An unconventional News Portal.

ತಲಾಖ್.. ತಲಾಖ್.. ತಲಾಖ್.. ನಿಜಕ್ಕೂ ಏನಿದು ತ್ರಿವಳಿ ತಲಾಖ್?

ತಲಾಖ್.. ತಲಾಖ್.. ತಲಾಖ್.. ನಿಜಕ್ಕೂ ಏನಿದು ತ್ರಿವಳಿ ತಲಾಖ್?

ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಸಾಂವಿಧಾನಿಕ ಪೀಠ ತ್ರಿವಳಿ ತಲಾಖ್ಗಿರುವ ಸಾಂವಿಧಾನಿಕ ಮಾನ್ಯತೆ ಬಗ್ಗೆ ಕಳೆದ ಬುಧವಾರದಿಂದ ವಿಚಾರಣೆ ಆರಂಭಿಸಿದೆ. ತ್ರಿಪಲ್ ತಲಾಖ್ ರದ್ದುಗೊಳಿಸಬೇಕು ಎಂದು ಕೋರಿ ಕೆಲವು ಮುಸ್ಲಿಂ ಧರ್ಮೀಯ ಮಹಿಳೆಯರು ಸಲ್ಲಿಸಿರುವ ಅರ್ಜಿ ಆಧರಿಸಿ ಈ ಚರ್ಚೆಯನ್ನು ಅದು ಕೈಗೆತ್ತಿಕೊಂಡಿದೆ.

ಕೇಂದ್ರದಲ್ಲಿ ಬಲಪಂಥೀಯ ವಿಚಾರಧಾರೆ ಪ್ರತಿಪಾದಿಸುವ ಬಿಜೆಪಿ ಅಧಿಕಾರದಲ್ಲಿದೆ; ಜತೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತ್ರಿವಳಿ ತಲಾಖ್ ಗೆ ನಿಷೇಧ ಹೇರುವ ಮಾತುಗಳನ್ನು ಆಡುತ್ತಿದ್ದಾರೆ. ಸಹಜವಾಗಿಯೇ ವಿಶ್ವದ ಅತೀ ದೊಡ್ಡ ಧರ್ಮ ಮುಸ್ಲಿಂನಲ್ಲಿ ಅಡಕವಾಗಿರುವ ತ್ರಿವಳಿ ತಲಾಖ್ ವಿಚಾರಣೆ ದೇಶವಷ್ಟೇ ಅಲ್ಲ ವಿದೇಶಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಹಾಗಾದರೆ ತ್ರಿವಳಿ ತಲಾಖ್ ಎಂದರೇನು?

ತ್ರಿವಳಿ ತಲಾಖ್ ಮುಸ್ಲಿಂ ಸಮುದಾಯದಲ್ಲಿ ಬಳಕೆಯಲ್ಲಿರುವ ಒಂದು ವಿಚ್ಛೇದನ ವಿಧಾನ. ಇದರ ಪ್ರಕಾರ ಪತಿ ಸರಳವಾಗಿ ಮೂರು ಬಾರಿ ತಲಾಖ್ಎಂದು ಹೇಳಿದರೆ ಅಲ್ಲಿಗೆ ಆ ದಾಂಪತ್ಯ ಕೊನೆಯಾಗುತ್ತದೆ. ‘ಹನ್ನಾಫಿ ಇಸ್ಲಾಮಿಕ್ ಸ್ಕೂಲ್ ಆಫ್ ಲಾಅಥವಾ ಹನ್ನಾಫಿ ಕಾನೂನುಗಳನ್ನು ಪಾಲಿಸುವವರು ಈ ರೀತಿಯ ವಿಚ್ಛೇದನ ವಿಧಾನ ಅನುಸರಿಸುತ್ತಾರೆ. ವಿಶೇಷವೆಂದರೆ ಭಾರತದ ಹೆಚ್ಚಿನವರು ಈ ಹನ್ನಾಫಿ ಕಾನೂನುಗಳನ್ನು ಅನುಸರಿಸುವ ಮುಸ್ಲಿಮರಾಗಿದ್ದಾರೆ.

