An unconventional News Portal.

    ...
    Julian Assange
    ಸುದ್ದಿ ಸಾರ

    ಅಸಾಂಜೆ ಮೇಲಿನ ರೇಪ್ ಕೇಸ್ ಕೈ ಬಿಟ್ಟ ಸ್ವೀಡನ್; ಬ್ರಿಟನ್ ಕೈಯಲ್ಲಿ ವಿಕಿಲೀಕ್ಸ್ ಸಂಸ್ಥಾಪಕನ ಭವಿಷ್ಯ

    ಶುಕ್ರವಾರ ಸ್ವೀಡನ್ ಸರ್ಕಾರಿ ಅಭಿಯೋಜಕರು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಮೇಲಿನ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಅಸಾಂಜೆ ಮತ್ತು ಸ್ವೀಡನ್ ಮಧ್ಯೆ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದ ಕಳ್ಳ ಪೊಲೀಸ್ ಆಟಕ್ಕೆ ಅಂತಿಮ ವಿದಾಯ ಹೇಳಲಾಗಿದೆ. ಹೀಗಿದ್ದೂ ಈಕ್ವೆಡಾರ್ ರಾಯಭಾರಿ ಕಚೇರಿಯನ್ನು ಜೂಲಿಯನ್ ಅಸಾಂಜೆ ತೊರೆದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಬ್ರಿಟೀಷ್ ಪೊಲೀಸರು ಹೇಳಿದ್ದಾರೆ. 2012ರಿಂದ ಲಂಡನಿನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅವರು ಅಸಾಂಜೆ ಆಶ್ರಯ ಪಡೆದಿದ್ದಾರೆ. 45 ವರ್ಷದ ಅಸಾಂಜೆ 2012ರಲ್ಲಿ ಈಕ್ವೆಡಾರ್..

    May 20, 2017
    ...
    kulbhushan Jadhav
    ದೇಶ

    ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ ಒಡ್ಡಿದ ಅಂತರರಾಷ್ಟ್ರೀಯ ಕೋರ್ಟ್; ಸದ್ಯಕ್ಕೆ ಭಾರತ ನಿರಾಳ

    ಭಾರತೀಯ ಪ್ರಜೆ ಕುಲಭೂಷಣ್ ಸುಧೀರ್ ಜಾಧವ್ ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ತಡೆ ನೀಡಿದೆ. ಇದರಿಂದ ಸದ್ಯಕ್ಕೆ ಭಾರತ ನಿರಾಳವಾಗಿದೆ. ಆದರೆ ಪಾಕಿಸ್ತಾನ ಸರಕಾರ ಅಲ್ಲಿನ ನಾಗರೀಕರ ಪ್ರಭಲ ವಿರೋಧವನ್ನು ಎದುರಿಸಬೇಕಾಗಿ ಬಂದಿದೆ. ತೀರ್ಪಿನ ಆರಂಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಈ ಪ್ರಕರಣ ತನ್ನ ವ್ಯಾಪ್ತಿಯದ್ದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿತು. 1977ರ ವಿಯೆನ್ನಾ ಒಪ್ಪಂಧದಲ್ಲಿ ಗೂಢಚರ್ಯೆ ಮಾಡುವವರನ್ನು ಹೊರಗಿಟ್ಟಿಲ್ಲ. ಮತ್ತು ಇದಕ್ಕೆ ಎರಡೂ ದೇಶಗಳೂ ಸಹಿ ಮಾಡಿವೆ. ಹೀಗಾಗಿ..

