An unconventional News Portal.

    ...
    BangaloreMetro-1
    ರಾಜ್ಯ

    ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ‘ನಮ್ಮ ಮೆಟ್ರೊ’ ಪರಿಹಾರ: ಭ್ರಮೆ ಮತ್ತು ವಾಸ್ತವಗಳು!

    ‘ನಮ್ಮ ಮೆಟ್ರೊ; ಬೇಗ ಕಟ್ರೋ’… ಹೀಗೊಂದು ಘೋಷಣೆ ಗಟ್ಟಿದನಿಯಲ್ಲಿ ಕೇಳಿಬಂದಿದ್ದು 2013-14ರ ಸಮಯದಲ್ಲಿ. ಮೊದಲು ಸಾಮಾಜಿಕ ಜಾಲತಾಣಗಳಲ್ಲಿ; ನಂತರ ಮುಖ್ಯವಾಹಿನಿಯ ಮಾಧ್ಯಮಗಳೂ ಕೂಡ ಮೆಟ್ರೊ ರೈಲು ಯೋಜನೆಯ ಅನುಷ್ಟಾನದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದವು. ಅದಾದ ನಂತರ ಒಂದು ನಿರ್ವಾತ; ಮತ್ತೀಗ ಮೆಟ್ರೊ ಜಪ. ಶನಿವಾರ ಬೆಂಗಳೂರು ಮೆಟ್ರೊ ರೈಲು ಯೋಜನೆಯ ಮೊದಲ ಹಂತವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಇದೊಂದು ಕ್ರಾಂತಿಕಾರಕ ಹೆಜ್ಜೆ’ ಎಂದು ಬಣ್ಣಿಸಿದ್ದಾರೆ. ಈ ಮೂಲಕ..

    June 17, 2017
    ...
    rashtrapati-bhavan-1
    ದೇಶ

    ‘ರಬ್ಬರ್ ಸ್ಟ್ಯಾಂಪ್’ ರಾಷ್ಟ್ರಪತಿ: ದೇಶದ ಪ್ರಥಮ ಪ್ರಜೆಯ ಹುದ್ದೆಗೆ ಹೀಗೊಂದು ಕಳಂಕ ಅಂಟಿದ್ಯಾಕೆ?

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ‘ಪ್ರಥಮ ಪ್ರಜೆ’ಯನ್ನು ಆಯ್ಕೆ ಮಾಡವ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದೆ. ಜುಲೈ 17ರಂದು ನಡೆಯುವ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸಲು ಅವಕಾಶ ನೀಡಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಜು. 24ರಂದು ಪ್ರಣವ್ ಮುಖರ್ಜಿ ಅವರಿಂದ ತೆರವಾಗುವ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಆಡಳಿತ ಪಕ್ಷ ಬಿಜೆಪಿ ಅವಿರೋಧ ಆಯ್ಕೆ ಸಂಬಂಧ ಇತರೆ ಪ್ರತಿಪಕ್ಷಗಳ ಜತೆಯಲ್ಲಿ ಮಾತುಕತೆ ನಡೆಸುತ್ತಿದೆ. ಸಾಮಾನ್ಯವಾಗಿ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯೇ ರಾಷ್ಟ್ರಪತಿ ಸ್ಥಾನಕ್ಕೆ..

    June 15, 2017
    ...
    petrol-prices-hike-1
    ರಾಜ್ಯ

    ಇನ್ನು ಮುಂದೆ ಪ್ರತಿದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ: ಯಾರಿಗೇನು ಲಾಭ?

    ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಜೂನ್ 16ರಿಂದ ಬೆಂಗಳೂರು ಸೇರಿದಂತೆ ದೇಶದ ಐದು ಮಹಾನಗರಗಳ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನಿನಿತ್ಯದ ಆಧಾರದ ಮೇಲೆ ಬದಲಾವಣೆಯಾಗಲಿದೆ. ಇಲ್ಲೀವರೆಗೆ ಮುಂದುವರಿದ ದೇಶಗಳಲ್ಲಿ ಇಂಧನ ಬೆಲೆಯಲ್ಲಿ ಹೀಗೊಂದು ಸಂಪ್ರದಾಯವನ್ನು ಪಾಲಿಸಲಾಗುತ್ತಿತ್ತು. ಆಯಾ ದಿನದ ಕಚ್ಚಾತೈಲ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಪ್ರತಿ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿತ್ತು. ‘ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್’ ಎಂದು ಕರೆಯುವ ಈ ಪದ್ಧತಿಯನ್ನು ಭಾರತದಲ್ಲಿಯೂ ಜಾರಿಗೆ ತರಲು ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ..

