An unconventional News Portal.

    ...
    Red Planet Publicity Still
    ಫೋಕಸ್

    ‘ಸ್ಟೋರಿ ಆಫ್ ಮಾರ್ಸ್ ಮಿಶನ್’: ಕುತೂಹಲ ಮೂಡಿಸಿದ ‘ಅಯಸ್ಕಾಂತೀಯ ಹೊದಿಕೆ’!

    ಮಂಗಳಯಾನಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿಗೇ ವಿಜ್ಞಾನಿಗಳು ಹೊಸ ಆಲೋಚನೆಯೊಂದನ್ನು ಹರಿಬಿಟ್ಟಿದ್ದಾರೆ. ಮಂಗಳ ಗ್ರಹದ ವಾತಾವರಣವನ್ನು ಕಾಪಾಡಲು ಬೃಹತ್ ಗಾತ್ರದ ಅಯಸ್ಕಾಂತೀಯ ಹೊದಿಕೆಯನ್ನು ರೂಪಿಸಿದರೆ, ಮುಂದಿನ ದಿನಗಳಲ್ಲಿ ಕೆಂಪು ಗ್ರಹದ ಮೇಲೂ ಮನುಷ್ಯ ಮನೆ ಮಾಡಿಕೊಂಡಿರಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2030ರ ಹೊತ್ತಿಗೆ ಮೊದಲ ಬಾರಿಗೆ ಮನುಷ್ಯನನ್ನು ಮಂಗಳ ಗ್ರಹದ ಮೇಲೆ ಇಳಿಸಲು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಸಿದ್ಧತೆ ಮಾಡಿಕೊಳ್ಳುತ್ತಿದೆ. 90ರ ದಶಕದಲ್ಲಿ ಶುರುವಾದ ಈ ಯೋಜನೆಗಾಗಿ ಸಾಕಷ್ಟು ಪ್ರಯೋಗಗಳು ಜಾರಿಯಲ್ಲಿವೆ. ಹೀಗಿರುವಾಗಲೇ, ಬೃಹತ್ ಅಯಸ್ಕಾಂತೀಯ..

    March 7, 2017
    ...
    suhana-sayad-final
    ರಾಜ್ಯ

    ‘ಸಪ್ತಸ್ವರಗಳ ಜತೆ ಸುಹಾನ ಸಫರ್’: ಪ್ರತಿಭಾ ಕಾರಂಜಿಯಿಂದ ‘ಸರಿಗಮಪ’ ವೇದಿಕೆವರೆಗೆ…

    “ಇದು ಹೊಸತೂ ಅಲ್ಲ; ಅಚ್ಚರಿಯೂ ಅಲ್ಲ. ಮೊದಲಿಂದಲೂ ವಿರೋಧ ಇದ್ದೇ ಇತ್ತು. ಬಹುಶಃ ಈಗ ದೊಡ್ಡ ಮಟ್ಟದಲ್ಲಿ ಬರಬಹುದು…” ಹೀಗೆಂದವರು, ಸುಹಾನ ಸೈಯದ್ ಸ್ನೇಹಿತೆಯೊಬ್ಬರು. ‘ಝೀ ಕನ್ನಡ’ ಮನೋರಂಜನಾ ವಾಹಿನಿಯ ‘ಸರಿಗಮಪ’ ರಿಯಾಲಿಟಿ ಶೋಗೆ ಆಯ್ಕೆಯಾದ ಮೊದಲ ಮುಸ್ಲಿಂ ಸಮುದಾಯದ ಯುವತಿ ಸುಹಾನ. ತಮ್ಮ ಆಯ್ಕೆ ಸುತ್ತಿನಲ್ಲಿಯೇ ಬುರ್ಖಾ ಧರಿಸಿ, ಭಕ್ತಿ ಗೀತೆಯೊಂದನ್ನು ಹಾಡುವ ಮೂಲಕ ‘ಸಂಗೀತಕ್ಕೆ ಧರ್ಮದ ಅಂಚು’ಗಳಿಲ್ಲ ಎಂಬ ಸಂದೇಶವನ್ನು ಸಾರಿದವರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು ಸುಹಾನ. ಅವರ ತಂದೆ ಮತ್ತು ತಾಯಿ;..