    May 19, 2017
    ...
    WannaCry Cyber Attack
    ವಿದೇಶ

    ಬೆಚ್ಚಿ ಬೀಳಿಸಿದ ‘ವಾನ್ನಾಕ್ರೈ’ ಸೈಬರ್ ದಾಳಿ ಮತ್ತು ಬದಲಾದ ಮೂರನೇ ಮಹಾಯುದ್ಧದ ಸ್ವರೂಪ

    ವಿಶ್ವದ ಹಲವು ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿಯಲ್ಲಿ ಚಕಮಕಿಗಳು ನಿರಂತರವಾಗಿವೆ. ಎರಡೂ ದೇಶಗಳ ಮಧ್ಯೆ ಯಾವ ಕ್ಷಣದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು ಎಂಬ ವಾತಾವರಣವೊಂದು ನಿರ್ಮಾಣವಾಗಿದೆ. ಇದೇ ರೀತಿ ಆಫ್ರಿಕಾ, ದಕ್ಷಿಣ ಅಮೆರಿಕಾ ಖಂಡದ ಕೆಲವು ದೇಶಗಳಲ್ಲಿ ಆಂತರಿಕ ಕಲಹಗಳು ಬಿರುಸಾಗಿವೆ. ಅತ್ತ ಸಿರಿಯಾದ ಸಂಘರ್ಷ ವಿಶ್ವವ್ಯಾಪಿ ಹರಡಿಕೊಂಡಿದೆ. ಇದೇ ವಿಚಾರಕ್ಕೆ ಮೂರನೇ ಮಹಾಯುದ್ಧ ನಡೆಯಲಿದೆ ಎಂಬ ಚರ್ಚೆಗಳು ಹುಟ್ಟಿಕೊಂಡೇ ವರ್ಷಗಳು ಕಳೆದಿವೆ. ತಣ್ಣಗಾಗಿದ್ದ ಈ ಮೂರನೇ ಮಹಾಯುದ್ಧಕ್ಕೆ ಇತ್ತೀಚೆಗೆ ತುಪ್ಪ..

    May 18, 2017
    ...
    Triple Talaq
    ದೇಶ

    ತಲಾಖ್.. ತಲಾಖ್.. ತಲಾಖ್.. ನಿಜಕ್ಕೂ ಏನಿದು ತ್ರಿವಳಿ ತಲಾಖ್?

    ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಸಾಂವಿಧಾನಿಕ ಪೀಠ ‘ತ್ರಿವಳಿ ತಲಾಖ್‘ಗಿರುವ ಸಾಂವಿಧಾನಿಕ ಮಾನ್ಯತೆ ಬಗ್ಗೆ ಕಳೆದ ಬುಧವಾರದಿಂದ ವಿಚಾರಣೆ ಆರಂಭಿಸಿದೆ. ತ್ರಿಪಲ್ ತಲಾಖ್ ರದ್ದುಗೊಳಿಸಬೇಕು ಎಂದು ಕೋರಿ ಕೆಲವು ಮುಸ್ಲಿಂ ಧರ್ಮೀಯ ಮಹಿಳೆಯರು ಸಲ್ಲಿಸಿರುವ ಅರ್ಜಿ ಆಧರಿಸಿ ಈ ಚರ್ಚೆಯನ್ನು ಅದು ಕೈಗೆತ್ತಿಕೊಂಡಿದೆ. ಕೇಂದ್ರದಲ್ಲಿ ಬಲಪಂಥೀಯ ವಿಚಾರಧಾರೆ ಪ್ರತಿಪಾದಿಸುವ ಬಿಜೆಪಿ ಅಧಿಕಾರದಲ್ಲಿದೆ; ಜತೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತ್ರಿವಳಿ ತಲಾಖ್ ಗೆ ನಿಷೇಧ ಹೇರುವ ಮಾತುಗಳನ್ನು ಆಡುತ್ತಿದ್ದಾರೆ. ಸಹಜವಾಗಿಯೇ ವಿಶ್ವದ ಅತೀ ದೊಡ್ಡ ಧರ್ಮ ಮುಸ್ಲಿಂನಲ್ಲಿ..

    May 17, 2017
    ...
    pure-air-bottle-market
    ದೇಶ

    ಮಿನರಲ್ ವಾಟರ್ ಆಯ್ತು; ಈಗ ಮಾರುಕಟ್ಟೆಯಲ್ಲಿ ಶುದ್ಧ ಗಾಳಿಯ ಬಾಟೆಲ್‌ಗಳೂ ಲಭ್ಯ!

