An unconventional News Portal.

    ...
    bsy-kse-art-final
    ರಾಜ್ಯ

    ಬಿಜೆಪಿ ಆಂತರಿಕ ಕಲಹ: ನಾಯಕರ ಗೊಂಬೆ ಆಟ; ಕಾರ್ಯಕರ್ತರಿಗೆ ಸೂತಕದ ಊಟ!

    ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಈಗ ನಡೆಯುತ್ತಿರುವುದು ‘ಬೊಂಬೆ ಆಡಿಸೋ ಆಟ’. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪಾಲಿಗೆ ಸೂತಕದ ಊಟ. ಗುರುವಾರ ನಡೆದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಹಿರಂಗ ಕಲಹದ ನಂತರ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳ ಒಟ್ಟು ಸಾರಾಂಶ ಇಷ್ಟೆ.  ಕರ್ನಾಟಕದ ಪಾಲಿಗೆ ಒಂದು ಕಾಲಕ್ಕೆ ಬಿಜೆಪಿ ಎಂದರೆ ಶಿಶ್ತಿನ ಪಕ್ಷ. ಅವತ್ತಿಗೆ ನಾಯಕರು ಕೂಡ ತಮ್ಮ ಇತಿಮಿತಿಗಳಲ್ಲಿಯೇ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದರು. ರಾಜಕೀಯ ಅಧಿಕಾರ ಎಂಬುದು ಅವರ ಪಾಲಿಗೆ ದೂರದ ಕನಸು. ಭಾರತೀಯ ಪರಂಪರೆಯನ್ನು ಉಳಿಸುವುದಷ್ಟೆ..

    April 28, 2017
    ...
    Vinod-Khanna-1
    ಫೋಕಸ್

    70ರ ದಶಕದಲ್ಲಿ ‘ಬಿಗ್ ಬಿ’ಯನ್ನು ಸರಿಗಟ್ಟುವ ತಾಕತ್ತಿದ್ದ ಏಕೈಕ ನಟ ವಿನೋದ್ ಖನ್ನಾ…

    ಮಧು ಚಂದ್ರಪ್ಪ ಅದು 70ರ ದಶಕ. ಹಿಂದಿ ಸಿನೆಮಾ ರಂಗದಲ್ಲಿ ಭರವಸೆ ಮೂಡಿದ್ದ ಇಬ್ಬರು ನಟರ ಪೈಕಿ ಒಬ್ಬರು ಅಮಿತಾಬ್ ಬಚ್ಚನ್; ಇನ್ನೊಬ್ಬರು ವಿನೋದ್ ಖನ್ನಾ. ಅವತ್ತಿಗೆ ಅಮಿತಾಬ್‌ ಅವರಿಗೆ ವೃತ್ತಿರಂಗದಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದ್ದ ಏಕೈಕ ನಟ ಖನ್ನಾ. ಗಡಸು ದನಿ, ಸುಂದರ ದೇಹ ಸೌಂದರ್ಯ, ನಟನೆಯ ಕೌಶಲ್ಯ ಹೀಗೆ ಒಬ್ಬ ಯಶಸ್ವಿ ನಟನಾಗಲು ಏನೇನು ಬೇಕಿದ್ದವೋ ಎಲ್ಲವೂ ವಿನೋದ್‌ ಖನ್ನಾ ಅವರಿಗಿತ್ತು. ಜನ ಅವರನ್ನು ಮೆಚ್ಚಿಕೊಂಡಿದ್ದರು; ಅದಕ್ಕಿಂತ ಹೆಚ್ಚಾಗಿ ನಿರ್ಮಾಪಕರು ಅವರನ್ನು ಇಷ್ಟ ಪಡುತ್ತಿದ್ದರು…

