An unconventional News Portal.

    ...
    narendra modi
    ದೇಶ

    ‘ಬಸ್ ಮೋದಿಜಿ ಬಸ್’: ನೋಟ್ ಬ್ಯಾನ್ ಮಾಡಿ ದೇಶವಾಸಿಗಳನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿರಿ!

    ಸುಮಾರು 3 ಲಕ್ಷ ಕೋಟಿ ರೂಪಾಯಿಗಳು… ಇದು, ಕಳೆದ ವರ್ಷ ನವೆಂಬರ್ ಸಮಯದಲ್ಲಿ ಶೇಖರಣೆಗೊಂಡಿದೆ ಎಂದು ನಂಬಲಾದ ‘ಕಪ್ಪು ಹಣ’ದ ಭಾರಿ ಮೊತ್ತ. 8ನೇ ತಾರೀಖು ಪ್ರಧಾನಿ ಮೋದಿ ಚಲಾವಣೆಯಲ್ಲಿದ್ದ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸರಕಾರ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಕಪ್ಪು ಹಣದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಸಮರ, ನಕಲಿ ನೋಟುಗಳ ಚಲಾವಣೆಗೆ ಕಡಿವಾಣ, ಈ ಮೂಲಕ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಹೊಡೆತ ಹೀಗೆ ಸಾಲು ಸಾಲು ಆಶಯಗಳನ್ನು ಭಿತ್ತುವ ಪ್ರಯತ್ನವೂ ಇದರ ಜತೆಗೆ ತಳುಕು ಹಾಕಿಕೊಂಡಿತು…

    August 31, 2017
    ...
    somanath-nayak-heggade
    ರಾಜ್ಯ

    ಸೋಮನಾಥ ನಾಯಕ್ vs ವೀರೇಂದ್ರ ಹೆಗ್ಗಡೆ: ಧರ್ಮಸ್ಥಳಕ್ಕೆ ಅವಮಾನ; ಏನಿದು ಪ್ರಕರಣ?

    ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನೂ ಮೀರಿ ಧರ್ಮಸ್ಥಳ, ಧರ್ಮಾಧಿಕಾರಿ ಹಾಗೂ ಅವರ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡಿದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಕೆ. ಸೋಮನಾಥ ನಾಯಕ್‌ಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ… ಹೀಗೊಂದು ಸುದ್ದಿ ಹೊರ ಬಿದ್ದಿದೆ ಮತ್ತು ಅದು ಸತ್ಯದ ಒಂದು ಮುಖ ಅಷ್ಟೆ. ಧರ್ಮಸ್ಥಳದ ಆಡಳಿತಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಆರೋಪ ಮಾಡಿಕೊಂಡು ಬಂದ ಈ ಸೋಮನಾಥ ನಾಯಕ್ ಯಾರು? ಅವರ ಹಿನ್ನೆಲೆ..

    August 30, 2017
    ...
    rbi-bad-loan-list
    ಸುದ್ದಿ ಸಾರ

    ‘ಪಾಪರ್ ಆದ’ ಕಾರ್ಪೊರೇಟ್ ಕುಳಗಳು: ಆರ್‌ಬಿಐ ಎರಡನೇ ಪಟ್ಟಿಯಲ್ಲಿ ವಿಡಿಯೋಕಾನ್ ಮತ್ತಿತರರು

    ಸಾಲ ಪಡೆದು, ಮರುಪಾವತಿ ಮಾಡಲಾಗದ ಸುಸ್ಥಿದಾರರ ಹೊಸ ಪಟ್ಟಿಯೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದೆ. ವಿಡಿಯೋಕಾನ್, ಜೆಪಿ ಅಸೋಸಿಯೇಟ್ಸ್, ಐವಿಆರ್‌ಸಿಎಲ್, ವಿಸಾ ಸ್ಟೀಲ್ಸ್ ಮತ್ತಿತರ ಕಂಪನಿಗಳ ಹೆಸರುಗಳಿರುವ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ‘ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್’ಗೆ ಕಳುಹಿಸಿಕೊಟ್ಟಿದೆ ಎಂದು ‘ಮನಿ ಕಂಟ್ರೋಲ್’ ಜಾಲತಾಣ ವರದಿ ಮಾಡಿದೆ. ಉತ್ತಮ್ ಗಾಲ್ವ, ಕ್ಯಾಸ್ಟೆಕ್ಸ್, ಜೇಸ್ವಾಲ್ ನಿಕೋ, ರುಚಿ ಸೋಯಾ, ನಾಗಾರ್ಜುನ ಆಯಿಲ್ ಅಂಡ್ ಆರ್ಚಿಡ್ ಕೆಮಿಕಲ್ಸ್, ಈಸ್ಟ್ ಕೋಸ್ಟ್ ಎನರ್ಜಿ, ಎಸ್‌ಇಎಲ್ ಮ್ಯಾನುಫ್ಯಾಕ್ಟರಿಂಗ್, ಸೋಮಾ ಎಂಟರ್‌ಪ್ರೈಸಸ್, ಏಷಿಯನ್..

