An unconventional News Portal.

    ...
    gst-explained-final
    ದೇಶ

    ‘ಕುಚ್‌ ಕಟ್ಟಾ- ಕುಚ್ ಮೀಟಾ’: ಜಿಎಸ್‌ಟಿ ಜಾರಿ ವೇಳೆಯಲ್ಲಿ ಒಂದಿಷ್ಟು ಪ್ರಮುಖ ಅಂಶಗಳು

    ‘ಒಂದು ದೇಶ; ಒಂದೇ ತೆರಿಗೆ’… ಇದು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಹೆಸರಿನ ಹೊಸ ತೆರಿಗೆ ಪದ್ಧತಿ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊತ್ತಿನಲ್ಲಿ ಕೇಳಿಬರುತ್ತಿರುವ ಟ್ಯಾಗ್‌ಲೈನ್. ಸುಮಾರು 6 ಕೋಟಿ ಸಣ್ಣ ವರ್ತಕರನ್ನು ಹೊಂದಿರುವ, ದೊಡ್ಡ ಸಂಖ್ಯೆಯಲ್ಲಿ ಇನ್ನೂ ಡಿಜಿಟಲೀಕರಣಕ್ಕೆ ಒಳಗಾಗದ ಮಾರುಕಟ್ಟೆಯನ್ನು ಬಳಸುತ್ತಿರುವ ಜನರಿರುವ, ತೆರಿಗೆ ವ್ಯವಸ್ಥೆಯ ಕುರಿತು ದೊಡ್ಡ ಸಂಖ್ಯೆಯಲ್ಲಿ ಯೋಚನೆಯನ್ನೇ ಮಾಡದ ಭಾರತದಲ್ಲಿ ಜಿಎಸ್‌ಟಿ ದೊಡ್ಡ ಸದ್ದಿನೊಂದಿಗೆ ಶುಕ್ರವಾರ ಮಧ್ಯರಾತ್ರಿ ಜಾರಿಗೆ ಬರಲಿದೆ. ಈ ಹಿಂದೆ ಮೌಲ್ಯವರ್ಧಿತ ತೆರಿಗೆ ಪದ್ಧತಿಯ ಜಾಗವನ್ನು..

    June 30, 2017
    ...
    air-india-1
    ದೇಶ

    ‘ಎಂಡ್ ಗೇಮ್’: ಏರ್‌ ಇಂಡಿಯಾ ಖಾಸಗಿಕರಣ; ಕೊಚ್ಚಿ ಹೋಗಿದ್ದು 30 ಸಾವಿರ ಕೋಟಿ ತೆರಿಗೆ ಹಣ

    ಇದು ಖಾಸಗಿ ಉದ್ಯಮಿಯೊಬ್ಬರಿಂದ ಕೇವಲ 2 ಲಕ್ಷ ಹೂಡಿಕೆಯಲ್ಲಿ ಹುಟ್ಟಿಕೊಂಡ ಉದ್ಯಮ. ಸ್ವಾತಂತ್ರ್ಯ ನಂತರ ನೆಹರೂ ಕಾಲದಲ್ಲಿ ಇದನ್ನು ರಾಷ್ಟ್ರೀಕರಣ ಪ್ರಕ್ರಿಯೆಗೆ ಒಳಪಡಿಸಲಾಯಿತು. ಅಲ್ಲಿಂದ ಮುಂದಿನ ನಾಲ್ಕು ದಶಕಗಳ ಕಾಲ ಉದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿತು. ಆದರೆ 90ರ ದಶಕದ ನಂತರ ಜಾಗತಿಕರಣ- ಖಾಸಗಿಕರಣ- ಉದಾರಿಕರಣದ ಯುಗ ಆರಂಭವಾಗುತ್ತಿದ್ದಂತೆ ಆಗಸದಲ್ಲಿದ್ದ ಉದ್ಯಮ ನಿಧಾನವಾಗಿ ಭೂಮಿಗೆ ಇಳಿಯತೊಡಗಿತು. ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಇದನ್ನು ಪಾತಾಳಕ್ಕೆ ತಳ್ಳಲಾಯಿತು. ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದರ ಸಹವಾಸವೇ ಬೇಡ ಎಂದು..