ಹಾಗಂತ ಇದು ಜಾಗತಿಕವಾಗಿ ನೆಲೆಸಿರುವ ಎಲ್ಲಾ ಇಸ್ಲಾಂ ಧರ್ಮೀಯರು ಪಾಲಿಸುವ ಕಾನೂನೇನೂ ಅಲ್ಲ. ಹಲವು ದೇಶಗಳಲ್ಲಿ ವಿಚ್ಛೇದನಕ್ಕೆ ಬೇರೆ ಬೇರೆ ಕಾನೂನುಗಳನ್ನು ಪಾಲಿಸುತ್ತಾರೆ. ಕೆಲವು ಕಾನೂನುಗಳಲ್ಲಿ ವಿಚ್ಛೇದನಕ್ಕೆ ಮೂರು ತಿಂಗಳ ಅವಕಾಶ ನೀಡುವ ಕಾನೂನುಗಳೂ ಇವೆ. ಇವೆಲ್ಲದರ ಜತೆಗೆ ಪಾಕಿಸ್ತಾನವೂ ಸೇರಿ ಹಲವು ಇಸ್ಲಾಂ ಧರ್ಮೀಯರ ದೇಶಗಳಲ್ಲೇ ಈ ತ್ರಿವಳಿ ತಲಾಖ್ ಬ್ಯಾನ್ ಮಾಡಲಾಗಿದೆ. ಸರಕಾರವೂ ಈ ವಿಚಾರವನ್ನು ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದಿದೆ.

card_1461824857

ಕೃಪೆ: ಶಿ ದ ಪೀಪಲ್

ತ್ರಿವಳಿ ತಲಾಖ್ ಚರ್ಚೆ ಯಾಕೆ?

ಮುಸ್ಲಿಂ ಮಹಿಳಾ ಸಂಘಟನೆ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ (ಬಿಎಂಎಂಎ)’ ತ್ರಿವಳಿ ತಲಾಖ್ ಹಾಗೂ ನಿಖ್ಹಾ ಹಲಾಲಾಗೆ ನಿಷೇಧ ಹೇರುವಂತೆ ಕೋರಿ ಎರಡು ವರ್ಷದ ಹಿಂದೆ ಆಂದೋಲನವೊಂದನ್ನು ಆರಂಭಿಸಿತ್ತು; ನಿಖ್ಹಾ ಹಲಾಲಾ ಎಂದರೆ ವಿಚ್ಛೇದನಕ್ಕೊಳಗಾದ ಹೆಂಡತಿ ಮತ್ತೆ ತನ್ನ ಮೊದಲ ಗಂಡನನ್ನು ಸೇರಬೇಕಾದರೆ ಎರಡನೇ ಮದುವೆಯಾಗಬೇಕಾದ ವಿಧಾನ.

ತ್ರಿವಳಿ ತಲಾಖ್ನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಹಾಗೂ ದುರ್ಬಳಕೆ ಮಾಡಿಕೊಳ್ಳುವುದನ್ನು ನೋಡಿ ನಾವು ಈ ಆಂದೋಲನ ಆರಂಭಿಸಿದ್ದೆವು,” ಎನ್ನುತ್ತಾರೆ ಬಿಎಂಎಂಎ ಸಹ ಸಂಸ್ಥಾಪಕಿ ಝಾಕಿಯಾ ಸೋಮನ್.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಬೇಕು ಎಂದು ಹೇಳಿ ತ್ರಿವಳಿ ತಲಾಖ್ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಇಷ್ಟೇ ಆಗಿದ್ದರೆ ತ್ರಿವಳಿ ತಲಾಖ್ ಇಷ್ಟು ಚರ್ಚೆ ಹುಟ್ಟು ಹಾಕುತ್ತಿರಲಿಲ್ಲ. ಆದರೆ ಭಾರತದಲ್ಲಿ ಪ್ರತೀ ಧರ್ಮದವರಿಗೂ ವೈಯಕ್ತಿಕ ಕಾನೂನುಗಳಿವೆ. ಮುಸ್ಲಿಮರಿಗೆ ಸಂಬಂಧಿಸಿದ ಮದುವೆ, ವಿಚ್ಛೇದನ, ಉತ್ತರಾಧಿಕಾರಿ ಎಲ್ಲವೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಡಿಯಲ್ಲಿ ಬರುತ್ತವೆ.