    June 14, 2017
    ...
    adivasi-1
    ರಾಜ್ಯ

    ‘ಬಡವರು ಬರುತ್ತಿದ್ದಾರೆ; ಬೆಂಬಲ ಕೊಡಿ’: ಜೂನ್ 15ರಿಂದ ರಾಜಧಾನಿಯಲ್ಲಿ ಆದಿವಾಸಿಗಳ ವಾಸ್ತವ್ಯ

    ಕೆಲವು ದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯ ಹಗಲು- ರಾತ್ರಿ ಪ್ರತಿಭಟನೆಗೆ ಸಾಕ್ಷಿಯಾದ ಸಿಲಿಕಾನ್ ಸಿಟಿಗೆ ಈ ಬಾರಿ ಆದಿವಾಸಿಗಳು, ವಸತಿರಹಿತರು ಬರುತ್ತಿದ್ದಾರೆ. ಗುರುವಾರ, ಜೂನ್ 15ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ ಮುಂಭಾಗ ಭೂಮಿ ಹಾಗೂ ವಸತಿ ಹಕ್ಕಿಗಾಗಿ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಲಿದೆ. ಸರಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಸತ್ಯಾಗ್ರಹ ಜಾರಿಯಲ್ಲಿರಲಿದೆ ಎಂದು ಆಯೋಜಕರು ಈಗಾಗಲೇ ಪ್ರಕಟಿಸಿದ್ದಾರೆ. ಹೀಗಾಗಿ, ಒಂದಷ್ಟು ದಿನಗಳ ಕಾಲ ಹಗಲು ಹಾಗೂ ರಾತ್ರಿ ರಾಜಧಾನಿಯ ಬೀದಿಯಲ್ಲಿ ಸುಮಾರು 21 ಜಿಲ್ಲೆಗಳ ಭೂಮಿ ಹಾಗೂ..

    June 13, 2017
    ...
    blue-whale-suicide-game
    ವಿದೇಶ

    ಪೋಷಕರೇ ಎಚ್ಚರ; ಅಂತರ್ಜಾಲದಲ್ಲಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ ‘ಸ್ಯೂಸೈಡ್ ಗೇಮ್’!

    ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳನ್ನು ಗುರಿಯಾಗಿಸಿಕೊಂಡು ‘ಸಾವಿನ ಆಟ’ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಇಲ್ಯಾ ಸಿಡೊರೊವ್ ಬಂಧಿತ ಆರೋಪಿಯಾಗಿದ್ದು, ಈವರೆಗೆ ಸುಮಾರು 130 ಮಕ್ಕಳು ಈತನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ‘ಬ್ಯೂ ವೇಲ್’ (ನೀಲಿ ತಿಮಿಂಗಿಲ) ಹೆಸರಿನಲ್ಲಿ ಅಂತರ್ಜಾಲದಲ್ಲಿ ಆಟವೊಂದು ಜಾರಿಯಲ್ಲಿದ್ದ ಬಗ್ಗೆ ಈ ಹಿಂದೆಯೇ ಬಹಿರಂಗವಾಗಿತ್ತು. ವಿಶೇಷವಾಗಿ ರಷ್ಯಾದಲ್ಲಿ ನವೆಂಬರ್‌ 2015 ರಿಂದ ಏಪ್ರಿಲ್ 2016ರ ನಡುವೆ ನೂರಕ್ಕೂ ಹೆಚ್ಚು ಹದಿಹರೆಯದ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರೆಲ್ಲರ ಸಾವು, ಅಂತರ್ಜಾಲದಲ್ಲಿ..

    June 12, 2017
    ...
    national-herald-final
    ರಾಜ್ಯ

    ‘ನ್ಯಾಷನಲ್ ಹೆರಾಲ್ಡ್‌’ಗೆ ರಾಹುಲ್ ಗಾಂಧಿ ಮರುಜೀವ: ಸ್ಮರಣಿಕೆ ನೆಪದಲ್ಲಿ ಸಾಂಕೇತಿಕ ನಡೆ!