    June 29, 2017
    ...
    CNN-fake-news
    ಮೀಡಿಯಾ 2.0

    ‘ಮೂಲಗಳು ತಿಳಿಸಿವೆ’: ಸುಳ್ಳು ಸುದ್ದಿ ಪ್ರಕಟಿಸಿ ಪೇಜಿಗೆ ಸಿಲುಕಿದ ಸಿಎನ್‌ಎನ್‌!

    ಅಮೆರಿಕಾದ ಮಾಧ್ಯಮ ಸಂಸ್ಥೆ ಸಿಎನ್ಎನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರೊಬ್ಬರ ಕ್ಷಮೆ ಕೇಳಿದೆ. ಆಗಿದ್ದಿಷ್ಟೆ; ಸಿಎನ್ಎನ್ ಡೊನಾಲ್ಡ್ ಟ್ರಂಪ್ ಆಪ್ತರೊಬ್ಬರ ಬಗ್ಗೆ ಸುದ್ದಿಯೊಂದನ್ನು ಪ್ರಟಿಸಿತ್ತು. ನಂತರ ಈ ಸುದ್ದಿ ಸುಳ್ಳು ಎಂದು ಆ ‘ಆಪ್ತರು’ ಪ್ರತಿಪಾದಿಸಿದ್ದರು. ಆಂತರಿಕ ತನಿಖೆ ನಡೆಸಿ ತನ್ನ ಗೌರವ ಉಳಿಸಿಕೊಳ್ಳಲು ತಪ್ಪಿತಸ್ಥ ಮೂವರು ಪತ್ರಕರ್ತರನ್ನು ಹೊರಗಟ್ಟಿದೆ ಸಿಎನ್‌ಎನ್‌. ಸುದ್ದಿ ಇದಿಷ್ಟೇ ಆದರೂ ಮಾಧ್ಯಮ ಸಂಸ್ಥೆಯೊಂದು ವರದಿಗಳ ಪ್ರಕಟಣೆಗೆ ಅನುಸರಿಸಬೇಕಾದ ಮಾರ್ಗ, ಸುದ್ದಿಗಳ ಆಯ್ಕೆ ಮಾನದಂಡಗಳು, ಮಾಧ್ಯಮ ಸಂಸ್ಥೆಗಳ ಉತ್ತರದಾಯಿತ್ವ ಸುದ್ದಿಯಾಚೆಗಿನ ಚರ್ಚೆಗೆ ಮುನ್ನುಡಿ..

    June 28, 2017
    ...
    belegere-kolivad-media-freedom
    ರಾಜ್ಯ

    ‘ಸಂಪಾದಕರು ವರ್ಸಸ್ ವಿಧಾನಸಭೆ’: ಪ್ರತಿಷ್ಠೆ ಪಕ್ಕಕ್ಕಿಟ್ಟು ‘ಹಕ್ಕುಚ್ಯುತಿ’ಯನ್ನು ವಿವರಿಸುವ ಕೆಲಸವಾಗಲಿ

