An unconventional News Portal.

    ...

    ‘ಯುಪಿ ಎಫೆಕ್ಟ್’: ಸಾಲ ಮನ್ನಾ ಮಾಡಲು ಆಗ್ರಹ; ರೈತರ ಮೇಲೆ ಅರೆ ಸೇನಾಪಡೆ ಫೈರಿಂಗ್

    ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆಸಿದ ಗೋಲಿಬಾರ್‌ಗೆ  ರೈತರು ಐವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರೆ ಮೂವರು ಗಾಯಗೊಂಡಿದ್ದಾರೆ. ಮಂಗಳವಾರ ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿರುವ ಬೆಲೆ ಹಾಗೂ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ನಡೆದ ಫೈರಿಂಗ್ ಸಮಯದಲ್ಲಿ ಇಬ್ಬರು ರೈತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರಿಂದ ಗುಂಡಿನ ದಾಳಿ ನಡೆದಿಲ್ಲ ಎಂದು ರಾಜ್ಯ ಗೃಹ ಸಚಿನ ಭುಪೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ. […]

    June 6, 2017
    ...

    ಗ್ಯಾರೇಜ್‌ನಲ್ಲಿ ಹುಟ್ಟಿದ ಎನ್‌ಡಿಟಿವಿಯೂ; ಸಂಸ್ಥಾಪಕ ಪ್ರಣಯ್ ರಾಯ್ ಮೇಲಿನ ಸಿಬಿಐ ದಾಳಿಯೂ

    ಐಸಿಐಸಿಐ ಬ್ಯಾಂಕ್‌‍ಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ ಆರೋಪದ ಮೇಲೆ ನ್ಯೂ ಡೆಲ್ಲಿ ಟೆಲಿವಿಜ್ಹನ್ (ಎನ್‍ಡಿಟಿವಿ) ಸಂಸ್ಥಾಪಕ ಪ್ರಣಯ್ ರಾಯ್ ಹಾಗೂ ಪತ್ನಿ ರಾಧಿಕಾ ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ. ಸೋಮವಾರ ಬೆಳಗ್ಗೆ ನವದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ದಾಳಿಯನ್ನೂ ನಡೆಸಲಾಗಿದೆ. ಬ್ಯಾಂಕ್‍ನಿಂದ ಪಡೆದ ಸಾಲವನ್ನು ಪಾವತಿಸಿಲ್ಲ ಮತ್ತು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಪ್ರಣಯ್ ಮೇಲೆ ಹೊರಿಸಲಾಗಿದೆ. ಐಸಿಐಸಿಐ ಬ್ಯಾಂಕ್‍ಗೆ ₹ 48 ಕೋಟಿ ನಷ್ಟವುಂಟು […]

    June 5, 2017
    ...

    ಖಾಸಗಿಯವರಿಗೆ ಪೂರಕವಾದ ನೀತಿ; ಸರಕಾರಿ ಆಸ್ಪತ್ರೆಗಳಲ್ಲಿ ಯಾಕೀ ಪ್ರಮಾಣದ ಅನೀತಿ?

    ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ನೆಲದ ಮೇಲೆ ಎಳೆದುಕೊಂಡ ಹೋದ ದೃಶ್ಯಾವಳಿಯೊಂದು ಸರಕಾರಿ ಆರೋಗ್ಯ ಸೇವೆಯ ದುರಾವಸ್ಥೆಯನ್ನು ಜನರ ಎದುರಿಗೆ ತೆರೆದಿಟ್ಟಿದೆ. ಆದರೆ ಇದು ಮೊದಲೂ ಅಲ್ಲ; ಕೊನೆಯೂ ಅಲ್ಲ ಎಂಬುದು ಸರಕಾರಿ ವೈದ್ಯಸೇವೆಯ ಕುರಿತು ಅವಗಾಹನೆ ಇರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಸದರಿ ಆಸ್ಪತ್ರೆಯಲ್ಲಿ ಇಂತದೊಂದು ಅವ್ಯವಸ್ಥೆಗೆ ಈಗಾಗಲೇ ಕೆಳಮಟ್ಟದ ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಡಿ- ಗ್ರೂಪ್ ಸಿಬ್ಬಂದಿಗಳನ್ನು ಮಾತ್ರವಲ್ಲ; ಆಸ್ಪತ್ರೆಯ ವೈದ್ಯರನ್ನು, ಆಡಳಿತಾಧಿಕಾರಿಗಳನ್ನು ಹೊಣೆ ಮಾಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಶಿವಮೊಗ್ಗದ ಪ್ರಮುಖ […]

    June 3, 2017
    ...