    April 27, 2017
    ...
    bsy-kse-bjp-final
    ರಾಜ್ಯ

    ‘ಹಳೇ ಸ್ಕೂಟರ್ ಮೇಲಿದ್ದ ಸಂಗ; ಖುರ್ಚಿ ಸಿಕ್ಕಾಗ ಭಂಗ’: ಬಿಜೆಪಿ ಆಂತರಿಕ ಕಲಹದ ಅಸಲಿ ಕತೆ

    ಉತ್ತರ ಭಾರತದಲ್ಲಿ ‘ಮೋದಿ ಅಲೆ’ಯ ಮೇಲೆ ಬಿಜೆಪಿ ತೇಲುತ್ತಿರುವ ಹೊತ್ತಿಗೇ, ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಪಕ್ಷದ ನಾಯಕರ ನಡುವಿನ ಕಲಹ ಮರುಕಳಿಸಿದೆ. ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತೃಪ್ತ ನಾಯಕರು ಆಯೋಜಿಸಿದ್ದ ‘ಪಕ್ಷ ಸಂಘಟನೆ’ ಸಮಾವೇಶ ನಿರೀಕ್ಷೆಯಂತೆಯೇ ಸಾರ್ವಜನಿಕ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ‘ಸರ್ವಾಧಿಕಾರಿ ಧೋರಣೆ’ಯ ಆರೋಪವನ್ನು ಮತ್ತೊಬ್ಬ ನಾಯಕ ಕೆ. ಎಸ್. ಈಶ್ವರಪ್ಪ ಮತ್ತೊಮ್ಮೆ ಎತ್ತಿ ಆಡಿದ್ದಾರೆ. ತಮ್ಮ ನಾಲಿಗೆ ಮೇಲೆ ಆಗಾಗ್ಗೆ ಹಿಡಿತ ತಪ್ಪುವ ಈಶ್ವರಪ್ಪ, ಈ ಬಾರಿಯೂ ಆರೋಪಗಳ ಗದ್ದಲದಲ್ಲಿ..

    April 27, 2017
    ...
    Macron-french-elections-1
    ವಿದೇಶ

    ಅವರಿಗೆ 39; ಪತ್ನಿಗೆ 64: ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸಮೀಪದಲ್ಲಿ ‘ಅಪರೂಪದ ದಾಂಪತ್ಯ’!

    ಐರೋಪ್ಯ ಒಕ್ಕೂಟ ಎಂದು ಕರೆಯುವ ‘ಯುರೋಪಿಯನ್ ಯೂನಿಯನ್’ ದೇಶಗಳ ಪೈಕಿ ಒಂದಾದ ಫ್ರಾನ್ಸ್ ದೇಶದ ಅಧ್ಯಕ್ಷೀಯ ಚುನಾವಣೆ ನಾನಾ ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಏಪ್ರಿಲ್ 23ರಂದು ನಡೆದ ಮೊದಲ ಸುತ್ತಿನ ಮತದಾನದ ನಂತರ ಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಒಬ್ಬರು ಬಲಪಂಥೀಯ ವಿಚಾರಧಾರೆಯ ‘ಫ್ರಂಟ್ ನ್ಯಾಷನಲ್’ ಪಕ್ಷದ ಮರೀನ್ ಲಿ ಪೆನ್; ಮತ್ತೊಬ್ಬರು ತಮ್ಮನ್ನು ತಾವು ‘ಮಧ್ಯಮ ಪಂಥೀಯ’ (ಸೆಂಟ್ರಿಸ್ಟ್) ಎಂದು ಘೋಷಿಸಿಕೊಂಡ ಎಮ್ಯಾನುಯಲ್‌ ಮ್ಯಾಕ್ರನ್‌. ಮೊದಲ ಸುತ್ತಿನಲ್ಲಿ 47 ಮಿಲಿಯನ್ ಮತದಾರರ ಪೈಕಿ ಶೇ. 69ರಷ್ಟು ಮಂದಿ ಮತ ಚಲಾಯಿಸಿದ್ದರು…

    April 26, 2017
    ...
    service-charge-3
    ರಾಜ್ಯ

    ಇಂದಿರಾ ಕ್ಯಾಂಟೀನ್ ಬಗ್ಗೆ ತಾತ್ಸಾರ: ಹೋಟೆಲ್‌ ಮಾಲೀಕರ ಮೇಲೆ ‘ಸೇವಾ ಶುಲ್ಕ’ದ ಪ್ರಹಾರ!

    ರಾಜ್ಯ ಸರಕಾರ ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಂಡಿರುವ ‘ಇಂದಿರಾ ಕ್ಯಾಂಟೀನ್’ ಅನುಷ್ಠಾನಕ್ಕೆ ಗಡವು ನಿಗದಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ನಡೆದ ಸಭೆಯಲ್ಲಿ ಸಚಿವ ಕೆ. ಜೆ. ಜಾರ್ಜ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ 15ರಂದು ಬೆಂಗಳೂರಿನ ಎಲ್ಲಾ 198 ವಾರ್ಡ್‌ಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡುವ ‘ಇಂದಿರಾ ಕ್ಯಾಂಟೀನ್‌’ಗಳು ಕಾರ್ಯಾರಂಭ ಮಾಡಲಿವೆ. ಇದೇ ವೇಳೆ, ಈ ಮಹತ್ವಾಕಾಂಕ್ಷಿ ಯೋಜನೆಗೆ ಅಸಹಕಾರ ನೀಡಿದ್ದ ಹೋಟೆಲ್‌ ಮಾಲೀಕರಿಗೂ ‘ಸೇವಾ ಶುಲ್ಕ’ದ ಬಿಸಿ ಮುಟ್ಟಿಸುವ ಮುನ್ಸೂಚನೆಯನ್ನು ಸರಕಾರ..

