An unconventional News Portal.

  ...
  jio-hacked-4
  ಸುದ್ದಿ ಸಾರ

  ರಿಲಯನ್ಸ್ ಜಿಯೋ ಗ್ರಾಹಕರ ಖಾಸಗಿ ಮಾಹಿತಿ ಬಹಿರಂಗ: ಸಮಜಾಯಿಷಿ ನೀಡಿದ ಟೆಲಿಕಾಂ ಸಂಸ್ಥೆ

  ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಗ್ರಾಹಕರ ಖಾಸಗಿ ವಿವರಗಳು ಬಹಿರಂಗವಾಗಿವೆ. ಉಚಿತ ಸೇವೆ ಹೆಸರಿನಲ್ಲಿ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟ ಜಿಯೋ ಶೇಖರಿಸಿಕೊಂಡಿದ್ದ ಗ್ರಾಹಕರ ಮಾಹಿತಿಯನ್ನು ವೆಬ್‌ಸೈಟ್‌ ಒಂದು ಭಾನುವಾರ ರಾತ್ರಿ ಬಹಿರಂಗಪಡಿಸಿದೆ. ಈ ಮೂಲಕ ದೇಶದಲ್ಲಿ ನಡೆದ ಬಹೊದೊಡ್ಡ ಮಾಹಿತಿ ಸೋರಿಕೆ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ‘ಹ್ಯಾಕಿಂಗ್‌’ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ರಿಲಯನ್ಸ್ ಜಿಯೋ, “ಗ್ರಾಹಕರು ನೀಡಿರುವ ಮಾಹಿತಿ ಭದ್ರವಾಗಿದೆ,” ಎಂದು ಸಮಜಾಯಿಷಿ ನೀಡಿದೆ. ನಡೆದಿದ್ದೇನು?:  ಭಾನುವಾರ ರಾತ್ರಿ ಮ್ಯಾಜಿಕ್‌ಪಿಕೆ ಎಂಬ..

  July 10, 2017
  ...
  bgs-mlc-final
  ರಾಜ್ಯ

  ಕೊನೆಗೂ, ಮೃತದೇಹ ಆಸ್ಪತ್ರೆಯಿಂದ ಹೊರಬಂದಾಗ ಮಡುಗಟ್ಟಿದ ದುಃಖದ ಕಟ್ಟೆ ಒಡೆಯಿತು…

  “ಬಡವರಿಗೆ ಕಾಯಿಲೆ ಬರಬಾರದು. ಬಂದರೂ ಸಾವು ಬರಬಾರದು. ಸತ್ತರೂ ಇಂತಹ ಆಸ್ಪತ್ರೆಗಳಲ್ಲಿ ಸಾಯಬಾರದು…” ಹೀಗಂತ ಹೇಳುತ್ತಲೇ ಕಣ್ಣಿನಲ್ಲಿ ನೀರು ತುಂಬಿಕೊಳ್ಳಲು ಪ್ರಯತ್ನಿಸಿದರು ಕಂಪ್ಲಿ ಮೂಲದ ಮೆಹಬೂಬ್. ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಕಚೇರಿಯ ಮುಂದೆ ನಿಂತಿದ್ದ ಅವರಲ್ಲಿ ಭಾವನೆಗಳೇ ಸತ್ತು ಹೋದಂತಿತ್ತು.  ಸತತ 40ಕ್ಕೂ ಹೆಚ್ಚು ಗಂಟೆಗಳ ಕಾಲ ಆಸ್ಪತ್ರೆ, ಪೊಲೀಸ್‌ ಠಾಣೆ ಸುತ್ತಾಟದಲ್ಲಿ ಮೃತಪಟ್ಟ ಪತ್ನಿಗಾಗಿ ಕಣ್ಣೀರು ಸುರಿಸಲು ಅವರ ಬಳಿ ಸಮಯ ಕೂಡ ಇರಲಿಲ್ಲ; ವಾತಾವರಣವೂ ಇರಲಿಲ್ಲ. ಆದರೂ..

