An unconventional News Portal.

    ...
    beef-banned-1
    ದೇಶ

    ಬೀಫ್ ಬ್ಯಾನ್: ಸುಪ್ರಿಂಕೋರ್ಟ್ ಚಾಪೆ ಕೆಳಗೆ ಕೇಂದ್ರ ಸರಕಾರ ರಂಗೋಲಿ ಹಾಕಿದ್ದು ಹೀಗೆ…

    ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಮಾರುವುದಕ್ಕೆ ಕಡಿವಾಣ ಹಾಕಿ, ಕೇಂದ್ರ ಸರಕಾರ ಹೊರಡಿಸಿರುವ ಹೊಸ ಅಧಿಸೂಚನೆ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಮೋದಿ ನೇತೃತ್ವದ ಸರಕಾರ, ಸುಪ್ರಿಂ ಕೋರ್ಟ್ ಆದೇಶಗಳನ್ನು ಪಾಲಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಇದು ಅರ್ಧ ಸತ್ಯ ಎನ್ನುತ್ತಿವೆ ‘ಸ್ಕ್ರಾಲ್ ಡಾಟ್ ಇನ್’ ಪ್ರಕಟಿಸಿರುವ ವರದಿ. ದಾಖಲೆಗಳನ್ನು ಪರಿಶೀಲನೆ ಮಾಡಿರುವ ಸುದ್ದಿತಾಣ, ಭಾರತ ಮತ್ತು ನೇಪಾಳದ ಗಡಿ ಭಾಗದಲ್ಲಿ ನಡೆಯುವ ಪ್ರಾಣಿ ಹಿಂಸೆಯ ಹಿನ್ನೆಲೆಯಲ್ಲಿ ಸಲ್ಲಿಕೆಯಾದ ಸಾರ್ವಜನಿಕ ರಿಟ್ ಪಿಟಿಷನ್ ಹಾಗೂ ನಂತರದ ಬೆಳವಣಿಗೆಗಳ ಮೇಲೆ..

    May 31, 2017
    ...
    parvathamma-1
    ರಾಜ್ಯ

    ‘ದೊಡ್ಮನೆಯ ನಿಜವಾದ ಯಜಮಾನಿ’, ಗಟ್ಟಿ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್; ಇನ್ನಿಲ್ಲ

    ದಕ್ಷಿಣ ಭಾರತದ ಸಿನೆಮಾ ಪೈಕಿ ಕನ್ನಡದ ಇಂಡಸ್ಟ್ರಿಯನ್ನು ಒಂದಷ್ಟು ದಿನಗಳ ಕಾಲ ಅಕ್ಷರಶಃ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದವರು ಪಾರ್ವತಮ್ಮ ರಾಜ್‌ಕುಮಾರ್. 1939ರಲ್ಲಿ ಜನಿಸಿದ ಅವರು ಬುಧವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಉಸಿರು ಎಳೆದಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ 78 ವರ್ಷ ವಯಸ್ಸಿನ ಪಾರ್ವತಮ್ಮ ರಾಜ್ ಕುಮಾರ್ ಕಳೆದ ಎರಡು ವಾರಗಳಿಂದ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ವತಮ್ಮ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ತರಲಾಗಿದೆ. ಸದಾಶಿವ ನಗರದ ಪೂರ್ಣಪ್ರಜ್ಞ ಮೈದಾನದಲ್ಲಿ ಬೆಳಗ್ಗೆ..

    May 31, 2017
    ...
    muniyamma-ckbp-1
    ರಾಜ್ಯ

    ದಿಲ್ಲಿಯಲ್ಲಿ ಸಿದ್ದರಾಮಯ್ಯ ಭೇಟಿಯಾದ ಗುಡಿಬಂಡೆಯ ‘ಕನ್ನಡದ ಮುನಿಯಮ್ಮ’; ಯಾರು ಗೊತ್ತಾ?

