An unconventional News Portal.

ಇದು ಜುಲೈ ತಿಂಗಳ ‘ಕನ್ನಡ ರಾಜ್ಯೋತ್ಸವ’: ಜಾಲತಾಣಗಳಲ್ಲಿ ವಿರೋಧ ಕಟ್ಟಿಕೊಂಡ ಬಿಜೆಪಿ

ಇದು ಜುಲೈ ತಿಂಗಳ ‘ಕನ್ನಡ ರಾಜ್ಯೋತ್ಸವ’: ಜಾಲತಾಣಗಳಲ್ಲಿ ವಿರೋಧ ಕಟ್ಟಿಕೊಂಡ ಬಿಜೆಪಿ

ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿಗೇ ಕರ್ನಾಟಕದಲ್ಲಿ ಧ್ವಜದ ವಿಚಾರ ಚರ್ಚೆಯ ಕೇಂದ್ರಕ್ಕೆ ಬಂದಿದೆ.

ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜದ ವಿನ್ಯಾಸ ಹಾಗೂ ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಿಸುವ ಸಂಬಂಧ ಸಮಿತಿಯೊಂದನ್ನು ರಚಿಸಿದೆ. ಇದಕ್ಕೆ ಪ್ರಮುಖ ಪ್ರತಿ ಪಕ್ಷ ಬಿಜೆಪಿ ನೀಡಿದ ವ್ಯತಿರಿಕ್ತ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೇಸರಿ ಪಕ್ಷ’ಕ್ಕೆ ವಿರೋಧ ವ್ಯಕ್ತವಾಗಲು ಕಾರಣವಾಯಿತು. ಬಿಜೆಪಿ ಕನ್ನಡ ವಿರೋಧಿಯಲ್ಲ ಎಂಬ ಸಮಜಾಯಿಷಿ ನೀಡುವ ಪ್ರಯತ್ನಗಳನ್ನು ಪಕ್ಷದ ನಾಯಕರು ಮಾಡುತ್ತಿದ್ದರಾದರೂ, ಒಂದು ಹಂತದಲ್ಲಿ ‘ಕನ್ನಡ ಧ್ವಜ’ದ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ಕನ್ನಡದ ಅಸ್ಮಿತೆಯನ್ನು ಎದಿರು ಹಾಕಿಕೊಂಡಂತಾಗಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳನ್ನು ಕಳೆದ ಕೆಲವು ದಿನಗಳಲ್ಲಿ ವ್ಯಕ್ತವಾದ ಕೆಲವು ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಇವು ಬಿಜೆಪಿಗೆ ವಿರೋಧ ಮಾತ್ರವಲ್ಲ, ಕನ್ನಡತನದ ಉಳಿವಿಗಾಗಿ ಧ್ವಜ ವಿಚಾರದಲ್ಲಿ ಸಾಮಾನ್ಯ ಜನರ ನಿಲುವುಗಳಿಗೆ ಹಿಡಿದ ಕನ್ನಡಿದಂತಿವೆ.

ಬಿಜೆಪಿ ಕನ್ನಡ ಧ್ವಜವನ್ನು ಆರಂಭದಲ್ಲಿ ವಿರೋಧಿಸುತ್ತಿದ್ದಂತೆ, ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ @ಚುರುಮುರಿ; ‘ಪ್ರತ್ಯೇಕ ಧ್ವಜವನ್ನು ಹೊಂದುವ ನಿಟ್ಟಿನಲ್ಲಿ ಬಿಜೆಪಿ ಈಗ ಕಾಂಗ್ರೆಸ್ ನಡೆಯನ್ನು ವಿರೋಧಿಸುತ್ತಿದೆ. ಆದರೆ ಅಧಿಕಾರದಲ್ಲಿರುವಾಗ ‘ಅಧಿಕೃತ ಸ್ಥಾನಮಾನ’ ನೀಡಿತ್ತು’ ಎಂಬುದನ್ನು ಬಹಿರಂಗಪಡಿಸಿತು.