    ಕೆಲವೇ ವರ್ಷಗಳ ಹಿಂದೆ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡುವ ವಿಚಾರ ತಮಾಷೆಯ ವಸ್ತುವಾಗಿತ್ತು. ನೈಸರ್ಗಿಕವಾಗಿ ಸಿಗುವ, ನಿತ್ಯ ಬದುಕಿನಲ್ಲಿ ಸಂಜೀವಿನಿಯಾಗಿದ್ದ ನೀರು ಕೂಡ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ ಎಂದರೆ ಬಹುತೇಕರು ನಂಬಲು ಸಿದ್ಧರಿರಲಿಲ್ಲ. ಆದರೆ 2013ರ ಹೊತ್ತಿಗೆ ಭಾರತದಲ್ಲಿ ಮಿನರಲ್ ವಾಟರ್‌ ಮಾರಕಟ್ಟೆ 6 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. 2018ರ ಹೊತ್ತಿಗೆ ಇದು 18 ಸಾವಿರ ಕೋಟಿಗೆ ಏರಿಕೆಯಾಗುವ ಅಂದಾಜಿದೆ. ವಿಷಯ ಅದಲ್ಲ… ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣ ನೀರಿನಂತೆಯೇ ಶುದ್ಧ ಗಾಳಿಗೂ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಈಗಾಗಲೇ ಆನ್‌ಲೈನ್ ಮಾರುಕಟ್ಟೆಯಲ್ಲಿ..

    May 16, 2017
    ...
    cyber-attack-2
    ವಿದೇಶ

    ಜಾಗತಿಕ ಸೈಬರ್ ದಾಳಿಗೆ ತಡೆ ಹಾಕಿದ 22 ವರ್ಷದ ಮಾಲ್‌ವೇರ್ ಟೆಕ್ಕಿ ಮತ್ತು ಎಚ್ಚರಿಕೆ ಗಂಟೆ!

    ಇದು ಅಂತರ್ಜಾಲ ಜಗತ್ತಿನಲ್ಲಿ ತಲ್ಲಣಗಳನ್ನು ಹುಟ್ಟುಹಾಕಿರುವ ಬೆಳವಣಿಗೆ. ಶುಕ್ರವಾರ ಇಂಗ್ಲೆಂಡ್‌ನ ಸರಕಾರಿ ಆಸ್ಪತ್ರೆಗಳಲ್ಲಿ ಶುರುವಾದ ಬೆಳವಣಿಗೆ ಸದ್ಯ 150 ದೇಶಗಳ ಸುಮಾರು 2 ಲಕ್ಷ ಕಂಪ್ಯೂಟರ್‌ಗಳಿಗೆ ವ್ಯಾಪಿಸಿದೆ. ವನ್ನಾಕ್ರೈ ಎಂದು ಕರೆಯುವ ವೈರಸ್‌, ವಿಂಡೋಸ್‌ 8 ಹಾಗೂ ಅದಕ್ಕಿಂತ ಹಳೆಯ ತಂತ್ರಾಂಶಗಳನ್ನು ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಿದೆ. ‘300 ಡಾಲರ್‌ ನೀಡಿದರೆ, ಕಂಪ್ಯೂಟರ್‌ನಲ್ಲಿ ಶೇಖರಿಸಿ ಇಟ್ಟುಕೊಂಡಿದ್ದ ಮಾಹಿತಿಯನ್ನು ಮರಳಿ ನೀಡಲಾಗುವುದು, ಇಲ್ಲದಿದ್ದರೆ ಅಳಸಿ ಹಾಕಲಾಗುವುದು’ ಎಂದು ಹ್ಯಾಕರ್‌ಗಳು ಎಚ್ಚರಿಕೆ ನೀಡುತ್ತಿದ್ದಾರೆ. ಹಣ ಪಾವತಿಗೆ ಬಿಟ್‌ ಕಾಯಿನ್ ಎಂದು ಕರೆಯುವ ಅಂತರ್ಜಾಲದಲ್ಲಿ..

