An unconventional News Portal.

    ...
    kjadhav-icj-final
    ವಿದೇಶ

    ಐಸಿಜೆ ಮುಂದೆ ಕುಲಭೂಷಣ್ ಪ್ರಕರಣ: ಏನಿದು ‘ಅಂತಾರಾಷ್ಟ್ರೀಯ ನ್ಯಾಯಾಲಯ’ದ ಹೂರಣ?

    ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಸಮಾಧಾನಕರ ಹೆಜ್ಜೆಯನ್ನು ಇಟ್ಟಿದೆ. ಜಾದವ್ ಅವರನ್ನು ಮರಣದಂಡನೆಗೆ ಗುರಿಪಡಿಸಿದ ಪಾಕ್‌ ಮಿಲಿಟರಿ ನ್ಯಾಯಾಲಯದ ಆದೇಶಕ್ಕೆ ತಡೆಯನ್ನು ನೀಡುವಂತೆ ‘ಇಂಟರ್‌ನ್ಯಾಷನಲ್ ಕೋರ್ಟ್ ಆಫ್‌ ಜಸ್ಟಿಸ್’ (ಐಸಿಜೆ) ಪಾಕ್‌ಗೆ ಪತ್ರವನ್ನು ಬರೆದಿದೆ. ಭಾರತ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧ್ಯಕ್ಷ ರೊನ್ನಿ ಅಬ್ರಾಹಂ ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ನಮ್ಮ ಮಾಧ್ಯಮಗಳು ಪಾಕ್‌ಗೆ ಮುಖಭಂಗ, ಭಾರತದ ಗೆಲುವು..

    May 10, 2017
    ...
    radha-hiregowder-1
    ಟಿವಿ

    ನಿಜಕ್ಕೂ ನಡೆದಿದ್ದೇನು?: ‘ಪಬ್ಲಿಕ್ ಟಿವಿ’ಯ ರಾಧ ಮತ್ತು ಆತ್ಮಹತ್ಯೆ ಎಂಬ ಗಾಳಿ ಸುದ್ದಿ!

    ಪಬ್ಲಿಕ್ ಟಿವಿಯ ನಿರೂಪಕಿ ರಾಧ ಹಿರೇಗೌಡರ್ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ… ಸುದ್ದಿ ಅಷ್ಟಕ್ಕೆ ನಿಲ್ಲಲಿಲ್ಲ; ರಾಧ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ… ಆಸ್ಪತ್ರೆಯಲ್ಲಿರುವ ರಾಧ, ಅದೇ ವೇಳೆ ಡಾಲರ್ಸ್ ಕಾಲೋನಿಯ ಕಚೇರಿಯಲ್ಲಿ ಬಿಜೆಪಿ ಮಹಿಳಾ ನಾಯಕಿರ ಜತೆ ಕುಳಿತು ಹೊಸ ವಾಹಿನಿ ಸಂಬಂಧ ಮಾತುಕತೆಯನ್ನೂ ನಡೆಸುತ್ತಿದ್ದಾರೆ… ಸುದ್ದಿಯ ರೂಪದಲ್ಲಿ ಸುಳ್ಳುಗಳು ಹೇಗೆ ಹರಡಬಹುದು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೆಲವು ದಿನಗಳ ಹಿಂದೆ ‘ಸಮಾಚಾರ’ಕ್ಕೆ ಲಭ್ಯವಾದ ಅಧಿಕೃತ ಮಾಹಿತಿ ಏನಿತ್ತು ಎಂದರೆ; ‘ರಾಧ ಹಿರೇಗೌಡರ್ ವೃತ್ತಿ ಸಂಬಂಧಿತ..

    May 9, 2017
    ...
    justice-karnan-1
    ದೇಶ

    ನ್ಯಾ. ಕರ್ಣನ್‌ಗೆ ಶಿಕ್ಷೆಯ ತಾಪ: ಮರೆಗೆ ಸರಿದ ನ್ಯಾಯಾಧೀಶರ ಮೇಲಿನ ಭ್ರಷ್ಟಾಚಾರ ಆರೋಪ

    ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕರ್ಣನ್ ಅವರಿಗೆ ಸುಪ್ರಿಂ ಕೋರ್ಟ್‌ ಮಂಗಳವಾರ ಆರು ತಿಂಗಳ ಶಿಕ್ಷೆ ವಿಧಿಸಿದೆ. ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ತವ್ಯದಲ್ಲಿದ್ದ ನ್ಯಾಯಾಧೀಶರೊಬ್ಬರಿಗೆ ಶಿಕ್ಷೆ ವಿಧಿಸಿದ ಪ್ರಕರಣ ಇದಾಗಿದೆ. ಕಳೆದ ಕೆಲವು ತಿಂಗಳುಗಳ ಕಾಲ ನಡೆದ ನ್ಯಾಯಾಂಗದ ಈ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಎಂಬಂತೆ ಸುಪ್ರಿಂ ಕೋರ್ಟ್‌ ನ್ಯಾ. ಕರ್ಣನ್‌ ಬಂಧಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ. ಆದರೆ ನ್ಯಾ. ಕರ್ಣನ್ ಕಲ್ಕತ್ತಾದಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ…

