. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದರು. ಆದರೆ..

    August 16, 2017
    ...
    BJP National Council
    ರಾಜ್ಯ

    ಮೂರು ದಿನಗಳಲ್ಲಿ ಸಾಲು ಸಾಲು ಸಭೆಗಳು: ‘ಒಡೆದ ಮನೆ’ಗೆ ಅಮಿತ್ ಶಾ ಭೇಟಿ ನೀಡಿದ ಭವಿಷ್ಯದ ಸೂಚನೆಗಳು!

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ದಿನಗಳ ರಾಜ್ಯ ಭೇಟಿ, ಕೇಸರಿ ಪಕ್ಷದ ಇವತ್ತಿನ ಮನಸ್ಥಿತಿ ಹಾಗೂ ಭವಿಷ್ಯದಲ್ಲಿ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿಗೆ ಮುನ್ನುಡಿ ಬರೆಯುವ ಪ್ರವಾಸದಂತಿದೆ. ಶನಿವಾರ ಬೆಳಗ್ಗೆಯಿಂದ ಅಮಿತ್ ಶಾ ಸಾಲು ಸಾಲು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ; ಜಾತಿ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ನಾಯಕರು ಹಾಗೂ ಪ್ರಮಖರ ಜತೆ ಸಮಾಲೋಚಿಸುತ್ತಿದ್ದಾರೆ. ಮಾರ್ಗ ಮಧ್ಯೆ ಸಿಗುವ ಜನರ ಮಾತುಗಳಿಗೆ ಕವಿಯಾಗುತ್ತಿದ್ದಾರೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಬಿಚ್ಚಿಡುತ್ತಿದ್ದಾರೆ. ‘ಉತ್ತರ ಪ್ರದೇಶ..

    August 14, 2017
    ...
    ದೇಶ

    ಗೋರಖಪುರದಲ್ಲಿ ಮಕ್ಕಳ ಸರಣಿ ಸಾವು; ಜೀವಕ್ಕಿಂತ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಎಂದ ಆದಿತ್ಯನಾಥ್ ಸರಕಾರ!

    ಕಳೆದ 48 ಗಂಟೆಗಳಲ್ಲಿ 30 ಮಕ್ಕಳ ಸಾವು. ಕಳೆದ 9 ದಿನಗಳ ಅಂತರದಲ್ಲಿ ಕೊನೆಯುಸಿರೆಳೆದ ಒಟ್ಟು ಮಕ್ಕಳ ಸಂಖ್ಯೆ 60… ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖಪುರದ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಈ ಸಾವುಗಳು ಸಂಭವಿಸಿವೆ ಎಂದು ವರದಿಗಳು ಹೇಳುತ್ತಿವೆ. ಆಸ್ಪತ್ರೆಗೆ ಆಮ್ಲಜನಕ ಪೂರೈಸಲು ಖಾಸಗಿ ಕಂಪನಿ ‘ಪುಷ್ಪಾ ಸೇಲ್ಸ್ ಪ್ರೈವೆಟ್ ಲಿಮಿಟೆಡ್’ಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಳೆದ 6 ತಿಂಗಳಿನಿಂದ..

    August 12, 2017
    ...
    Engineering-students
    ರಾಜ್ಯ

    ಆಸಕ್ತಿ ಕಳೆದುಕೊಂಡ ವಿದ್ಯಾರ್ಥಿಗಳು: ಕಳೆಗುಂದುತ್ತಿರುವ ಎಂಜಿನಿಯರಿಂಗ್ ಆಕಾಂಕ್ಷೆ; ನಿರುದ್ಯೋಗದ ಸವಾಲುಗಳು

    ದಶಕದ ಹಿಂದೆ ಮಧ್ಯಮ ವರ್ಗದ ಮನೆಗಳಲ್ಲಿ ಭವಿಷ್ಯ ಕನಸುಗಳನ್ನು ಸೃಷ್ಟಿಸುತ್ತಿದ್ದ ಎಂಜಿನಿಯರಿಂಗ್ ಪದವಿ ರಾಜ್ಯದಲ್ಲಿ ತನ್ನ ‘ಪ್ರಭೆ’ಯನ್ನು ಕಳೆದುಕೊಳ್ಳುವ ಹಂತ ತಲುಪಿದೆ. ಈ ಸಾರಿ ಕರ್ನಾಟಕ- ಸಾಮಾನ್ಯ ಪ್ರವೇಶ ಪರೀಕ್ಷೆಯ ಕೌನ್ಸಿಲಿಂಗ್ ವೇಳೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಬಯಸುವವರ ಸಂಖ್ಯೆಯಲ್ಲಿ ಶೇ. 20ರಷ್ಟು ಇಳಿಮುಖವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಒಂದು ಕಡೆ ಅಮೆರಿಕಾದಲ್ಲಿ ಟ್ರಂಪ್ ಅಧ್ಯಕ್ಷರಾದ ನಂತರ ತಂದ ಆಡಳಿತಾತ್ಮಕ ಬದಲಾವಣೆಗಳು ಹಾಗೂ ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿರುವ ಐಟಿ..