     ಎತ್ತು ಏರಿಗೆ ಎಳೆದರೆ; ಕೋಣ ನೀರಿಗೆ ಎಳೀತಂತೆ… ಹೀಗೊಂದು ಗಾದೆಮಾತು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ ಒಂದು ಒಳ್ಳೆಯ ಕಡೆಗೂ, ಇನ್ನೊಂದು ಕೆಟ್ಟದರ ಕಡೆಗೂ ಎಳೆದಾಡುತ್ತಿದ್ದರೆ, ಅದನ್ನು ಬಣ್ಣಿಸಲು ಇದನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳ ಸಂಪಾದಕರು ಮತ್ತು ಕರ್ನಾಟಕದ ವಿಧಾನಸಭೆ ಎರಡೂ ಕೂಡ ನೀರಿನ ಕಡೆಗೇ ಎಳೆಯುತ್ತಿದ್ದಾರೆ. ಹೀಗಾಗಿ, ಏರಿಗೆ ಬರಬೇಕಿದ್ದ ಪ್ರಜಾಪ್ರಭುತ್ವದಲ್ಲಿ ಸಹಜವಾದ ಗೊಂದಲವೊಂದು ಹುಟ್ಟಿಕೊಂಡಿದೆ. ಜೂನ್ 21ರಂದಯ ಮುಗಿದ ಅಧಿವೇಶನದ ಕೊನೆಯ ದಿನ ಕರ್ನಾಟಕದ ವಿಧಾನ ಸಭೆ ‘ಹಾಯ್ ಬೆಂಗಳೂರು’..

    June 28, 2017
    ...
    Alcohol-and-Doctors-IMA-1
    ಸುದ್ದಿ ಸಾರ

    ವೈದ್ಯರಲ್ಲದವರ ಜತೆ ಮದ್ಯ ಸೇವನೆ ಬೇಡ: ವೈದ್ಯರಿಗೆ ವಿಚಿತ್ರ ಸಲಹೆ ನೀಡಿದ ‘ಐಎಂಎ ಪಾಲಿಸಿ’!

    ಕರ್ನಾಟಕದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ತಿದ್ದುಪಡಿ ಮಸೂದೆ ಸಂಬಂಧ ಚರ್ಚೆಗಳು ನಡೆಯುತ್ತಿರುವ ಹೊತ್ತಿಗೇ, ಭಾರತೀಯ ವೈದ್ಯಕೀಯ ಮಹಾ ಸಂಘ (ಐಎಂಎ) ತನ್ನ ಪದಾಧಿಕಾರಿಗಳಿಗೆ ಮದ್ಯ ಸೇವನೆ ಕುರಿತು ವಿಚಿತ್ರ ಎನ್ನಿಸುವಂತಹ ಸಲಹೆಯೊಂದನ್ನು ನೀಡಿದೆ. ಐಎಂಎ ಅಡಿಯಲ್ಲಿ ಬರುವ ವೈದ್ಯರು, ವೈದ್ಯಕೀಯ ಸೇವೆ ಸಲ್ಲಿಸದೇ ಇರುವ ಹೊರಗಿನವರ ಜತೆಗೆ ಮದ್ಯ ಸೇವನೆ ಮಾಡಬಾರದು ಎಂದು ಸಂಘ ಸಲಹೆ ನೀಡಿದೆ. ‘ಆರೋಗ್ಯದ ರಾಯಭಾರಿ’ಗಳಾಗಿ ಎಂಬ ಘೋಷಣೆ ಅಡಿಯಲ್ಲಿ ವೈದ್ಯಕೀಯ ಮಹಾ ಸಂಘ ಪ್ರಕಟಿಸಿರುವ ಈ ತೀರ್ಮಾನವು ಸ್ವತಃ ವೈದ್ಯರಿಗೇ ತಮಾಷೆಯಾಗಿ ಕಾಣಿಸುತ್ತಿದೆ. “ವೈದ್ಯಕೀಯ ಮಹಾ ಸಂಘ ವೈದ್ಯರಿಗೆ ಕ್ರೀಯಾಶೀಲವಾಗಿ..

    June 26, 2017
    ...
    p-sainath-4
    ರಾಜ್ಯ

    ‘ಸಮಾಚಾರ ಸಂದರ್ಶನ’: ರೈತರ ಸಾಲ ಮನ್ನಾ; ಪತ್ರಕರ್ತ ಪಿ. ಸಾಯಿನಾಥ್ ಏನಂತಾರೆ?