    ದೇಶಾದ್ಯಂತ ಅಧಿಕಾರ ಕೇಂದ್ರಗಳನ್ನು ಕಳೆದುಕೊಂಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ‘ನ್ಯಾಷನಲ್ ಹೆರಾಲ್ಡ್’ ದಂತಕತೆಗೆ ಮರುಹುಟ್ಟು ನೀಡುವ ತಯಾರಿಯಲ್ಲಿದೆ. ಸೋಮವಾರ ಬೆಂಗಳೂರಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ನೆಹರೂ ಹುಟ್ಟು ಹಾಕಿದ ಪತ್ರಿಕೆಯ ‘ಸ್ಮರಣ ಸಂಚಿಕೆ’ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ ಪೂರ್ವದ ಇತಿಹಾಸ, ಸುದೀರ್ಘ ಹಾದಿಯಲ್ಲಿ ಎದುರಿಸಿದ ಆರ್ಥಿಕ ಮುಗ್ಗಟ್ಟುಗಳು, ಇತ್ತೀಚೆಗೆ ಕೇಳಿಬಂದ ವ್ಯವಹಾರಿಕ ಅವ್ಯವಹಾರಗಳ ಆರೋಪ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ತನ್ನ ಪುನರುಜ್ಜೀವನಕ್ಕಾಗಿ ನಡೆಸುತ್ತಿರುವ ಹೋರಾಟಗಳ ಹಿನ್ನೆಲೆಯಲ್ಲಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಹೆಸರಿನಲ್ಲಿ ನಡೆಯುತ್ತಿರುವ..

    June 12, 2017
    ...
    siddaramayya-farmer-loan-final
    ರಾಜ್ಯ

    ರೈತರ ಸಾಲ ಮನ್ನಾ ಬೇಡಿಕೆಗೆ ‘ರಾಜಕೀಯ ನಂಟು’; ಶಾಶ್ವತ ಪರಿಹಾರ ಎಂಬ ‘ಕನ್ನಡಿಯೊಳಗಿನ ಗಂಟು’!

    ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ರೈತರ ಪ್ರತಿಭಟನೆ ಕಾವೇರಿರುವ ಹಿನ್ನೆಲೆಯಲ್ಲಿ ರೈತರ ಸಾಲ ‘ಮನ್ನಾ’ ವಿಚಾರ ಮತ್ತೊಮ್ಮೆ ಚರ್ಚಾ ಕೇಂದ್ರಕ್ಕೆ ಬಂದಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ನಡೆದ ಆಡಳಿತ ಪಕ್ಷದ ಶಾಸಕಾಂಗ ಸಭೆಯಲ್ಲಿಯೂ ಇದೇ ವಿಚಾರ ಪ್ರಸ್ತಾಪವಾಗಿದೆ. ಆದರೆ ಈ ಕುರಿತು ‘ಚಕಾರ ಎತ್ತದಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು’ ಎಂದು ವರದಿಗಳು ಹೇಳುತ್ತಿವೆ. ವಿಧಾನಸಭೆಯ ಒಳಗೆ ಹಾಗೂ ಹೊರಗೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ, “ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಿದರೆ, ರಾಜ್ಯ..

    June 10, 2017
    ...
    media-migration-final
    ಟಿವಿ

    ಚುನಾವಣೆಗೂ ಮುನ್ನವೇ ಹಣಾಹಣಿಗೆ ಸಜ್ಜಾಗುತ್ತಿರುವ ಕನ್ನಡ ಸುದ್ದಿ ವಾಹಿನಿಗಳ ಮಾರುಕಟ್ಟೆ!

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಈ ಸಮಯದಲ್ಲೇ ಕನ್ನಡದ ಟಿವಿ ವಾಹಿನಿಗಳ ನಡುವೆ ಪತ್ರಕರ್ತರ ‘ವಲಸೆ’ ಆರಂಭವಾಗಿದೆ. ಈ ಹಿಂದೆ, ಇಂತಹದ್ದೇ ವಲಸೆ ಪ್ರಕ್ರಿಯೆಗೆ ಕರ್ನಾಟಕದ ಮಾಧ್ಯಮಗಳು ಸಾಕ್ಷಿಯಾಗಿದ್ದರೂ, ಈ ಬಾರಿಯ ಸ್ಥಾನ ಪಲ್ಲಟಗಳು ಹೆಚ್ಚು ಪರಿಣಾಮಕಾರಿಯಾಗಿರುವಂತೆ ಕಾಣಿಸುತ್ತಿವೆ. ಇದರ ಜತೆಗೆ, ಒಂದಷ್ಟು ಹೊಸ ವಾಹಿನಿಗಳು ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ತಿಂಗಳುಗಳ ಅಂತರದಲ್ಲಿ ಕನ್ನಡದ ಮಾಧ್ಯಮಗಳಲ್ಲಿ- ವಿಶೇಷವಾಗಿ ಟಿವಿ ವಾಹಿನಿಗಳಲ್ಲಿ- ಚಟುವಟಿಕೆಗಳು ಗರಿಗೆದರಲಿವೆ. ಲಭ್ಯ ಇರುವ ಮಾಹಿತಿ ಪ್ರಕಾರ ಈ ಬಾರಿಯ ಪತ್ರಕರ್ತರ ಸ್ಥಾನ ಪಲ್ಲಟದ ಕೇಂದ್ರದಲ್ಲಿ ಟಿವಿ 9 ಕರ್ನಾಟಕ..