    August 10, 2017
    ...
    guj-rajyasabha-1
    ದೇಶ

    ರಾಜ್ಯಸಭಾ ಚುನಾವಣೆ: ಬಾಪೂ ನಾಡಿನಲ್ಲಿ ಫಲ ನೀಡದ ಬಿಜೆಪಿಯ ‘ಸಾಮ ದಾನ ಭೇದ ದಂಡ’ದ ತಂತ್ರಗಾರಿಕೆ

    ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ; ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಜೋಡಿಯ ‘ಸಾಮ ದಾನ ಭೇದ ದಂಡ’ದ ಕಾರ್ಯತಂತ್ರ ನೆಲಕಚ್ಚಿದೆ. ಚುನಾವಣೆ ನಡೆದ ಮೂರು ಸ್ಥಾನಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹಮದ್ ಪಟೇಲ್ ಜಯಗಳಿಸಿದ್ದಾರೆ. ಇನ್ನೆರಡು ಸ್ಥಾನಗಳಿಗೆ ನಿರೀಕ್ಷೆಯಂತೆಯೇ ಬಿಜೆಪಿ ಅಭ್ಯರ್ಥಿಗಳಾದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಆಯ್ಕೆಯಾಗಿದ್ದಾರೆ. ಗುಜರಾತ್ ಕಾಂಗ್ರೆಸ್ ಪಕ್ಷದ 44 ಶಾಸಕರು ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡುವ..

    August 9, 2017
    ...
    modi-pinarayi-politics
    ಸುದ್ದಿ ಸಾರ

    ‘ರಾಜಕೀಯ ಹತ್ಯೆ’ ಆರೋಪಕ್ಕೆ ‘ಜಾಹೀರಾತಿ’ನ ಪ್ರತಿಕ್ರಿಯೆ: ಅರುಣ್ ಜೇಟ್ಲಿ ಭೇಟಿಗೆ ಪಿಣರಾಯಿ ವಿಜಯನ್ ಉತ್ತರ

    ಎಡಪಂಥೀಯ ಆಲೋಚನೆಯ ಸಿಪಿಐ (ಎಂ) ಆಡಳಿತ ನಡೆಸುತ್ತಿರುವ ಕೇರಳಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿ ನೀಡುವ ಮೂಲಕ ರಾಷ್ಟ್ರಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ. ಕೇರಳದಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಎಡ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು. ಅದಕ್ಕೀಗ ರಾಷ್ಟ್ರೀಯ ಆಯಾಮ ನೀಡುವ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಭೇಟಿ ಮಹತ್ವದ ತಿರುವು ನೀಡಿದೆ. ಸ್ವಾತಂತ್ರ್ಯ ನಂತರ, ವಿಶೇಷವಾಗಿ 70ರ ದಶಕದ ನಂತರ ಕೇರಳದಲ್ಲಿ ‘ರಾಜಕೀಯ..

    August 7, 2017
    ...
    india-china
    ದೇಶ

    ಭಾರತ- ಚೈನಾ ನಡುವೆ ಯುದ್ಧದ ಕಾರ್ಮೊಡ; ಬೆನ್ನಲ್ಲೇ ಶಾಂತಿ ಮಂತ್ರ: ಇದು ಬಿಲಿಯನ್ ಡಾಲರ್ ವಾಣಿಜ್ಯ ಸಂಬಂಧದ ಕತೆ!

    ಭಾರತ- ಚೈನಾ ನಡುವಿನ ಗಡಿ ವಿವಾದದ ‘ಶಾಂತಿಯುತ ಉಪಸಂಹಾರ’ಕ್ಕೆ ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನದ ಹಿಂದಿರುವುದು ವಾಣಿಜ್ಯ ಉದ್ದೇಶಗಳು. ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಡೋಕ್ ಲಾ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಉಬಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಇದಾದ ಮರುದಿನವೇ ಚೈನಾ ಗಡಿಯಿಂದ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿತ್ತು. ಕಳೆದ ಕೆಲವು ತಿಂಗಳಿನಿಂದ ಉಬಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗಡಿ..

    August 7, 2017

Top