    May 9, 2017
    ...
    fair-baby-rss
    ದೇಶ

    ಆರ್‌ಎಸ್‌ಎಸ್‌ ಅಂಗಸಂಸ್ಥೆಯಿಂದ ‘ಉತ್ತಮ ಸಂತತಿ’ ಬೆಳೆಸುವ ಯೋಜನೆ: ತಜ್ಞರು ಏನಂತಾರೆ?

    ನೀವು ಕಡಿಮೆ ಬುದ್ದಿವಂತರಾ? ನೋಡಲು ಕಪ್ಪಗಿದ್ದೀರಾ? ಆಕಾರದಲ್ಲಿ ಕುಳ್ಳಗಿದ್ದೀರಾ? ಹೇಗಿದ್ದರೂ ಇರಿ, ನಿಮ್ಮ ಮಗು ಬೆಳ್ಳಗೆ, ಉದ್ದಕ್ಕೆ, ಅತಿ ಬುದ್ದಿವಂತನಾಗಿ (ಬುದ್ದಿವಂತಳಾಗಿ) ಹುಟ್ಟಬೇಕಾ? ಹಾಗಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಅಂಗಸಂಸ್ಥೆಯೊಂದು ನಡೆಸುತ್ತಿರುವ ‘ಗರ್ಭ ವಿಜ್ಞಾನ ಅನುಸಂಧಾನ ಕೇಂದ್ರ’ಗಳಿಗೆ ಭೇಟಿ ನೀಡಿ ಮತ್ತು ಶುದ್ಧೀಕರಣದಲ್ಲಿ ಪಾಲ್ಗೊಳ್ಳಿ! ಓದಲು ವಿಚಿತ್ರ ಅನ್ನಿಸುವಂತಹ, ಜೆನಟಿಕ್ಸ್ ಎಂದು ಕರೆಯುವ ವಂಶವಾಹಿನಿ ವಿಜ್ಞಾನಕ್ಕೇ ಸವಾಲು ಒಡ್ಡುವಂತಹ ಪ್ರಯೋಗವೊಂದರಲ್ಲಿ ಯಶಸ್ಸು ಕಂಡಿದ್ದೇವೆ ಎಂದು ‘ಆರೋಗ್ಯ ಭಾರತಿ’ ಎಂಬ ಸಂಘಪರಿವಾರ ಸಂಸ್ಥೆಯೊಂದು ಪ್ರಕಟಿಸಿದೆ. ಈಗಾಗಲೇ ಗುಜರಾತಿನಲ್ಲಿ..

    May 8, 2017
    ...
    surveillance-0f-journalists
    ಮೀಡಿಯಾ 2.0

    ‘ಡಿಜಿಟಲ್ ಕಣ್ಗಾವಲು’: ಪತ್ರಕರ್ತರಿಗೆ ಎಚ್ಚರಿಕೆ ಪಾಠ ಹೇಳಿದ ಯುನೆಸ್ಕೋ ವರದಿ!

    ನಮ್ಮಲ್ಲಿ ಟಿವಿ ವಾಹಿನಿಗಳಿಂದಾಗಿ ಪತ್ರಿಕೋದ್ಯಮ ಆಗಾಗ್ಗೆ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಪ್ರಬಲವಾಗಿರುವ ಈ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಪರೀಕ್ಷೆಗೆ ಒಳಗಾಗುತ್ತಿವೆ. ಪತ್ರಿಕೋದ್ಯಮ ಎಂಬುದು ಸಂವಿಧಾನದ ‘ಕಾವಲು ನಾಯಿ’ ಎಂಬುದು ಹಳೆಯ ತಿಳಿವಳಿಕೆ. ಪತ್ರಿಕೋದ್ಯಮದ ಪಾಲಿಗೆ ಸಾಮಾಜಿಕ ಜಾಲತಾಣಗಳು ‘ಕಾವಲು ನಾಯಿ’ಗಳಾಗುತ್ತಿರುವ ದಿನಗಳಿವು.  ಸದ್ಯ ನಮ್ಮಲ್ಲಿ ಪತ್ರಿಕೋದ್ಯಮ ಮತ್ತು ನೈತಿಕತೆ ಚರ್ಚೆಗಳು ಸೀಮಿತಗೊಂಡಿವೆ. ಆದರೆ ಪ್ರಪಂಚದಾದ್ಯಂತ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಪತ್ರಕರ್ತರ ಮಾಹಿತಿ ಮೂಲಗಳ ರಕ್ಷಣೆ ಕುರಿತು ಚರ್ಚೆ ಆರಂಭವಾಗಿದೆ. ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ..

