An unconventional News Portal.

    ...
    vijay-malya-1
    ದೇಶ

    ವಿಜಯ್‌ ಮಲ್ಯ ಭಾರತಕ್ಕೆ ಬಂದಾಕ್ಷಣ 9 ಸಾವಿರ ಕೋಟಿ ಸಾಲ ವಾಪಾಸ್ ಆಯ್ತು ಅಂತೇನಿಲ್ಲ!

    ಬೆಂಗಳೂರು ಮೂಲದ ಉದ್ಯಮಿ ವಿಜಯ್‌ ಮಲ್ಯ ಸಾಲದ ವಿಚಾರ ಈಗ ಅಂತಾರಾಷ್ಟ್ರೀಯ ಸುದ್ದಿಕೇಂದ್ರದಲ್ಲಿರುವ ವಿಚಾರ. ಮಲ್ಯರನ್ನು ಲಂಡನ್‌ನಿಂದ ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಶುರುವಾಗಿದೆ. ಇದೊಂದು ಸುದೀರ್ಘ ಕಾನೂನು ಸಮರವಾದರೂ, ಇವತ್ತಲ್ಲ ನಾಳೆ ವಿಜಯ್‌ ಮಲ್ಯ ಭಾರತಕ್ಕೆ ಬಂದಿಳಿಯಬೇಕಿದೆ. ಒಂದು ವೇಳೆ, ಮಲ್ಯ ಭಾರತಕ್ಕೆ ಬಂದರೆ, ಅವರ ಹೆಸರಿನಲ್ಲಿರುವ ಸಾಲ ಮರುಪಾವತಿ ಆಗುತ್ತಾ? ಇದು ಸದ್ಯದ ಕುತೂಹಲಕಾರಿ ಪ್ರಶ್ನೆ. ಲಂಡನ್ ಮೂಲದ ‘ಕ್ಯೂಝೆಡ್’ ನ್ಯೂಸ್ ಪೋರ್ಟಲ್‌ ಈ ಕುರಿತು ವರದಿಯೊಂದನ್ನು ಪ್ರಕಟಿಸಿದೆ. ಕಾನೂನು ತಜ್ಞರ ಅಭಿಪ್ರಾಯಗಳನ್ನು ಒಳಗೊಂಡಿರುವ ಈ..

    April 20, 2017
    ...
    nationalism-symbols-1
    ವಿದೇಶ

    ಪೂರ್ವದಿಂದ ಪಶ್ಚಿಮದವರೆಗೆ: ಐಟಿ ಉದ್ಯೋಗಿಗಳಿಗೆ ಅಪ್ಪಳಿಸಿದ ‘ರಾಷ್ಟ್ರೀಯತೆಯ ಸುನಾಮಿ’!

    ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಬೀಸುತ್ತಿರುವ ‘ರಾಷ್ಟ್ರೀಯತೆ’ಯ ಸುನಾಮಿಗೆ ಭಾರತೀಯರು ಕೆಲಸಗಳನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಅಮೆರಿಕಾ ಫಸ್ಟ್’ ಎನ್ನುವ ಮೂಲಕ ಅಧಿಕಾರ ಬಂದ ಡೊನಾಲ್ಡ್ ಟ್ರಂಪ್ ಎಚ್‌- 1ಬಿ ವೀಸಾ ಯೋಜನೆಗೆ ಮಹತ್ವದ ಬದಲಾವಣೆ ಮಾಡಿಯಾಗಿದೆ. ಆದರೆ, ‘ಸ್ಥಳೀಯರಿಗೆ ಮೊದಲ ಆದ್ಯತೆ’ ಎಂಬ ಟ್ರೆಂಡ್ ಅಮೆರಿಕಾ ಮಾತ್ರವಲ್ಲ ಪ್ರಪಂಚ ಹಲವು ದೇಶಗಳಲ್ಲಿ ನಿಧಾನವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ವಿದೇಶಗಳಲ್ಲಿ ಕೆಲಸದಲ್ಲಿದ್ದ ಭಾರತದ ಮೂಲದ ಎಂಜಿನಿಯರಿಂಗ್‌ ಕ್ಷೇತ್ರದ ನೌಕರರು ಕೆಲಸ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಹಲವು ದೇಶಗಳಲ್ಲಿ ವಲಸೆ..

    April 20, 2017
    ...
    Babri-Masjid-LK-Advani
    ದೇಶ

    ಅದ್ವಾನಿ ಆಸೆಗಳಿಗೆ ಕೊನೆಯ ಮೊಳೆ: ‘ಬಾಬ್ರಿ ಮಸೀದಿ ದ್ವಂಸ ಪ್ರಕರಣ’ದ ಲಾಭ ಯಾರಿಗೆ?

