An unconventional News Portal.

    ...
    kannada-flag-socila-network-reactions
    ರಾಜ್ಯ

    ಇದು ಜುಲೈ ತಿಂಗಳ ‘ಕನ್ನಡ ರಾಜ್ಯೋತ್ಸವ’: ಜಾಲತಾಣಗಳಲ್ಲಿ ವಿರೋಧ ಕಟ್ಟಿಕೊಂಡ ಬಿಜೆಪಿ

    ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿಗೇ ಕರ್ನಾಟಕದಲ್ಲಿ ಧ್ವಜದ ವಿಚಾರ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜದ ವಿನ್ಯಾಸ ಹಾಗೂ ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಿಸುವ ಸಂಬಂಧ ಸಮಿತಿಯೊಂದನ್ನು ರಚಿಸಿದೆ. ಇದಕ್ಕೆ ಪ್ರಮುಖ ಪ್ರತಿ ಪಕ್ಷ ಬಿಜೆಪಿ ನೀಡಿದ ವ್ಯತಿರಿಕ್ತ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೇಸರಿ ಪಕ್ಷ’ಕ್ಕೆ ವಿರೋಧ ವ್ಯಕ್ತವಾಗಲು ಕಾರಣವಾಯಿತು. ಬಿಜೆಪಿ ಕನ್ನಡ ವಿರೋಧಿಯಲ್ಲ ಎಂಬ ಸಮಜಾಯಿಷಿ ನೀಡುವ ಪ್ರಯತ್ನಗಳನ್ನು ಪಕ್ಷದ ನಾಯಕರು ಮಾಡುತ್ತಿದ್ದರಾದರೂ, ಒಂದು ಹಂತದಲ್ಲಿ..

    July 21, 2017
    ...
    tomoto-3
    ರಾಜ್ಯ

    ‘ರೆಡ್ ಅಲರ್ಟ್‌’: ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಶೇ. 700 ಪಟ್ಟು ಹೆಚ್ಚಳ; ಲಾಭ ಯಾರಿಗೆ?

    ಈರುಳ್ಳಿಗೆ ಇರುವ ‘ರಾಜಕೀಯ ಸ್ಥಾನಮಾನ’ ಟೊಮೊಟೊಗೂ ಇದ್ದಿದ್ದರೆ ಇಷ್ಟೊತ್ತಿಗೆ -ವಿರೋಧ ಪಕ್ಷಗಳಿಂದ ಹಿಡಿದು, ಸಾಮಾಜಿಕ ಜಾಲತಾಣಗಳವರೆಗೆ- ಚರ್ಚೆಯ ಕೇಂದ್ರದಲ್ಲಿ ಕೆಂಪು ಬಣ್ಣದ ಆಹಾರ ಬೆಳೆ ಇರುತ್ತಿತ್ತು. ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಶೇ. 700 ಪಟ್ಟು ಹೆಚ್ಚಾಗಿದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷ ಈ ಹೊತ್ತಿನಲ್ಲಿ ಏರಿಕೆಯಾಗುತ್ತಿದ್ದ ಬೆಲೆಗೆ ಹೋಲಿಸಿದರೆ ನೂರಾಟು ಪಟ್ಟು ಹೆಚ್ಚಿದೆ. ಸದ್ಯ ದೇಶಾದ್ಯಂತ ಒಂದು ಕೆ.ಜಿ ಟೊಮೊಟೊ 80- 120 ರೂಗೆ ಬಿಕರಿಯಾಗುತ್ತಿದೆ. ಯಾಕೆ? ಟೊಮೊಟೊ ಬೆಲೆ ಹೆಚ್ಚಳಕ್ಕೆ ಕಾರಣಗಳೇನಿವೆ? ಇದಕ್ಕಾಗಿ ಸರಕಾರ ಏನು ಮಾಡುತ್ತಿದೆ?..

    July 20, 2017
    ...
    healthcare-privatisation-1
    ದೇಶ

    ಜಿಲ್ಲಾಸ್ಪತ್ರೆಗಳ ಆವರಣದಲ್ಲಿಯೇ ಖಾಸಗಿ ಆಸ್ಪತ್ರೆ: ಸಾರ್ವಜನಿಕ ಆರೋಗ್ಯ ಸೇವೆಯ ಬುಡಕ್ಕೆ ‘ಖಾಸಗಿ ಏಟು’?

    ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ತೆಕ್ಕೆಗೆ ನೀಡುವ ನಿಟ್ಟಿನಲ್ಲಿ ಪರೋಕ್ಷ ಪ್ರಯತ್ನವೊಂದು ಆರಂಭವಾಗಿದೆ. ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಈ ನಿಟ್ಟಿನಲ್ಲಿ ಜಂಟಿಯಾಗಿ ಸಿದ್ಧಪಡಿಸಿರುವ ‘ಮಾದರಿ ಒಪ್ಪಂದ’ವನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಿಕೊಡಲಾಗಿದೆ. ಇದರಲ್ಲಿ, ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ ನೀಡಲು 30 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡು, ಜಿಲ್ಲಾ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಗಳ ಜಾಗದಲ್ಲಿಯೇ ಖಾಸಗಿಯವರಿಗೆ ಸ್ಥಳಾವಕಾಶ ನೀಡುವ ಕುರಿತು ರಾಜ್ಯಗಳ ಅಭಿಪ್ರಾಯವನ್ನು ಕೇಳಲಾಗಿದೆ. 50- 100 ಬೆಡ್‌ ಆಸ್ಪತ್ರೆ ನಿರ್ಮಿಸಲು ಖಾಸಗಿಯವರಿಗೆ..

    July 19, 2017
    ...
    roopa-prison-kranti
    ರಾಜ್ಯ

    ಜೈಲು ಸುಧಾರಣೆ ಮರೀಚಿಕೆ: ಕಾರಾಗೃಹ ಕ್ರಾಂತಿಯ ಸ್ವ’ರೂಪ’ ಮಕಾಡೆ ಮಲಗಿದ್ದು ಯಾಕೆ?

    ಆಗಸ್ಟ್‌ 31, 2013; ಶನಿವಾರ. ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ನಿವೃತ್ತರಾದ ದಿನ. ಅವತ್ತು ಜೈಲಿನ ಒಳಗಡೆಯೇ ‘ಪಾರ್ಟಿ’ಯೊಂದು ತಡರಾತ್ರಿವರೆಗೂ ನಡೆದಿತ್ತು. ಸಿಬ್ಬಂದಿಗಳು, ಕೈದಿಗಳು ಬೀಳ್ಕೊಡಿಗೆ ಮುಗಿಸಿ ತಮ್ಮ ಮನೆಗಳಿಗೆ, ಬ್ಯಾರಕ್‌ಗಳಿಗೆ ತೆರಳಿದ ನಂತರ ಸೈಕೋ ಕಿಲ್ಲರ್‌ ಎಂಬ ಆರೋಪಕ್ಕೆ ಗುರಿಯಾಗಿದ್ದ ಜೈ ಶಂಕರ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಮಾರನೇ ದಿನ ಸೆ. 1ರಂದು ಅದು ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅವತ್ತಿನ ಸರಕಾರಕ್ಕೆ ಭಾರಿ ಮುಖಭಂಗವನ್ನೂ ಉಂಟು ಮಾಡಿತ್ತು. ಜತೆಗೆ, ಜೈಲಿನಲ್ಲಿ..

    July 18, 2017
    ...
    inquality-in-india2
    ದೇಶ

    ದೇಶದೊಳಗೆ ಹೆಚ್ಚುತ್ತಿರುವ ಅಸಮಾನತೆ: ಆಕ್ಸ್‌ಫಾಮ್‌ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನ

    ಪ್ರಪಂಚದ 152 ದೇಶಗಳ ಪೈಕಿ ಅಸಮಾನತೆಯನ್ನು ಹೋಗಲಾಡಿಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನವನ್ನು ಸ್ವತಂತ್ರ ಸಂಸ್ಥೆ ಆಕ್ಸ್‌ಫಾಮ್‌ ನೀಡಿದೆ. ಸೋಮವಾರ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಸ್ವೀಡನ್‌, ಬೆಲ್ಜಿಯಂ, ಡೆನ್ಮಾರಕ್‌, ನಾರ್ವೆ ಹಾಗೂ ಜರ್ಮನಿ ದೇಶಗಳು ತಮ್ಮ ದೇಶಗಳ ಪ್ರಜೆಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಕ್ರಮಗಳನ್ನು ಕೈಗೊಂಡವರ ಪಟ್ಟಿಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದುಕೊಂಡಿವೆ. ಇತ್ತೀಚೆಗಷ್ಟೆ ಉದ್ಯಮಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಆಡಳಿತಕ್ಕೆ ಮೊದಲ ಸ್ಥಾನವನ್ನು ನೀಡಿತ್ತು. ಪ್ರಪಂಚ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆಡಳಿತದ ಬಗ್ಗೆ..