    April 26, 2017
    ...
    crpf-vs-naxal-final
    ದೇಶ

    ತ್ಯಾಗ; ಕ್ರೌರ್ಯದ ಮೇಲಾಟದಲ್ಲಿ ತೆರೆಮರೆಗೆ ಸರಿದ ಆದಿವಾಸಿಗಳ ನೈಜ ಚಿತ್ರಣ ಇದು!

    ದೇಶದಲ್ಲಿ ದಶಕಗಳ ಕಾಲ ಜೀವಂತವಾಗಿರುವ ‘ಸರಕಾರ ಮತ್ತು ಮಾವೋವಾದಿ’ಗಳ ನಡುವಿನ ಆಂತರಿಕ ಸಂಘರ್ಷಕ್ಕೆ ಮತ್ತೊಮ್ಮೆ ನೆತ್ತರು ಹರಿದಿದೆ. ಸೋಮವಾರ ನಡೆದ ಗೆರಿಲ್ಲಾ ದಾಳಿಯಲ್ಲಿ 24 ಮಂಡಿ ಸಿಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಸಾವು ನೋವಿನ ಪಟ್ಟಿಗೆ ಹೊಸ ಸೇರ್ಪಡೆಯಾದಂತಾಗಿದೆ. ವರದಿಗಳ ಪ್ರಕಾರ, 1996ರಿಂದ 2016ರ ನಡುವೆ ಭಾರತದಲ್ಲಿ ಮಾವೋವಾದಿ ಮತ್ತು ಪೊಲೀಸರು, ಅರೆಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಸಾವನ್ನಪ್ಪಿರುವ ನಾಗರಿಕರು, ಆದಿವಾಸಿಗಳ ಸಂಖ್ಯೆಯೇ ಸುಮಾರು 8 ಸಾವಿರ. ಜತೆಗೆ, ಸುಮಾರು..

    April 25, 2017
    ...
    sharan-pumpwell-managalore-1
    ರಾಜ್ಯ

    ಭಯವನ್ನೇ ಬಂಡವಾಳ ಮಾಡಿಕೊಂಡ ಭಜರಂಗದಳ; ಮ್ಯಾನ್ ಪವರ್ ಉದ್ಯಮದ ಸೀಕ್ರೆಟ್ಸ್!

    “ಅವರ್ಯಾರೋ ಬಂದಿದ್ದರು. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೆ. ನನ್ನದು ಈಶ್ವರಿ ಮ್ಯಾನ್‌ಪವರ್ ಸಪ್ಲೈ ಏಜೆನ್ಸಿ ಅಂತ ಇದೆ. ಟೆಂಡರ್ ಮೂಲಕ ಸೆಕ್ಯುರಿಟಿ ನೀಡುವ ಗುತ್ತಿಗೆ ಪಡೆಯುತ್ತೇನೆ. ಇದರಲ್ಲಿ ಯಾವ ಒತ್ತಡವೂ ಇಲ್ಲ…” ಎಂದವರು ಭಜರಂಗದಳದ ನಾಯಕ ಶರಣ್ ಪಂಪವೆಲ್.  ಇತ್ತೀಚೆಗೆ ಬಿಡುಗಡೆಗೊಂಡ ಧೀರೇಂದ್ರ. ಕೆ. ಝಾ ಅವರ  Shadow Armies: Fringe Organizations and Foot Soldiers of Hindutva ಎಂಬ ಕೃತಿಯಲ್ಲಿ ಶರಣ್ ಅವರ ಉದ್ಯಮ ಹಾಗೂ ಸಂಘಟನೆ ಕುರಿತು ಒಂದು ಅಧ್ಯಾಯವನ್ನು ಮೀಸಲಿಡಲಾಗಿದೆ. ಇದರ ಆಯ್ದ ಭಾಗವನ್ನು..

    April 24, 2017
    ...
    siddaramayya-atheist-debate
    ರಾಜ್ಯ

    ‘ನಾಸ್ತಿಕವಾದದಿಂದ ಆಸ್ತಿಕತೆ ಕಡೆಗೆ’: ಮೌಢ್ಯ ನಿಷೇಧ, ಲಿಂಬೆ ಹಣ್ಣು ಮತ್ತು ಸಿಎಂ ಸಿದ್ದರಾಮಯ್ಯ!