    ಲಾಲ್ ಕೃಷ್ಣ ಅದ್ವಾನಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ…ಒಂದು ಕಾಲದ ‘ಹಿಂದುತ್ವ’ ನೆಲೆಯ ರಾಜಕೀಯದ ಬ್ರಾಂಡ್‌ ಇಮೇಜ್‌ಗಳು. 90ರ ದಶಕದಲ್ಲಿ ‘ಅಟಲ್, ಅದ್ವಾನಿ, ಕಮಲ್ ನಿಶಾನ್ (ಅಟಲ್, ಅದ್ವಾನಿ, ಕಮಲ ಲಾಂಛನ) ಲೇಖರ್ ಆಯೇಂಗೇ ಹಿಂದೂಸ್ಥಾನ್’ (ತಂದೇ ತರುತ್ತಾರೆ ಹಿಂದೂಸ್ಥಾನ) ಎಂಬ ಘೋಷಣೆ ದೇಶದ ಉದ್ದಗಲಕ್ಕೂ ಮೊಳಗಿಸಲಾಗುತ್ತಿತ್ತು. ಇವತ್ತು ಹಿಂದೂಸ್ಥಾನ ಬದಿಗಿರಲಿ, ಕಮಲ ಲಾಂಛನಕ್ಕೂ ಅದ್ವಾನಿ ನೆನಪಾಗುತ್ತಿಲ್ಲ. ಆದರೆ ದೇಶದ 1992ರಲ್ಲಿ ನಡೆದ ಬಾಬ್ರಿ ಮಸೀದಿ ದ್ವಂಸ ಪ್ರಕರಣ ಮಾತ್ರ ಅವರನ್ನು ಮರೆಯುವ ಹಾಗೆ ಕಾಣಿಸುತ್ತಿಲ್ಲ. ಬುಧವಾರ ಸುಪ್ರಿಂ..

    April 19, 2017
    ...
    vijay-mallya-arrest-bail
    ವಿದೇಶ

    ‘ಮ್ಯಾಟ್ನಿ ಶೋ’: ಒಂದು ಮಧ್ಯಾಹ್ನ ನಡೆದ ವಿಜಯ್ ಮಲ್ಯ ಬಂಧನ; ಬಿಡುಗಡೆ ಪ್ರಹಸನ!

    “ಭಾರತದ ಇವತ್ತಿನ ವಾತಾವರಣವನ್ನು ಮೊದಲು ಗಮನಿಸಬೇಕಿದೆ. ಎಲೆಕ್ಟ್ರಾನಿಕ್ ಮೀಡಿಯಾ (ಸುದ್ದಿ ವಾಹಿನಿಗಳು) ಬರೀ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ; ಜತೆಗೆ ಸರಕಾರಕ್ಕೂ ದೊಡ್ಡ ಮಟ್ಟದಲ್ಲಿ ಒತ್ತಡ ಹೇರುತ್ತಿವೆ…” ಹೀಗಂದಿದ್ದು ಬೇರೆ ಯಾರೂ ಅಲ್ಲ; ಸ್ವತಃ ವಿಜಯ್ ಮಲ್ಯ. 2016ರ ಮಾರ್ಚ್‌ 2ರಂದು ದೇಶ ಬಿಟ್ಟು ಪರಾರಿಯಾದ ನಂತರ ಮೊದಲ ಬಾರಿಗೆ ಲಂಡನ್ ಮೂಲದ ‘ಫೈನಾನ್ಸಿಯಲ್ ಟೈಮ್ಸ್’ಗೆ ನೀಡಿದ ನಾಲ್ಕು ಗಂಟೆಗಳ ಸಂದರ್ಶನದಲ್ಲಿ ಮಲ್ಯ ತಮ್ಮ ಮನದ ಮಾತುಗಳನ್ನು ಹೇಳಿದ್ದರು. ಅದರಲ್ಲಿ ತಾವು ಸಾಲ ವಾಪಾಸ್ ಮಾಡುವ..

    April 18, 2017
    ...
    indian-army-1
    ದೇಶ

    ದೇಶಪ್ರೇಮಿಗಳ ‘ಸೇನಾಭಿಮಾನ’: ಪ್ರತಿ ಭಾರತೀಯನೂ ಮಿಲಿಟರಿಯನ್ನೇಕೆ ಪ್ರೀತಿಸಲೇ ಬೇಕು?