    ‘Wait and See’ (ಕಾದು ನೋಡಿ)… ಇದು ಕರ್ನಾಟಕ ಸರಕಾರ ರೈತರ ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಮುಂದಿಟ್ಟ ಪ್ರಶ್ನೆಗೆ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ನೀಡಿದ ಪ್ರತಿಕ್ರಿಯೆ. ಗುರುವಾರ ಬೆಂಗಳೂರಿಗೆ ಬಂದಿದ್ದ ಅವರನ್ನು ‘ಸಮಾಚಾರ’ ಖಾಸಗಿ ಹೋಟೆಲ್‌ ಒಂದರಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಂದರ್ಶನ ನಡೆಸಿತು. ಈ ಸಮಯದಲ್ಲಿ ರೈತರ ಸಾಲ ಮನ್ನಾ ಯೋಜನೆಗಳು, ಅದು ಗ್ರಾಮೀಣ ಪರಿಸರದಲ್ಲಿ ಮೂಡಿಸುವ ಪರಿಣಾಮಗಳು, ಜಿಎಸ್‌ಟಿ ಬಗೆಗಿನ ಅವರ ಆತಂಕಗಳು, ಕಾರ್ಪೊರೇಟ್ ಜಗತ್ತಿಗೆ..

    June 23, 2017
    ...
    farmer-india
    ರಾಜ್ಯ

    ಸರಕಾರಿ ಆದೇಶಕ್ಕಾಗಿ ಕಾಯುತ್ತಿರುವ ಸಹಕಾರಿ ಕ್ಷೇತ್ರ; ಸಾಲ ಮನ್ನಾ ಹಿಂದಿರುವ ‘ಸಂಖ್ಯಾಶಾಸ್ತ್ರ’!

    ದೇಶಾದ್ಯಂತ ಕೃಷಿ ಬಿಕ್ಕಟ್ಟು ಬಿಗಡಾಯಿಸುತ್ತಿರುವ ದಿನಗಳಲ್ಲಿಯೇ ಕರ್ನಾಟಕ ಸರಕಾರ 50 ಸಾವಿರದವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದೆ. ಘೋಷಣೆ ಮಾತ್ರವಲ್ಲ; ಇನ್ನೆರಡು ದಿನಗಳಲ್ಲಿ ಈ ಸಂಬಂಧಪಟ್ಟಂತೆ ಸರಕಾರದ ಆದೇಶವೂ ಹೊರಬೀಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಅಧಿವೇಶನದಲ್ಲಿ ಹೇಳಿದ್ದಾರೆ. ಹಾಗೇನಾದರೂ ಆದರೆ, ಪ್ರಸಕ್ತ ಸಾಲಿನಲ್ಲಿ ಸಾಲ ಮನ್ನಾ ಘೋಷಣೆಯನ್ನು ಅನುಷ್ಠಾನಕ್ಕೆ ತಂದ ದೇಶದ ಮೊದಲ ರಾಜ್ಯ ಎನ್ನಿಸಿಕೊಳ್ಳುತ್ತದೆ- ಕರ್ನಾಟಕ.  ಸಾಲ ಮನ್ನಾ ಸುತ್ತ ಗುರುವಾರದ ಬೆಳವಣಿಗೆಗಳಲ್ಲಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. “ರೈತರ ಸಾಲ ಮನ್ನಾ..

    June 22, 2017
    ...
    indian-presidential-election-final
    ದೇಶ

    ಭಾರತೀಯರಿಗೆ ಯಾಕೆ ರಾಷ್ಟ್ರಪತಿಯನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಇಲ್ಲ?