k-Churumuri

ಅರುಣ್‌ ಜಾವಗಲ್‌, ಧ್ವಜವನ್ನು ವಿರೋಧಿಸುವವರಿಗೆ ಭಾರತ ಹಲವು ರಾಜ್ಯಗಳ ಸಂಕರ, ಇದೊಂದು ಒಕ್ಕೂಟ ವ್ಯವಸ್ಥೆ ಎಂಬುದನ್ನು ನೆನಪಿಸಬೇಕು ಎಂದು ಟ್ವೀಟ್‌ ಮಾಡಿದರು.

k-Arun Javagal

ಪ್ರಧಾನಿ ಮೋದಿ ಅವರಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿರುವ ಪ್ರತ್ಯೇಕ ಧ್ವಜ ಸಮಸ್ಯೆಯಾಗಿ ಕಾಣಿಸುವುದಿಲ್ಲ. ಆದರೆ ಕರ್ನಾಟಕದ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರಿಗೆ ‘ನಮ್ಮ ಧ್ವಜ’ ಸಮಸ್ಯೆಯಾಗಿ ಕಾಣಿಸುತ್ತಿದೆ ಎಂದು ಅಬ್ದುಲ್‌ ಎಂಬುವವರು ಮಾರ್ಮಿಕವಾಗಿ ಪ್ರಶ್ನಿಸಿದರು.

k-abdul

ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಹಿಂದೆ ಭಾರತದ ಧ್ವಜ ಜತೆಗೆ ಕನ್ನಡ ಧ್ವಜವನ್ನೂ ಹಾರಿಸಿದ ಫೊಟೋಗೆ ಪ್ರಾಮುಖ್ಯತೆ ಸಿಕ್ಕಿತು. ದೀಪಕ್‌ ಗೌಡ ಎಂಬುವವರು ಅಂತಹದೊಂದು ಚಿತ್ರವನ್ನು ಟ್ವೀಟ್‌ ಮಾಡುವ ಮೂಲಕ, ಈಗ ಯಾಕೆ ಬಿಜೆಪಿಯವರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರಶ್ನಿಸಿದರು.

k-Deepak

ಪ್ರವೀಣ್‌ ಶಂಕರ್‌ ಎಂಬುವವರು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಪ್ರತಿ ರಾಜ್ಯವೂ ತನ್ನದೇ ಆದ ಬಾವುಟಗಳನ್ನು ಹೊಂದಿವೆ. ‘ಭಕ್ತಿ ಚಾನಲ್‌’ಗಳು ಕರ್ನಾಟಕದ ಧ್ವಜದ ವಿಚಾರದಲ್ಲಿ ಅಬ್ಬರ ಮಾಡುತ್ತಿವೆ. ಅವುಗಳ ಹೇಳಿಕೆಗಳು ನಿಜವಾದರೆ, ಅಮೆರಿಕಾ ಕೂಡ ಹಲವು ದೇಶಗಳಾಗಿ ವಿಭಜನೆಯಾಗಬೇಕಿತ್ತು ಎಂದು ಟ್ವೀಟ್‌ ಮಾಡಿದರು.

k-Praveen Shankar

ಶುವಾಂಕರ್‌ ಮುಖರ್ಜಿ ಎಂಬ ಟ್ವೀಟ್‌ ಖಾತೆಯಲ್ಲಿ ಕನ್ನಡ ಧ್ವಜವನ್ನು ಹಿಡಿದುಕೊಂಡ ಬಿಎಸ್‌ವೈ ಹಾಗೂ ಅಬ್ದುಲ್‌ ಕಲಾಂ ಅವರ ಫೊಟೋ ಒಂದನ್ನು ಪ್ರಕಟಿಸಿ, ‘ಇವರು ಈಸ್ಟ್‌ ಬೆಂಗಾಲ್‌ ಫೋಟ್ಬಾಲ್‌ ಕ್ಲಬ್‌ ಅಭಿಮಾನಿಗಳು’ ಎಂದು ವ್ಯಂಗ್ಯವಾಡಲಾಯಿತು.