    August 29, 2017
    ...
    ram-rahim-1
    ದೇಶ

    ‘ಅತ್ಯಾಚಾರಗಳ ಮಹರಾಜ್’ಗೆ 20 ವರ್ಷ ಜೈಲು: 15 ವರ್ಷಗಳ ನಂತರ ಸಾಧ್ವಿಗಳಿಗೆ ಧಕ್ಕಿತು ನ್ಯಾಯ

    ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ, ಹರಿಯಾಣದ ಸ್ವಘೋಷಿತ ದೇವಮಾವನ ಗುರ್ಮೀತ್ ರಾಮ್ ರಹೀಮ್ಗೆ 20 ವರ್ಷಗಳ ಶಿಕ್ಷೆ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತು. ಭಾರಿ ಬಿಗಿ ಭದ್ರತೆ ನಡುವೆ ರಾಮ್ ರಹೀಮ್ ಬಂಧನಕ್ಕೆ ಒಳಪಟ್ಟಿರುವ ರೋಹ್ಟಾಕ್ ಜೈಲಿಗೆ ಭೇಟಿ ನೀಡಿದ ನ್ಯಾಯಾಧೀಶ ಜಗ್ದೀಪ್ ಸಿಂಗ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಶುಕ್ರವಾರ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇದೇ ನ್ಯಾಯಾಧೀಶರು, ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು…

    August 28, 2017
    ...
    dipak-misra
    ದೇಶ

    ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದ ನ್ಯಾ. ದೀಪಕ್ ಮಿಶ್ರಾ ಈಗ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

    ಸುಪ್ರಿಂ ಕೋರ್ಟ್ 45ನೇ ಮುಖ್ಯ ನಾಯಮೂರ್ತಿಯಾಗಿ ಒರಿಸ್ಸಾ ಮೂಲದ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 64 ವರ್ಷದ ಮಿಶ್ರಾ, ಫೆ. 14, 1977ರಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. 1996ರಲ್ಲಿ ಅವರನ್ನು ಒರಿಸ್ಸಾದ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. ವರ್ಷದ ನಂತರ ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಯಿತು. 2009ರಲ್ಲಿ ಪಾಟ್ನಾ ಹೈಕೋರ್ಟ್ ಮುಖ್ಯನಾಯಮೂರ್ತಿಯಾಗಿ ಮಿಶ್ರಾ ನೇಮಕಗೊಂಡರು. 2010ರಲ್ಲಿ ಅವರು ದಿಲ್ಲಿ ಹೈಕೋರ್ಟ್ಗೆ ವರ್ಗಾವಣೆಗೊಂಡರು. 2011, ಅಕ್ಟೋಬರ್ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ..

    August 28, 2017
    ...
    Kalanidhi Maran and Kavya Maran, Kaveri Kalanidhi
    ಟಿವಿ

    ‘ಉದಯ ನ್ಯೂಸ್’ ಮುಚ್ಚಲು ನೋಟಿಸ್: ನಷ್ಟ ತುಂಬಲು ಮಾರನ್ ಮಗಳ ‘ಪಾಕೆಟ್ ಮನಿ’ ಸಾಕು!

    ಕೋಪ, ಸಿಟ್ಟು, ಬೇಜಾರು, ಅಸಹನೆ, ಆಕ್ರೋಶ, ಖುಷಿ, ಸಂತಸ, ಸಂತೃಪ್ತಿ, ಉತ್ಸಾಹ… ಹೀಗೆ ನಾನಾ ಭಾವನೆಗಳನ್ನು ಅವುಗಳ ಅತಿರೇಕದಲ್ಲಿ ಅನುಭವಿಸುವ ಸಮುದಾಯ ಪತ್ರಕರ್ತರದ್ದು. ಇವುಗಳ ಜತೆಗೆ, ಉದ್ಯೋಗದ ಅಭದ್ರತೆಯೂ ಅವರನ್ನು ಯಾವ ಪರಿಯಲ್ಲಿ ಕಾಡಬಹುದು ಎಂಬುದಕ್ಕೆ ಕರ್ನಾಟಕದ ಸುದ್ದಿ ಮಾಧ್ಯಮದಲ್ಲಿ ಸದ್ಯ ನಡೆದಿರುವ ಈ ಬೆಳವಣಿಗೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ..