ವಿವಾದ ಆರಂಭವಾಗಿದ್ದೇ ಇಲ್ಲಿ; ಸರಕಾರೇತರ ಸಂಸ್ಥೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿತ್ರಿವಳಿ ತಲಾಖ್ ಹಾಗೂ ಬಹುಪತ್ನಿತ್ವ ನಿಷೇಧವನ್ನು ವಿರೋಧಿಸಿದೆ. ಇದರ ಜತೆ ಜತೆಗೆ ಟೀಕಾಕಾರರು ಮುಸ್ಲಿಂ ಧರ್ಮವನ್ನು ಭಾದಿಸುತ್ತಿರುವ ಸಮಸ್ಯೆಗಳಲ್ಲಿ ಬಹುಪತ್ನಿತ್ವ ಮತ್ತು ತ್ರಿವಳಿ ತಲಾಖ್ ಏನೇನೂ ಅಲ್ಲ. ದೇಶದಲ್ಲಿ ಹೆಚ್ಚಿನ ಮುಸ್ಲಿಂ ಸಮುದಾಯದವರು ಬಡವರಾಗಿದ್ದಾರೆ ಮತ್ತು ತೀರಾ ಕಡಿಮೆ ಶಿಕ್ಷಣ ಪಡೆಯುತ್ತಿದ್ದಾರೆ. ಮೊದಲು ಈ ಸಮಸ್ಯೆಗಳು ಕೊನೆಯಾಗಬೇಕು ಎಂದು ಭಿನ್ನ ರಾಗ ಹಾಡಿದ್ದಾರೆ.

ಶರಿಯತ್ ಕಾನೂನು ಇತಿಹಾಸ

ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೆ ಶರಿಯತ್ ಕಾನೂನನ್ನು (ಶರಿಯತ್ ಅಪ್ಲಿಕೇಶನ್ ಆಕ್ಟ್) ಅದಕ್ಕೂ 10 ವರ್ಷಗಳ ಹಿಂದೆಯೇ ಭಾರತದಲ್ಲಿ ಜಾರಿಗೆ ತರಲಾಗಿದೆ. ಇದರ ಜತೆಗೆ ಮುಸ್ಲಿಂ ಧರ್ಮೀಯರು ಸೇರಿ ಹಲವು ಭಾರತೀಯರು 1954ರಲ್ಲಿ ಜಾರಿಗೆ ತಂದ ಜಾತ್ಯಾತೀತ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲು ಒಪ್ಪುತ್ತಿಲ್ಲ. ಹೀಗೆ ತ್ರಿವಳಿ ತಲಾಖ್ ಹಲವು ಕೋನಗಳಿಂದ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.

ಲಿಂಗ ಸಮಾನತೆ

ಇಸ್ಲಾಂ ಧರ್ಮದಲ್ಲಿ ಮದುವೆಯನ್ನು ಒಂದು ಒಪ್ಪಂದದಂತೆ ನೋಡಲಾಗುತ್ತದೆ. ಮತ್ತು ಅದಕ್ಕೆ ನಿಯಮಗಳೂ ಇವೆ. ಒಮ್ಮೆ ಮದುವೆಯಾದ ನಂತರ ಹೆಣ್ಣು ವಿಚ್ಛೇದನಕ್ಕೆ ಇಚ್ಛಿಸಬಹುದು. ಇದಕ್ಕೆ ಖುಲಾಎನ್ನುತ್ತಾರೆ. ಪತಿಗೆ ವಿಚ್ಛೇದನ ಬೇಕಿದ್ದರೆ ಆತ ಮೂರು ಬಾರಿ ತಲಾಖ್ ಹೇಳಬಹುದು. ಂತರ ಮಧ್ಯಸ್ಥಿಕೆ ನಡೆಯುವುದು ಅಗತ್ಯ.

ಆದರೆ ಭಾರತದಲಿ ಹೋರಾಟಗಾರರ ವಾದ ಏನೆಂದರ ತ್ರಿವಳಿ ತಲಾಖನ್ನು ಮುಸ್ಲಿಂ ಗಂಡಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇದನ್ನು ನಿಷೇಧಿಸಬೇಕು ಎಂಬುದು. ಮೆಸೇಜ್ ಮೂಲಕ, ಫೋನಿನಲ್ಲಿ ವಿಚ್ಛೇದನ ನೀಡಿದ ಪ್ರಕರಣಗಳೂ ದೇಶದಲ್ಲಿ ಬೆಳಕಿಗೆ ಬಂದಿದ್ದು ಇದು ಈ ದುರ್ಬಳಕೆ ವಾದಕ್ಕೆ ಪುಷ್ಟಿ ನೀಡಿದೆ. ಇದರೊಂದಿದೆ ಬಿಎಂಎಂಎಅಧ್ಯಯನದ ಪ್ರಕಾರ ದೇಶದಲ್ಲಿ ಸಂದರ್ಶನ ನಡೆಸಿದ 4,710 ಮಹಿಳೆಯರಲ್ಲಿ ಶೇಕಡಾ 90 ರಷ್ಟು ಮಹಿಳೆಯರು ಇದಕ್ಕೆ ನಿಷೇಧ ಹೇರುವಂತೆ ಕೇಳಿಕೊಂಡಿದ್ದಾರೆ.