k-Shuvankar

ಸಬೀನಾ ಬಾಷಾ ಎಂಬುವಬರು ಕನ್ನಡ ರಾಜ್ಯೋತ್ಸವಗಳಲ್ಲಿ ಬಳಸಿಕೊಂಡಿ ಬಂದ ಕನ್ನಡ ದ್ವಜ ಮತ್ತು ಬಣ್ಣಕ್ಕೆ ಈಗ ಯಾಕೆ ಬಿಜೆಪಿ ವಿರೋಧ ಮಾಡುತ್ತಿದೆ ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದರು.

k-Sabina Basha

ಶ್ರೀಪತಿ ಗೋಗಡಿಗೆ, ಕನ್ನಡದ ಬಾವುಟಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಿಸಲು ಹೊರಟ ಸಿಎಂಗೆ ಬೆಂಬಲಿಸಿ ಟ್ವೀಟ್‌ ಮಾಡಿದರು.

k-Sripati gogadige

ವಸಂತ್‌ ಶೆಟ್ಟಿ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಷ್ಟ್ರೀಯ ವಾಹಿನಿಗಳ ಅಪಪ್ರಚಾರ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗೊಂದಲಗಳನ್ನು ಪ್ರಸ್ತಾಪಿಸಿ ವಿವರವಾದ ಮಾಹಿತಿ ಒಳಗೊಂಡ ಪೋಸ್ಟ್‌ನ್ನು ಹಂಚಿಕೊಂಡರು.

k-Vasanth Shetty

ಅಮೃತಾ ಶರ್ಮಾ, ತಮ್ಮ ಫೇಸ್‌ಬುಕ್‌ ಪೋಸ್ಟ್‌ ಒಂದರಲ್ಲಿ ಕನ್ನಡ ಧ್ವಜವನ್ನು ವಿರೋಧ ಮಾಡುವವರಿಗೆ 13 ಅಂಶಗಳ ಮಾಹಿತಿ ನೀಡಿದರು.

k-Smrutha Sharma

ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್‌ ಅವರ ‘ಸಂವಿಧಾನದಲ್ಲಿ ಅವಕಾಶ ಇದೆಯಾ?’ ಎಂಬ ಪ್ರಶ್ನೆಗೆ ಟ್ವಿಟರ್‌ನಲ್ಲಿಯೇ ವ್ಯಕ್ತವಾದ ಅಭಿಪ್ರಾಯವೊಂದು ಹೀಗಿದೆ. ಭಾವನಾತ್ಮಕ ಹಾಗೂ ಸೂಕ್ಷ್ಮ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಹಜ ಪ್ರತಿಕ್ರಿಯೆಗಳು ಹೇಗೆ ಬರುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.

k-Suresh Kumar

ಹೀಗೆ, ಕಳೆದ ಕೆಲವು ದಿನಗಳ ಅಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಧ್ವಜದ ಕುರಿತಾದ ಮಾಹಿತಿ, ಚಿತ್ರಗಳು ತುಂಬಿ ಹೋಗಿವೆ. ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಲ್ಲಿ ಮಾತ್ರವೇ ಕಾಣಿಸುತ್ತಿದ್ದ ಇಂತಹದೊಂದು ಕನ್ನಡಾಭಿಮಾನ ಇದೀಗ ಧ್ವಜದ ಹಿನ್ನೆಲೆಯಲ್ಲಿ ಸುದ್ದಿ ಕೇಂದ್ರಕ್ಕೂ ಬಂದಿದೆ. ಕನ್ನಡ ಅಸ್ಮಿತೆ ಜಾಗೃತಗೊಂಡ ಸಮಯದಲ್ಲಿ, ಪ್ರತಿ ಪಕ್ಷ ಬಿಜೆಪಿ ಅದನ್ನು ಅರ್ಥೈಸಿಕೊಳ್ಳಲು ಎಡವಿದ ಹಿನ್ನೆಲೆಯಲ್ಲಿ ವಿವಾದ, ವಿರೋಧವನ್ನು ಮೈಮೇಲೆ ಎಳೆದುಕೊಂಡಿತು. ಇದು ಚುನಾವಣೆಯಲ್ಲಿ ಬೀರುವ ಪರಿಣಾಮಗಳು ಮಾತ್ರ ಊಹೆಗೆ ಬಿಟ್ಟ ವಿಚಾರ.

Leave a comment

FOOT PRINT

Top