    ದಿಲ್ಲಿಯ ಕರ್ನಾಟಕದ ಭವನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗುವ ಮೂಲಕ ಸುದ್ದಿಯಾದ ಮುನಿಯಮ್ಮ, ಚಿಕ್ಕಬಳ್ಳಾಪುರ ಜಿಲ್ಲೆಯ ಪಟ್ಟಣ ಪಂಚಾಯ್ತಿ ಗುಡಿಬಂಡೆಯ ಜನರ ಪಾಲಿಗೆ ‘ಕನ್ನಡದ ಮುನಿಯಮ್ಮ’ ಎಂದೇ ಜನಪ್ರಿಯರು. ಕಳೆದ ಒಂದು ದಶಕದಿಂದ ಈಚೆಗೆ ಕಂದಾಯ ಇಲಾಖೆ, ಸ್ಥಳೀಯ ತಹಶೀಲ್ದಾರ್ ಕಚೇರಿಯಿಂದ ಹಿಡಿದು ಬೆಂಗಳೂರು ಮತ್ತು ದಿಲ್ಲಿಯ ನಾನಾ ಅಧಿಕಾರ ಕೇಂದ್ರಗಳ ಮುಂದೆ ಮನವಿ ಪತ್ರ ಸಲ್ಲಿಸಿಕೊಂಡ ಬಂದ ಇವರದ್ದು ‘ತಬರನ ಕತೆ’. ಸೋಮವಾರ ದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಸಂಬಂಧ ವಾಸ್ತವ್ಯ ಹೂಡಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ..

    May 30, 2017
    ...
    cow-slaughter-notification-final
    ದೇಶ

    ಮೋದಿ ಸರಕಾರದ ‘ಗೋ- ಸೂಚನೆ’: ಬದುಕಿ- ಬದುಕಲು ಬಿಡಿ ಮತ್ತು ಗ್ರೌಂಡ್ ರಿಯಾಲಿಟಿ

    ನೋಟು ಅಮಾನ್ಯೀಕರಣದ ನಂತರ ದೇಶವನ್ನು ತುದಿಗಾಲಿನ ಮೇಲೆ ನಿಲ್ಲಿಸಿ, ನಾನಾ ಆಯಾಮಗಳ ಚರ್ಚೆಯನ್ನು ನಾಲ್ಕು ದಿನಗಳ ಹಿಂದಿನ ಕೇಂದ್ರ ಸರಕಾರ ಅಧಿಸೂಚನೆ ಹುಟ್ಟುಹಾಕಿದೆ. ಜಾನುವಾರುಗಳನ್ನು, ಅದರಲ್ಲೂ ವಿಶೇಷವಾಗಿ ದನ, ಕರು, ಗೊಡ್ಡು ಹಸು, ಹೋರಿ, ಎಮ್ಮೆ, ಕೋಣ, ಒಂಟೆಗಳನ್ನು ಮಾರಾಟ ಮಾಡಲು ವಿಧಿವಿಧಾನಗಳನ್ನು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಕೇಂದ್ರ ಸರಕಾರವು ‘ಗೋ ಹತ್ಯಾ ನಿಷೇಧ’ ಎಂಬ ದೇಶದ ಜನಪ್ರಿಯ ಕಾನೂನೊಂದನ್ನು ರೂಪಿಸಲು ನಡೆಸುತ್ತಿರುವ ತಯಾರಿ ಎಂದು ಕೆಲವರು ಬಣ್ಣಿಸಿದ್ದಾರೆ. ಹೀಗಿರುವಾಗಲೇ, ಗೋ ರಾಜಕಾರಣದ ಆಯಾಮಗಳನ್ನು ಚರ್ಚೆಗೆ ತರಲಾಗುತ್ತಿದೆ…

    May 27, 2017
    ...
    Punjab mosque GHALIB RAN SINGH WAAL village
    ಸುದ್ದಿ ಸಾರ

