An unconventional News Portal.

    ...
    padma-4
    ರಾಜ್ಯ

    ‘ಬದುಕು ಸುಂದರ ಹೋರಾಟ’: ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು; ನಡುಗಾಲದಲ್ಲಿ ನನಸು!

    ಮಧು ಚಂದ್ರಪ್ಪ ಇದು ನಡುಗಾಲ ಸಮೀಪಿಸಿದ, ಬದುಕಿನಲ್ಲಿ ಮುಂದೇನು ಎಂದು ಮಾನಸಿಕ ತೊಳಲಾಟಕ್ಕೆ ಸಿಲುಕಿದ ಪ್ರತಿಯೊಬ್ಬರಿಗೂ ಮಾದರಿಯಾಗುವಂತಹ ಕತೆ. ಇದರ ನಾಯಕಿ ತುಮಕೂರಿನ ಕುಣಿಗಲ್‌ನಿಂದ ಬಂದು ಸಿಲಿಕಾನ್‌ ಸಿಟಿಯಲ್ಲಿ ಬದುಕು ಕಟ್ಟಿಕೊಂಡವರು. ಹೆಚ್ಚಿನ ಓದಿನ ಹಿನ್ನೆಲೆ ಇಲ್ಲದಿದ್ದರೂ, ತಮ್ಮ ಪರಿಶ್ರಮ ಮತ್ತು ಬದುಕಿನೆಡೆಗಿನ ಶ್ರದ್ಧೆಯ ಏಕೈಕ ಕಾರಣಕ್ಕೆ ಇಷ್ಟಪಟ್ಟ ಟೀಚರ್ ಕೆಲಸವನ್ನು ತಮ್ಮ 43ನೇ ವಯಸ್ಸಿನಲ್ಲಿ ತಮ್ಮದಾಗಿಸಿಕೊಂಡವರು. ಅವರೇ ಪದ್ಮಾ ಕೇರಾಫ್ ಪೂರ್ಣ ಲರ್ನಿಂಗ್ ಸೆಂಟರ್. ಮೀಟ್ ಮಿಸ್ ಪದ್ಮಾ: ಪದ್ಮಾ ಇವತ್ತೇನಾಗಿದ್ದಾರೆ ಎಂಬುದನ್ನು ನೋಡುವುದಕ್ಕಿಂತ, ಕೆಲವು ವರ್ಷಗಳ..

    April 10, 2017
    ...
    dakshinayana-smg-3
    ಸಮಾಚಾರ +

    ಕಳಚಿದ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದೇ ‘ದಕ್ಷಿಣಾಯಣ’!

    ಡಾ.ಕಿರಣ್. ಎಂ ಗಾಜನೂರು “ನಮ್ಮ ತಲೆಮಾರಿನ ಕೆಲಸ, ಕಳಚಿರುವ ಕೊಂಡಿಗೆ ಕಾರಣ ಹುಡುಕಿ; ಅದನ್ನು ಮತ್ತೆ ಜೊಡಿಸುವುದು ಅಷ್ಟೆ” ಎಂಬ ಉಪಮೆಯೊಂದಿಗೆ ನನ್ನ ಅಭಿಪ್ರಾಯ ದಾಖಲಿಸುತ್ತಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ಸಾಂಸ್ಕೃತಿಕ ಲೋಕದಲ್ಲಿ ಆಗುತ್ತಿರುವ ತಲ್ಲಣಗಳನ್ನು ಸಿಮೀತ ಅರ್ಹತೆಯ ನೆಲೆಯಲ್ಲಿ ನೋಡಲು ಪ್ರಯತ್ನಿಸುತ್ತಿದ್ದೇವೆ. ಇವತ್ತಿನ ಸಮಾಜದಲ್ಲಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿನ ತಲ್ಲಣಗಳು  ಕೇವಲ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ತಲ್ಲಣಗಳು ಮಾತ್ರ ಅಲ್ಲ! ಬದಲಾಗಿ ಇವು ಜನ ಸಾಮಾನ್ಯರು ಎದುರಿಸುತ್ತಿರುವ ತಲ್ಲಣಗಳೂ ಹೌದು ಎಂಬ ಅಭಿಪ್ರಾಯ ಬಲಗೊಂಡಿದೆ. ನಿಜವಾದ..

    April 10, 2017
    ...
    terrorism-nia-india
    ದೇಶ

    ವಾರ್ ಆನ್ ಟೆರರ್: ‘ಹಿಂದೂ ಭಯೋತ್ಪಾದಕ’ರ ಬಗ್ಗೆ ಎನ್‌ಐಎಗೆ ಯಾಕೆ ಈ ಪಾಟಿ ಕಕ್ಕುಲಾತಿ?