ಆದರೆ ಈ ತ್ರಿವಳಿ ತಲಾಖ್ ಚರ್ಚೆಗೆ ಬೇರೆಯೇ ಆಯಾಮ ನೀಡುತ್ತಾರೆ ನ್ಯಾಷನಲ್ ಲಾ ಯುನಿವರ್ಸಿಟಿಯ ಕುಲಪತಿ ಫೈಝಾನ್ ಮುಸ್ತಾಫಾ. “ಬಿಎಂಎಂಎ ಸಂದರ್ಶನ ನಡೆಸಿದ 4,710 ಜನರಲ್ಲಿ 525ಮಹಿಳೆಯರಲ್ಲಷ್ಟೇ ವಿಚ್ಛೇದನ ನಡೆದಿದೆ. ಇದರಲ್ಲಿ ಎಸ್ಎಂಎಸ್ ಮೂಲಕ ತಲಾಖ್ ನೀಡಿದ್ದು ಒಬ್ಬರಿಗೆ ಮಾತ್ರ. ಹೀಗಿದ್ದೂ ಮಾಧ್ಯಮಗಳು ಮಾತ್ರ ಮುಂದಿನ ದಿನಗಳಲ್ಲಿ ಎಲ್ಲ ಮುಸ್ಲಿಮರಿಗೂ ಎಸ್ಎಂಎಸ್ ಮೂಲಕವೇ ವಿಚ್ಛೇದನ ನೀಡಿದರೆ ಹೇಗೆ ಎನ್ನುವಂತೆ ಬಿಂಬಿಸಿದವು,” ಎಂದು ದೂರುತ್ತಾರೆ ಅವರು.

525 ವಿಚ್ಛೇದನ ಪ್ರಕರಣಗಳಲ್ಲಿ ಶೇಕಡಾ 41 ಮಹಿಳೆಯರಿಗೆ ವಿಚ್ಛೇದನ ಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಗಂಡ ಆಗಲಿ ಹೆಂಡತಿಯಾಗಲಿ ಯಾರು ಡಿವೋರ್ಸ್ ನೋಡಿದರೂ ಒಂದೇ. ಅದು ಪರಸ್ಪರ ಒಪ್ಪಿಗೆಯಿಂದ ನಡೆಯುವಂತದ್ದು. ಇದಕ್ಕೆ ಇಸ್ಲಾಂನಲ್ಲಿ ತಲಾಖ್ ಇ ಮುಬಾರಕ್ ಎನ್ನುತ್ತಾರೆ. ಇದರಿಂದ ಏನೂ ಸಮಸ್ಯೆ ಇಲ್ಲ. ಒಂದೊಮ್ಮೆ ಈ ರೀತಿ ಪರಿಸ್ಥಿತಿ ಇಲ್ಲದೇ ಹೋದರೆ ಆಗ ತಲಾಖ್ ನೀಡಿದರೆ ಸಮಸ್ಯೆ ಆರಂಭವಾಗುತ್ತದೆ. ಹಾಗಾಗಿ ನಾನು ಹೇಳುವುದೇನು ಅಂದರೆ ಇಂತಹ ಸಂದರ್ಭದಲ್ಲಿ ಇದಕ್ಕೆ ಬೇರೆ ಪರಿಹಾರವನ್ನು ಕಂಡುಕೊಳ್ಳಬೇಕು. ಮೂರು ಬಾರಿ ತಲಾಖ್ ಹೇಳಿದ್ದನ್ನು ಮೊದಲ ಹೆಜ್ಜೆ ಎಂದು ಪರಿಗಣಿಸಿ ಮತ್ತೆ ಮಾತುಕತೆಗೆ ಅನುವು ಮಾಡಿಕೊಡಬೇಕು ,” ಎನ್ನುತ್ತಾರೆ ಅವರು.

supreme

ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್

ತ್ರಿವಳಿ ತಲಾಖ್ ಬ್ಯಾನ್ ಆಗಬಹುದೇ?

ಇಡೀ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ತ್ರಿವಳಿ ತಲಾಖ್ ಧರ್ಮದ ಮೂಲಭೂತ ಹಕ್ಕು ಹೌದಾ ಮತ್ತು ನಾಗರೀಕರ ಮೂಲಭೂತ ಹಕ್ಕು ಹೌದಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಪರಿಚ್ಛೇದ 25ಅಡಿಯಲ್ಲಿ ಭಾರತದ ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದು ಹೇಳಿದೆ.