    ಪ್ಯಾರೀಸ್ ಒಪ್ಪಂದದಿಂದ ಅಮೆರಿಕಾ ಹೊರಕ್ಕೆ: ಟ್ರಂಪ್ ಘೋಷಣೆ ಹಿನ್ನೆಲೆಯಲ್ಲಿ ಕಲ್ಲಿದ್ದಲ ಲಾಬಿ?

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಪ್ಯಾರೀಸ್ ಒಪ್ಪಂದ’ದಿಂದ ಅಮೆರಿಕಾ ಹೊರಬರಲಿದೆ ಎಂದು ಘೋಷಿಸಿದ್ದಾರೆ. ವರ್ಷದ ಹಿಂದಷ್ಟೆ ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿದಂತೆ ವಿಶ್ವದ 195 ದೇಶಗಳನ್ನು ಒಟ್ಟುಹಾಕಿ, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹಕ್ಕುಬಾಧ್ಯಸ್ಥರನ್ನಾಗಿ ಮಾಡಿದ್ದ ಒಪ್ಪಂದ ಇದು. “ಇದು ಅಮೆರಿಕಾ ಜನರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ಅದರಿಂದ ಹೊರಬರುತ್ತೇವೆ,” ಎಂದು ಚುನಾವಣಾ ವೇಳೆಯಲ್ಲಿ ಅಮೆರಿಕಾ ಜನರಿಗೆ ಟ್ರಂಪ್ ನೀಡುತ್ತ ಬಂದ ಆಶ್ವಾಸನೆಯಂತೆ ಈಗ ಒಪ್ಪಂದದಿಂದಲೇ ಅಮೆರಿಕಾ ಹೊರಬಂದಿದೆ. “ಅಮೆರಿಕಾ ಮತ್ತು ಅದರ ಪ್ರಜೆಗಳ ಹಿತಾಸಕ್ತಿಯ ಕಾರಣಕ್ಕೆ ಪ್ಯಾರೀಸ್ ಒಪ್ಪಂದದಿಂದ […]

    June 2, 2017
    ...

    ‘ವಿಶ್ವದ ಬೃಹತ್ ಪ್ರಾಣಿ ಬಲಿ ಜಾತ್ರೆ’ಗೆ ಬ್ರೇಕ್ ಹಾಕಿದಷ್ಟು ಸುಲಭನಾ ದೇಶದಲ್ಲಿ ಗೋ ಹತ್ಯೆ ನಿಷೇಧ?

    ಪ್ರಾಣಿಗಳ ಬಲಿಗೂ, ಮನುಷ್ಯನ ನಂಬಿಕೆಗಳಿಗೂ ಹತ್ತಿರ ಸಂಬಂಧವೊಂದಿದೆ ಎಂಬುದನ್ನು ದೊಡ್ಡ ಮಟ್ಟದಲ್ಲಿ ಜಗತ್ತಿಗೆ ಸಾರಿ ಹೇಳಿದ್ದು ಹಿಂದೂಗಳ ಗುಡಿಮೈ ಉತ್ಸವ. ಭಾರತದ ಗಡಿಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ನೇಪಾಳದಲ್ಲಿ ಇತ್ತೀಚಿನವರೆಗೂ ನಡೆದುಕೊಂಡು ಬಂದ ಈ ಉತ್ಸವ ಅಕ್ಷರಶಃ ಬಹಿರಂಗ ಕಸಾಯಿಖಾನೆ. ‘ವಿಶ್ವದ ಬೃಹತ್‌ ಪ್ರಾಣಿ ಬಲಿ ಜಾತ್ರೆ‘ ಎಂಬುದು ಈ ಗಡಿಮೈ ಜಾತ್ರೆಗೆ ಅಂಟಿಕೊಂಡಿದ್ದ ಕಳಂಕ. ಕಳೆದ ಮೂರು ಶತಮಾನಗಳಿಂದ ಪ್ರತಿ 5 ವರ್ಷಗಳಿಗೊಮ್ಮೆ ನೇಪಾಳದ ಬಾರಾ ಜಿಲ್ಲೆಯ ಬರಿಯಾರ್‌ಪುರದಲ್ಲಿ ಈ ಜಾತ್ರೆ ನಡೆದುಕೊಂಡು ಬಂದಿತ್ತು. ರಾಜಧಾನಿ ಕಾಠ್ಮಂಡುವಿನಿಂದ 160 ಕಿಲೋಮೀಟರ್ ದೂರದಲ್ಲಿದೆ ಈ […]

    June 1, 2017

Top