    July 17, 2017
    ...
    rss-pradeep-int-final
    ರಾಜ್ಯ

    ಆರ್‌ಎಸ್‌ಎಸ್‌ ಸಂದರ್ಶನ: ‘ಗೋ ರಕ್ಷಣೆಗೆ ದಾಳಿಗಳು; ಆತ್ಮ ರಕ್ಷಣೆಗಾಗಿ ನಡೆಯುತ್ತಿರುವ ಘಟನೆಗಳು’

    “ಗೋ ರಕ್ಷಣೆ ಮಾಡುವವರು ಎಲ್ಲರೂ ಆರ್‌ಎಸ್‌ಎಸ್‌ ಎಂಬ ಗ್ರಹಿಕೆ ಇದೆ. ಭಾರತದಲ್ಲಿ ಇವತ್ತು ಆರ್‌ಎಸ್‌ಎಸ್‌ ಹೊರತಾಗಿಯೂ ಗೋವಿನ ರಕ್ಷಣೆ ಮಾಡುವವರು ಇದ್ದಾರೆ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕ್ರಿಮಿನಲ್ ಚಟುವಟಿಕೆಗಳಿಗೂ, ಆರ್‌ಎಸ್‌ಎಸ್‌ಗೂ ಸಂಬಂಧ ಇಲ್ಲ. ಗೋ ರಕ್ಷಣೆ ಹೆಸರಿನಲ್ಲಿ ಹೊರಗಡೆ ನಡೆಯುತ್ತಿರುವುದು ‘ಆತ್ಮರಕ್ಷಣೆ’ಗಾಗಿ ನಡೆಯುತ್ತಿರುವ ಘಟನೆಗಳು…” ಇವತ್ತು ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ಹಲ್ಲೆಗಳು, ಸಾಮೂಹಿಕ ದಾಳಿಗಳು, ಕೊಲೆಗಳ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)..

    July 15, 2017
    ...
    afspa_1
    ಸುದ್ದಿ ಸಾರ

    ಭಾರತೀಯ ಸೇನೆ ವಿರುದ್ಧ ಸಿಬಿಐ ತನಿಖೆ: ಮಣಿಪುರಿಗಳ ಮನವಿಗೆ ಸ್ಪಂದಿಸಿದ ಸುಪ್ರಿಂ ಕೋರ್ಟ್

    ಮಣಿಪುರದಲ್ಲಿ ಭಾರತೀಯ ಸೇನೆಯಿಂದ ನಡೆದ ಕಾನೂನುಬಾಹಿರ ಹತ್ಯೆಗಳ ಕುರಿತು ಸುಪ್ರಿಂ ಕೋರ್ಟ್‌ ಸಿಬಿಐ ತನಿಖೆಗೆ ಶುಕ್ರವಾರ ಆದೇಶ ನೀಡಿದೆ. ನ್ಯಾ. ಎಂ. ಬಿ. ಲಾಕೂರ್ ಹಾಗೂ ನ್ಯಾ. ಯು. ಯು. ಲಲಿತ್ ಅವರಿದ್ದ ಪೀಠದ ಮುಂದೆ ಸೇನೆಯಿಂದ ನಡೆದ ನಕಲಿ ಎನ್‌ಕೌಂಟರ್‌ಗಳ ಕುರಿತು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರಿಂದ ನಡೆದ ಕಾನೂನು ಬಾಹಿರ ಹತ್ಯೆಗಳ ಕುರಿತು ಸಿಬಿಐ ತನಿಖೆಗೆ ಆದೇಶ..

    July 14, 2017
    ...
    PARAPPANA AGRAHARA
    ರಾಜ್ಯ

    ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ

    ರಾಜ್ಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ. ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿದೆ. ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ..