    June 9, 2017
    ...
    plastic-rice-china
    ರಾಜ್ಯ

    ತಲ್ಲಣ ಮೂಡಿಸಿದ ‘ಶಂಕಿತ ಪ್ಲಾಸ್ಟಿಕ್ ಅಕ್ಕಿ’: ಜಾಗತಿಕ ವದಂತಿಯ ಹಿಂದಿರುವ ಸತ್ಯಾಂಶ ಏನು?

    ಪ್ಲಾಸ್ಟಿಕ್‌ನಿಂದ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿಗಳಿಗೆ ಈಗ ರಾಜ್ಯದ ಜನ ಆಹಾರವಾಗುತ್ತಿದ್ಧಾರೆ. ಕಳೆದ ಕೆಲವು ದಿನಗಳ ಅಂತರದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಭಿತ್ತರ ಆರಂಭಗೊಂಡ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಬೆಳೆದು ಬಂದ ವದಂತಿಯೊಂದಕ್ಕೆ ಇನ್ನಷ್ಟು ಪುಷ್ಟೀಕರಣ ಸಿಕ್ಕಂತಾಗಿದೆ. ವಿಶೇಷ ಏನೆಂದರೆ, ‘ಪ್ಲಾಸ್ಟಿಕ್ ಅಕ್ಕಿ’ ಎಂಬ ಗಾಳಿ ಸುದ್ದಿ ಕರ್ನಾಟಕ ಮಾತ್ರವಲ್ಲ, ತಲೆಂಗಾಣ ಸೇರಿದಂತೆ ನಾನಾ ರಾಜ್ಯಗಳು, ಫಿಲಿಪ್ಪೀನ್, ನೆದರ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿ ಹರಿದಾಡುತ್ತಿದೆ. 2010ರಿಂದ ಈಚೆಗೆ ಈ ಕುರಿತು ದೊಡ್ಡ ಮಟ್ಟದಲ್ಲಿ..

    June 9, 2017
    ...
    mp-farmers-protest-cover
    ದೇಶ

    ‘ಆರ್‌ಎಸ್‌ಎಸ್‌ ಬೇರು; ಕಾಂಗ್ರೆಸ್ ಚಿಗುರು’: ಮಧ್ಯಪ್ರದೇಶ ರೈತ ಹೋರಾಟದ ಹಿಂದಿರುವ ನಾಯಕರಿವರು!

    ಮಹಾರಾಷ್ಟ್ರದಲ್ಲಿ ಆರಂಭವಾಗಿ, ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಎದೆಯೊಡ್ಡುವ ಮೂಲಕ ‘ರೈತ ಹೋರಾಟ’ ಮತ್ತೊಮ್ಮೆ ದೇಶದ ಚರ್ಚಾ ಕೇಂದ್ರಕ್ಕೆ ಬಂದಿದೆ. ಮಂಗಳವಾರ ನಡೆದ ಇಲ್ಲಿನ ಮಂಡಸೌರ್ ಜಿಲ್ಲೆಯಲ್ಲಿ ನಡೆದ ಫೈರಿಂಗ್‌ನಲ್ಲಿ ಐವರು ರೈತರು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಅರೆಸೇನಾ ಪಡೆಗಳಿಂದ ನಡೆದ ಗುಂಡಿನ ದಾಳಿ ಎಂದು ಸ್ಥಳೀಯ ಬಿಜೆಪಿ ಸರಕಾರದ ಗೃಹ ಸಚಿವ ಹೇಳಿಕೆ ನೀಡಿದ್ದರು. ಗುರುವಾರ ರೈತರ ಸಾವಿಗೆ ಮಧ್ಯಪ್ರದೇಶದ ಪೊಲೀಸರ ಬಂದೂಕಿನಿಂದ ಹಾರಿದ ಗುಂಡೇ ಕಾರಣ ಎಂದು ಸರಕಾರ ಒಪ್ಪಿಕೊಂಡಿದೆ. ಈ ನಡುವೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್..

    June 8, 2017

Top