    ‘ನಾವು ಮನೆಯಲ್ಲಿ ಅರಾಮಾಗಿ ಹೆಂಡತಿ ಮಕ್ಕಳ ಜತೆಯಲ್ಲಿ ಊಟ ತಿಂಡಿ ಮಾಡಿಕೊಂಡು ಮಲಗಿರುವಾಗ, ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ದೇಶವನ್ನು ಕಾಯುವವರು ಸೈನಿಕರು…’, ‘ಸೈನಿಕರು ಎಂದರೆ ಒಣ ರೊಟ್ಟಿ ತಿಂದುಕೊಂಡು, ಮೂರೊತ್ತು ಸರಿಯಾದ ಊಟವೂ ಇಲ್ಲದೆ ನಮ್ಮನ್ನು ಕಾಯುವ ಯೋಧರು…’, ‘ಸೇನೆಯ ವಿಚಾರಕ್ಕೆ ಬಂದರೆ ಎಲ್ಲವೂ ನಗಣ್ಯ…’, ‘ನೀವು ದೇಶವನ್ನು ಇಷ್ಟಪಡುವವರೇ ಆಗಿದ್ದರೆ, ಸೇನೆಯನ್ನೂ ಇಷ್ಟಪಡಬೇಕು…’ ಈ ಮೇಲಿನ ವಾಕ್ಯಗಳು, ಪದಪುಂಜಗಳು ಭಾರತದ ಪ್ರಸ್ತುತ ಸಮಯದಲ್ಲಿ ಭಾವನಾತ್ಮಕವಾಗಿ ಬಳಕೆಯಾಗುತ್ತಿವೆ. ಆದರೆ ಇಂತಹ ವಾದಗಳು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮತ್ತು, ಭಾವನೆಗಳ..

    April 18, 2017
    ...
    trump-india-visa-stamp
    ಸುದ್ದಿ ಸಾರ

    ಯುಎಸ್‌- ಭಾರತೀಯರಿಗೆ ವೀಸಾ ಮರ್ಮಾಘಾತ: ‘ವಿ ಲವ್ ಟ್ರಂಪ್’ ಅಂದವರು ಈಗೇನಂತಾರೆ?

    ಭಾರತವೂ ಸೇರಿದಂತೆ ವಿದೇಶಿ ವಲಸೆ ಕೆಲಸಗಾರರಿಗೆ ಮರ್ಮಾಘಾತವನ್ನು ನೀಡುವಂತಹ ಎಚ್‌- 1ಬಿ ವೀಸಾ ಯೋಜನೆ ಸುಧಾರಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೇನು ಸಹಿ ಹಾಕಲಿದ್ದಾರೆ. ಇದು ಅಮೆರಿಕಾ ಇತಿಹಾಸದಲ್ಲಿಯೇ, ಉದ್ಯೋಗ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಸ್ಥಿತ್ಯಂತರವನ್ನು ಮೂಡಿಸುವ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ವೀಸಾ ನೀಡಲು ಸಂಪೂರ್ಣವಾಗಿ ಹೊಸ ರಚನೆಯನ್ನು ಇದು ಸ್ಥಾಪಿಸಲಿದೆ. ಇಂತಹದೊಂದು ಯೋಜನೆಗೆ ಸಹಿ ಹಾಕಲು ಕ್ಷಣಗಣನೆ ಆರಂಭವಾಗಿದ್ದು ‘ಅಮೆರಿಕಾದ ಉತ್ಪನ್ನಗಳನ್ನೇ ಕೊಳ್ಳಿ- ಅಮೆರಿಕಾದವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ’ ಎಂಬ ಘೋಷಣೆಯನ್ನು ಟ್ರಂಪ್ ಮತ್ತೊಮ್ಮೆ..

    April 18, 2017
    ...
    karthik-janashri-news
    ಟಿವಿ

    ‘ಬ್ಲಾಕ್‌ಮೇಲ್’ ಬೆನ್ನಲ್ಲೇ ಅನುಮಾನ ಮೂಡಿಸಿದ ಜನಶ್ರೀ ಅಕೌಂಟೆಂಟ್ ಸಾವಿನ ಪ್ರಕರಣ

    ಜನಶ್ರೀ ಸುದ್ದಿ ವಾಹಿನಿಯ ‘ಬ್ಲಾಕ್‌ ಮೇಲ್’ ಪ್ರಕರಣ ಹೊರಬಿದ್ದ ಬೆನ್ನಲ್ಲೇ, ಅದರ ಅಕೌಂಟೆಂಟ್ ಒಬ್ಬರ ಸಾವಿನ ಸುತ್ತ ಈತ ದಟ್ಟ ಅನುಮಾನ ಹೊಗೆಯಾಡುತ್ತಿದೆ. ವಾಹಿನಿಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಕಾರ್ತಿಕ ಲಾರೆನ್ಸ್‌ ಕಳೆದ ಗುರುವಾರ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಐಸಿಯುನಲ್ಲಿ ಸಾವನ್ನಪ್ಪಿದ್ದರು. ಸದ್ಯ ಪ್ರಕರಣ ಹೆಬ್ಬಾಳ ಟ್ರಾಫಿಕ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಮರಣೊತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಆದರೆ ಕಾರ್ತಿಕ್ ಸಾವಿನ ಹಿನ್ನೆಲೆಯನ್ನು ಗಮನಿಸಿದರೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುವ ಅಂಶಗಳು ಬೆಳಕಿಗೆ ಬರುತ್ತವೆ. ಏನಿದು ಪ್ರಕರಣ?:..