    July 13, 2017
    ...
    kalaburagi-daal-mill-gst
    ರಾಜ್ಯ

    ಜಿಎಸ್‌ಟಿ ಹೊಡೆತಕ್ಕೆ ‘ಬ್ರಾಂಡೆಡ್‌ ಗರಿ’ ಕಳೆದುಕೊಂಡ ಕಲಬುರ್ಗಿಯ ಗುಣಮಟ್ಟದ ತೊಗರಿ ಬೇಳೆ

    ಕೇಂದ್ರ ಸರಕಾರ ‘ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತಂದ ನಂತರ ನಿರೀಕ್ಷೆಯಂತೆಯೇ ತಳಮಟ್ಟದ ತಲ್ಲಣಗಳು ಕಾಣಿಸಿಕೊಂಡಿವೆ. ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಗುಜರಾತ್‌ನ ಸೂರತ್‌ನಲ್ಲಿ ವರ್ತಕರು ಪ್ರತಿಭಟನೆ ನಡೆಸುತ್ತಿದ್ದರೆ, ರಾಜ್ಯದ ಕಲಬುರ್ಗಿ ಜಿಲ್ಲೆಯ ತೊಗರಿಬೇಳೆ ವರ್ತಕರು ತಮ್ಮ ‘ಟ್ರೇಡ್‌ ಮಾರ್ಕ್‌’ ಪರವಾನಿಗೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಇಲ್ಲಿನ ತಳಮಟ್ಟದಲ್ಲಿ ಸಿಗುತ್ತಿರುವ ಮಾಹಿತಿ ಪ್ರಕಾರ, ಈಗಾಗಲೇ ಶೇ. 95ರಷ್ಟು ವರ್ತಕರು ‘ಬ್ರಾಂಡೆಡ್‌’ ತೊಗರಿ ಬೇಳೆ ಮಾರಾಟಕ್ಕೆ ಪಡೆದುಕೊಂಡಿದ್ದ ಪರವಾನಿಗೆಯನ್ನು ಹಿಂಪಡೆದಿದ್ದಾರೆ. ಮುಂದಿನ ಒಂದು ವಾರದಲ್ಲಿ ಕಲಬುರ್ಗಿಯಲ್ಲಿರುವ ಸುಮಾರು..

    July 12, 2017
    ...
    Indian-Language-1
    ಸುದ್ದಿ ಸಾರ

    ಭಾಷಾ ಸಮಾನತೆಯ ಹೋರಾಟದ ಸ್ವರೂಪ ಪಡೆದುಕೊಳ್ಳಲಿರುವ ‘ಹಿಂದಿ ವಿರೋಧಿ’ ಅಭಿಯಾನ

    ‘ನಮ್ಮ ಮೆಟ್ರೊ’ದಲ್ಲಿ ಹಿಂದಿ ಬೇಡ ಎಂದು ಆರಂಭವಾದ ಹೋರಾಟ ಈ ದೇಶಾದ್ಯಂತ ಭಾಷಾ ಸಮಾನತೆಯ ಹೋರಾಟದ ರೂಪವನ್ನು ಪಡೆದುಕೊಳ್ಳುವ ಹಾದಿಯಲ್ಲಿದೆ. ಇದೇ ಶನಿವಾರ, ಜುಲೈ 15ರಂದು ಬೆಂಗಳೂರಿನ ಸಿಟಾಡೆಲ್ ಹೋಟೆಲ್‌ನಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಭಾಷಾ ಸಮಾನತೆಗಾಗಿ ಹೋರಾಡುತ್ತಿರುವ ನಾನಾ ರಾಜ್ಯಗಳ ಸಂಘಟನೆಗಳ ಪ್ರತಿನಿಧಿಗಳ ‘ದುಂಡು ಮೇಜಿ’ನ ಸಭೆಯನ್ನು ಕರೆಯಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಆಯೋಜನೆ ಮಾಡುತ್ತಿದೆ. “ರಾಜಧಾನಿ ಬೆಂಗಳೂರಿನಲ್ಲಿ ನಗರ ಸಾರಿಗೆಯ ಉದ್ದೇಶಕ್ಕಾಗಿ ಆರಂಭವಾಗಿರುವ ನಮ್ಮ ಮೆಟ್ರೋ ನಾಮ ಫಲಕಗಳು, ಸೂಚನಾ ಫಲಕಗಳು,..

    July 11, 2017

Top