    May 15, 2017
    ...
    arnub-brijesh-final
    ಟಿವಿ

    ತೆರೆಗೆ ಬಂದು ವಾರ ಕಳೆಯುವ ಮುನ್ನವೇ ‘ಅರ್ನಾಬ್ ರಿಪಬ್ಲಿಕ್’ ವಿರುದ್ಧ ಮೊದಲ ದೂರು?

    ತೆರೆಗೆ ಅಪ್ಪಳಿಸಿ ವಾರ ಕಳೆಯುವ ಮೊದಲೇ ಅರ್ನಾಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್ ಟಿವಿ’ ವಿರುದ್ಧ ಮೊದಲ ದೂರು ದಾಖಲಾಗುವ ಸಾಧ್ಯತೆ ಇದೆ. ಅದೂ ಕರ್ನಾಟಕದಲ್ಲಿ…! ಕಳೆದ ವಾರವಷ್ಟೆ ‘ರಿಪಬ್ಲಿಕ್ ಟಿವಿ’ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಸಂಪಾದಕ, ಜನಪ್ರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಆರು ತಿಂಗಳ ನಂತರ ಟಿವಿ ಪರದೆ ಮೇಲೆ ಪ್ರತ್ಯಕ್ಷರಾಗಿದ್ದಾರೆ. ಟಿವಿ ಪರದೆಗೆ ಗ್ರಾಫಿಕ್ಸ್ ಬೆಂಕಿ ಹಾಕುವ ಅವರ ಪತ್ರಿಕೋದ್ಯಮದ ಸ್ವರೂಪ ಇನ್ನಷ್ಟು ಬಿರುಸಾಗಿದೆ. ಈಗ, ಸ್ವತಂತ್ರ ಪತ್ರಿಕೋದ್ಯಮದ ಕುರಿತು ಮಾತನಾಡುವ ಅರ್ನಾಬ್ ನಿಲುವು ಯಾರ ಪರ ಎಂಬುದು ಸ್ಪಷ್ಟವಾಗುತ್ತಿದೆ. ಜತೆಗೆ ಅರ್ನಾಬ್..

    May 13, 2017
    ...
    social-survey-karnataka-4
    ರಾಜ್ಯ

    ಸಿದ್ದು ಸರಕಾರದ ‘ಜಾತಿ ಸಮೀಕ್ಷೆ’: ಹೊರಬಿದ್ದ ಅಂಕಿ ಅಂಶಗಳಿಗೆ ಈಗ ಅಧಿಕೃತ ಮೊಹರು!

    ಸ್ವತಂತ್ರ ಭಾರತದ ಮೊಟ್ಟ ಮೊದಲ ‘ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ – ಕರ್ನಾಟಕ’ದ ಕೆಲವು ಅಂಕಿ ಅಂಶಗಳು ಈ ಬಾರಿ ಅಧಿಕೃತವಾಗಿ ಸೋರಿಕೆಯಾಗಿವೆ. ಹೆಚ್ಚು ಕಡಿಮೆ 2016ರ ಏಪ್ರಿಲ್ ತಿಂಗಳಿನಲ್ಲಿ ವಾಟ್ಸಾಪ್‌ಗಳ ಮೂಲಕ ಹರಿದಾಡಿದ ಅಂಕಿ ಅಂಶಗಳನ್ನು ಈ ಬಾರಿ ವಿಶ್ವಾಸಾರ್ಹ ದಿನ ಪತ್ರಿಕೆ ‘ಪ್ರಜಾವಾಣಿ’ ಶನಿವಾರದ ತನ್ನ ಮುಖಪುಟದ ವರದಿಯಲ್ಲಿ ಪ್ರಕಟಿಸಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಜಾತೀವಾರು ಜನಸಂಖ್ಯೆ ವಿಚಾರದಲ್ಲಿ ಇದ್ದ ತಿಳಿವಳಿಕೆಗಳನ್ನು ಸಮೀಕ್ಷೆ ಮಾಹಿತಿ ಬುಡಮೇಲು ಮಾಡುವುದು ಸ್ಪಷ್ಟವಾಗಿದೆ. ಚುನಾವಣೆಗೆ ಇನ್ನೊಂದು ವರ್ಷ..