    ರಂಜಾನ್‌ಗೆ ಮಸೀದಿ ಉಡುಗೊರೆ: ಪಂಜಾಬ್‌ನ ಪುಟ್ಟ ಗ್ರಾಮದಲ್ಲೊಂದು ಮಾದರಿ ಬೆಳವಣಿಗೆ

    ಸರಣಿ ಕೋಮು ಸಂಘರ್ಷದ ಘಟನೆಗಳ ನಡುವೆ ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿಯೊಂದು ಹೊರಬಿದ್ದಿದೆ.  ಪಂಜಾಬಿನ ಗ್ರಾಮವೊಂದರಲ್ಲಿ ಹಿಂದೂ ಮತ್ತು ಸಿಖ್ಖ್ ಸಮುದಾಯದವರು ಒಟ್ಟಾಗಿ ರಂಜಾನ್ ಹಬ್ಬಕ್ಕೂ ಮುನ್ನ ಮಸೀದಿಯೊಂದನ್ನು ಮುಸ್ಲಿಂ ಸಮುದಾಯಕ್ಕಾಗಿ ಕಟ್ಟಿಕೊಟ್ಟ ಕಥೆ ಇದು. ಇಂಥಹದ್ದೊಂದು ಅಪರೂಪದ ಪ್ರಸಂಗ ನಡೆದಿದ್ದು ಪಂಜಾಬಿನ ಗಾಲಿಬ್ ರಣ್ ಸಿಂಗ್ ವಾಲ್ ಗ್ರಾಮದಲ್ಲಿ. ಲೂಧಿಯಾನ ಪ್ರದೇಶಕ್ಕೆ ಸೇರಿದ ಪುಟ್ಟ ಗ್ರಾಮವಿದು. ಸುಮಾರು 1300 ಜನ ಈ ಗ್ರಾಮದಲ್ಲಿದ್ದಾರೆ. ಇಲ್ಲಿ ಹಿಂದೂಗಳು ಮತ್ತು ಸಿಖ್ಖರೇ ಬಹು ಸಂಖ್ಯಾತರು. ಸುಮಾರು 750 ಜನ ಸಿಖ್ಖರಾದರೆ, ಹಿಂದೂಗಳ ಜನಸಂಖ್ಯೆ..

    May 26, 2017
    ...
    pak-lovers-bng
    ರಾಜ್ಯ

    ಕೇರಳ ಹುಡುಗ; ಕರಾಚಿ ಹುಡುಗಿ: ಕತಾರ್‌ನಲ್ಲಿ ಹುಟ್ಟಿದ ಪ್ರೇಮಕ್ಕೆ ಬೆಂಗಳೂರಿನಲ್ಲಿ ‘ಅಕ್ರಮ ಅಂತ್ಯ’!

    ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮೂವರನ್ನು ಹಾಗೂ ಅವರಿಗೆ ನೆರವು ನೀಡಿದ ಆರೋಪದ ಮೇಲೆ ಕೇರಳ ಮೂಲಕ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಘಟನೆ ಗುರುವಾರ ಬೆಂಗಳೂರಿನಲ್ಲಿ ನಡೆದಿದೆ. ಈ ಮೂಲಕ ಅಂತಾರಾಷ್ಟ್ರೀಯ ಆಯಾಮವನ್ನು ಹೊಂದಿರುವ ಅಪರೂಪದ ಪ್ರೇಮ ಪ್ರಕರಣ ಕೂಡ ಸುದ್ದಿಕೇಂದ್ರಕ್ಕೆ ಬಂದಿದೆ. ಬುಧವಾರ ಸಂಜೆ ವೇಳೆಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಹಾಗೂ ಸಿಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ವ್ಯಕ್ತಿ ಹಾಗೂ ಮೂವರು ಶಂಕಿತ ಪಾಕಿಸ್ತಾನಿಯರನ್ನು ವಶಕ್ಕೆ ಪಡೆದ್ದಾರೆ. “ಅವರು ಅಕ್ರಮವಾಗಿ ಭಾರತವನ್ನು ಪ್ರವೇಶ ಮಾಡಿದ್ದಾರೆ. ಪಾಸ್‌ಪೋರ್ಟ್‌, ವೀಸಾ..