  July 10, 2017
  ...
  bgs-global-hospital-bangalore-1
  ರಾಜ್ಯ

  ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ತಾಯಿ ಶವಕ್ಕಾಗಿ 36 ಗಂಟೆಗಳಿಂದ ಕಾಯುತ್ತಿದೆ ಕಂಪ್ಲಿಯ ಬಡ ಕುಟುಂಬ

  ಕ್ಯಾನ್ಸರ್‌ ಕಾಯಿಲೆಯಿಂದ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪಡೆಯಲು ಕಂಪ್ಲಿ ಮೂಲದ ಕುಟುಂಬವೊಂದು ಸುಮಾರು 36 ಗಂಟೆಗಳಿಂದ ಪರದಾಡುತ್ತಿರುವ ಸನ್ನಿವೇಶ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಈಗ ಜಾರಿಯಲ್ಲಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗಾಗಿ ಸರಕಾರದ ವಿಮಾ ಯೋಜನೆ ಧನ ಸಹಾಯ ನೀಡುತ್ತದೆ. ಖಾಸಗಿ ಆಸ್ಪತ್ರೆಗಳ ಮೂಲಕ ಸರಕಾರದ ವಿಮೆ ಹಣದಲ್ಲಿ ಆರೋಗ್ಯ ಸೇವೆಯನ್ನು ಈ ಕುಟುಂಬಗಳು ಪಡೆದುಕೊಳ್ಳುತ್ತವೆ. ಆದರೆ ಅಂತಿಮ ಹಂತದಲ್ಲಿ ಆಸ್ಪತ್ರೆಗಳು ‘ವಿನಾಕಾರಣ’ ಸೃಷ್ಟಿಸುವ ಸನ್ನಿವೇಶಗಳು ಹೇಗೆ ಶವವನ್ನು ಪಡೆಯಲು ಒಂದೂವರೆ ದಿನಗಳಿಂದ..

  July 9, 2017
  ...
  war-is-terror
  ದೇಶ

  ‘ಕಾಸ್ಟ್ ಆಫ್ ವಾರ್’: ಯುದ್ಧ ಎಂದರೆ ಬರೀ ಮದ್ದು ಗುಂಡುಗಳ ಕಾದಾಟ ಅಲ್ಲವೋ ಅಣ್ಣಾ!

  ಯುದ್ಧ ಎಂದರೆ; ಉನ್ಮಾದ, ರಣೋತ್ಸಾಹ, ವಿಜಯ, ಬಲಪ್ರದರ್ಶನ, ಬಲಿದಾನ… ಯುದ್ಧ ಎಂದರೆ; ಸಾವು- ನೋವು, ರಕ್ತಪಾತ, ಅಶಾಂತಿ, ಅನಗತ್ಯ ಕಾದಾಟ… ಅಷ್ಟೇ ಅಲ್ಲ, ಯುದ್ಧ ಎಂದರೆ ಅಪಾರ ಪ್ರಮಾಣದ ಹಣದ ಹೂಡಿಕೆ, ವೆಚ್ಚ ಮತ್ತು ಆರ್ಥಿಕತೆ ಮೇಲೆ ಭಾರಿ ಪರಿಣಾಮ ಕೂಡ. ಆಧುನಿಕ ಪ್ರಪಂಚದಲ್ಲಿ ಬಹುತೇಕ ದೇಶಗಳು ಒಂದಿಲ್ಲೊಂದು ಕಾರಣಕ್ಕೆ ಯುದ್ಧವನ್ನು ಮಾಡಿವೆ, ಯುದ್ಧದ ಅನುಭವಗಳನ್ನು ಪಡೆದುಕೊಂಡಿವೆ. ಭಾರತ ಕೂಡ ಸ್ವಾತಂತ್ರ್ಯ ನಂತರ ನೆರೆಯ ದೇಶಗಳ ನಡುವೆ ಐದು  ಪ್ರಮುಖ ಯುದ್ಧಗಳನ್ನು ಮಾಡಿದೆ. ಇವುಗಳ ವೆಚ್ಚ ಕಾಲಕಾಲಕ್ಕೆ ಹೆಚ್ಚಾಗುತ್ತಲೇ ಬಂದಿದೆ…

  July 8, 2017
  ...
  metro-maramari-final
  ರಾಜ್ಯ

  ‘ನಮ್ಮ ಮೆಟ್ರೊ’ ಸ್ಥಗಿತ: ಬಿಎಂಆರ್‌ಸಿಎಲ್‌ ಸಿಬ್ಬಂದಿ ಕಾನೂನನ್ನು ಏಕೆ ಕೈಗೆತ್ತಿಕೊಂಡರು?