    ಅದು 1996ರ ಸಮಯ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕೃತ ನಿವಾಸದಲ್ಲಿ ಪೂಜೆ, ಹೋಮವನ್ನು ಕುಟುಂಬದ ಸದಸ್ಯರು ಆಯೋಜನೆ ಮಾಡಿದ್ದರು. ಅತ್ತ ಪೂಜೆ ನಡೆಯುತ್ತಿದ್ದರೆ, ಸಿದ್ದರಾಮಯ್ಯ ವಿಧಾನಸೌಧದ ಕೊಠಡಿಯಲ್ಲಿ ಕುಳಿತಿದ್ದರು. ಅವರನ್ನು ಹತ್ತಿರದಿಂದ ಬಲ್ಲ ಪತ್ರಕರ್ತರೊಬ್ಬರು, “ಯಾಕೆ ಮನೆಗೆ ಹೋಗಲ್ವಾ?,” ಎಂದು ಕೇಳಿದರು. “ನಂಗೆ ಪೂಜೆ ಪುನಸ್ಕಾರ ಎಲ್ಲಾ ಆಗಿ ಬರೋಲ್ಲರಿ. ಅವರೇನೋ ಮಾಡಿಕೊಳ್ತಿದಾರೆ. ನಾನು ಅದಕ್ಕೆ ಇಲ್ಲೇ ಇದೀನಿ,” ಎಂದು ಉತ್ತರ ನೀಡಿದ್ದರು ಸಿದ್ದರಾಮಯ್ಯ. ಅದಾಗಿ ಇಪ್ಪತ್ತು ವರ್ಷಗಳ ಕಳೆದಿವೆ. ಇವತ್ತು ಸಿದ್ದರಾಮಯ್ಯ ಅದೇ ವಿಧಾನಸೌಧದ..

    April 22, 2017
    ...
    Opposition Protest Venezuela-1
    ಸಮಾಚಾರ +

    ಜಾಗತಿಕ ತೈಲ ಮಾರುಕಟ್ಟೆ ಕುಸಿತಕ್ಕೆ ಕೊಡುಗೆ ನೀಡಿದ ವೆನಿಜುವೆಲಾದ ‘ಪ್ರತಿಭಟನೆಗಳ ತಾಯಿ’!

    ದಕ್ಷಿಣಾ ಅಮೆರಿಕಾ ಖಂಡದ ದೇಶವೊಂದರಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿದೆ. ಅಲ್ಲಿನ ಅಧ್ಯಕ್ಷರ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಮಧ್ಯ ಪೂರ್ವ ದೇಶಗಳಲ್ಲಿ ನಡೆಯುತ್ತಿದ್ದ ಸರಕಾರ ವಿರೋಧಿ ಹೋರಾಟವೊಂದು ದಕ್ಷಿಣಾ ಅಮೆರಿಕಾ ಖಂಡಕ್ಕೂ ವ್ಯಾಪಿಸಿದೆ. ಹಲವು ಸರಕಾರಗಳನ್ನು ಅಸ್ಥಿರಗೊಳಿಸಿದ ಶ್ರೇಯಸ್ಸಿಗೆ ಪಾತ್ರವಾಗಿರುವ ಅಮೆರಿಕಾ ಹೆಸರು ಇಲ್ಲಿನ ಹೋರಾಟದ ಹಿನ್ನಲೆಯಲ್ಲಿ ಕೇಳಿ ಬರುತ್ತಿದೆ. ದಕ್ಷಿಣ ಅಮೆರಿಕಾದ ತೈಲ ಸಂಪದ್ಭರಿತ, ಒಂದು ಕಾಲದ ಶ್ರೀಮಂತ ದೇಶ ವೆನಿಜುವೆಲಾದಲ್ಲೀಗ ದಿನ ಬೆಳಗಾದರೆ ಪ್ರತಿಭಟನೆಗಳದ್ದೇ ಸುದ್ದಿ. ವಿರೋಧ ಪಕ್ಷಗಳು ‘ಮದರ್ ಆಫ್ ಆಲ್ ಮಾರ್ಚಸ್‘ (ಪ್ರತಿಭಟನೆಗಳ ಮಹಾತಾಯಿ)..

    April 21, 2017
    ...
    justice-for-shobha
    ಟಿವಿ

    ‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

    ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು. ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ..

    April 21, 2017

Top