    May 25, 2017
    ...
    up-yogi-dalith-final
    ದೇಶ

    ಯುಪಿಯಲ್ಲಿ ಏನಾಗುತ್ತಿದೆ?: ಯೋಗಿ ಅಭಿವೃದ್ಧಿ ಮಂತ್ರ; ತಳಮಟ್ಟದಲ್ಲಿ ಜಾತಿ ಸಂಘರ್ಷ

    ಪಶ್ಚಿಮ ಉತ್ತರ ಪ್ರದೇಶಕ್ಕೆ ಬಂದರೆ ಮರದ ಕರಕುಶಲ ವಸ್ತುಗಳಿಗೆ ಹೆಸರಾಗಿದ್ದ ಜಿಲ್ಲೆ ಶಹನ್ಪುರ. ಸದ್ಯ ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೇಲ್ವರ್ಗದ ಸಮುದಾಯ ಠಾಕೂರ್ ಹಾಗೂ ದಲಿತರ ನಡುವೆ ಹುಟ್ಟಿಕೊಂಡ ಸಂಘರ್ಷ ಹೊಸ ದಿಕ್ಕಿಗೆ ಹೊರಳಿದೆ. ಯಾವ ಹೊತ್ತಿಗೂ ಇಲ್ಲಿ ಮತ್ತೆ ಗಲಭೆ ಹುಟ್ಟಿಕೊಳ್ಳಬಹುದು; ಪರಿಸ್ಥಿತಿ ಹಾಗಿದೆ.  ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂಘರ್ಷ ತಣ್ಣಗಾಗಿ ಬುಧವಾರ ಮತ್ತೆ ಸ್ಪೋಟಿಸಿದೆ. ಗುರುವಾರ ಮುಂಜಾನೆ ವ್ಯಕ್ತಿಯೊಬ್ಬರನ್ನು ಬೈಕಿನಲ್ಲಿ ಬಂದ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸಾವಿನ ವಿರುದ್ಧ..

    May 25, 2017
    ...
    modi-3-swacch-bharath
    ದೇಶ

    ‘ಮೂರು ವರ್ಷಗಳ ಮೋದಿ ಆಡಳಿತ’: ದಿನಕ್ಕೆ 25 ಸಾವಿರ ಟಾಯ್ಲೆಟ್ ಕಟ್ಟಿದ ಸ್ವಚ್ಚ ಭಾರತದ ಕತೆ!

    ಮೂರು ವರ್ಷಗಳ ಹಿಂದೆ ದೇಶಾದ್ಯಂತ ದೊಡ್ಡ ಭರವಸೆಯೊಂದಿಗೆ, ಉತ್ಸಾಹದೊಂದಿಗೆ, ಆಶಯಗಳೊಂದಿಗೆ ಅಧಿಕಾರಕ್ಕೇರಿದವರು ಪ್ರಧಾನಿ ನರೇಂದ್ರ ಮೋದಿ. ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಇದಕ್ಕೆ ಕಾರಣವಾಗಿದ್ದು ಹಿಂದಿನ ಎರಡು ಅವಧಿಗೆ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಬಗ್ಗೆ ಜನರಲ್ಲಿ ಮೂಡಿದ್ದ ಅಸಮಾಧಾನ ಹಾಗೂ ಮೋದಿ ಮುಂದಾಳತ್ವದಲ್ಲಿ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಆಡಳಿತಾತ್ಮಕ ಭರವಸೆಗಳು. ಮೂರು ವರ್ಷಗಳು ಕಳೆದ ನಂತರ ನರೇಂದ್ರ ಮೋದಿ ಆಡಳಿತ ಹೇಗನ್ನಿಸಿತು ಎಂಬ ಒಂದು ಸಾಲಿನ ಪ್ರಶ್ನೆಯನ್ನು..