    May 13, 2017
    ...
    Pro-kabaddi-2015-winners
    ದೇಶ

    ಆಶಾದಾಯಕ ಬೆಳವಣಿಗೆ: ಕ್ರಿಕೆಟ್ ಹೊರತಾದ ಕ್ರೀಡೆಗಳ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ

    ಭಾರತದ ಪಾಲಿಗೆ ಕ್ರಿಕೆಟ್ ಕೂಡ ಧರ್ಮ ಎಂಬ ಮಾತಿದೆ. ಇದಕ್ಕೆ ಪ್ರಮುಖ ಕಾರಣ ದೇಶದ ಟಿವಿ ವೀಕ್ಷಕರ ಮನಸ್ಥಿತಿ. ಕ್ರಿಕೆಟ್ ಪಂದ್ಯಾವಳಿಗಳ ನೇರ ಪ್ರಸಾರವಿದ್ದಾಗ ದೊಡ್ಡ ಸಂಖ್ಯೆಯ ಜನ ಟಿವಿಯನ್ನು ವೀಕ್ಷಿಸುತ್ತಾರೆ ಎಂದು ರೇಟಿಂಗ್‌ ಏಜೆನ್ಸಿಗಳು ಹೇಳುತ್ತವೆ. ಹೀಗಾಗಿ ಕ್ರಿಕೆಟ್ ಕೂಡ ಧರ್ಮದ ರೀತಿಯಲ್ಲಿ ಭಾರತೀಯರನ್ನು ಹಿಡಿದಿಟ್ಟಿದೆ ಎಂದು ಮಾರುಕಟ್ಟೆಯ ತಜ್ಷರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಟಿವಿ ನೋಡುವವರ ಇಚ್ಚೆಗಳನ್ನು ಅಳೆಯಲು ಇರುವ ಮಾನದಂಡ ಟಿಆರ್‌ಪಿ ಅಥವಾ ಟೆಲಿವಿಝನ್ ರೇಟಿಂಗ್ ಪಾಯಿಂಟ್. ಟಿಆರ್‌ಪಿಗಳನ್ನು ತಾಳೆ ಮಾಡುವ ಬಾರ್ಕ್‌ ಸಂಸ್ಥೆ ದೇಶದಲ್ಲಿ..

    May 12, 2017
    ...
    new-indian-currency
    ಸುದ್ದಿ ಸಾರ

    ನೋಟುಗಳ ಅಮಾನ್ಯೀಕರಣಕ್ಕೆ 6 ತಿಂಗಳು: ಉತ್ತರಕ್ಕಾಗಿ ಕಾಯುತ್ತಿರುವ ಆರು ಪ್ರಶ್ನೆಗಳು!

    ಆರು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಚಲಾವಣೆಯಲ್ಲಿದ್ದ ದೊಡ್ಡ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದರು. ನಂತರದ ಕೆಲವು ತಿಂಗಳುಗಳ ಕಾಲ ದೇಶದಲ್ಲಿ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’ಯನ್ನು ಹೇರಿದ ಹಾಗಿತ್ತು ಸನ್ನಿವೇಶಗಳು. ಸಾಮಾನ್ಯ ಜನ ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತರು, ಕೆಲವರು ಸಾವನ್ನೂ ಅಪ್ಪಿದರು. ಇದಾದ ನಂತರ ಸದ್ಯ ಎಲ್ಲವೂ ಯಥಾಸ್ಥಿತಿಗೆ ಬಂದು ನಿಂತಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ನೋಟುಗಳ ಅಮಾನ್ಯೀಕರಣ ಘೋಷಣೆ ವೇಳೆ ಪ್ರಧಾನಿ ಮೋದಿ, ‘ಕಪ್ಪುಹಣ, ನಕಲಿ ನೋಟುಗಳು ಹಾಗೂ ಭಯೋತ್ಪಾದನೆ’ ವಿರುದ್ಧದ..

    May 11, 2017

Top