  ಮೊನ್ನೆಮೊನ್ನೆಯಷ್ಟೆ ಮೊದಲ ಹಂತದ ಅದ್ಧೂರಿ ಉದ್ಘಾಟನೆಗೆ ಸಾಕ್ಷಿಯಾಗಿದ್ದ, ಅನಾವಶ್ಯಕವಾಗಿ ಹಿಂದಿ ಫಲಕಗಳನ್ನು ಬಳಸಿ ಸುದ್ದಿಯಲ್ಲಿದ್ದ ‘ನಮ್ಮ ಮೆಟ್ರೊ’ದ ರೈಲುಗಳ ಸೇವೆ ಶುಕ್ರವಾರ ಮುಂಜಾನೆ ಸ್ಥಗಿತಗೊಂಡಿದೆ. ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ನಡೆದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಹಾಗೂ ಮೆಟ್ರೊ ಸಿಬ್ಬಂದಿ ನಡುವಿನ ಮಾರಾಮಾರಿ ಹಾಗೂ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯತನವನ್ನು ವಿರೋಧಿಸಿ ಸಿಬ್ಬಂದಿಗಳು ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಮೇಲ್ನೋಟಕ್ಕೆ ಇದು ಕೆಎಸ್ಐಎಸ್‌ಎಫ್‌ ಹಾಗೂ ಮೆಟ್ರೊ ಸಿಬ್ಬಂದಿಗಳ..

  July 7, 2017
  ...
  ashutosh-maharaj-1
  ದೇಶ

  ‘ಸ್ವಾಮಿಜಿ ಸತ್ತಿಲ್ಲ; ಸಮಾಧಿ ಸ್ಥಿತಿಯಲ್ಲಿದ್ದಾರೆ’: ಮೃತ ದೇಹದ ಸಂರಕ್ಷಣೆಗೆ ಒಪ್ಪಿದ ನ್ಯಾಯಾಲಯ!

  ‘ಸ್ವಾಮಿಜಿ ಇನ್ನೂ ಸತ್ತಿಲ್ಲ. ಸಮಾಧಿ ಸ್ಥಿತಿಯಲ್ಲಿದ್ದಾರೆ. ಇವತ್ತಲ್ಲ ನಾಳೆ ಎದ್ದು ಬರುತ್ತಾರೆ. ಹಾಗಾಗಿ ಅವರ ದೇಹವನ್ನು ರಕ್ಷಿಸಿ ಇಡಬೇಕು’ ಎಂಬ ಅನುಯಾಯಿಗಳ ಬೇಡಿಕೆಯೊಂದನ್ನು ಪಂಜಾಬ್- ಹರಿಯಾಣ ಹೈಕೋರ್ಟ್‌ ಬುಧವಾರ ಎತ್ತಿಹಿಡಿದಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಗುರು, ಸತ್ಸಂಗಿ, ನಾನಾ ದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ್ದ ಅಶುತೋಶ್ ಮಹರಾಜ್‌ ಸಾವಿನ ಪ್ರಕರಣಕ್ಕೆ ಹೊಸ ತಿರುವುದು ಲಭ್ಯವಾಗಿದೆ. ನ್ಯಾಯಾಲಯ ವೈದ್ಯರಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸ್ಪಟ್ಟ ಸ್ವಾಮಿ ದೇಹವನ್ನು ರಕ್ಷಿಸಿ ಇಡಲು ಒಪ್ಪಿಗೆ ಸೂಚಿಸಿದೆ..

  July 6, 2017
  ...
  gideon-1
  ಪತ್ರಿಕೆ

  ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

  ‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’; ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ..

  July 5, 2017
  ...
  lecturers-apt-final
  ರಾಜ್ಯ

  ‘ನಿಧಾನ ಸೌಧ’ಕ್ಕೆ ತಲುಪಿದ ಅಂತಿಮ ಪಟ್ಟಿ: ಸಹಾಯಕ ಪ್ರಾಧ್ಯಾಪಕರ ನೇಮಕ ಯಾವಾಗ?

  “ನಮ್ಮ ಕಡೆಯಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂಬಂಧ ದಾಖಲೆಗಳ ಪರಿಶೀಲನೆ ನಡೆದು ಸರಕಾರಕ್ಕೆ ಕಳುಹಿಸಿದ್ದೇವೆ. ಇನ್ನೊಂದು ವಾರದೊಳಗೆ ಕೌನ್ಸಿಲಿಂಗ್ ನಡೆಸಲು ದಿನಾಂಕ ನಿಗದಿಯಾಗಲಿದೆ,” ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಅಜಯ್‌ ನಾಗಭೂಷಣ್ ತಿಳಿದರು. ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸುಮಾರು 2 ಸಾವಿರ ಉದ್ಯೋಗ ಆಕಾಂಕ್ಷಿಗಳು ಮತ್ತೊಮ್ಮೆ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ‘ಸಮಾಚಾರ’ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, “ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಇನ್ನೂ 213 ಅಭ್ಯರ್ಥಿಗಳಿಂದ ಪೂರ್ಣ ಪ್ರಮಾಣದ ದಾಖಲೆಗಳನ್ನು ನಿರೀಕ್ಷೆ..