    August 26, 2017
    ...
    dera_sacha_sauda1
    ದೇಶ

    ‘ಧರ್ಮ, ಉದ್ಯಮ, ಜನಪ್ರಿಯತೆ’: ರಾಮ್ ರಹೀಮ್ ಪ್ರಕರಣದಿಂದ ಕಲಿಯಬೇಕಿರುವ ಪ್ರಮುಖ ಪಾಠ ಇಷ್ಟೆ

    “ನಾನು ನಿನ್ನನ್ನು ಇಲ್ಲಿಯೇ ಕೊಂದು ಹೂತು ಹಾಕಬಲ್ಲೆ. ನಿನ್ನ ಕುಟುಂಬದ ಸದಸ್ಯರು ನನ್ನ ಅನುಯಾಯಿಗಳು ಮತ್ತು ನನ್ನ ಬಗ್ಗೆ ಅವರಿಗೆ ಕುರುಡು ನಂಬಿಕೆ ಇದೆ. ನನಗೆ ಸರಕಾರಗಳ ಮಟ್ಟದಲ್ಲಿಯೂ ಸಂಪರ್ಕಗಳಿವೆ. ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರುಗಳು ನನ್ನ ಬಳಿ ಸಹಾಯ ಕೋರಿ ಬರುತ್ತಾರೆ. ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಮನಸ್ಸು ಮಾಡಿದರೆ ಸರಕಾರಿ ಸೇವೆಯಲ್ಲಿರುವ ನಿನ್ನ ಕುಟುಂಬ ಸದಸ್ಯರನ್ನು ಕೆಲಸದಿಂದ ಕಿತ್ತು ಹಾಕಿಸುತ್ತೇನೆ. ನನ್ನ ಹಿಂಬಾಲಕರಿಂದ ಅವರನ್ನು..

    August 26, 2017
    ...
    nasreen-metai-profile
    ರಾಜ್ಯ

    ತ್ರಿವಳಿ ತಲಾಖ್ ತೀರ್ಪು: ‘ಸಿಹಿ’ಯ ನಿಜವಾದ ಪಾಲುದಾರರು ಕರ್ನಾಟಕದ ನಸ್ರೀನ್ ‘ಮಿಠಾಯಿ’!

    ಸುಮಾರು 1400 ವರ್ಷಗಳ ಇತಿಹಾಸವಿದ್ದ ಸುನ್ನಿ ಮುಸ್ಲಿಂ ಸಮುದಾಯದವರ ‘ತ್ರಿವಳಿ ತಲಾಖ್’ ಆಚರಣೆ ವಿರುದ್ಧ ಸುಪ್ರಿಂ ಕೋರ್ಟ್ ನೀಡಿದ ಬಹುಮತದ ಐತಿಹಾಸಿಕ ಆದೇಶ ದೇಶಾದ್ಯಂತ ಹೊಸ ಅಲೆಯನ್ನು ಸೃಷ್ಟಿಸಿದೆ. ಮುಸ್ಲಿಂ ಮಹಿಳೆಯರ ‘ಲಿಂಗ ಸಮಾನತೆ’ಯ ಕನಸನ್ನು ಇನ್ನಷ್ಟು ನಿಚ್ಚಳಗೊಳಿಸಿದೆ. ಮುಸ್ಲಿಂ ಬಹುಸಂಖ್ಯಾತರಾಗಿರುವ ಪಾಕಿಸ್ತಾನದಂತಹ ದೇಶಗಳಲ್ಲಿ ಈ ಪದ್ಧತಿ, ಆಚರಣೆ ಹಿಂದೆಯೇ ನಿಷೇಧಗೊಂಡಿತ್ತು. ಇದೀಗ, ಅದೇ ಸಾಲಿಗೆ ಜಾತ್ಯಾತೀತ ಮೌಲ್ಯಗಳ ಸಂವಿಧಾನವನ್ನು ಹೊಂದಿರುವ ಭಾರತ ಕೂಡ ಸೇರಿಕೊಳ್ಳಲಿದೆ. ಮಂಗಳವಾರ ನ್ಯಾಯಾಲಯದ ತೀರ್ಪು ಹೊರಬೀಳುತ್ತಲೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ..