ಇವೆಲ್ಲದರ ಹಿನ್ನಲೆಯಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕಾಗುತ್ತದೆ. ಅದೆಂದರೆ ಈಗಾಗಲೇ ಹಲವು ಬಾರಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ಕಾನೂನು ಬಾಹಿರ ಎಂದು ಹೇಳಿದ್ದಿದೆ.

ದರೆ ಸುಪ್ರೀಂ ಕೋರ್ಟಿನ ತೀರ್ಮಾನವನ್ನು ವಿರೋಧಿಸುತ್ತಾರೆ ಮುಸ್ತಾಫ. “ಇದರ ಬದಲು ಬಹುಪತ್ನಿತ್ವವನ್ನು ಸುಪ್ರೀಂ ಕೋರ್ಟ್ ಅಪರಾಧ ಮಾಡಬೇಕು,” ಎಂದು ಅವರು ಒತ್ತಾಯಿಸುತ್ತಾರೆ. ಜತೆಗೆ ಕಾನೂನಿನಲ್ಲಿ ಬದಲಾವಣೆ ತಂದರೆ ಇದರಿಂದ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗುವುದಿಲ್ಲ ಎನ್ನುವುದು ಅವರ ವಾದ.

ವಿಚ್ಛೇದನ ಮತ್ತು ಬಹುಪತ್ನಿತ್ವ: ಅಂಕಿ ಅಂಶಗಳು

ಕಠಿನ ಸಂದರ್ಭಗಳಲ್ಲಿ ಮಾತ್ರ ಬಹುಪತ್ನಿತ್ವಕ್ಕೆ ಕುರಾನಿನಲ್ಲಿ ಅವಕಾಶ ಇದೆ. ಆದರೆ ಭಾರತಕ್ಕೆ ಬಂದಾಗ ಬಹುಪತ್ನಿತ್ವ ತೀರಾ ವಿರಳ. ಉಳಿದ ಧರ್ಮಗಳಿಗಿಂತಲೂ ಮುಸ್ಲಿಂರಲ್ಲಿ ಬಹುಪತ್ನಿತ್ವ ಕನಿಷ್ಠವಾಗಿದೆ.

ಇನ್ನು 2011ರ ಜನಗಣತಿಯ ಪ್ರಕಾರ ಮುಸ್ಲಿಂ ಸಮುದಾಯದಲ್ಲಿ ಶೇಕಡಾ 0.56 ವಿಚ್ಚೇದನ ಪ್ರಕರಣಗಳು ನಡೆದಿದ್ದರೆ ಹಿಂದೂಗಳಲ್ಲಿ ಶೇಕಡಾ 0.76 ವಿಚ್ಛೇದನಗಳಾಗಿವೆ.

ಇನ್ನು ತ್ರಿವಳಿ ತಲಾಖ್ ಬಗ್ಗೆ ಸರಕಾರ ಇಲ್ಲಿಯವರೆಗೆ ಯಾವುದೇ ಸಮೀಕ್ಷೆಗಳನ್ನು ನಡೆಸಿಲ್ಲ. ಹೀಗಾಗಿ ಕೆಲವು ತಜ್ಞರು ತಕ್ಷಣ ಸರಕಾರ ತ್ರಿವಳಿ ತಲಾಖ್ ಬ್ಯಾನ್ ಮಾಡುವ ಬದಲು ಇದಕ್ಕೆ ತಜ್ಞರ ಸಮಿತಿ ರಚಿಸಿ ಮುಸ್ಲಿಂ ಕಾನೂನು ಸುಧಾರಣೆ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ತ್ರಿವಳಿ ತಲಾಖ್ ರಾಜಕೀಯ

ತ್ರಿವಳಿ ತಲಾಖ್ ವಿಚಾರವನ್ನು ರಾಜಕೀಯಗೊಳಿಸಬೇಡಿ ಎಂದು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ಕಳೆದ ವಾರ ಅವರು ಇಂಥಹದ್ದೊಂದು ಬೇಡಿಕೆಯನ್ನು ದೇಶದ ಜನರ ಮುಂದಿಟ್ಟಿದ್ದರು. ಆದರೆ ತ್ರಿವಳಿ ತಲಾಖ್ ವಿಚಾರ ಇಷ್ಟವಿದ್ದೋ ಇಲ್ಲದೆಯೋ ರಾಜಕೀಯ ಆಯಾಮವನ್ನಂತೂ ಪಡೆದುಕೊಂಡಿದೆ.