    March 6, 2017
    ...
    varanasi-narendra-roadshow-1
    ದೇಶ

    ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

    ಉತ್ತರ ಪ್ರದೇಶ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇರುವಾಗ, ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಮುಖ ಪಕ್ಷಗಳು ಬಲ ಪ್ರದರ್ಶನಕ್ಕೆ ಇಳಿದಿವೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ವಾರಣಾಸಿಯ ಬೀದಿಗಳಲ್ಲಿ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸಿದ್ದರೆ, ವಾರಣಾಸಿಯ ಹೊರಭಾಗದ ದಲಿತ ಬಸ್ತಿಗಳಲ್ಲಿ ಬಿಎಸ್‌ಪಿ ಕೊನೆಯ ಹಂತದಲ್ಲಿ ಮತದಾರರನ್ನು ಆಕರ್ಷಿಸುವ ರ್ಯಾಲಿಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಾರಣಾಸಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹಸುಗಳಿಗೆ ಮೇವು ನೀಡುತ್ತಿದ್ದಾರೆ. ಲಕ್ಷಾಂತರ ಜನರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು..

    March 6, 2017
    ...
    hate-crime-in-america-1
    ಸುದ್ದಿ ಸಾರ

    ಅಮೆರಿಕಾದಲ್ಲಿ ಹೆಚ್ಚುತ್ತಿರುವ ‘ಹೇಟ್ ಕ್ರೈಮ್ಸ್’: ಇತಿಹಾಸ ಮತ್ತು ಭಾರತೀಯರ ಆತಂಕಗಳು

    ಅಮೆರಿಕಾದ ಕೆಂಟ್ ನಗರದಲ್ಲಿ ಭಾರತ ಮೂಲದ ಸಿಖ್ ಧರ್ಮದ ವ್ಯಕ್ತಿಯೊಬ್ಬರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.  ಈ ವೇಳೆ, “ನಿನ್ನ ದೇಶಕ್ಕೆ ವಾಪಾಸ್ ಹೋಗು,” ಎಂದು ಕೂಗಿದ್ದಾನೆ. ಕಳೆದ ಒಂದು ವಾರದ ಅಂತರದಲ್ಲಿ ಅಮೆರಿಕಾ ನೆಲಯದಲ್ಲಿ ಭಾತತ ಮೂಲದವರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆಯ ಮೂರನೇ ಪ್ರಕರಣ ಇದಾಗಿದೆ. ತಮ್ಮ ಮನೆಯ ಮುಂದೆಯೇ ಗುಂಡೇಟು ತಿಂದ ಭಾರತೀಯನನ್ನು ದೀಪಾ ರೈ ಎಂದು ಗುರುತಿಸಲಾಗಿದೆ. “ಸಿಖ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರು ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ ಎಂಬ ಭರವಸೆ..

    March 5, 2017
    ...
    uttar-pradesh-election-1
    ಸುದ್ದಿ ಸಾರ

    ಕಾತುರ ಹೆಚ್ಚಿಸಿದ ‘ಪಂಚ ರಾಜ್ಯ’ ಫಲಿತಾಂಶ: ಕೊನೆಯ ಕ್ಷಣದ ರಾಜಕೀಯ ವಿಶ್ಲೇಷಣೆಗಳು

    ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಸರಿಯಾಗಿ ಇನ್ನು ಆರು ದಿನಗಳಲ್ಲಿ ಅಂದರೆ ಮಾರ್ಚ್ 11ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಉತ್ತರ ಪ್ರದೇಶದಲ್ಲಿ 6ನೇ ಹಂತದ ಹಾಗೂ ಮಣಿಪುರದಲ್ಲಿ ಮೊದಲ ಹಂತದ ಮತದಾನಗಳು ನಡೆಯುತ್ತಿವೆ. ಮಾರ್ಚ್ 8ರಂದು ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಶನಿವಾರ ಮತದಾನ ನಡೆಯುತ್ತಿರುವ 49 ಕ್ಷೇತ್ರಗಳಲ್ಲಿ ಆಡಳಿತರೂಢ ಸಮಾಜವಾದಿ ಪಕ್ಷ ಅಂತಹ ಹಿಡಿತವನ್ನೇನೂ ಹೊಂದಿಲ್ಲ. 2012ರಲ್ಲಿ ಇದೇ 49 ಕ್ಷೇತ್ರಗಳಲ್ಲಿ..