    May 24, 2017
    ...
    arundhati-roy-1
    ದೇಶ

    ದಿಟ್ಟ, ಬುದ್ಧಿವಂತ ಮಹಿಳೆ ಅರುಂಧತಿ ರಾಯ್ ಕಂಡ್ರೆ ಬಿಜೆಪಿ ಸಿಟ್ಟಿಗೇಳೋದು ಯಾಕೆ?

    ಅರುಂಧತಿ ರಾಯ್… ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನೂ, ಸ್ಥಳೀಯ ಮಟ್ಟದಲ್ಲಿ ಒಂದು ವರ್ಗದಿಂದ ರಾಜಕೀಯ ವಿರೋಧಗಳನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಬರಹಗಾರ್ತಿ; ಸದ್ಯ ಸುದ್ದಿಯಲ್ಲಿದ್ದಾರೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಜೀಪಿಗೆ ಸ್ಥಳೀಯ ಯುವಕನನ್ನು ಗುರಾಣಿಯಾಗಿ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ, ನಟ ಪರೇಶ್ ರಾವಲ್ ನೀಡಿದ ಹೇಳಿಕೆ ಮತ್ತೆ ರಾಯ್ ಹೆಸರನ್ನು ಚಾಲ್ತಿಗೆ ತಂದಿದೆ. ಜೀಪಿನ ಮುಂಭಾಗಕ್ಕೆ ಕಲ್ಲು ತೂರಾಟಗಾರರ ಬದಲು ಅರುಂಧತಿ ರಾಯ್ ಅವರನ್ನು ಕಟ್ಟಿ ಎನ್ನುವ ರಾವಲ್ ಟ್ವೀಟ್ ವಿವಾದದ ಕಿಡಿ ಹೊತ್ತಿಸಿದೆ. ದೇಶದಲ್ಲಿ..

    May 23, 2017
    ...
    nita-ambani-1
    ದೇಶ

    ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ: ಭರತನಾಟ್ಯದಿಂದ ಕಾರ್ಪೊರೇಟ್ ರಂಗಸ್ಥಳಕ್ಕೆ!

    ಆತ ರಿಲಾಯನ್ಸ್ ಜಿಯೋ ಟೆಲಿಕಾಂ ಕಂಪನಿಯಲ್ಲಿ ಟವರ್‌ ರಿಪೇರಿ ಮಾಡುವ ಸಾಮಾನ್ಯ ಉದ್ಯೋಗಿ. ಭಾನುವಾರ ಐಪಿಎಲ್ ಪಂದ್ಯಾವಳಿಯ ಕೊನೆಯ ಹಣಾಹಣಿಯ ರೋಚಕತೆಯನ್ನು ತನ್ನ ಪುಟ್ಟ ಮೊಬೈಲ್ ಪರದೆಯ ಮೇಲೆ ಆಸ್ವಾದಿಸುತ್ತಿದ್ದ ಆತ, “ಮುಂಬೈ ಗೆದ್ರೆ ಜಿಯೋ ಆಫರ್ ಮುಂದುವರಿಯಬಹುದು,” ಎಂಬ ಭರವಸೆಯನ್ನು ಇಟ್ಟುಕೊಂಡಿದ್ದ. ಆತನ ಆಶಯ ಹುಸಿ ಹೋಗಲಿಲ್ಲ. ಐಪಿಎಲ್ ಟೂರ್ನಿಯನ್ನು ಮುಂಬೈ ಇಂಡಿಯನ್ಸ್ ಜಯಗಳಿಸಿತು. ಇದರಿಂದ ಜಿಯೋ ಆಫರ್‌ ಅವಧಿ ಹೆಚ್ಚಾಗುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಸಹಜವಾಗಿಯೇ ಇದು ತಂಡದ ಪ್ರೊಮೋಟರ್ಗಳಾದ ನೀತಾ ಅಂಬಾನಿ ಮತ್ತು ಇತರ..

    May 22, 2017

Top