    April 17, 2017
    ...
    modi_suratroadshow
    ದೇಶ

    ಪ್ರಧಾನಿ ಮೋದಿಯ 8ನೇ ಭೇಟಿ: ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಸಿಕ್ಕ ‘ರಾಷ್ಟ್ರೀಯ ಪ್ರಚಾರ’

    ಈ ವರ್ಷದ ಕೊನೆಯಲ್ಲಿ ಗುಜರಾತ್‌ ಚುನಾವಣೆ ದೇಶದ ಗಮನ ಸೆಳೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಭಾನುವಾರ ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿಯನ್ನು ಮುಗಿಸಿದ ಪ್ರಧಾನಿ ಮೋದಿ, ನೇರವಾಗಿ ಸೂರತ್‌ಗೆ ಕಾಲಿಟ್ಟಿದ್ದಾರೆ. ಇಂದೂ ಕೂಡ ಗುಜರಾತ್‌ನಲ್ಲಿ ಹಲವು ಸರಕಾರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕೊಂಚ ಸೀರಿಯಸ್‌ ಆಗಿಯೇ ತೆಗೆದುಕೊಂಡಿದೆ ಎಂಬುದರ ಮುನ್ಸೂಚನೆಯನ್ನು ನೀಡುತ್ತಿವೆ. ಭಾನುವಾರ ಪ್ರೈಂ ಶೋ: ರಜಾ ದಿನವಾದ ಭಾನುವಾರ ಸಂಜೆ..

    April 17, 2017
    ...
    Kashmir Stone Pelters
    ದೇಶ

    ಭಾರತೀಯ ಸೇನೆ; ಕಾಶ್ಮೀರದಲ್ಲಿರುವ ಭಾರತೀಯರು: ಇವರ ನಡುವೆ ಯಾಕಿಷ್ಟು ತಿಕ್ಕಾಟ?

    ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಅಲ್ಲಿನ ಜನ ಸರಸಗಾಟಾಗಿ ತಿರಸ್ಕರಿಸುವುದರೊಂದಿಗೆ ‘ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟ‘ ತೀವ್ರ ಸ್ವರೂಪ ಪಡೆದುಕೊಂಡಿರುವ ಸೂಚನೆ ಸಿಕ್ಕಿದೆ. ಇದೇ ವೇಳೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಶ್ಮೀರದ ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ 11 ಸೆಕೆಂಡುಗಳ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ. Here’s the video of the Kashmiri boy tied to the front of an Army jeep and used as..

    April 15, 2017
    ...
    janashri-vajipeyi-reddy-final
    ಟಿವಿ

    ಗಣಿ ಧಣಿಯ ಜನಮನದಲ್ಲಿ ‘ಬ್ಲಾಕ್ ಮೇಲ್’ ಅಬ್ಬರ: ಜನಶ್ರೀ ಸಿಇಓ ಬಂಧನದ ಸುತ್ತ…

    ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಬಾಕಿ ಇತ್ತು. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಕೆಲವು ಪತ್ರಕರ್ತರ ಹಾಗೂ ವಾಹಿನಿಗಳ ‘ಬ್ಲಾಕ್‌ ಮೇಲ್‌’ ದಂಧೆಗೆ ಈ ಅಧಿಕೃತ ಮುದ್ರೆ ಬಿದ್ದಿದೆ. ಜನಶ್ರೀ ಸುದ್ದಿವಾಹಿನಿಯ ಸಿಇಓ ಲಕ್ಷ್ಮೀಪ್ರಸಾದ್ ವಾಜಪೇಯಿ ಬಂಧನವಾಗಿದೆ. ಕೋರಮಂಗಲ ಪೊಲೀಸರು ಆತ ಸೇರಿದಂತೆ ಇಬ್ಬರನ್ನು ಶುಕ್ರವಾರ ರಾತ್ರಿ ಚಾನಲ್‌ ಕಚೇರಿಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಸುದ್ದಿ ವಾಹಿನಿಗಳ ಅಂತರಾಳದ ದರ್ಶನವಾದಂತಾಗಿದೆ. ಏನಿದು ಬೆಳವಣಿಗೆ?:  ಜನಶ್ರೀ ವಾಹಿನಿ ಅತ್ಯಂತ ಕೆಟ್ಟ..

    April 15, 2017

Top