An unconventional News Portal.

    ...
    Vinod-Khanna-1
    ಫೋಕಸ್

    70ರ ದಶಕದಲ್ಲಿ ‘ಬಿಗ್ ಬಿ’ಯನ್ನು ಸರಿಗಟ್ಟುವ ತಾಕತ್ತಿದ್ದ ಏಕೈಕ ನಟ ವಿನೋದ್ ಖನ್ನಾ…

    ಮಧು ಚಂದ್ರಪ್ಪ ಅದು 70ರ ದಶಕ. ಹಿಂದಿ ಸಿನೆಮಾ ರಂಗದಲ್ಲಿ ಭರವಸೆ ಮೂಡಿದ್ದ ಇಬ್ಬರು ನಟರ ಪೈಕಿ ಒಬ್ಬರು ಅಮಿತಾಬ್ ಬಚ್ಚನ್; ಇನ್ನೊಬ್ಬರು ವಿನೋದ್ ಖನ್ನಾ. ಅವತ್ತಿಗೆ ಅಮಿತಾಬ್‌ ಅವರಿಗೆ ವೃತ್ತಿರಂಗದಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದ್ದ ಏಕೈಕ ನಟ ಖನ್ನಾ. ಗಡಸು ದನಿ, ಸುಂದರ ದೇಹ ಸೌಂದರ್ಯ, ನಟನೆಯ ಕೌಶಲ್ಯ ಹೀಗೆ ಒಬ್ಬ ಯಶಸ್ವಿ ನಟನಾಗಲು ಏನೇನು ಬೇಕಿದ್ದವೋ ಎಲ್ಲವೂ ವಿನೋದ್‌ ಖನ್ನಾ ಅವರಿಗಿತ್ತು. ಜನ ಅವರನ್ನು ಮೆಚ್ಚಿಕೊಂಡಿದ್ದರು; ಅದಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಅವರನ್ನು ಇಷ್ಟ ಪಡುತ್ತಿದ್ದರು…

    April 27, 2017
    ...
    bsy-kse-bjp-final
    ರಾಜ್ಯ

    ‘ಹಳೇ ಸ್ಕೂಟರ್ ಮೇಲಿದ್ದ ಸಂಗ; ಖುರ್ಚಿ ಸಿಕ್ಕಾಗ ಭಂಗ’: ಬಿಜೆಪಿ ಆಂತರಿಕ ಕಲಹದ ಅಸಲಿ ಕತೆ

    ಉತ್ತರ ಭಾರತದಲ್ಲಿ ‘ಮೋದಿ ಅಲೆ’ಯ ಮೇಲೆ ಬಿಜೆಪಿ ತೇಲುತ್ತಿರುವ ಹೊತ್ತಿಗೇ, ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಪಕ್ಷದ ನಾಯಕರ ನಡುವಿನ ಕಲಹ ಮರುಕಳಿಸಿದೆ. ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತೃಪ್ತ ನಾಯಕರು ಆಯೋಜಿಸಿದ್ದ ‘ಪಕ್ಷ ಸಂಘಟನೆ’ ಸಮಾವೇಶ ನಿರೀಕ್ಷೆಯಂತೆಯೇ ಸಾರ್ವಜನಿಕ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ‘ಸರ್ವಾಧಿಕಾರಿ ಧೋರಣೆ’ಯ ಆರೋಪವನ್ನು ಮತ್ತೊಬ್ಬ ನಾಯಕ ಕೆ. ಎಸ್. ಈಶ್ವರಪ್ಪ ಮತ್ತೊಮ್ಮೆ ಎತ್ತಿ ಆಡಿದ್ದಾರೆ. ತಮ್ಮ ನಾಲಿಗೆ ಮೇಲೆ ಆಗಾಗ್ಗೆ ಹಿಡಿತ ತಪ್ಪುವ ಈಶ್ವರಪ್ಪ, ಈ ಬಾರಿಯೂ ಆರೋಪಗಳ ಗದ್ದಲದಲ್ಲಿ..

    April 27, 2017

Top