    May 8, 2017
    ...
    macron-1
    ವಿದೇಶ

    ಎಡವೂ ಬೇಡ; ಬಲವೂ ಬೇಡ: ಮಧ್ಯಮ ಪಂಥೀಯ ಮ್ಯಾಕ್ರನ್ ಗೆಲ್ಲಿಸಿದ ಫ್ಯಾನ್ಸ್ ಜನತೆ

    ಪ್ರಪಂಚದಾದ್ಯಂತ ಕುತೂಹಲವನ್ನು ಹುಟ್ಟುಹಾಕಿದ್ದ ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಮ ಪಂಥೀಯ ‘ಆಮ್ ಮಾರ್ಶ್’ ಪಕ್ಷದ ಎಮ್ಯಾನುಯಲ್ ಮ್ಯಾಕ್ರನ್ ಜಯಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಲಪಂಥೀಯ ಪಕ್ಷ ‘ನ್ಯಾಷನಲ್ ಫ್ರಂಟ್’ನ ಲಿ ಪೆನ್‌ರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿದ ಮ್ಯಾಕ್ರನ್, ನೆಪೋಲಿಯನ್ ನಂತರ ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶವೊಂದರ ಅಧ್ಯಕ್ಷ ಸ್ಥಾನಕ್ಕೇರಿದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಪಂಚದ ಹಲವು ದೇಶಗಳಲ್ಲಿ ಜನಪ್ರಿಯ, ಬಲಪಂಥೀಯ, ಒಡೆದಾಳುವ, ಧಾರ್ಮಿಕ ನೆಲೆಯ ರಾಜಕೀಯದ ಗಾಳಿ ಬೀಸುತ್ತಿರುವ ವೇಳೆಯಲ್ಲಿಯೇ, ಆರ್ಥಿಕ ವ್ಯವಸ್ಥೆ ಸುಧಾರಣೆಯ ಆಶ್ವಾಸನೆ ಹಿನ್ನೆಲೆಯಲ್ಲಿ,..

    May 8, 2017
    ...
    diddalli-final
    ರಾಜ್ಯ

    ಕೈ ಕೊಟ್ಟ ಕಾಗೋಡು; ಅಖಾಡಕ್ಕಿಳಿದ ಬಿಜೆಪಿ: ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಪರಿಣಾಮಗಳೇನು?

    ಕಾಫಿ ತೋಟಗಳು ಹಾಗೂ ಪ್ರವಾಸೋದ್ಯಮದ ಮೆರಗನ್ನು ಹೊದ್ದುಕೊಂಡಿರುವ ಕೊಡಗು ಜಿಲ್ಲೆಯ ತೆರೆಮರೆಯಲ್ಲಿ ನಡೆಯುತ್ತಿದ್ದ ‘ಆಧುನಿಕ ಜೀತ’ದ ಸ್ವರೂಪವನ್ನು ಹೊರಜಗತ್ತಿಗೆ ಪರಿಚಯಿಸಿದ್ದು ದಿಡ್ಡಳ್ಳಿ ಆದಿವಾಸಿಗಳ ಹೋರಾಟ. ಕಳೆದ ವರ್ಷದ ಕೊನೆಯಲ್ಲಿ ವಿರಾಜಪೇಟೆ ಸಮೀಪದ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಾಗುತ್ತಿದ್ದಂತೆ ಹೋರಾಟವೊಂದು ಹುಟ್ಟಿಕೊಂಡಿತು. ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಇದು ಸದ್ದು ಮಾಡಿತು. ಈ ಮೂಲಕ, ಕೊಡಗು ಜಿಲ್ಲೆಯ ಕಾಫಿತೋಟಗಳ ಬೇಲಿಯ ಒಳಗೆ ನಡೆಯುತ್ತಿದ್ದ ‘ಲೈನ್ ಮನೆ ಜೀತ’ ಪ್ರಕರಣಗಳು ಸುದ್ದಿ ಕೇಂದ್ರಕ್ಕೆ ಬಂದವು…

    May 6, 2017
    ...
    sathish-jarkiholi-udayanadu
    ಪತ್ರಿಕೆ

    ರಾಜ್ಯ ಮಟ್ಟದ ಪತ್ರಿಕೆ ಆರಂಭಿಸಲು ಜಾರಕಿಹೋಳಿ ತಯಾರಿ: ಡಿಸೆಂಬರ್‌ಗೆ ‘ಉದಯನಾಡು’?