    August 23, 2017
    ...
    supreme-court-triple-talaq
    ದೇಶ

    ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’: ಕೇಂದ್ರ ಸರಕಾರದ ಅಂಗಳಕ್ಕೆ ಚೆಂಡು; ಕಾನೂನು ರಚಿಸಲು 6 ತಿಂಗಳ ಕಾಲಾವಕಾಶ

    ದೇಶದ ಬಹುಚರ್ಚಿತ ‘ತ್ರಿವಳಿ ತಲಾಖ್’ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಪಂಚ ಸದಸ್ಯರ ನ್ಯಾಯಪೀಠ ಮಂಗಳವಾರ ತೀರ್ಪು ನೀಡಿದೆ. ಮೂವರು ನ್ಯಾಯಾಧೀಶರು, ಮುಸ್ಲಿಂ ಮಹಿಳೆಯರಿಗೆ ಬಾಯ್ಮಾತಿನಲ್ಲಿ ವಿಚ್ಚೇದನ ನೀಡುವ ಆಚರಣೆ ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’ ಎಂದು ಹೇಳಿದ್ದಾರೆ. ಇಬ್ಬರು ನ್ಯಾಯಾಧೀಶರು ಆಚರಣೆಯ ಸಿಂದುತ್ವವನ್ನು ಎತ್ತಿ ಹಿಡಿದಿದ್ದಾರೆ. ನ್ಯಾ. ರೋಹಿಗ್ಟನ್ ನಾರಿಮನ್, ನ್ಯಾ. ಉದಯ್ ಲಲಿತ್ ಹಾಗೂ ನ್ಯಾ. ಜೋಸೆಫ್ ಕುರಿಯನ್ ತ್ರಿವಳಿ ತಲಾಖ್ ವಿರುದ್ಧ ನಿಲುವು ತೆಗೆದುಕೊಂಡಿದ್ದಾರೆ. ನ್ಯಾಯಾಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಾಧೀಶರಾದ ಅಬ್ದುಲ್ ನಝೀರ್ ಹಾಗೂ ಜೆ…

    August 22, 2017
    ...
    Narayana_Murthy-Vishal_Sikka_
    ರಾಜ್ಯ

    ‘ಇನ್ಫೋಸಿಸ್ ಅಂತರಂಗ’: ಮೋದಿಯನ್ನು ಹೋಲುವ ವಿಶಾಲ್ ಸಿಕ್ಕಾ; ಅದ್ವಾನಿ ಆಗಲು ಒಪ್ಪದ ನಾರಾಯಣ ಮೂರ್ತಿ!

    ಬೆಂಗಳೂರು ಮೂಲದ ಸಾಫ್ಟ್’ವೇರ್ ದಿಗ್ಗಜ ಕಂಪನಿ ಇನ್ಫೋಸಿಸ್ ಒಳಗಿನ ಇತ್ತೀಚಿನ ಬೆಳವಣಿಗೆಗಳು ಸದ್ಯಕ್ಕೆ ಸರಿಹೋಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. 2014ರಲ್ಲಿ ಕಂಪನಿಯ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ವಿಶಾಲ್ ಸಿಕ್ಕಾ ಸದ್ಯ ರಾಜೀನಾಮೆ ನೀಡಿದ್ದಾರೆ. ಕೆಲಕಾಲ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರ ಜಾಗಕ್ಕೆ ಹಂಗಾಮಿ ಕಾರ್ಯನಿರ್ಹಣಾಧಿಕಾರಿ ನೇಮಕ ಮಾಡಲಾಗಿದೆ. ಈಗಾಗಲೇ ಶೇರು ಮಾರುಕಟ್ಟೆಯಲ್ಲಿ ಸಾವಿರದ ಗಡಿ ದಾಟಿದ್ದ ಇನ್ಫೋಸಿಸ್ ಶೇರುಗಳ ಬೆಲೆ ಇಳಿಮುಖವಾಗಿದೆ. ಆಡಳಿತ ಮಂಡಳಿ ಮತ್ತು ಸಂಸ್ಥಾಪಕರ ನಡುವಿನ ಬಹಿರಂಗ ಕಿತ್ತಾಟಗಳು, ಸಾಕಷ್ಟು ಹೆಸರು..

    August 21, 2017

Top