    ‘ಭಯೋತ್ಪಾದನೆ ದೇಶದ ಬಹುದೊಡ್ಡ ಸಮಸ್ಯೆ’… ಅದರಲ್ಲೂ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದಿಲ್ಲೊಂದು ಕಾರಣಕ್ಕೆ ‘ಭಯೋತ್ಪಾದನೆ’ ಸದ್ದು ಮಾಡುತ್ತಲೇ ಇದೆ. ನೋಟು ಅಮಾನ್ಯೀಕರಣದಂತಹ ಆರ್ಥಿಕ ಹಿನ್ನೆಲೆಯ ವಿಚಾರ ಬಂದಾಗಲೂ, ಭಯೋತ್ಪಾದನೆಯನ್ನು ತೊಡೆಯಲು ನೋಟ್ ಬ್ಯಾನ್ ಮಾಡಲಾಯಿತು ಎಂಬ ಸಮರ್ಥನೆಯನ್ನು ಜನರ ಮುಂದಿಡಲಾಗಿತ್ತು. ಸದ್ಯ ಇಂಡೋ- ಬಾಂಗ್ಲಾ ಮಾತುಕತೆಯ ಸಮಯದಲ್ಲಿಯೂ ಭಯೋತ್ಪಾದನೆಯ ವಿರುದ್ಧ ಜಂಟಿ ಹೋರಾಟದ ಮಾತುಗಳು ಕೇಳಿ ಬರುತ್ತಿವೆ. ಭಯೋತ್ಪಾದನೆ ಎಂಬುದು ಪ್ರಮುಖ ವಿಚಾರ ಅಂತ ಪರಿಗಣಿಸಿದ ಮೇಲೆ, ಸ್ವಾಮಿ..

    April 10, 2017
    ...
    kashmir-voilence-1
    COVER STORY

    ಕಲ್ಲು ತೂರುವ ಕಾಶ್ಮೀರಿಗಳ ಕೈಗೆ ಬಂದೂಕು ಸಿಗುವ ಮುನ್ನ ದಿಲ್ಲಿ ಆಡಳಿತ ಎಚ್ಚೆತ್ತುಕೊಳ್ಳಲಿ

    ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ರಕ್ತದ ಕೋಡಿ ಹರಿದಿದೆ. ಮತದಾನದ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಎಂದಿನಂತೆ ಕಾಶ್ಮೀರಿಗರ ಕಡೆಯಿಂದ ಕಲ್ಲು ತೂರಾಟ ನಡೆದಿದ್ದರೆ; ಭದ್ರತಾ ಪಡೆಗಳು ಗುಂಡಿನ ಮಳೆಗೆರೆದಿದ್ದಾರೆ. ಪರಿಣಾಮ 20 ರ ಆಸುಪಾಸಿನ 8 ಜನ ಯುವಕರು ಸಾವನ್ನಪ್ಪಿದ್ದಾರೆ. ಸುಮಾರು 300 ನಾಗರಿಕರು, 100 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಹಿನ್ನಲೆ ಹಾಗೂ ದೇಶದ ‘ಗಣತಂತ್ರ‘ ಬಗೆಗಿನ ಅಲ್ಲಿನ ಜನರ ಆಕ್ರೋಶ ಮತ್ತು ಅಸಡ್ಡೆಯ ಪ್ರತಿರೂಪ ಎಂಬಂತೆ ಕೇವಲ ಶೇಕಡಾ 7.14 ರಷ್ಟು ಮತದಾನವಾಗಿದೆ. ಆತಂಕದ ಬೆಳವಣಿಗೆ ಏನೆಂದರೆ,..

    April 10, 2017
    ...
    sathyam-babu-andhra-aquitted
    ದೇಶ

    ಪೊಲೀಸರಿಗೆ ‘ಎಚ್ಚರಿಕೆ ಗಂಟೆ’: ಸೆನ್ಸೇಶನ್ ಪ್ರಕರಣದಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು

    ಸತ್ಯಂ ಬಾಬು; ಆಂಧ್ರ ಪ್ರದೇಶದ ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವಕ. ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿತ್ತು. ಸುದೀರ್ಘ 10 ವರ್ಷಗಳ ಕಾಲ ನಡೆದ ನ್ಯಾಯಾಂಗದ ಹೋರಾಟದ ನಂತರ ಕಳೆದ ಮಾ. 31ರಂದು ಆಂಧ್ರ ಪ್ರದೇಶ ಹೈ  ಕೋರ್ಟ್ ಈತನನ್ನು ದೋಷಮುಕ್ತಗೊಳಿಸಿತು. ಅಷ್ಟೇ ಅಲ್ಲ, ನ್ಯಾಯಮೂರ್ತಿಗಳಾದ ಸಿ. ವಿ. ನಾಗಾರ್ಜುನ ರೆಡ್ಡಿ ಮತ್ತು ಎಂ. ಎಸ್. ಕೆ. ಜೈಶ್ವಾಲ್ ನ್ಯಾಯಪೀಠ ಈತನ ಬದುಕಿನ ಅಮೂಲ್ಯ ವರ್ಷಗಳನ್ನು..

    April 10, 2017

Top