    ಮುಂದಿನ ಒಂದು ತಿಂಗಳ ಅಂತರದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿರುತ್ತದೆ. ಆದರೆ ಇದರಲ್ಲಿ ಪ್ರಜೆಗಳ ನೇರ ಪಾತ್ರ ಇರುವುದಿಲ್ಲ; ಜನಸಾಮಾನ್ಯರು ಮತ ಹಾಕುವುದಿಲ್ಲ. ಇಷ್ಟಕ್ಕೂ ನಾವು (ಪ್ರಜೆಗಳು) ಯಾಕೆ ದೇಶದ ಅಧ್ಯಕ್ಷರನ್ನು ನೇರ ಚುನಾವಣೆಯ ಮೂಲಕ ಆಯ್ಕೆ ಮಾಡುವುದಿಲ್ಲ? ಹೀಗೊಂದು ಪ್ರಶ್ನೆ ನಿಮ್ಮೊಳಗೂ ಮೂಡಿದ್ದರೆ, ಅದಕ್ಕೆ ‘ಸಮಾಚಾರ’ದ ಈ ವರದಿ ಉತ್ತರ ನೀಡುತ್ತದೆ. ಸಂವಿಧಾನದ ಅಡಿಯಲ್ಲಿ ಭಾರತದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅವರು ದೇಶದ ಮುಖ್ಯಸ್ಥರಾಗಿರುತ್ತಾರೆ;..

    June 21, 2017
    ...
    ramnath-kovind
    ದೇಶ

    ‘ದಲಿತ ಪರ- ಅಲ್ಪಸಂಖ್ಯಾತರ ವಿರೋಧಿ’: ಇದು ರಾಮನಾಥ್ ಕೋವಿಂದ್ ನಂಬಿರುವ ‘ಸಂವಿಧಾನ’!

    “ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಭಾರತದ ಪಾಲಿಗೆ ಏಲಿಯನ್‌ (ಹೊರಗಿನವು)ಗಳು. ಹೀಗಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದರೂ, ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ನೀಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರೋಧ ವ್ಯಕ್ತಪಡಿಸುತ್ತದೆ…” ಹೀಗಂತ ಹೇಳಿಕೆಯೊಂದನ್ನು ನೀಡಿದ್ದು ಬೇರೆ ಯಾರೂ ಅಲ್ಲ; ಸದ್ಯ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್. 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಅವರನ್ನು ಪಕ್ಷ ಆಯ್ಕೆ ಮಾಡಿತ್ತು. ಈ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅವರಿಗೆ ಸರಕಾರಿ ಉದ್ಯೋಗಗಳಲ್ಲಿ..

    June 20, 2017
    ...
    amir-1
    ವಿದೇಶ

    ಪಾಕ್ ಗೆಲುವಿನ ನೆರಳಿನಲ್ಲಿ ಅರಳಿದ ಅಮೀರ್: ಇದು ಅವಮಾನಗಳನ್ನು ಮೀರಿದ ಬದುಕಿನ ಕತೆ!

    “ಜೈಲು ಎಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಜೈಲಿನಲ್ಲಿ ಇದ್ದು ಬಂದವನು ಎಂದರೆ ಯಾರೂ ಕೂಡ ಗೌರವ ಕೊಡುವುದಿಲ್ಲ. ಆದರೂ ಈ ಸಮಯದಲ್ಲಿ ಹೇಳಬೇಕು, ನಾನು ಜೈಲಿನಲ್ಲಿ ಇದ್ದಷ್ಟು ದಿನ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು…” ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿ, ಅಷ್ಟೇ ವೇಗವಾಗಿ ಅಡ್ಡದಾರಿಯನ್ನೂ ತುಳಿದು, ‘ಸ್ಪಾಟ್ ಫಿಕ್ಸಿಂಗ್‌’ ಅಪರಾಧ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಹೊರಬಂದ ಮಹಮದ್ ಅಮೀರ್ ‘ಸ್ಕೈ ಸ್ಪೂರ್ಟ್ಸ್‌’ ವಾಹಿನಿಗೆ ನೀಡಿದ ಸಂದರ್ಶನದ ಆರಂಭದಲ್ಲಿ ಹೇಳಿದ ಮಾತಿದು. ಭಾನುವಾರ ಲಂಡನ್‌ನ..

    June 19, 2017

Top