ಆದರೆ ತ್ರಿವಳಿ ತಲಾಖ್ ವಿಚಾರ ಅದೊಂದೇ ಕಾರಣಕ್ಕೂ ಚರ್ಚೆಗೆ ಒಳಗಾಗುತ್ತಿಲ್ಲ. ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾನ ನಾಗರೀಕ ಸಂಹಿತೆಗೆ ಒತ್ತಾಯಿಸುತ್ತಾ ಬಂದಿದೆ. ಇದನ್ನು ಮುಸ್ಲಿಂ ಸಮುದಾಯ ಬಲವಾಗಿ ವಿರೋಧಿಸುತ್ತಿದೆ. ಹೀಗಾಗಿ ತ್ರಿವಳಿ ತಲಾಖ್ ಸಮಾನ ನಾಗರೀಕ ಸಂಹಿತೆಯ ಮೊದಲ ಹೆಜ್ಜೆ ಎಂದು ಮುಸ್ಲಿಂ ಸಮುಜದಾಯ ಭಾವಿಸಿದಂತಿದೆ. ಈ ಹಿನ್ನಲೆಯಲ್ಲಿ ತ್ರಿವಳಿ ತಲಾಖ್ ವಿವಾದ ಹುಟ್ಟುಹಾಕಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಫ್ಲಾವಿಯಾ ಆಗ್ನೆಸ್ ತ್ರಿವಳಿ ತಲಾಖ್ ಒಂದು ಅನಗತ್ಯ ಚರ್ಚೆಎಂದು ವ್ಯಾಖ್ಯಾನಿಸುತ್ತಾರೆ. “ಮಹಿಳಾ ಹಕ್ಕುಗಳ ವಿಚಾರಕ್ಕೆ ಬಂದಾಗ ಶಿಕ್ಷಣ ಮತ್ತು ಮಾಹಿತಿಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ತಲಾಖ್ ರದ್ದು ಮಾಡುವುದರಿಂದ ಆಕೆಯ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದಿಲ್ಲ. ಆಕೆಯ ಎಲ್ಲಾ ಸಮಸ್ಯೆಗಳಿಗೂ ಕೊನೆ ಹಾಡಲು ಇದೇನು ಮ್ಯಾಜಿಕ್ ಅಲ್ಲ. ಗಂಡ ಮೂರು ಬಾರಿ ತಲಾಖ್ ಹೇಳಬಹುದು. ಮಹಿಳೆಯರಿಗೆ ಯಾವುದೇ ಹಕ್ಕಿಲ್ಲ ಎಂಬ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ,” ನ್ನುವ ಅವರು ಮೊದಲು ಇದು ಬದಲಾಗಬೇಕು ಎನ್ನುತ್ತಾರೆ.

ನ್ಯಾಯಸಮ್ಮತ ಮತ್ತು ಸಮಂಜಸವಾದ ವಿಚ್ಛೇದನ ನಡೆಯಬೇಕುಎಂದು ಮುಸ್ಲಿಂ ಮಹಿಳಾ ಕಾನೂನು-1986ರಲ್ಲಿ ಹೇಳಲಾಗಿದೆ. ಆದರೆ ಇದನ್ನು ಪಾಲಿಸಲಾಗುತ್ತಿಲ್ಲ. ಬದಲಿಗೆ ಈಗ ತ್ರಿವಳಿ ತಲಾಖ್ ಚರ್ಚೆಯನ್ನೇ ರಾಜಕೀಕರಣಗೊಳಿಸಲಾಗುತ್ತಿದೆ. ಮುಸ್ಲಿಂರಲ್ಲಿ ಭಯ ಹುಟ್ಟಿಸುವ ಆಳುವ ಪಕ್ಷದ ಅಜೆಂಡಾಕ್ಕೆ ಇದು ನೀರೆರೆಯುತ್ತಿದೆ. ಇದಕ್ಕೆ ಮಾಧ್ಯಮಗಳೂ ಕೈ ಜೋಡಿಸಿವೆ,” ಎನ್ನುತ್ತಾರೆ ಫ್ಲಾವಿಯಾ ಆಗ್ನೆಸ್.

ಕೃಪೆ: ಅಲ್ ಜಝೀರಾ

ಚಿತ್ರ ಕೃಪೆ: ದಿ ಕ್ವಿಂಟ್

Leave a comment

FOOT PRINT

Top