  July 5, 2017
  ...
  sanitary-napkin2
  ದೇಶ

  ಡಿಯರ್ ಮೋದಿಜಿ, ಮಹಿಳಾ ಸಬಲೀಕರಣ ಓಕೆ; ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ಜಿಎಸ್‌ಟಿ ಯಾಕೆ?

  “ಗ್ರಾಮೀಣ ಭಾರತದಲ್ಲಿ ಋತುಚಕ್ರ ಅಥವಾ ಮುಟ್ಟು ಎಂಬುದು ನಿಷೇಧಿತ ಪದದಂತೆ ಬಳಕೆಯಾಗುತ್ತದೆ. ಈ ಕುರಿತು ಮಾತನಾಡುವುದು, ಚರ್ಚೆ ಮಾಡುವುದು ಮತ್ತು ಮಾಹಿತಿ ವಿನಿಮಯ ಕಷ್ಟವಾಗಿದೆ. ಇದಕ್ಕೆ ಸಾಮಾಜಿಕ ಅಸಹ್ಯಭಾವವೊಂದು ಅಂಟಿಕೊಂಡಿದೆ…” ಹೀಗಂತ ಹೇಳುತ್ತದೆ ಡಿಸೆಂಬರ್‌ 2015ರಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಋತುಚಕ್ರ ಸ್ವಚ್ಚತೆ ನಿರ್ವಹಣೆ ಮಾರ್ಗಸೂಚಿ’ ಕಡತದ ಮುನ್ನಡಿ. ಇದನ್ನು ಬಿಡುಗಡೆ ಮಾಡುವ ಮೂಲಕ ಮುಟ್ಟಿನ ಕುರಿತು ರಾಷ್ಟ್ರಮಟ್ಟದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರಿಕೊಂಡಿತು. ಯುನಿಸೆಫ್ ಮಾರ್ಗದರ್ಶನದಲ್ಲಿ..

  July 4, 2017
  ...
  nijagunananda-swamy-final
  ರಾಜ್ಯ

  ಬ್ರಾಹ್ಮಣ್ಯದಿಂದ ಬಸವತತ್ವದೆಡೆಗೆ: ‘ನಿಷ್ಠೂರವಾದಿ ನಿಜಗುಣಾನಂದ’ ಸ್ವಾಮಿ ನಿಜಕ್ಕೂ ಯಾರು?

  ನೀವು ದೇವರನ್ನು ಪೂಜೆ ಮಾಡುವ ಮೊದಲು; ತಂದೆ ತಾಯಿಗಳನ್ನು ಪೂಜೆ ಮಾಡಿ… ಗುರು ಹೇಳುವ ಎಲ್ಲಾ ಮಾತುಗಳನ್ನು ನಂಬಬೇಡಿ… ಮೂಢ ನಂಬಿಕೆಗಳನ್ನು ಆಹಾರ ಮಾಡಿಕೊಂಡ ಪಂಚಾಂಗ ಹೇಳುವವರನ್ನು ವಿರೋಧಿಸಿ, ಅಪ್ಲಿಕೇಶನ್ ಹಾಕಿಕೊಂಡು ಯಾರೂ ಜಾತಿಯಲ್ಲಿ ಹುಟ್ಟುವುದಿಲ್ಲ; ಅಷ್ಟಕ್ಕೂ ಜಾತಿ ಪದ್ಧತಿ ಎಂಬುದೇ ಇಲ್ಲ… ಜನಿವಾರ ಹಾಕಿದಾಕ್ಷಣ ಬ್ರಾಹ್ಮಣ ಆಗುವುದಿಲ್ಲ…ಈ ದೇಶದ ಸಮಸ್ಯೆಗಳಿಗೆ ತುಪ್ಪ ತಿನ್ನುವವರೇ ಕಾರಣ…ನನ್ನನ್ನು ಸ್ವಾಮಿ ಎಂದು ಯಾರೂ ಕರೆಯುವುದಿಲ್ಲ; ಯಾಕೆಂದರೆ ನಾನು ಗುಡಿ- ಗುಂಡಾರ, ಪಾದಪೂಜೆಗಳನ್ನು ನಂಬುವವನಲ್ಲ… ವಯಸ್ಸು 60ರ ಸಮೀಪದಲ್ಲಿದ್ದೂ ಆರೋಗ್ಯಪೂರ್ಣವಾಗಿರುವ ದೇಹ,..

  July 3, 2017

Top