    March 4, 2017
    ...
    cpm-bjp-1
    ದೇಶ

    ಸಾಂಪ್ರದಾಯಿಕ ಶತ್ರುಗಳ ‘ನಿರ್ಣಾಯಕ ಯುದ್ಧ’: ಕೇರಳ ನೆಪದಲ್ಲಿ ಮತ್ತೆ ಶುರುವಾದ ಸಂಘರ್ಷ

    ಅತ್ತ ಕೇರಳದ ‘ನಿಯಮ ಸಭಾ’ದ ಒಳಗೆ ಆಯವ್ಯಯ ಪತ್ರ ಮಂಡನೆಗೂ ಮುನ್ನವೇ ಸೋರಿಕೆಯಾಗಿದೆ ಎಂದು ವಿರೋಧ ಪಕ್ಷಗಳು ‘ಹೈ ಡ್ರಾಮಾ’ ನಡೆಸುತ್ತಿವೆ. ಹೊರಗೆ, ರಾಜಕೀಯ ಹತ್ಯೆಗಳು ಕೇರಳದ ಗಡಿಯನ್ನು ದಾಟಿ ಸದ್ದು ಮಾಡುತ್ತಿವೆ. ಗುರುವಾರ ರಾತ್ರಿ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಲ್ಲಿಯಲ್ಲಿ ಇಬ್ಬರು ಡೆಮಕ್ರಾಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಡಿವೈಎಫ್ಐ ಸಿಪಿಎಂ ಪಕ್ಷದ ಯುವ ಜನರ ಸಂಘಟನೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದು ಮೂವರು ಬಿಜೆಪಿ..

    March 3, 2017
    ...
    online-lie-propaganda-final
    ದೇಶ

    ಗುರ್‌ಮೆಹರ್ ವಿರುದ್ಧ ಅಪಪ್ರಚಾರಕ್ಕಿಳಿದ ‘ನಮೋ ಬ್ರಾಂಡ್’ ನ್ಯೂಸ್‌ ಮೇಕರ್ಸ್; ಯಾರಿವರು?

    “ಒಂದು ಸುಳ್ಳನ್ನು ಒಮ್ಮೆ ಹೇಳಿದರೆ ಸುಳ್ಳಾಗಿಯೇ ಇರುತ್ತದೆ; ಅದೇ ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಸತ್ಯವಾಗುತ್ತದೆ…” ಹೀಗಂತ ಹೇಳಿದ್ದು ಜರ್ಮನಿ ಮೂಲದ ಮನುಷ್ಯ ವಿರೋಧಿ ಸರ್ವಾಧಿಕಾರಿ ಹಿಟ್ಲರ್‌ನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್. ಇದೀಗ ಅಂತರ್ಜಾಲ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳುಗಳನ್ನು ಸತ್ಯವಾಗಿಸಲು ಒಂದು ದೊಡ್ಡ ಪಡೆಯೇ ಎದ್ದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಎಂಬ ಬಾಗಿಲ ಮರೆಯಲ್ಲಿ ಸುಳ್ಳುಗಳನ್ನು ಸಾವಿರ ಬಾರಿ ಪುನರುಚ್ಚರಿಸುವ ಕೆಲಸ ಇವರಿಂದ ನಡೆಯುತ್ತಿದೆ. ಬಿಜೆಪಿಯನ್ನು ಹೊರತು ಪಡಿಸಿ ಉಳಿದ ರಾಜಕೀಯ..

    March 2, 2017
    ...
    siddaramayya-budget-1
    ರಾಜ್ಯ

    ‘ಸಿದ್ದರಾಮಯ್ಯ ಬಜೆಟ್’: ನಿರೀಕ್ಷೆಗಳೇನಿಲ್ಲ; ಮುಂದಕ್ಕೆ ಹೋಗಿ ಅನ್ನುತ್ತಿದ್ದಾರೆ ಜನ!

    ”ನಮಗೆ ಈ ಬಜೆಟ್‌ನಿಂದ ಯಾವ ನಿರೀಕ್ಷೆಗಳೂ ಇಲ್ಲ…” ಹೀಗಂತ ಹೇಳಿದವರು ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಅಧಿಕಾರಿಗಳು, ಹೋರಾಟಗಾರರು ಮತ್ತು ಸಾಮಾನ್ಯ ಜನತೆ. ಇದೇ ತಿಂಗಳ ಮಧ್ಯದಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ‘ಸಮಾಚಾರ’ ಸಮಾಜದ ಸ್ಥರಗಳಲ್ಲಿರುವ ನಿರೀಕ್ಷೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಈ ಸಮಯದಲ್ಲಿ ಮಾತನಾಡಿಸಿದ ಬಹುತೇಕರು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2017- 18ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ..

    March 1, 2017

Top