    “ನಾವು ಕಾಲೇಜಿನ ದಿನಗಳಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದೆವು. ಆದರೆ ಮತ್ತೆ ಯಾವತ್ತೂ ಹಚ್ಚಲಿಲ್ಲ. ಈಗ ಟಿವಿಗಾಗಿ ಪೌಡರ್ ಹಚ್ಚಿಕೊಂಡಿರುವುದು ವಿಶೇಷ. ಹಳೆಯ ನೆನಪುಗಳನ್ನು ಟಿವಿ ವಾಹಿನಿ ಮಾಡಿಕೊಟ್ಟಿತು…” ಹೀಗಂತ ಸುಮಾರು 7 ವರ್ಷಗಳ ಹಿಂದೆ, 2010ರ ಜೂನ್ ತಿಂಗಳಿನಲ್ಲಿ ಸಮಯ ಸುದ್ದಿ ವಾಹಿನಿಯನ್ನು ಉದ್ಘಾಟಿಸಿ  ‘ಸತೀಶ್ ಶುಗರ್ಸ್ ಪ್ರೈ. ಲಿ.’ ಮಾಲೀಕ, ರಾಜಕಾರಣಿ ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ ಅವರ ಕನಸು ನನಸಾಗುವ ಮುನ್ನವೇ ಅವರು ಸಮಯ ಟಿವಿಯಿಂದ ಹೊರ ನಡೆದರು. ಇದೀಗ, ಸತೀಶ್ ಜಾರಕಿಹೊಳಿ ‘ಉದಯನಾಡು’..

    May 5, 2017
    ...
    gau-rakshak-1
    ರಾಜ್ಯ

    ‘ಗೋ ರಕ್ಷಣೆ ನೆಪದಲ್ಲಿ ನಡೆದಿದ್ದು ಎರಡೇ ಕೃತ್ಯ’: ಇದು ಪೊಲೀಸ್ ಇಲಾಖೆ ಮಾಹಿತಿ ಎಂದ ಅಧಿಕಾರಿ

    “ನಾವು ಕಾನೂನು ಏನು ಹೇಳಿದೆಯೋ, ಅದನ್ನು ಫಾಲೋ ಮಾಡಿದ್ದೀವಿ. 1964ರಿಂದ ಇದ್ದ ಕಾನೂನು ಅದು. ಅದರಲ್ಲಿ ನ್ಯೂನತೆಗಳಿವೆ ಎಂದು ಈಗ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಎರಡೇ ದೌರ್ಜನ್ಯ ಕೃತ್ಯಗಳು ನಡೆದಿವೆ. ಹಾಗಂತ ಪೊಲೀಸ್‌ ಇಲಾಖೆ ನೀಡಿದ ಮಾಹಿತಿಯನ್ನು ನಾವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆಗೆ ಮುನ್ನ, ಕಾನೂನು ಇಲಾಖೆಯಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೆ ಅನುಮತಿ ಪಡೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ನಾವು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ…” ಹೀಗಂತ ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು ಪಶು..

    May 5, 2017
    ...
    adhar-security-failed-1
    ದೇಶ

    ಆಧಾರ್ ಆಯೋಮಯ: ಅಭಿವ್ಯಕ್ತಿ ಸ್ವಾತಂತ್ರ್ಯ ಪಕ್ಕಕ್ಕಿಡಿ; ‘ವೈಯಕ್ತಿಕ ಸ್ವಾತಂತ್ರ್ಯ’ದ ಕತೆ ಹೇಳಿ!

    “ಬೆರಳಚ್ಚು ಮತ್ತು ಕಣ್ಣಿನ ಐರಿಸ್ ನನ್ನದು. ಅವು ನನ್ನ ದೇಹದ ಅಂಗಗಳು. ಅವುಗಳ ಮೇಲೆ ಸರಕಾರ ಹಕ್ಕು ಸಾಧಿಸುವಂತಿಲ್ಲ” ಹೀಗೊಂದು ವಾದವನ್ನು ಇತ್ತೀಚೆಗೆ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದರು. ಆದಾಯ ತೆರಿಗೆ ಸಲ್ಲಿಸುವಾಗ ವಿವಾದಾತ್ಮಕ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂಬ ಸರಕಾರದ ನಿರ್ಧಾರವನ್ನು ವಿರೋಧಿಸಿ ಶ್ಯಾಮ್ ದಿವಾನ್ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದರು. ಈ ವೇಳೆ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, “ನಿಮ್ಮ ದೇಹದ ಮೇಲೆ ನಿಮಗೆ ಹಕ್ಕಿರಬಹುದು. ಮನುಷ್ಯ ದೇಹದ ಭಾಗಗಳ ವ್ಯಾಪಾರಕ್ಕೆ ಕಡಿವಾಣ ಹಾಕುವ ಸರಕಾರ,..

    May 4, 2017

Top